3 ನಿಮಿಷದ ಐಟಂ ಸಾಂಗ್‌ಗೆ 'ಐರಾವತ'ನ ಅರಗಿಣಿ ಪಡೆದಿದ್ದು ಎಷ್ಟು ಕೋಟಿ?

ಮೆಗಾಸ್ಟಾರ್ ಚಿರಂಜೀವಿ ನಟನೆಯ 'ವಾಲ್ತೇರು ವೀರಯ್ಯ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಬಾಬಿ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಟಾಲಿವುಡ್ ಸಂಕ್ರಾಂತಿ ವಿನ್ನರ್ ಎನಿಸಿಕೊಂಡಿದೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ 200 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿರುವ ಲೆಕ್ಕಾಚಾರ ನಡೀತಿದೆ.

ಜನವರಿ 13ಕ್ಕೆ 'ವಾಲ್ತೇರು ವೀರಯ್ಯ' ಸಿನಿಮಾ ತೆರೆಗಪ್ಪಳಿಸಿತ್ತು. ಚಿತ್ರದಲ್ಲಿ ಚಿರು- ರವಿತೇಜಾ ಜುಗಲ್‌ಬಂದಿ ಅಭಿಮಾನಿಗಳಿಗೆ ಸಖತ್ ಮನರಂಜನೆ ಕೊಡ್ತಿದೆ. ಇನ್ನು 25 ವರ್ಷಗಳ ಹಿಂದಿನ ಚಿರುನ ತೆರೆಮೇಲೆ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಸಿನಿಮಾ ಜೊತೆಗೆ ರಿಲೀಸ್ ಆಗಿದ್ದ ಬಾಲಕೃಷ್ಣ ನಟನೆಯ 'ವೀರಸಿಂಹ ರೆಡ್ಡಿ' ಚಿತ್ರಕ್ಕಿಂತ ವೀರಯ್ಯನ ಆರ್ಭಟ ಜೋರಾಗಿದೆ. ದೇವಿಶ್ರೀ ಪ್ರಸಾದ್ ಮ್ಯೂಸಿಕ್‌ನಲ್ಲಿ ಸಾಂಗ್ಸ್ ಎಲ್ಲವೂ ಹಿಟ್ ಆಗಿತ್ತು. 'ಬಾಸ್ ಪಾರ್ಟಿ' ಸಾಂಗ್ ಕೊಂಚ ಜೋರಾಗಿಯೇ ಸೌಂಡ್ ಮಾಡ್ತಿದೆ.

'ವೇರ್‌ ಈಸ್ ದ ಪಾರ್ಟಿ' ಸಾಂಗ್‌ನಲ್ಲಿ ಬಾಲಿವುಡ್ ಬೆಡಗಿ ಊರ್ವಶಿ ರೌಟೇಲಾ ಮಿಂಚಿದ್ದಾರೆ. ಚಿರಂಜೀವಿ ಜೊತೆ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. ಈ ಸಾಂಗ್‌ಗೆ ಆಕೆಯ ಸಂಭಾವನೆ ಕೇಳಿದವರು ಶಾಕ್ ಆಗಿದ್ದಾರೆ.

3 ನಿಮಿಷದ ಹಾಡಿಗೆ 2 ಕೋಟಿ?

3 ನಿಮಿಷದ ಹಾಡಿಗೆ 2 ಕೋಟಿ?

ಕಮರ್ಷಿಯಲ್ ಸಿನಿಮಾಗಳಲ್ಲಿ ಐಟಂ ಸಾಂಗ್ ಇರಲೇಬೇಕು ಎನ್ನುವ ಅಲಿಖಿತ ನಿಯಮವೊಂದಿದೆ. ಚಿತ್ರದಲ್ಲಿ ಯಾವುದಾದರೂ ಸನ್ನಿವೇಶದಲ್ಲಿ ಹೀರೊ ಬಿಂದಾಸ್ ಚೆಲುವೆ ಜೊತೆ ಕುಣಿಯಲು ಅಂತಲೇ ಸ್ಪೆಷಲ್ ಸಾಂಗ್ ಡಿಸೈನ್ ಮಾಡ್ತಾರೆ. ಅದನ್ನು ಕಲರ್‌ಫುಲ್ ಸೆಟ್‌ನಲ್ಲಿ ಶೂಟ್ ಮಾಡ್ತಾರೆ. 'ವಾಲ್ತೇರು ವೀರಯ್ಯ' ಚಿತ್ರದಲ್ಲಿ 'ವೇರ್‌ ಈಸ್ ದ ಪಾರ್ಟಿ' ಎನ್ನುವ ಟಪ್ಪಾಂಗುಚಿ ಸಾಂಗ್ ಇದೆ. ಚಿರು ಜೊತೆ ಊರ್ವಶಿ ರೌಟೇಲಾ ಕುಣಿದಿದ್ದಾರೆ. ಇದಕ್ಕಾಗಿ 2 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ.

ಭಾರೀ ವೆಚ್ಚದಲ್ಲಿ ಸಾಂಗ್ ಶೂಟಿಂಗ್

ಭಾರೀ ವೆಚ್ಚದಲ್ಲಿ ಸಾಂಗ್ ಶೂಟಿಂಗ್

ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ 'ವಾಲ್ತೇರು ವೀರಯ್ಯ' ಚಿತ್ರವನ್ನು ನಿರ್ಮಾಣ ಮಾಡಿದೆ. ಎ. ಎಸ್ ಪ್ರಕಾಶ್ ಚಿತ್ರದ ಐಟಂ ಸಾಂಗ್‌ಗಾಗಿ ಭಾರಿ ಸೆಟ್ ಹಾಕಿದ್ದರು. ಸೆಟ್ ಬಹಳ ಚೆನ್ನಾಗಿತ್ತು. ಆದರೆ ಒಂದು ಸಾಂಗ್‌ಗೆ ಇಷ್ಟೆಲ್ಲಾ ಬೇಕಿತ್ತಾ ಎಂದು ಚಿರು ಬೇಸರ ವ್ಯಕ್ತಪಡಿಸಿದ್ದರು. ಶೇಖರ್ ಮಾಸ್ಟರ್ ಡ್ಯಾನ್ಸ್ ಕಂಪೋಸ್ ಮಾಡಿದ್ದಾರೆ. ಸೆಟ್, ಊರ್ವಶಿ ಸಂಭಾವನೆ ಎಲ್ಲಾ ಸೇರಿ ಸಾಂಗ್ ಬಜೆಟ್ ಬಹಳ ಜಾಸ್ತಿ ಆಗಿತ್ತು ಎನ್ನಲಾಗ್ತಿದೆ. ಸದ್ಯ ಸಿನಿಮಾ ಒಳ್ಳೆ ಕಲೆಕ್ಷನ್ ಮಾಡಿದ್ದಕ್ಕೆ ನಿರ್ಮಾಪಕರು ಬಚಾವ್ ಆಗಿದ್ದಾರೆ.

ಪಕ್ಕಾ ಪಾರ್ಟಿ ನಂಬರ್

ಪಕ್ಕಾ ಪಾರ್ಟಿ ನಂಬರ್

ನಕಾಶ್ ಅಜೀಜ್, ಹರಿಪ್ರಿಯಾ ವಾಯ್ಸ್‌ನಲ್ಲಿ 'ಬಾಸ್ ಪಾರ್ಟಿ' ಸಾಂಗ್ ಸಿನಿಮಾ ರಿಲೀಸ್‌ಗೂ ಮೊದಲೇ ಹಿಟ್ ಆಗಿತ್ತು. ಸ್ವತಃ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಲಿರಿಕ್ಸ್ ಬರೆದಿದ್ದಾರೆ. ಚಿರು ಲುಂಗಿ ಉಟ್ಟು, ಕೈಯಲ್ಲಿ ಬೀಡಿ ಸೇದುತ್ತಾ ಸಖತ್ ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ್ದಾರೆ. ಅವರ ಜೊತೆ ಊರ್ವಶಿ ವೈಯ್ಯಾರದಿಂದ ಕಾಣಿಸಿಕೊಂಡಿದ್ದಾರೆ. ಇನ್ನು ಮೆಗಾಸ್ಟಾರ್ ಡ್ಯಾನ್ಸ್ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ಒಂದಷ್ಟು ಡ್ಯಾನ್ಸರ್ಸ್ ಜೊತೆ ಇಬ್ಬರು ಸಖತ್ ಸ್ಟೆಪ್ಸ್ ಹಾಕಿ ರಂಗೇರಿಸಿದ್ದಾರೆ. ಈ ಸಾಂಗ್ ಬಂದಾಗ ಅಭಿಮಾನಿಗಳು ಥಿಯೇಟರ್‌ನಲ್ಲಿ ಹುಚ್ಚೆದ್ದು ಕುಣಿತ್ತಿದ್ದಾರೆ.

ಕನ್ನಡ ಚಿತ್ರದಲ್ಲೂ ಊರ್ವಶಿ

ಕನ್ನಡ ಚಿತ್ರದಲ್ಲೂ ಊರ್ವಶಿ

ಬಾಲಿವುಡ್‌ನಲ್ಲಿ ಊರ್ವಶಿ ರೌಟೇಲಾಗಿ ಒಳ್ಳೆ ಬ್ರೇಕ್ ಸಿಕ್ಕಿಲ್ಲ. 'ಸಿಂಗ್ ಸಾಬ್ ಗ್ರೇಟ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಚೆಲುವೆ ಕನ್ನಡದ 'ಐರಾವತ' ಚಿತ್ರದಲ್ಲಿ ನಟಿಸಿದ್ದರು. ಮುಂದೆ ಒಂದಷ್ಟು ಸಿನಿಮಾಗಳಲ್ಲಿ ಐಟಂ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ಮಾಡೆಲ್ ಕೂಡ ಆಗಿರುವ ಊರ್ವಶಿ ರ್ಯಾಂಪ್ ವಾಕ್‌ನಿಂದ ಪದೇ ಪದೇ ಗಮನ ಸೆಳೆಯುತ್ತಾರೆ. ಇದೀಗ 'ಬಾಸ್ ಪಾರ್ಟಿ' ಸಾಂಗ್‌ನಿಂದ ಮತ್ತೆ ಸುದ್ದಿಯಲ್ಲಿದ್ದಾರೆ.

More from Filmibeat

English summary
Boss Party from megastar Chiranjeevi’s Waltair Veerayya turned out to be a blockbuster. Guess the remuneration of Urvashi Rautela For Waltair Veerayya's Boss Party Song. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X