For Quick Alerts
  ALLOW NOTIFICATIONS  
  For Daily Alerts

  ಐಟಿ ಇಲಾಖೆಯ ನಿದ್ದೆಗೆಡಿಸಿದ ಹಂಸಿಕಾ ಬಿಎಂಡಬ್ಲ್ಯು

  By Rajendra
  |

  ಮಾರಿ ಕಣ್ಣು ಹೋರಿ ಮ್ಯಾಲೆ ಎಂಬಂತೆ ಆದಾಯ ತೆರಿಗೆ ಅಧಿಕಾರಿಗಳ ಕಣ್ಣು 'ಬಿಂದಾಸ್' ಬೆಡಗಿ ಹಂಸಿಕಾ ಮೋತ್ವಾನಿ ಮೇಲೆ ಬಿದ್ದಿದೆ. ಅವರ ಕಣ್ಣು ಈಕೆಯ ಮೇಲೆ ಬೀಳಲು ಕಾರಣವಾಗಿರುವುದು ಇತ್ತೀಚೆಗೆ ಆಕೆ ತಿರುಗಾಡುತ್ತಿರುವ ಐಶಾರಾಮಿ ಕಾರು.

  ಇತ್ತೀಚೆಗೆ ಈಕೆ ಸದ್ದಿಲದಂತೆ ಕೊಂಡುಕೊಂಡ ಸದ್ದಿಲ್ಲದ ಕಾರು ಬಿಎಂಡಬ್ಲ್ಯು ಎಲ್ಲರ ಕಣ್ಣು ಕುಕ್ಕಿತ್ತು. ಈಕೆಗಿಂತಲೂ ಹೆಚ್ಚಾಗಿ ಈಕೆಯ ಕಾರಿನ ಬಗ್ಗೆಯೇ ಹೆಚ್ಚಾಗಿ ಮಾತುಕತೆ, ಸುದ್ದಿ. ಕಡೆಗೆ ಈ ಬಿಎಂಡಬ್ಲ್ಯು ಕಾರಿನ ಸುದ್ದಿ ಆದಾಯ ತೆರಿಗೆ ಅಧಿಕಾರಿಗಳ ಕಿವಿಗೂ ಬಿದ್ದು ಅವರ ಕಣ್ಣು ಈಕೆಯ ಮೇಲೆ ಬೀಳುವಂತೆ ಮಾಡಿದೆ.

  ಹಂಸಿಕಾ ಕೊಂಡುಕೊಂಡಿರುವ ಬಿಎಂಡಬ್ಲ್ಯು 5 ಸೀರೆಸ್ ಕಾರಿನ ಬೆಲೆ ಸುಮಾರು ರು.60 ಲಕ್ಷ. ಟಾಪ್ ತಾರೆಗಳ ಬಳಿ ಮಾತ್ರ ಇರುವ ಈ ರೀತಿಯ ಐಶಾರಾಮಿ ಕಾರಿಗೆ ಹಂಸಿಕಾ ಕೂಡ ಒಡತಿಯಾಗಿರುವುದು ಐಟಿ ಅಧಿಕಾರಿಗಳ ನಿದ್ದೆಗೆಡಿಸಿದೆ.

  ಈಗ ಐಟಿ ಅಧಿಕಾರಿಗಳು ಹಂಸಿಕಾರ ಆದಾಯ ಮೂಲಗಳ ಮೇಲೆ ಒಂದು ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಈ ಹಿಂದೆ ಬೆಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ ನಿವಾಸದ ಮೇಲೂ ಆದಾಯ ತೆರಿಗೆ ದಾಳಿ ನಡೆದಿತ್ತು. ಐಟಿ ಅಧಿಕಾರಿಗಳು ಅನುಷ್ಕಾ ಹೈದರಾಬಾದಿನ ಮೇಲೆ ದಾಳಿ ಮಾಡಿ ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದರು.

  ಮರ್ಸಿಡೆಸ್ ಬೆಂಜ್ ಕಾರಿನಲ್ಲಿ ಅನುಷ್ಕಾ ಶೆಟ್ಟಿ ಓಡಾಡುತ್ತಿದ್ದದ್ದು ಐಟಿ ಅಧಿಕಾರಿಗಳ ಕಣ್ಣು ಬೀಳಲು ಕಾರಣವಾಗಿತ್ತು. ಬಳಿಕ ಭೂಮಿಕಾ ಕೂಡ ಆಡಿ ಕಾರಿನಲ್ಲಿ ಓಡಾಡುತ್ತಿದ್ದದ್ದು ಆಕೆಯ ಮೇಲೂ ಐಟಿ ದಾಳಿ ನಡೆದಿತ್ತು. ಇತ್ತೀಚೆಗೆ ಹಂಸಿಕಾರ ಮತ್ತೊಂದು ಗುಸುಗುಸು ಸುದ್ದಿ ಚಾಲ್ತಿಯಲ್ಲಿತ್ತು.

  ಅದೇನಪ್ಪಾ ಎಂದರೆ ಈಕೆ ನಯನತಾರಾ ಹಾಗೂ ಪ್ರಭುದೇವ ಸಂಬಂಧದಲ್ಲಿ ಬಿರುಕು ಮೂಡಲು ಈಕೆಯೇ ಕಾರಣ ಎನ್ನಲಾಗಿತ್ತು. ಆದರೆ ಈಕೆ ಅವರಿಬ್ಬರ ನಡುವೆ ಕಡ್ಡಿಗೀಚಿದ್ದು ನಾನಲ್ಲ ನಾನಲ್ಲ ಎಂದಿದ್ದರು. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡರು ಎಂಬಂತೆ ಹಂಸಿಕಾ ಮಾತನಾಡಿದ್ದರು.

  ನಯನಿ ಮತ್ತು ಪ್ರಭು ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹಬ್ಬಿದ್ದೇ ತಡ ಹಂಸಿಕಾ ತಡಬಡಾಯಿಸಿದ್ದರು. ಹಂಸಿಕಾ ಮತ್ತು ಪ್ರಭುದೇವ ನಡುವೆ ಕಣ್ಣಾಮುಚ್ಚಾಲೆ ಸಂಬಂಧವಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇವರಿಬ್ಬರ ನಡುವಿನ ಐಸ್‌ಪೈಸ್ ನಯನತಾರಾಗೆ ಗೊತ್ತಾದ ಕಾರಣಕ್ಕೆ ಪ್ರಭು ಜೊತೆ ಟೂ ಬಿಟ್ಟಿದ್ದರು ಎನ್ನಲಾಗಿತ್ತು.

  ಈ ಬಗ್ಗೆ ಪ್ರತಿಕ್ರಿಯಿಸಿರುವ ಹಂಸಿಕಾ, ಗಾಸಿಪ್ ಗಮಾರರು ಈ ರೀತಿಯ ಇಲ್ಲಸಲ್ಲದ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಸತ್ಯಾಸತ್ಯತೆಗಳನ್ನು ತಿಳಿದುಕೊಂಡು ವರದಿ ಮಾಡಬೇಕು. ಪ್ರಭುದೇವ ನನಗೆ ಅಣ್ಣನಿದ್ದಂತೆ. ನಮ್ಮಿಬ್ಬರ ನಡುವೆ ಇದಕ್ಕಿಂತ ಭಿನ್ನವಾದ ಸಂಬಂಧವಿಲ್ಲ ಎಂದಿದ್ದರು ತಂಗೆವ್ವ ಹಂಸಿಕಾ. (ಏಜೆನ್ಸೀಸ್)

  English summary
  Actress Hansika Motwani is busy these days spreading a word everywhere that she bought a new BMW car. Apparently she is the proud owner of a 60 lakhs BMW 5 series car now. Sources are saying that the bulky girl now entered the hit-list of Income Tax sleuths for a regular check-up.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X