twitter
    For Quick Alerts
    ALLOW NOTIFICATIONS  
    For Daily Alerts

    GST ಎಫೆಕ್ಟ್: ಕನ್ನಡದ ನಟ-ನಟಿಯರು ಎಷ್ಟೆಷ್ಟು ತೆರಿಗೆ ಕಟ್ಟಬೇಕಿದೆ?

    By Bharath Kumar
    |

    ಕೇಂದ್ರ ಸರ್ಕಾರ ಜಾರಿ ಮಾಡಲಿರುವ ನೂತನ GST (ಸರಕು ಮತ್ತು ಸೇವಾ) ಕಾಯಿದೆ ಜುಲೈ 1 ರಿಂದ ಕಾರ್ಯ ರೂಪಕ್ಕೆ ಬರಲಿದೆ. ಇದರಿಂದ ವಿವಿಧ ಕ್ಷೇತ್ರದ ಉದ್ಯಮದ ಮೇಲೆ ಪರಿಣಾಮ ಬೀರಲಿದೆ. ಈ 'ಜಿಎಸ್ ಟಿ'ಯಿಂದ ಚಿತ್ರರಂಗದಲ್ಲೂ ಕೂಡ ಹಲವು ರೀತಿಯ ಬದಲಾವಣೆಗಳು ಆಗಲಿವೆ ಎನ್ನಲಾಗಿದೆ.

    ಸಿನಿಮಾ ಟಿಕೆಟ್ ಬೆಲೆ ಹೆಚ್ಚಾಗಲಿದೆ. ಸಿನಿಮಾ ನಿರ್ಮಾಣದಿಂದ ಹಿಡಿದು ಪ್ರದರ್ಶನದವರೆಗೂ ವಿವಿಧ ಹಂತಗಳಲ್ಲಿ ತೆರಿಗೆ ಪಾವತಿಸಬೇಕಿದೆ. ಇವೆಲ್ಲದರ ಮಧ್ಯೆ ಸ್ಟಾರ್ ನಟರಿಗೂ ಸರಕು ಮತ್ತು ಸೇವಾ ತೆರಿಗೆ ಬಿಸಿ ಸ್ವಲ್ಪ ಹೆಚ್ಚಾಗಿಯೇ ತಟ್ಟಲಿದೆ. ಕೋಟಿಗಟ್ಟಲೇ ಸಂಭಾವನೆ ಪಡೆಯುವ ನಟರೂ ಇನ್ಮುಂದೆ ಹೆಚ್ಚು ಸೇವಾ ತೆರಿಗೆ ಪಾವತಿಸಬೇಕಿದೆ.

    ಹಾಗಿದ್ರೆ, ಯಾವ ಯಾವ ನಟರಿಗೆ ಜಿಎಸ್ ಟಿ ಹೆಚ್ಚು ಪ್ರಭಾವ ಬೀರಲಿದೆ ಎಂಬ ಮಾಹಿತಿ ಮುಂದಿದೆ ಓದಿ...

    ಲಕ್ಷಗಳಿಂದ ಕೋಟಿವರೆಗೂ ತೆರಿಗೆ

    ಲಕ್ಷಗಳಿಂದ ಕೋಟಿವರೆಗೂ ತೆರಿಗೆ

    ಕನ್ನಡ ಚಿತ್ರರಂಗದಲ್ಲಿ ಲಕ್ಷಗಳಿಂದ ಕೋಟಿಗಳು ಸಂಭಾವನೆ ಪಡೆಯುವ ನಟ-ನಟಿಯರು ಇದ್ದಾರೆ. ಜಿಎಸ್ ಟಿ ಯ ನೂತನ ನಿಯಮದ ಪ್ರಕಾರ ಇಲ್ಲಿಯವರೆಗೂ ಇವರು ಕಟ್ಟುತ್ತಿದ್ದ ತೆರಿಗೆಗಿಂತ ಇನ್ಮುಂದೆ ಹೆಚ್ಚು ಸೇವಾ ತೆರಿಗೆ ಪಾವತಿಸಬೇಕಾಗುತ್ತದೆ.

    ಮಲ್ಟಿಪ್ಲೆಕ್ಸ್ ಗೆ ತಟ್ಟಿತು GST ಬಿಸಿ: ಆನ್ ಲೈನ್ ಬುಕ್ಕಿಂಗ್ ಗೆ ಅವಕಾಶವಿಲ್ಲಮಲ್ಟಿಪ್ಲೆಕ್ಸ್ ಗೆ ತಟ್ಟಿತು GST ಬಿಸಿ: ಆನ್ ಲೈನ್ ಬುಕ್ಕಿಂಗ್ ಗೆ ಅವಕಾಶವಿಲ್ಲ

    ಲಕ್ಷ ಪಡೆಯುವರಿಗೆ ತೆರಿಗೆ ಎಷ್ಟು?

    ಲಕ್ಷ ಪಡೆಯುವರಿಗೆ ತೆರಿಗೆ ಎಷ್ಟು?

    ಮೂಲಗಳ ಪ್ರಕಾರ ವಾರ್ಷಿಕ ಆದಾಯ 20 ಲಕ್ಷ ರೂ ಗಿಂತ ಕಡಿಮೆ ಇರುವ ಕಲಾವಿದರಿಗೆ GST ಅನ್ವಯವಾಗುವುದಿಲ್ಲ. ಆದ್ರೆ, ವಾರ್ಷಿಕ ಆದಾಯ 20 ಲಕ್ಷ ರೂಗಿಂತ ಹೆಚ್ಚಿದ್ದರೆ, ಶೇಕಡಾ 18 ರಷ್ಟು ಸೇವಾ ತೆರಿಗೆ ಪಾವತಿಸಿಬೇಕು. ಈ ಹಿಂದೆ ಶೇಕಡಾ 15 ರಷ್ಟು ಸೇವಾ ತೆರಿಗೆ ಪಾವತಿಸುತ್ತಿದ್ದರು.

    ಕನ್ನಡ ಚಿತ್ರ ಪ್ರಿಯರಿಗೆ 'GST' ಬರೆ : ಸಿನಿಮಾ ಟಿಕೆಟ್ ಇನ್ನಷ್ಟು ಹೊರೆಕನ್ನಡ ಚಿತ್ರ ಪ್ರಿಯರಿಗೆ 'GST' ಬರೆ : ಸಿನಿಮಾ ಟಿಕೆಟ್ ಇನ್ನಷ್ಟು ಹೊರೆ

    ಕೋಟಿ ಪಡೆಯುವರ ತೆರಿಗೆ ಎಷ್ಟು?

    ಕೋಟಿ ಪಡೆಯುವರ ತೆರಿಗೆ ಎಷ್ಟು?

    ವಾರ್ಷಿಕ ಆದಾಯ 1 ಕೋಟಿ ದಾಟುವ ನಟ, ನಟಿಯರು 18 ಲಕ್ಷ ರೂ. ಸೇವಾ ತೆರಿಗೆ ಪಾವತಿಸಬೇಕಿದೆ. 3 ಕೋಟಿ ವಾರ್ಷಿಕ ಆದಾಯ ದಾಟುವ ನಟ, ನಟಿಯರು 54 ಲಕ್ಷ ರೂ ಸೇವಾ ತೆರಿಗೆ ಕಟ್ಟಬೇಕಾಗುತ್ತದೆ.

    5 ಕೋಟಿ ಸಂಭಾವನೆ ಪಡೆದರೇ ತೆರಿಗೆ ಎಷ್ಟು?

    5 ಕೋಟಿ ಸಂಭಾವನೆ ಪಡೆದರೇ ತೆರಿಗೆ ಎಷ್ಟು?

    ವಾರ್ಷಿಕ ಆದಾಯ 4 ಕೋಟಿ ಗಳಿಸುವ ನಟರಿಗೆ 72 ಲಕ್ಷ ಸೇವಾ ತೆರಿಗೆ ಕಟ್ಟಬೇಕು. ಇನ್ನು ವಾರ್ಷಿಕ ಆದಾಯ 5 ಕೋಟಿ ದಾಟುವ ಕಲಾವಿದರು 90 ಲಕ್ಷ ಸೇವಾ ತೆರಿಗೆ ಪಾವತಿಸಬೇಕು ಎನ್ನಲಾಗಿದೆ.

    ಇವರು ಕನ್ನಡದ ಟಾಪ್ ನಟರು

    ಇವರು ಕನ್ನಡದ ಟಾಪ್ ನಟರು

    ದರ್ಶನ್, ಪುನೀತ್ ರಾಜ್ ಕುಮಾರ್, ಸುದೀಪ್, ಯಶ್, ಶಿವರಾಜ್ ಕುಮಾರ್, ಉಪೇಂದ್ರ, ಗಣೇಶ್, ಮೊದಲಾದವರು ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಸಂಭಾವನೆ ಪಡೆಯುವ ಕಲಾವಿದರಾಗಿದ್ದಾರೆ.

    ಭಟ್ಟರು ಬರೆದ GST ಹಾಡು ನೋಡಿ: ವಿಜಿ-ಗಣೇಶ್ ಸಿಂಗಿಂಗ್ಭಟ್ಟರು ಬರೆದ GST ಹಾಡು ನೋಡಿ: ವಿಜಿ-ಗಣೇಶ್ ಸಿಂಗಿಂಗ್

    English summary
    GST Impact On Top Kannada Stars, Like Darshan, Sudeep, Puneeth Rajkumar, Shivarajkumar, Yash, Upendra, Ganesh and Some Others in the list.
    Friday, June 30, 2017, 14:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X