For Quick Alerts
  ALLOW NOTIFICATIONS  
  For Daily Alerts

  ಮಧುರ್ ಭಂಡಾರ್ಕರ್ ಆಕ್ಷನ್ ಕಟ್ ನಲ್ಲಿ ಹರ್ಷಿಕಾ?

  By Harshitha
  |

  ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಬಾಲಿವುಡ್ ಗೆ ಹಾರಲಿದ್ದಾರೆ ಅನ್ನುವ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ್ರಿ. ಮೇಕ್ ಓವರ್ ಮಾಡಿಸಿಕೊಂಡು ಅಮೆರಿಕದಲ್ಲಿ ಹಾಲಿಡೇ ಎಂಜಾಯ್ ಮಾಡಿದ ಬಳಿಕ ಮುಂಬೈಗೆ ಹಾರಿದ್ದ ಹರ್ಷಿಕಾ ಪೂಣ್ಣಚ್ಚ ಅಲ್ಲಿ ಫೋಟೋಶೂಟ್ ಮಾಡಿಸಿದ್ದರು.

  ಬಾಲಿವುಡ್ ನ ಖ್ಯಾತ ಫೋಟೋಗ್ರಾಫರ್ ಮುನ್ನಾ ಸಿಂಗ್ ಕ್ಯಾಮರಾ ಕಂಗಳಲ್ಲಿ ಸೆರೆಯಾದ ಹರ್ಷಿಕಾ, ಬಾಲಿವುಡ್ ಚಿತ್ರವೊಂದಕ್ಕೆ ಸೆಲೆಕ್ಟ್ ಆದರು. ಬಾಲಿವುಡ್ ನ ಖ್ಯಾತ ನಿರ್ದೇಶಕರ ಚಿತ್ರವೊಂದರಲ್ಲಿ ಹರ್ಷಿಕಾ ಪೂಣಚ್ಚ ನಟಿಸಲಿದ್ದಾರೆ ಅಂತ ಬ್ರೇಕಿಂಗ್ ನ್ಯೂಸ್ ಕೂಡ ಆಗಿತ್ತು.

  ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋ ನೋಡಿದ್ರೆ, ಹರ್ಷಿಕಾ ಪೂಣಚ್ಚಗೆ ಸುವರ್ಣಾವಕಾಶ ಸಿಕ್ಕಿರುವುದರಲ್ಲಿ ಅನುಮಾನವಿಲ್ಲ ಅನ್ನುತ್ತಿದ್ದಾರೆ ಗಾಂಧಿನಗರದ ಪಂಡಿತರು. [ಹರ್ಷಿಕಾ ಪೂಣಚ್ಚಗೆ ಲಕ್ ತಂದುಕೊಟ್ಟ ಒಂದೇ ಒಂದು ಫೋಟೋ.!]

  'ಪೇಜ್ 3', 'ಕಾರ್ಪೊರೇಟ್', 'ಟ್ರ್ಯಾಫಿಕ್ ಸಿಗ್ನಲ್', 'ಫ್ಯಾಶನ್', 'ಹೀರೋಯಿನ್' ಮತ್ತು ಇತ್ತೀಚೆಗಷ್ಟೇ ರಿಲೀಸ್ ಆದ 'ಕ್ಯಾಲೆಂಡರ್ ಗರ್ಲ್ಸ್' ಚಿತ್ರವನ್ನು ನಿರ್ದೇಶಿಸಿರುವ ಬಾಲಿವುಡ್ ನ ಖ್ಯಾತ ನಿರ್ದೇಶಕ ಮಧುರ್ ಭಂಡಾರ್ಕರ್ ಜೊತೆ ಹರ್ಷಿಕಾ ಪೂಣಚ್ಚ ಕ್ಲಿಕ್ಕಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಟಾಪಿಕ್ ಆಗಿದೆ.

  ಫೋಟೋಶೂಟ್ ಬಳಿಕ ಮುಂಬೈನಲ್ಲಿ ಮಧುರ್ ಭಂಡಾರ್ಕರ್ ನ ಭೇಟಿ ಮಾಡಿ ಬಂದಿದ್ದಾರೆ ಹರ್ಷಿಕಾ ಪೂಣಚ್ಚ. ಇದರ ಅರ್ಥ, ಮಧುರ್ ಭಂಡಾರ್ಕರ್ ಚಿತ್ರದಲ್ಲಿ ಹರ್ಷಿಕಾ ನಟಿಸುತ್ತಿದ್ದಾರಾ..? ಅದಕ್ಕೆ ಖುದ್ದು ಹರ್ಷಿಕಾ ಉತ್ತರ ನೀಡಬೇಕು.

  English summary
  Is Kannada Actress Harshika Poonacha to make her Bollywood Debut with Madhur Bhandarkar movie? Well, we have to wait and watch.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X