For Quick Alerts
  ALLOW NOTIFICATIONS  
  For Daily Alerts

  ಭಟ್ಟರ 'ದನಕಾಯೋನು' ಸಿನಿಮಾ ನಟಿ ಜೊತೆ ಹಾರ್ದಿಕ್ ಪಾಂಡ್ಯ ಮದ್ವೆ!

  |

  ಭಾರತ ತಂಡದ ಸ್ಟಾರ್ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಗರ್ಲ್ ಫ್ರೆಂಡ್ ವಿಚಾರದಲ್ಲಿ ಪದೇ ಪದೇ ಸುದ್ದಿಯಾಗುತ್ತಿದ್ದಾರೆ. ಒಂದೊಂದು ಸುದ್ದಿಯಾದಾಗಲೂ ಒಬ್ಬೊಬ್ಬ ನಟಿಯ ಹೆಸರು ಹಾರ್ದಿಕ್ ಪಾಂಡ್ಯ ಜೊತೆ ಅಂಟಿಕೊಂಡಿರುತ್ತೆ.

  ಬಾಲಿವುಡ್ ನಟಿ ಎಲ್ಲಿ ಅವ್ರಾಮ್ ಜೊತೆ ಹಾರ್ದಿಕ್ ಪಾಂಡ್ಯ ಹೆಸರು ಹೆಚ್ಚು ಸದ್ದು ಮಾಡಿತ್ತು. ಆ ಬಳಿಕ ಲಿಶಾ ಶರ್ಮಾ ಜೊತೆ ತಳುಕು ಹಾಕಿಕೊಂಡಿತ್ತು. ನಂತರ ಇಶಾ ಗುಪ್ತಾ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಯ್ತು.

  ಐರಾವತ ನಟಿಯ ಬೇಡಿಕೆ ತಿರಸ್ಕರಿಸಿದ್ರಾ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ.?ಐರಾವತ ನಟಿಯ ಬೇಡಿಕೆ ತಿರಸ್ಕರಿಸಿದ್ರಾ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ.?

  ಇದೆಲ್ಲದರ ಮಧ್ಯೆ ಊರ್ವಶಿ ರೌಟೇಲಾ ಜೊತೆಯೂ ನಂಟು ಹೊಂದಿದ್ದಾರೆ ಎನ್ನಲಾಯಿತು. ಇದೀಗ, ಮತ್ತೊಬ್ಬ ನಟಿಯ ಜೊತೆ ಹಾರ್ದಿಕ್ ಹೆಸರು ಕೇಳಿಬಂದಿದ್ದು, ಈ ನಟಿಯನ್ನ ಹಾರ್ದಿಕ್ ಮನೆಯವರು ಕೂಡ ಒಪ್ಪಿಕೊಂಡಿದ್ದಾರಂತೆ. ವಿಶೇಷ ಅಂದ್ರೆ ಈ ನಟಿ ಯೋಗರಾಜ್ ಭಟ್ ನಿರ್ದೇಶನದ ದನಕಾಯೋನು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಯಾರದು? ಮುಂದೆ ಓದಿ....

  ಯಾರದು ದನಕಾಯೋನು ನಟಿ?

  ಯಾರದು ದನಕಾಯೋನು ನಟಿ?

  ದುನಿಯಾ ವಿಜಯ್ ಹಾಗೂ ಪ್ರಿಯಾಮಣಿ ನಟಿಸಿದ್ದ 'ದನಕಾಯೋನು' ಚಿತ್ರ ಮಗೆ ನೆನಪಿರಬಹುದು. ಈ ಚಿತ್ರದ ನಟಿ ಅಂದ್ರೆ ಯಾರೂ ಅಂತ ಜಾಸ್ತಿ ಯೋಚಿಸಬೇಡಿ. ದನಕಾಯೋನು ಚಿತ್ರದ 'ಬಾರೆ ಗಂಗೆ ಬಾರೆ ತುಂಗೆ...' ಹಾಡಿನಲ್ಲಿ ವಿದೇಶಿ ಹುಡುಗಿಯೊಬ್ಬಳ ಸ್ಪೆಷಲ್ ಎಂಟ್ರಿ ಇದೆ. ಆ ಹುಡುಗಿ ಜೊತೆ ಹಾರ್ದಿಕ್ ಪಾಂಡ್ಯ ಲವ್ವಲ್ಲಿ ಇದ್ದಾರೆ ಎಂಬ ಹೊಸ ಸುದ್ದಿ ಹೊರಬಿದ್ದಿದೆ.

  ಯಾರು ಈ ನತಾಶಾ ಸ್ಟಾಂಕೋವಿಕ್?

  ಯಾರು ಈ ನತಾಶಾ ಸ್ಟಾಂಕೋವಿಕ್?

  ಮುಂಬೈನ ಮೂಲದ ನಟಿ ನತಾಶಾ ಸ್ಟಾಂಕೋವಿಕ್ ಸರ್ಬಿಯಾ ನಟಿಯಾಗಿದ್ದಾರೆ. ಮಾಡೆಲ್, ಡ್ಯಾನ್ಸರ್ ಕೂಡ ಹೌದು. ಬಿಗ್ ಬಾಸ್ ಹಿಂದಿ 8ನೇ ಅವೃತ್ತಿಯಲ್ಲಿ ಸ್ಪರ್ಧಿಯಾಗಿದ್ದರು. ನಾಚ್ ಬಲಿಯೇ 9ನೇ ಆವೃತ್ತಿಯಲ್ಲೂ ಸ್ಪರ್ಧಿಯಾಗಿದ್ದರು. ಸತ್ಯಾಗ್ರಹ, 7 ಹವರ್ಸ್ ಟು ಗೊ, ಡ್ಯಾಡಿ, ಜೀರೋ ಅಂತಹ ಚಿತ್ರಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ.

  ಅವಳ್ ಬಿಟ್ಟು, ಇವಳ್ ಬಿಟ್ಟು ಇನ್ನೊಬ್ಬಳ ಜೊತೆ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ.!ಅವಳ್ ಬಿಟ್ಟು, ಇವಳ್ ಬಿಟ್ಟು ಇನ್ನೊಬ್ಬಳ ಜೊತೆ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ.!

  ಈಕೆ ಜೊತೆ ಮದ್ವೆಗೆ ಗ್ರೀನ್ ಸಿಗ್ನಲ್

  ಈಕೆ ಜೊತೆ ಮದ್ವೆಗೆ ಗ್ರೀನ್ ಸಿಗ್ನಲ್

  ನತಾಶ ಅವರನ್ನ ಹಾರ್ದಿಕ್ ಪಾಂಡ್ಯ ತಮ್ಮ ಕುಟುಂಬಕ್ಕೆ ಪರಿಚಯಿಸಿದ್ದಾರೆ. ಬಹುತೇಕ ಎಲ್ಲ ಕೌಟುಂಬಿಕ ಕಾರ್ಯಕ್ರಮಗಳಿಗೂ ನತಶಾ ಹೋಗ್ತಾರಂತೆ. ಇತ್ತೀಚಿಗಷ್ಟೆ ಹಾರ್ದಿಕ್ ಅವರ ಮನೆಯಲ್ಲಿ ನಡೆದಿದ್ದ ಬರ್ತಡೇಯಲ್ಲೂ ನತಾಶ ಕಾಣಿಸಿಕೊಂಡಿದ್ದರಂತೆ. ನತಶಾ ನನ್ನ ಗರ್ಲ್ ಫ್ರೆಂಡ್ ಎಂದು ಪರಿಚಯ ಮಾಡಿರುವ ಹಾರ್ದಿಕ್ ಗೆ ಮನೆಯವರಿಂದ ಒಪ್ಪಿಗೆ ಕೂಡ ಪಡೆದುಕೊಂಡಿದ್ದಾರಂತೆ.

  ಏನು.. ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಈ ನಟಿಯನ್ನ ಡೇಟ್ ಮಾಡ್ತಿದ್ದಾರಾ.?ಏನು.. ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಈ ನಟಿಯನ್ನ ಡೇಟ್ ಮಾಡ್ತಿದ್ದಾರಾ.?

  ಮತ್ತೆ ಹುಡುಗಿ ಬದಲಾದ್ರು ಅಚ್ಚರಿ ಇಲ್ಲ

  ಮತ್ತೆ ಹುಡುಗಿ ಬದಲಾದ್ರು ಅಚ್ಚರಿ ಇಲ್ಲ

  ನತಾಶ ಜೊತೆ ಹಾರ್ದಿಕ್ ಪಾಂಡ್ಯ ಒಳ್ಳೆಯ ಸ್ನೇಹ ಇದೆ. ಹಾರ್ದಿಕ್ ಬರ್ತಡೇಗೆ ವಿಶ್ ಮಾಡಿದ್ದ ನತಾಶ ಪೋಸ್ಟ್ ಭಾರಿ ಚರ್ಚಗೆ ಕಾರಣವಾಗಿತ್ತು. ಹಾರ್ದಿಕ್ ಮನೆಯವರಿಗೂ ನತಶಾ ಪರಿಚಯ ಇದೆ. ಮದುವೆಯಾಗುವ ಸಾಧ್ಯತೆ ಎಂಬ ಸುದ್ದಿ ಈಗ ಹೊರಬಿದ್ದಿದೆ. ಆದರೆ, ಅಧಿಕೃತವಾಗುವವರೆಗೂ ಈ ವಿಚಾರ ಸತ್ಯಕ್ಕೆ ಹತ್ತಿರವಿಲ್ಲ. ಇದೊಂದು ವದಂತಿಯಾಗಿಯೇ ಉಳಿದುಕೊಳ್ಳಲಿದೆ.

  English summary
  Cricketer Hardik Pandya ready to marry his girlfriend natasha stanković. she acted in kannada movie danakayonu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X