ನಿರ್ದೇಶಕ ಪೂರಿ ಜಗನ್ನಾಥ್- ನಟಿ ಚಾರ್ಮಿ ಕೌರ್ ದೂರಾದೂರ; ಅಷ್ಟಕ್ಕೂ ಏನಾಯ್ತು?

ತೆಲುಗು ನಿರ್ದೇಶಕ ಪೂರಿ ಜಗನ್ನಾಥ್ ಹಾಗೂ ನಟಿ ಚಾರ್ಮಿ ಕೌರ್ ಆತ್ಮೀಯ ಒಡನಾಟದ ಬಗ್ಗೆ ಗೊತ್ತೇಯಿದೆ. ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ಇಬ್ಬರೂ ಹೇಳಿಕೊಂಡಿದ್ದಾರೆ. ಇಬ್ಬರೂ ಸೇರಿ ಪಾರ್ಟ್‌ನರ್‌ಶಿಪ್‌ನಲ್ಲಿ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಇದೀಗ ಇಬ್ಬರೂ ದೂರಾಗುತ್ತಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.

ಒಂದ್ಕಾಲದಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕೊಟ್ಟ ಪೂರಿ ಜಗನ್ನಾಥ್ ಈಗ ಸೋಲಿನ ಸುಳಿಗೆ ಸಿಲುಕಿದ್ದಾರೆ. 'ಲೈಗರ್' ಸಿನಿಮಾ ಸೋಲು ಇನ್ನಿಲ್ಲದಂತೆ ಪೆಟ್ಟು ಕೊಟ್ಟಿದೆ. ಆ ಸೋಲಿನಿಂದ ಹೊರ ಬರಲು ಹರಸಾಹಸಪಡುತ್ತಿದ್ದಾರೆ. ಶೀಘ್ರದಲ್ಲೇ ಹೊಸ ಸಿನಿಮಾ ಘೋಷಣೆ ಮಾಡಲು ಡ್ಯಾಶಿಂಗ್ ಡೈರೆಕ್ಟರ್ ಮುಂದಾಗಿದ್ದಾರೆ. ಈ ನಡುವೆ ಚಾರ್ಮಿ ನಡುವೆ ಅಂತಹ ಕಾಯ್ದುಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

Has Puri Jagannadh and Charmi Kaur ended their collaboration

ಪೂರಿ ಜಗನ್ನಾಥ್ ನಿರ್ದೇಶನದ 'ಬ್ಬುಡ್ಡಾ ಹೋಗಾ ತೆರಾ ಬಾಪ್' ಹಾಗೂ 'ಜ್ಯೋತಿ ಲಕ್ಷ್ಮಿ' ಸಿನಿಮಾಗಳಲ್ಲಿ ಚಾರ್ಮಿ ನಟಿಸಿದ್ದರು. ಬಳಿಕ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ವದಂತಿ ಶುರುವಾಯಿತು. ಆದರೆ ಇಬ್ಬರೂ ಈ ಬಗ್ಗೆ ತಲೆಕೆಡಸಿಕೊಳ್ಳಲಿಲ್ಲ. ಪೂರಿ ಜಗನ್ನಾಥ್‌ಗೆ ಅದಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಗುಸುಗುಸು ಕೂಡ ಕೇಳಿಬಂದಿತ್ತು. ಇನ್ನು ಚಾರ್ಮಿ ಕೌರ್ ಮದುವೆ ಆಗಿದೇ ಉಳಿಯಲು ಪೂರಿ ಜಗನ್ನಾಥ್ ಕಾರಣ ಎನ್ನಲಾಗಿತ್ತು.

'ಪೂರಿ ಕನೆಕ್ಟ್ಸ್' ಹೆಸರಿನಲ್ಲಿ ಇಬ್ಬರೂ ಪಾಲುದಾರರಾಗಿ ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದ್ದರು. ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನು ಚಾರ್ಮಿ ವಹಿಸಿಕೊಂಡಿದ್ದರು. ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಇದೇ ಬ್ಯಾನರ್ ಅಡಿಯಲ್ಲಿ 'ಮೆಹಬೂಬ', 'ರೊಮ್ಯಾಂಟಿಕ್', 'ಇಸ್ಮಾರ್ಟ್ ಶಂಕರ್' ಹಾಗೂ 'ಲೈಗರ್' ಚಿತ್ರಗಳಿಗೆ ಹಣ ಹೂಡಿದ್ದರು.

'ಇಸ್ಮಾರ್ಟ್ ಶಂಕರ್' ಬಿಟ್ಟರೆ 'ಪೂರಿ ಕನೆಕ್ಟ್ಸ್' ಸಂಸ್ಥೆ ನಿರ್ಮಿಸಿದ ಸಿನಿಮಾಗಳು ಸೋತು ಸುಣ್ಣವಾದವು. ವಿಜಯ್ ದೇವರಕೊಂಡ ನಟಿಸಿದ 'ಲೈಗರ್' ಚಿತ್ರ ಅಂತೂ ಭಾರೀ ನಷ್ಟ ತಂದೊಡ್ಡಿತ್ತು. ಅದರಿಂದ ಹೊರಬರಲು ಇನ್ನು ಸಾಧ್ಯವಾಗಿಲ್ಲ. ಇದೇ ಕಾರಣಕ್ಕೆ ಸದ್ಯ ಸಿನಿಮಾ ನಿರ್ಮಾಣ ಮಾಡದೇ ಇರಲು ಪೂರಿ ಜಗನ್ನಾಥ್ ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. ಹಾಗಾಗಿ ಚಾರ್ಮಿ ಅವರಿಂದಲೂ ದೂರಾಗಿ ಸಿನಿಮಾ ನಿರ್ದೇಶನದತ್ತ ಗಮನ ಹರಿಸಲು ತೀರ್ಮಾನಿಸಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.

Has Puri Jagannadh and Charmi Kaur ended their collaboration

ಒಂದ್ಕಾಲದಲ್ಲಿ ಸ್ಟಾರ್ ನಟರೆಲ್ಲಾ ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ನಟಿಸೋಕೆ ಮುಗಿಬೀಳುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಹೊಸಬರ ಆರ್ಭಟದ ನಡುವೆ ಪೂರಿ ಜಗನ್ನಾಥ್ ಮೇಲೆ ಸ್ಟಾರ್‌ಗಳಿಗೆ ನಂಬಿಕೆ ಹೋಗಿದೆ. ನಾಗಾರ್ಜುನಾಗೆ ಒಂದು ಕಥೆ ಹೇಳಿದ್ದಾರೆ. ಶೀಘ್ರದಲ್ಲೇ ಅದು ಫೈನಲ್ ಆಗುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಚಾರ್ಮಿ ಅವರಿಂದ ಸಂಪೂರ್ಣವಾಗಿ ದೂರಾಗುತ್ತಾರೆ ಎನ್ನುವುದು ಕಷ್ಟ. ಯಾಕಂದರೆ ಅದು ಅಷ್ಟು ಸುಲಭವಾಗಿ ಮುರಿದುಹೋಗುವಂತಹ ಸಂಬಂಧ ಅಲ್ಲ ಎಂದು ಚರ್ಚೆ ನಡೀತಿದೆ.

ಚಾರ್ಮಿ ಜೊತೆಗಿನ ರಿಲೇಷನ್‌ಶಿಪ್ ಬಗ್ಗೆ ಸ್ವತಃ ಪೂರಿ ಜಗನ್ನಾಥ್ ಮಾತನಾಡಿದ್ದರು. "ಚಾರ್ಮಿ 13 ವರ್ಷದ ಹುಡುಗಿ ಆಗಿದ್ದ ದಿನಗಳಿಮದ ನನಗೆ ಗೊತ್ತು. ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ನಮ್ಮಿಬ್ಬರಿಗೂ ಅಫೇರ್ ಇದೆ ಎಂದು ಏನೇನೋ ಮಾತನಾಡುತ್ತಿದ್ದಾರೆ. ಆಕೆ ಯಂಗ್ ಆಗಿ ಇರುವುದಕ್ಕೆ ಇಂತಹ ವದಂತಿ ಹರಿದಾಡ್ತಿದೆ. ಅದೇ ಆಕೆಗೆ 50 ವರ್ಷ ವಯಸ್ಸಾಗಿದ್ದರೆ ಯಾರು ಏನು ಹೇಳುತ್ತಿರಲಿಲ್ಲ, ಆಕೆ ಬೇರೆಯವರೊಟ್ಟಿಗೆ ಮದುವೆ ಆಗಿದ್ದರೂ ಕೇಳುತ್ತಿರಲಿಲ್ಲ. ನಾವಿಬ್ಬರು ಒಟ್ಟಿಗೆ ಇಂಡಸ್ಟ್ರಿಯಲ್ಲಿ ಇರುವುದರಿಂದ ಹೀಗೆ ಮಾತನಾಡುತ್ತಿದ್ದಾರೆ. ಒಂದು ವೇಳೆ ಅಫೇರ್ ಇದ್ದರೂ ಅದು ಬಹಳ ದಿನ ಉಳಿಯಲ್ಲ. ಆಕರ್ಷನೆ ಬಹಳ ಬೇಗ ಹೋಗಿಬಿಡುತ್ತದೆ. ಸ್ನೇಹವೇ ಶಾಶ್ವತ, ನಾವಿಬ್ಬರು ಬೆಸ್ಟ್ ಫ್ರೆಂಡ್ಸ್" ಎಂದಿದ್ದರು.

ಸದ್ಯ ಪೂರಿ ಜಗನ್ನಾಥ್ ನಿರ್ದೇಶನದ 'ಅಪ್ಪು' ಸಿನಿಮಾ ರೀ-ರಿಲೀಸ್ ಆಗಿ ಸದ್ದು ಮಾಡ್ತಿದೆ. ಪುನೀತ್ ರಾಜ್‌ಕುಮಾರ್ 50ನೇ ವರ್ಷ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾವನ್ನು ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ತರಲಾಗಿದೆ. ಅಭಿಮಾನಿಗಳು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ.

More from Filmibeat

English summary
Buzz: Director Puri Jagannadh and Actress Charmi Kaur have ended their partnership;
Read more about: puri jagannadh charmi kaur
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X