For Quick Alerts
  ALLOW NOTIFICATIONS  
  For Daily Alerts

  ಮೈನಾ ಚೇತನ್ ಜೊತೆಗೆ ಗುರುದೇಶಪಾಂಡೆ ಸಿನಿಮಾ?

  By ಜೀವನರಸಿಕ
  |

  ಇತ್ತೀಚೆಗೆ ತಾನೇ ಕಾಮುಕ ನಿರ್ದೇಶಕರ ವಿರುದ್ಧ ಮೈನಾ ಚೇತನ್ ಸಿಡಿದೆದ್ದಿದ್ರು. ಅಂತಹಾ ನಿರ್ದೇಶಕರಿಗೆ ಕಠಿಣ ಶಿಕ್ಷೆಯಾಗಬೇಕು ಅಂದಿದ್ರು. ಸಹಜವಾಗೀನೇ ಚೇತನ್ ಸಾಮಾಜಿಕ ಕಳಕಳಿಯ ವ್ಯಕ್ತಿ. ಎಂಡೋಸಲ್ಫಾನ್ ಪೀಡಿತರಿಗೆ ಸಹಾಯ ಮಾಡೋಕೆ ಸಿನಿಮಾ ಆಫರ್ ಗಳನ್ನೇ ಬದಿಗೆ ಸರಿಸಿದ ಹೀರೋ.

  ಆದರೆ ಇತ್ತೀಚೆಗೆ ಚೇತನ್ ಸಿನಿಮಾ ಮಾಡೋದಿಲ್ವಾ. ಸೋತ ಸಿನಿಮಾ ಹೀರೋಗಳೇ ಮತ್ತೆ ಮತ್ತೆ ಪ್ರಯತ್ನ ಮಾಡೋವಾಗ ಗೆದ್ದ ಹೀರೋ ಚೇತನ್ ಗೇನಾಗಿದೆ? ಅಂತ ಚಿತ್ರಪ್ರೇಮಿಗಳು ಮತ್ತು ಸಿನಿಪಂಡಿತರು ಗರಂ ಆಗಿದ್ರು. [ಮೈನಾ ಚಿತ್ರ ವಿಮರ್ಶೆ]

  ಆದ್ರೆ ಚೇತನ್ ಮತ್ತೊಂದು ಸಿನಿಮಾಗೆ ರೆಡಿಯಾಗ್ತಿರೋ ಸುದ್ದಿ ಬಂದಿದೆ. ಅದು 'ಮೈನಾ' ತರಹದ ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್ ಪೊಲೀಸ್ ವೃತ್ತಿ ಬದುಕಿನ ಮತ್ತೊಂದು ರೋಚಕ ಕಥೆ.

  ಆದರೆ ಅದಕ್ಕಿಂತ ಕುತೂಹಲಕರ ವಿಷಯ ಅಂದ್ರೆ ಇದಕ್ಕೆ ತಯಾರಿ ಮಾಡಿಕೊಳ್ತಿದ್ದಿದ್ದು ವಿವಾದಾತ್ಮಕ ನಿರ್ದೇಶಕ ಗುರುದೇಶಪಾಂಡೆ. ಹಾಗಾದ್ರೆ ಈಗ ಆ ಸಿನಿಮಾ ಆಗುತ್ತಾ. ಗುರುದೇಶಪಾಂಡೆಯಂತಹ ನಿರ್ದೇಶಕರ ವಿರುದ್ಧ ಸಿಡಿದೆದ್ದಿರೋ ಚೇತನ್ ಆ ಪಾತ್ರವನ್ನ ಒಪ್ಪಿಕೊಳ್ತಾರಾ? ಕಾದುನೋಡಬೇಕು.

  English summary
  The Sandalwood grapevine is buzzing with news of Chetan Kumar's next movie may be directed by Guru Deshpande. It is said that, the story is about police office Tiger Ashok Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X