For Quick Alerts
  ALLOW NOTIFICATIONS  
  For Daily Alerts

  'ಕನ್ನಡ್ ಗೊತ್ತಿಲ್ಲ' ಅನ್ನೋಲ್ಲ ಅಂದಿದ್ಯಾಕೆ ರಚಿತಾ?

  By Pavithra
  |

  'ಕನ್ನಡ್ ಗೊತ್ತಿಲ್ಲ' ನಿನ್ನೆಯಷ್ಟೇ ಸೆಟ್ಟೇರಿರುವ ಕನ್ನಡ ಸಿನಿಮಾ. ಹರಿಪ್ರಿಯಾ ನಾಯಕ ನಟಿ ಆಗಿರುವ ಚಿತ್ರಕ್ಕೆ ಆರ್ ಜೆ ಮಯೂರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಷ್ಯ ಏನಪ್ಪಾ ಅಂದ್ರೆ 'ಕನ್ನಡ್ ಗೊತ್ತಿಲ್ಲ' ಸಿನಿಮಾದಲ್ಲಿ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯ ಮಾಡಬೇಕಿತ್ತು. ಈ ಹಿಂದೆ ರಚಿತಾ ಅವರಿಗೆ ಮಯೂರ್ ಈ ಸಿನಿಮಾ ಕಥೆ ರೀಡಿಂಗ್ ಕೊಟ್ಟಿದ್ದರಂತೆ.

  ಆದರೆ ಈಗ ಸಿನಿಮಾದ ನಾಯಕಿ ಬದಲಾಗಿದ್ದಾರೆ. ರಚಿತಾ ಅಭಿನಯಿಸಲ್ಲ ಎಂದಾಗ ಈ ಕಥೆ ಹರಿಪ್ರಿಯಾ ಅವರ ಬಳಿ ಹೋಗಿದೆ ಎನ್ನುವ ಮಾತು ಗಾಂಧಿ ನಗರದ ಗಲ್ಲಿಯಲ್ಲಿ ಹರಿದಾಡುತ್ತಿದೆ. ಆದರೆ ರಚಿತಾ ಸಿನಿಮಾ ರಿಜೆಕ್ಟ್ ಮಾಡಲು ಕಾರಣವೇನು ಎನ್ನುವುದು ಮಾತ್ರ ತಿಳಿದು ಬಂದಿಲ್ಲ.

  'ಕನ್ನಡ್ ಗೊತ್ತಿಲ್ಲ' ಎನ್ನುತ್ತಿದ್ದಾರೆ ಕನ್ನಡ ಹುಡುಗಿ ಹರಿಪ್ರಿಯಾ'ಕನ್ನಡ್ ಗೊತ್ತಿಲ್ಲ' ಎನ್ನುತ್ತಿದ್ದಾರೆ ಕನ್ನಡ ಹುಡುಗಿ ಹರಿಪ್ರಿಯಾ

  ಈ ಹಿಂದೆ ಆರ್ ಜೆ ಮಯೂರ್ 'ರಿಷಭ ಪ್ರಿಯ' ಎನ್ನುವ ಕಿರು ಚಿತ್ರವನ್ನು ನಿರ್ದೇಶನ ಮಾಡಿದ್ದರು ಆಗ ರಚಿತಾ ನಿರ್ಮಾಪಕಿಯಾಗಿ ಮಯೂರ್ ಜೊತೆ ಕೈ ಜೋಡಿಸಿದ್ದರು. ಅದಾದ ನಂತರ ಮಯೂರ್ ರಚ್ಚು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಸುದ್ದಿ ಆಗಿತ್ತು. ಆದರೆ ಈಗ ಅದೇ ಸಿನಿಮಾದಲ್ಲಿ ಹರಿಪ್ರಿಯಾ ಅಭಿನಯ ಮಾಡುತ್ತಿದ್ದಾರೆ.

  ಹಾಗಂತ ಮಯೂರ್ ಮತ್ತೆ ರಚಿತಾ ಯಾವುದೇ ರೀತಿ ಜಗಳವಾಗಲಿ, ಒಳ ಮುನಿಸಾಗಲಿ ಮಾಡಿಕೊಂಡಿಲ್ಲ. ಇಬ್ಬರು ತುಂಬಾ ವರ್ಷದಿಂದ ಸ್ನೇಹಿತರಾಗಿದ್ದು ಇಂದಿಗೂ ಅಷ್ಟೇ ಸ್ನೇಹದಿಂದ ಇದ್ದಾರೆ. ಆದರೆ ಸಿನಿಮಾದ ನಾಯಕಿ ಮಾತ್ರ ಬದಲಾಗಿದ್ದಾರೆ.

  English summary
  Kannada actress Haripriya is the heroine in the 'Kannad gotilla' film. It was news that Rachita Ram acted in the film earlier.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X