GST ಎಫೆಕ್ಟ್: ಕನ್ನಡದ ನಟ-ನಟಿಯರು ಎಷ್ಟೆಷ್ಟು ತೆರಿಗೆ ಕಟ್ಟಬೇಕಿದೆ?

By Bharath Kumar

ಕೇಂದ್ರ ಸರ್ಕಾರ ಜಾರಿ ಮಾಡಲಿರುವ ನೂತನ GST (ಸರಕು ಮತ್ತು ಸೇವಾ) ಕಾಯಿದೆ ಜುಲೈ 1 ರಿಂದ ಕಾರ್ಯ ರೂಪಕ್ಕೆ ಬರಲಿದೆ. ಇದರಿಂದ ವಿವಿಧ ಕ್ಷೇತ್ರದ ಉದ್ಯಮದ ಮೇಲೆ ಪರಿಣಾಮ ಬೀರಲಿದೆ. ಈ 'ಜಿಎಸ್ ಟಿ'ಯಿಂದ ಚಿತ್ರರಂಗದಲ್ಲೂ ಕೂಡ ಹಲವು ರೀತಿಯ ಬದಲಾವಣೆಗಳು ಆಗಲಿವೆ ಎನ್ನಲಾಗಿದೆ.

ಸಿನಿಮಾ ಟಿಕೆಟ್ ಬೆಲೆ ಹೆಚ್ಚಾಗಲಿದೆ. ಸಿನಿಮಾ ನಿರ್ಮಾಣದಿಂದ ಹಿಡಿದು ಪ್ರದರ್ಶನದವರೆಗೂ ವಿವಿಧ ಹಂತಗಳಲ್ಲಿ ತೆರಿಗೆ ಪಾವತಿಸಬೇಕಿದೆ. ಇವೆಲ್ಲದರ ಮಧ್ಯೆ ಸ್ಟಾರ್ ನಟರಿಗೂ ಸರಕು ಮತ್ತು ಸೇವಾ ತೆರಿಗೆ ಬಿಸಿ ಸ್ವಲ್ಪ ಹೆಚ್ಚಾಗಿಯೇ ತಟ್ಟಲಿದೆ. ಕೋಟಿಗಟ್ಟಲೇ ಸಂಭಾವನೆ ಪಡೆಯುವ ನಟರೂ ಇನ್ಮುಂದೆ ಹೆಚ್ಚು ಸೇವಾ ತೆರಿಗೆ ಪಾವತಿಸಬೇಕಿದೆ.

ಹಾಗಿದ್ರೆ, ಯಾವ ಯಾವ ನಟರಿಗೆ ಜಿಎಸ್ ಟಿ ಹೆಚ್ಚು ಪ್ರಭಾವ ಬೀರಲಿದೆ ಎಂಬ ಮಾಹಿತಿ ಮುಂದಿದೆ ಓದಿ...

ಲಕ್ಷಗಳಿಂದ ಕೋಟಿವರೆಗೂ ತೆರಿಗೆ

ಲಕ್ಷಗಳಿಂದ ಕೋಟಿವರೆಗೂ ತೆರಿಗೆ

ಕನ್ನಡ ಚಿತ್ರರಂಗದಲ್ಲಿ ಲಕ್ಷಗಳಿಂದ ಕೋಟಿಗಳು ಸಂಭಾವನೆ ಪಡೆಯುವ ನಟ-ನಟಿಯರು ಇದ್ದಾರೆ. ಜಿಎಸ್ ಟಿ ಯ ನೂತನ ನಿಯಮದ ಪ್ರಕಾರ ಇಲ್ಲಿಯವರೆಗೂ ಇವರು ಕಟ್ಟುತ್ತಿದ್ದ ತೆರಿಗೆಗಿಂತ ಇನ್ಮುಂದೆ ಹೆಚ್ಚು ಸೇವಾ ತೆರಿಗೆ ಪಾವತಿಸಬೇಕಾಗುತ್ತದೆ.

ಲಕ್ಷ ಪಡೆಯುವರಿಗೆ ತೆರಿಗೆ ಎಷ್ಟು?

ಲಕ್ಷ ಪಡೆಯುವರಿಗೆ ತೆರಿಗೆ ಎಷ್ಟು?

ಮೂಲಗಳ ಪ್ರಕಾರ ವಾರ್ಷಿಕ ಆದಾಯ 20 ಲಕ್ಷ ರೂ ಗಿಂತ ಕಡಿಮೆ ಇರುವ ಕಲಾವಿದರಿಗೆ GST ಅನ್ವಯವಾಗುವುದಿಲ್ಲ. ಆದ್ರೆ, ವಾರ್ಷಿಕ ಆದಾಯ 20 ಲಕ್ಷ ರೂಗಿಂತ ಹೆಚ್ಚಿದ್ದರೆ, ಶೇಕಡಾ 18 ರಷ್ಟು ಸೇವಾ ತೆರಿಗೆ ಪಾವತಿಸಿಬೇಕು. ಈ ಹಿಂದೆ ಶೇಕಡಾ 15 ರಷ್ಟು ಸೇವಾ ತೆರಿಗೆ ಪಾವತಿಸುತ್ತಿದ್ದರು.

ಕೋಟಿ ಪಡೆಯುವರ ತೆರಿಗೆ ಎಷ್ಟು?

ಕೋಟಿ ಪಡೆಯುವರ ತೆರಿಗೆ ಎಷ್ಟು?

ವಾರ್ಷಿಕ ಆದಾಯ 1 ಕೋಟಿ ದಾಟುವ ನಟ, ನಟಿಯರು 18 ಲಕ್ಷ ರೂ. ಸೇವಾ ತೆರಿಗೆ ಪಾವತಿಸಬೇಕಿದೆ. 3 ಕೋಟಿ ವಾರ್ಷಿಕ ಆದಾಯ ದಾಟುವ ನಟ, ನಟಿಯರು 54 ಲಕ್ಷ ರೂ ಸೇವಾ ತೆರಿಗೆ ಕಟ್ಟಬೇಕಾಗುತ್ತದೆ.

5 ಕೋಟಿ ಸಂಭಾವನೆ ಪಡೆದರೇ ತೆರಿಗೆ ಎಷ್ಟು?

5 ಕೋಟಿ ಸಂಭಾವನೆ ಪಡೆದರೇ ತೆರಿಗೆ ಎಷ್ಟು?

ವಾರ್ಷಿಕ ಆದಾಯ 4 ಕೋಟಿ ಗಳಿಸುವ ನಟರಿಗೆ 72 ಲಕ್ಷ ಸೇವಾ ತೆರಿಗೆ ಕಟ್ಟಬೇಕು. ಇನ್ನು ವಾರ್ಷಿಕ ಆದಾಯ 5 ಕೋಟಿ ದಾಟುವ ಕಲಾವಿದರು 90 ಲಕ್ಷ ಸೇವಾ ತೆರಿಗೆ ಪಾವತಿಸಬೇಕು ಎನ್ನಲಾಗಿದೆ.

ಇವರು ಕನ್ನಡದ ಟಾಪ್ ನಟರು

ಇವರು ಕನ್ನಡದ ಟಾಪ್ ನಟರು

ದರ್ಶನ್, ಪುನೀತ್ ರಾಜ್ ಕುಮಾರ್, ಸುದೀಪ್, ಯಶ್, ಶಿವರಾಜ್ ಕುಮಾರ್, ಉಪೇಂದ್ರ, ಗಣೇಶ್, ಮೊದಲಾದವರು ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಸಂಭಾವನೆ ಪಡೆಯುವ ಕಲಾವಿದರಾಗಿದ್ದಾರೆ.

More from Filmibeat

English summary
GST Impact On Top Kannada Stars, Like Darshan, Sudeep, Puneeth Rajkumar, Shivarajkumar, Yash, Upendra, Ganesh and Some Others in the list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X