'ಬಿಂದಾಸ್' ಬೆಡಗಿ ಮದುವೆ ಸ್ಟೋರಿಯಲ್ಲಿ ಟ್ವಿಸ್ಟ್: ಆಪ್ತ ಸ್ನೇಹಿತೆಯ ಮಾಜಿ ಪತಿ ಜೊತೆ ಹನ್ಸಿಕಾ ಮದುವೆ?

ಬಹುಭಾಷಾ ನಟಿ ಹನ್ಸಿಕಾ ಮೊಟ್ವಾನಿ ಎರಡು ದಿನಗಳ ಹಿಂದೆಯಷ್ಟೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು. ಮುಂಬೈ ಮೂಲದ ಉದ್ಯಮಿ ಸೋಹೆಲ್ ಖತುರಿಯಾ ಜೊತೆ ಮದುವೆ ಆಗುತ್ತಿರುವ ವಿಚಾರ ಹಂಚಿಕೊಂಡಿದ್ದರು. ಐಫೆಲ್ ಟವರ್ ಎದುರು ಬಹಳ ವಿಭಿನ್ನವಾಗಿ ಸೋಹೆಲ್ ಪ್ರಪೋಸ್ ಮಾಡಿದ್ದ ಸಂಗತಿಯನ್ನು ಫೋಟೊ ಸಮೇತ ಹಂಚಿಕೊಂಡಿದ್ದರು. ಹೊಸ ಸಮಾಚಾರ ಏನಪ್ಪಾ ಅಂದರೆ ಸೋಹೆಲ್ ಮತ್ಯಾರು ಅಲ್ಲ, ಹನ್ಸಿಕಾ ಆಪ್ತ ಸ್ನೇಹಿತೆಯ ಮಾಜಿ ಪತಿ ಎನ್ನಲಾಗುತ್ತಿದೆ.

ಸೋಹೆಲ್‌ ಖತುರಿಯಾಗೆ ಇದು ಮೊದಲ ಮದುವೆ ಅಲ್ಲವಂತೆ. ಈಗಾಗಲೇ ಆತ ರಿಂಕಿ ಎನ್ನುವ ಯುವತಿ ಜೊತೆ ಮದುವೆ ಆಗಿ ವಿಚ್ಛೇದನ ಪಡೆದಿದ್ದಾರೆ. 2016ರಲ್ಲಿ ಇವರಿಬ್ಬರ ಮದುವೆ ನಡೆದಿತ್ತು. ಸದ್ಯ ಈ ಮದುವೆಯಲ್ಲಿ ನಟಿ ಹನ್ಸಿಕಾ ಮೊಟ್ವಾನಿ ಭಾಗವಹಿಸಿದ್ದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಬರೀ ಮದುವೆಯ ಪ್ರೋಮೊ ಅಷ್ಟೆ. ಅದರಲ್ಲಿ ಹನ್ಸಿಕಾ ಭಾಗವಹಿಸಿರುವುದು ಮಾತ್ರವಲ್ಲ, ಸಂಗೀತ್ ಕಾರ್ಯಕ್ರಮದಲ್ಲಿ ಸ್ನೇಹಿತೆ ರಿಂಕಿ ಜೊತೆ ಸೇರಿ ಹೆಜ್ಜೆ ಹಾಕಿದ್ದಾರೆ. ಇದರಿಂದ ಹನ್ಸಿಕಾ- ರಿಂಕಿ ಇಬ್ಬರು ಬೆಸ್ಟ್ ಫ್ರೆಂಡ್ಸ್ ಎನ್ನುವುದು ಗೊತ್ತಾಗ್ತಿದೆ. ಇದನ್ನು ನೋಡಿ ಹನ್ಸಿಕಾ ತನ್ನ ಸ್ನೇಹಿತೆಯ ಮಾಜಿ ಪತಿ ಜೊತೆಗೆ ಮದುವೆಗೆ ಸಿದ್ಧರಾಗ್ತಿದ್ದಾರಾ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಬಾಲ ನಟಿಯಾಗಿ ಚಿತ್ರರಂಗಕ್ಕೆ ಬಂದ ಹನ್ಸಿಕಾ, ತೆಲುಗಿನ 'ದೇಶಮುದುರು' ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿ ಗೆದ್ದಿದ್ದರು. ಮುಂದೆ ತಮಿಳು, ಕನ್ನಡ ಸಿನಿಮಾಗಳಲ್ಲೂ ನಟಿಸಿ ಸೈ ಎನ್ನಿಸಿಕೊಂಡಿದ್ದರು. ಇತ್ತೀಚೆಗೆ ಮುಂಬೈ ಚೆಲುವೆ ಸಿನಿಮಾಗಳಲ್ಲಿ ನಟಿಸೋದು ಕಮ್ಮಿಯಾಗಿತ್ತು. ಆದರೆ ಇದ್ದಕ್ಕಿದಂತೆ ಮದುವೆ ಸುದ್ದಿ ಕೊಟ್ಟಿದ್ದರು.

 ಟ್ರೋಲ್ ಮಾಡುತ್ತಿರುವ ನೆಟ್ಟಿಗರು

ಟ್ರೋಲ್ ಮಾಡುತ್ತಿರುವ ನೆಟ್ಟಿಗರು

ಕಳೆದ ಕೆಲ ದಿನಗಳಿಂದ ಹನ್ಸಿಕಾ ಮೊಟ್ವಾನಿ ಮದುವೆ ಬಗ್ಗೆ ಗುಸುಗುಸು ಶುರುವಾಗಿತ್ತು. ತೆರೆಮರೆಯಲ್ಲಿ ಮದುವೆಗೆ ಸಿದ್ದತೆ ನಡೀತಿದೆ. ಮದುವೆಗೆ ಜೈಪುರ್ ಪ್ಯಾಲೇಸ್ ಬುಕ್‌ ಆಗಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಯಾವಾಗ ಹನ್ಸಿಕಾ ಅಧಿಕೃತವಾಗಿ ಈ ವಿಚಾರವನ್ನು ರಿವೀಲ್ ಮಾಡಿದ್ರೋ ಆಗಲೇ ನೆಟ್ಟಿಗರು ಸೋಹೆಲ್ ಯಾರು ಎನ್ನುವುದನ್ನು ಹುಡುಕಲು ಶುರು ಮಾಡಿದ್ದರು. ಎರಡೇ ದಿನಗಳಲ್ಲಿ ಆತ ಹನ್ಸಿಕಾ ಸ್ನೇಹಿತೆ ರಿಂಕು ಮಾಜಿ ಪತಿ ಎನ್ನುವುದು ಗೊತ್ತಾಗಿದೆ. ಇದನ್ನು ನೋಡಿ ನೆಟ್ಟಿಗರು ನಿನಗೆ ಬೇರೆ ಯಾರು ಸಿಗಲಿಲ್ಲವಾ? ಈಗಾಗಲೇ ಒಂದು ಮದುವೆ ಆಗಿರುವವನನ್ನು ಮದುವೆ ಆಗ್ತಿದ್ದೀಯಾ? ನೀನೇ ಸ್ನೇಹಿತೆಗೆ ಮದುವೆ ಮಾಡಿಸಿ, ಈಗ ಆಕೆಯ ಮಾಜಿ ಪತಿ ಜೊತೆ ಮದುವೆ ಆಗುತ್ತಿದ್ದೀಯಾ? ಎಂದು ಟ್ರೋಲ್ ಮಾಡುತ್ತಿದ್ದಾರೆ.

 ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್

ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್

ಹನ್ಸಿಕಾ ಹಾಗೂ ಸೋಹೆಲ್ ವಿವಾಹ ಡಿಸೆಂಬರ್ 4ರಂದು ರಾಜಸ್ಥಾನ್‌ ಜೈಪುರದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಈಗಾಗಲೇ ಈ ಡೆಸ್ಟಿನೇಷನ್ ವೆಡ್ಡಿಂಗ್‌ಗಾಗಿ ಜೈಪುರದ ಮುಂಡೋಟ ಪ್ಯಾಲೇಸ್‌ನ ಬುಕ್ ಆಗಿದೆ. ಮದುವೆ ದಿನವೇ ಹಲ್ದಿ ಕಾರ್ಯಕ್ರಮ ಇರಲಿದೆ. ಒಂದು ದಿನ ಮೊದಲೇ ಮೆಹೆಂದಿ ಹಾಗೂ ಸಂಗೀತ್ ಪಾರ್ಟಿ ನಡೆಯಲಿದೆ. ಈ ಅದ್ಧೂರಿ ಮದುವೆ ಸಮಾರಂಭಕ್ಕೆ ಹನ್ಸಿಕಾ ಮೊಟ್ವಾನಿ ಚಿತ್ರರಂಗದ ಸ್ನೇಹಿತರು ಭಾಗಿ ಆಗಲಿದ್ದಾರೆ.

 ಕನ್ನಡ ಚಿತ್ರದಲ್ಲೂ ನಟಿಸಿದ್ದ ಹನ್ಸಿಕಾ

ಕನ್ನಡ ಚಿತ್ರದಲ್ಲೂ ನಟಿಸಿದ್ದ ಹನ್ಸಿಕಾ

14 ವರ್ಷಗಳ ಹಿಂದೆ ಡಿ. ರಾಜೇಂದ್ರ ಬಾಬು ನಿರ್ದೇಶನದ 'ಬಿಂದಾಸ್' ಚಿತ್ರದಲ್ಲಿ ಹನ್ಸಿಕಾ ಮೊಟ್ವಾನಿ ನಟಿಸಿದ್ದರು. ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೋಡಿಯಾಗಿ ಹನ್ಸಿಕಾ ಮೋಡಿ ಮಾಡಿದ್ದರು. ಸಿನಿಮಾ ಅಷ್ಟಾಗಿ ಸದ್ದು ಮಾಡದೇ ಇದ್ದರೂ ಮುಂಬೈ ಚೆಲುವೆ ಕನ್ನಡ ಸಿನಿರಸಿಕರ ಗಮನ ಸೆಳೆದಿದ್ದರು.

 ಸಿಂಬು ಜೊತೆ ಹನ್ಸಿಕಾ ಡೇಟಿಂಗ್

ಸಿಂಬು ಜೊತೆ ಹನ್ಸಿಕಾ ಡೇಟಿಂಗ್

ಹನ್ಸಿಕಾ ಮುಂಬೈನಲ್ಲಿ ಹುಟ್ಟಿ ಬೆಳೆದರೂ ಹೆಚ್ಚು ನಟಿಸಿದ್ದು ತಮಿಳು ಸಿನಿಮಾಗಳಲ್ಲಿ. ಮೊದಲಿಗೆ ಗುಂಡು ಗುಂಡಗೆ ಇದ್ದ ಚೆಲುವೆ ಇತ್ತೀಚೆಗೆ ತೂಕ ಇಳಿಸಿ ಒಂದಷ್ಟು ಮಹಿಳಾ ಪ್ರಧಾನ ಸಿನಿಮಾಗಳಲ್ಲೂ ನಟಿಸ್ತಿದ್ದಾರೆ. ಸದ್ಯ ಏಳೆಂಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ಹನ್ಸಿಕಾ ಮೊಟ್ವಾನಿ ಹೆಸರು ತಮಿಳು ನಟ ಸಿಂಬು ಜೊತೆ ತಳುಕು ಹಾಕಿಕೊಂಡಿತ್ತು. ಇಬ್ಬರು ಮದುವೆ ಕೂಡ ಆಗುತ್ತಾರೆ ಎನ್ನಲಾಗಿತ್ತು.

More from Filmibeat

English summary
Hansika Motwani is getting ready to marry her best friend's ex-husband Sohael Khaturiya. She Even Attended her Fiance First wedding Happend 6 years back in Goa Video Goes Viral. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X