ಕುರುಕ್ಷೇತ್ರಕ್ಕೆ 'ದ್ರೌಪದಿ' ಫಿಕ್ಸ್! ಕನ್ನಡದ ನಟಿಯೇ 'ಪಾಂಚಾಲಿ'?

By Bharath Kumar

ಭಾರತ ಚಿತ್ರರಂಗದಲ್ಲಿ ಮಹಾಭಾರತ ಕುರಿತ ಚಿತ್ರಗಳು ಹೆಚ್ಚು ಸದ್ದು ಮಾಡುತ್ತಿರುವಾಗಲೇ ಕನ್ನಡದಲ್ಲಿ 'ಕುರುಕ್ಷೇತ್ರ' ಶುರುವಾಗುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕುರುಕ್ಷೇತ್ರ' ಚಿತ್ರದಲ್ಲಿ ದುರ್ಯೋಧನನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಅಂತಿಮವಾಗಿದೆ.

ಇನ್ನುಳಿದಂತೆ ದರ್ಶನ್ ಜೊತೆಯಲ್ಲಿ ಕನ್ನಡದ ಟಾಪ್ ನಟರಾದ ಸುದೀಪ್, ಪುನೀತ್, ಉಪೇಂದ್ರ, ಯಶ್, ಶಿವಣ್ಣ, ಅಂಬರೀಶ್, ರವಿಚಂದ್ರನ್ ಸೇರಿದಂತೆ ಹಲವು ನಾಯಕರನ್ನ ಒಂದಾಗಿಸುವ ಉದ್ದೇಶ ಹೊಂದಿದೆ ಚಿತ್ರತಂಡ.['ಕುರುಕ್ಷೇತ್ರ'ದಲ್ಲಿ 'ಪಾಂಡವರು-ಕೌರವರ' ಪಟ್ಟಿ ಬಹಿರಂಗ ಮಾಡಿದ ಮುನಿರತ್ನ]

ಈ ಎಲ್ಲ ಸ್ಟಾರ್ ನಟರು ಒಂದೇ ಚಿತ್ರದಲ್ಲಿ ಅಭಿನಯಿಸುತ್ತಾರಾ ಎಂಬ ಕುತೂಹಲ ಒಂದು ಕಡೆಯಾಗಿದ್ದರೇ, ಮತ್ತೊಂದೆಡೆ ಕುರುಕ್ಷೇತ್ರದಲ್ಲಿ ದ್ರೌಪದಿ ಯಾರಾಗ್ತಾರೆ ಎಂಬ ನಿರೀಕ್ಷೆ ಹೆಚ್ಚಾಗುತ್ತಿದೆ. ಮೂಲಗಳ ಪ್ರಕಾರ, ದ್ರೌಪದಿ ಪಾತ್ರಕ್ಕಾಗಿ ಕನ್ನಡದ ಸ್ಟಾರ್ ನಟಿಯೇ ಬಣ್ಣ ಹಚ್ಚಲಿದ್ದು, ಅಂತಿಮವಾಗಬೇಕಿದೆ ಅಷ್ಟೆ. ಹಾಗಾದ್ರೆ, 'ಕುರುಕ್ಷೇತ್ರ'ದಲ್ಲಿ 'ದ್ರೌಪದಿ' ಯಾರಾಗ್ತಾರೆ? ಇಲ್ಲಿದೆ ನೋಡಿ ನಟಿಯರ ಪಟ್ಟಿ......

ಅನುಷ್ಕಾ ಶೆಟ್ಟಿ ಹೆಸ್ರು ಕೇಳಿಬರುತ್ತಿದೆ!

ಅನುಷ್ಕಾ ಶೆಟ್ಟಿ ಹೆಸ್ರು ಕೇಳಿಬರುತ್ತಿದೆ!

ನಿರ್ಮಾಪಕ ಮುನಿರತ್ನ ಅವರ ಕಲ್ಪನೆಯ ಪ್ರಕಾರ, 'ದ್ರೌಪದಿ' ಪಾತ್ರಕ್ಕಾಗಿ ಕನ್ನಡದ ಹುಡುಗಿನೇ ಆಗಿರುವ ಅನುಷ್ಕಾ ಶೆಟ್ಟಿಯನ್ನ ಕರೆತರುವ ಯೋಚನೆಯಲ್ಲಿದ್ದಾರಂತೆ. ಆದ್ರೆ, ಅನುಷ್ಕಾ ಬರ್ತಾರಾ ಎಂಬುದು ಗೊತ್ತಿಲ್ಲ.['ಕುರುಕ್ಷೇತ್ರ' ಚಿತ್ರದಲ್ಲಿ ಟಾಪ್-5 ನಟರು: ಸುದೀಪ್ ಕಡೆಯಿಂದ ಡೌಟ್ ಕ್ಲಿಯರ್!]

ಹರಿಪ್ರಿಯಾಗೂ ಆಫರ್!

ಹರಿಪ್ರಿಯಾಗೂ ಆಫರ್!

ಒಂದು ವೇಳೆ ಅನುಷ್ಕಾ ಬರದೇ ಇದ್ರೆ, ಮತ್ಯಾರು 'ದ್ರೌಪದಿ' ಪಾತ್ರ ಮಾಡಬಹುದು ಎಂದು ನೋಡುವುದಾದರೇ, ಸ್ಯಾಂಡಲ್ ವುಡ್ ನ ಹಾಟ್ ಚೆಲುವೆ ಹರಿಪ್ರಿಯಾ ಹೆಸರು ಜೋರಾಗಿ ಕೇಳಿಬರುತ್ತಿದೆ. ಗಾಂಧಿನಗರದಲ್ಲಿ ಕೂಡ 'ದ್ರೌಪದಿ' ಪಾತ್ರಕ್ಕೆ ಹರಿಪ್ರಿಯಾ ಅವರನ್ನೇ ಸಂಪರ್ಕ ಮಾಡಲಾಗುತ್ತೆ ಎಂಬ ಸುದ್ದಿ ಓಡಾಡುತ್ತಿದೆ.[ಕನ್ನಡದ 'ಕುರುಕ್ಷೇತ್ರ'ಕ್ಕೆ ಮುಹೂರ್ತ ಫಿಕ್ಸ್!]

ಪ್ರಣೀತಾ ಸುಭಾಷ್ ಆಗಬಹುದು!

ಪ್ರಣೀತಾ ಸುಭಾಷ್ ಆಗಬಹುದು!

ಮತ್ತೊಂದು ಮೂಲಗಳ ಪ್ರಕಾರ 'ಪೊರ್ಕಿ' ಚಿತ್ರದ ನಾಯಕಿ ಪ್ರಣೀತಾ ಸುಭಾಷ್ ಅವರನ್ನ 'ದ್ರೌಪದಿ' ಪಾತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಆದ್ರೆ, ಇದರ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.['ಕುರುಕ್ಷೇತ್ರ' ಯುದ್ಧಕ್ಕೆ ಬಜೆಟ್ ಮಿತಿ ಇಲ್ಲ! ಎಷ್ಟು ಕೋಟಿ ಖರ್ಚಾಗುತ್ತೋ ದೇವರೇ ಬಲ್ಲ!]

'ಕುರುಕ್ಷೇತ್ರ'ದಲ್ಲಿ ಇರಲಿದ್ದಾರಾ ರಚಿತಾ ರಾಮ್, ಕೃತಿ?

'ಕುರುಕ್ಷೇತ್ರ'ದಲ್ಲಿ ಇರಲಿದ್ದಾರಾ ರಚಿತಾ ರಾಮ್, ಕೃತಿ?

ಬುಲ್ ಬುಲ್ ಬೆಡಗಿ ರಚಿತಾ ರಾಮ್, ಕೃತಿ ಕರಬಂದ, ಲತಾ ಹೆಗ್ದೆ, ನಿಖಿತಾ ನಾರಾಯಣ್, ತೇಜಸ್ವಿನಿ ಪ್ರಕಾಶ್ ಅವರ ಹೆಸರುಗಳು ಕೂಡ 'ಕುರುಕ್ಷೇತ್ರ' ಚಿತ್ರದ ಪಟ್ಟಿಯಲ್ಲಿದ್ದು, ಆದ್ರೆ, ಯಾವ ಪಾತ್ರಗಳಿಗೆ ಎಂಬ ಮಾಹಿತಿ ಬಹಿರಂಗವಾಗಿಲ್ಲ.

ನಿಮ್ಮ ಪ್ರಕಾರ 'ದ್ರೌಪದಿ' ಯಾರಾಗ್ಬೇಕು?

ನಿಮ್ಮ ಪ್ರಕಾರ 'ದ್ರೌಪದಿ' ಯಾರಾಗ್ಬೇಕು?

'ದ್ರೌಪದಿ' ಪಾತ್ರಕ್ಕೆ ನಾಯಕಿಯ ಹೆಸರು ಅಂತಿಮವಾಗಿಲ್ಲ. ಈ ಮಧ್ಯೆ ನಿಮ್ಮ ಪ್ರಕಾರ 'ದ್ರೌಪದಿ' ಯಾರಾದ್ರೆ ಒಳ್ಳೆಯದು ಎಂದು ಕೆಳಗೆ ನೀಡಲಾಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ತಿಳಿಸಿ. ಬಹುಶಃ ನಿಮ್ಮ ಆಯ್ಕೆಯೂ ನಿಜ ಆದ್ರೂ ಆಗಬಹುದು.

More from Filmibeat

English summary
According to Source Kannada Actress Haripriya or Praneetha Will be Doing Draupadi Role in Kurukshetra Movie. The Movie Produced by Munirathna and Darshan Will Play The Duryodhana in the Movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X