KGF Chapter 2 Climax : ಸಿನಿಮಾದಲ್ಲಿ ರಾಕಿ ಭಾಯ್ ಅನ್ನು ಕೊಲ್ಲೋದು ನಾಯಕಿ ರೀನಾ?

'ಕೆಜಿಎಫ್ 2' ಏಪ್ರಿಲ್ 14ಕ್ಕೆ ರಿಲೀಸ್ ಆಗುತ್ತಾ ಇದೆ. ಸದ್ಯ ಚಿತ್ರತಂಡ ಎಲ್ಲೆಡೆ ಪ್ರಚಾರದಲ್ಲಿ ಮುಳುಗಿದೆ. ರಾಕಿಂಗ್ ಸ್ಟಾರ್ ಯಶ್ ಬಗ್ಗೆ ರಾಕಿ ಭಾಯ್ ಪಾತ್ರದ ಬಗ್ಗೆ ಎಲ್ಲೆಡೆ ಹೆಚ್ಚಾಗಿ ಸುದ್ದಿ ಆಗುತ್ತಾ ಇದೆ. ಇಲ್ಲಿ ರಾಕಿ ಭಾಯ್ ಪಾತ್ರವೇ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಆದರೆ ಚಿತ್ರದ ನಾಯಕಿ ಬಗ್ಗೆ ಅಷ್ಟಾಗಿ ಎಲ್ಲೂ ಸುದ್ದಿ ಆಗುತ್ತಾ ಇಲ್ಲ.

ಕೆಜಿಎಫ್ ಭಾಗ ಒಂದರಲ್ಲಿ ನಟಿ ಶ್ರೀನಿಧಿ ಪಾತ್ರ ತುಂಬಾ ಚಿಕ್ಕದಾಗಿತ್ತು. ನಟಿ ಶ್ರೀನಿಧಿ ಪಾತ್ರ ಹಾಗೆ ಬಂದು ಹೀಗೆ ಹೋಗಿತ್ತು. ಇನ್ನು ರಾಕಿ ಮತ್ತು ರೀನಾ ಲವ್ ಸ್ಟೋರಿ ಕೂಡ ಅಷ್ಟಾಗಿ ಮೊದಲ ಭಾಗದಲ್ಲಿ ಇರಲಿಲ್ಲ. ಹಾಗಾಗಿ ಭಾಗ 2ನಲ್ಲಿ ಶ್ರೀನಿಧಿ ಶೆಟ್ಟಿ ಪಾತ್ರ ಹೇಗೆ ಇರಲಿದೆ ಎನ್ನುವ ಬಗ್ಗೆ ಹೆಚ್ಚಿನ ಕುತೂಹಲ ಇಲ್ಲ. ಅದರೆ ಹೀಗೆ ಚಿತ್ರದಲ್ಲಿ ನಾಯಕಿಯ ಪಾತ್ರದ ಮೂಲಕ ದೊಡ್ಡ ಟ್ವಿಸ್ಟ್ ಕೊಡಲಾಗುತ್ತದೆಯಂತೆ.

ಈಗಾಗಲೇ ಚಿತ್ರದ ಟೀಸರ್, ಟ್ರೈರಲ್ ಮತ್ತಯ ಹಾಡುಗಳು ರಿಲೀಸ್ ಆಗಿವೆ. ಆದರೆ ಅದ್ಯಾವುದರಲ್ಲೂ ಕೂಡ ರೀನಾ ಪಾತ್ರದ ಬಗ್ಗೆ ಹೆಚ್ಚಿನ ವಿಚಾರವನ್ನು ರಿವೀಲ್ ಮಾಡಿಲ್ಲ. ಅದೊಂದು ಅಷ್ಟೇನು ಪ್ರಾಮುಖ ಪಾತ್ರ ಅಲ್ಲ ಎನ್ನು ಭಾವ ಜನರಲ್ಲಿ ಮೂಡಿದೆ. ಆದರೆ 'ಕೆಜಿಎಫ್ 2'ನಲ್ಲಿ ರೀನಾ ಪಾತ್ರಕ್ಕೆ ದೊಡ್ಡ ಮಟ್ಟದ ಪ್ರಾಮುಖ್ಯತೆ ಇದೆ.

ಪಾತ್ರದ ಬಗ್ಗೆ ಶ್ರೀನಿಧಿ ಹೇಳಿದ್ದೇನು?

ಪಾತ್ರದ ಬಗ್ಗೆ ಶ್ರೀನಿಧಿ ಹೇಳಿದ್ದೇನು?

ಈ ವಿಚಾರವನ್ನು ನಟಿ ಶ್ರೀನಿಧಿ ಶೆಟ್ಟಿ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ಮಧ್ಯಮ ಒಂದಕ್ಕೆ ಹೇಳಿಕೆ ನೀಡಿರುವ ನಟಿ ಶ್ರೀನಿಧಿ ಶೆಟ್ಟಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. 'ಮೊದಲ ಭಾಗದಲ್ಲಿ ನನ್ನ ಪಾತ್ರ ಅಷ್ಟಾಗಿ ಇರಲಿಲ್ಲ. ಹಾಗಾಗಿ ಈ ಚಿತ್ರದಲ್ಲೂ ನನ್ನ ಪಾತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇಲ್ಲ. ಆದರೆ ಈ ಚಿತ್ರದಲ್ಲಿ ಖಂಡಿತ ಒಂದು ದೊಡ್ಡ ಸರ್ಪ್ರೈಸ್ ಇದೆ'. ಎಂದು ಹೇಳಿದ್ದಾರೆ ಸಂದರ್ಶನದಲ್ಲಿ ಶ್ರೀನಿಧಿ ಶೆಟ್ಟಿ ಹೇಳಿಕೊಂಡಿದ್ದಾರೆ.

ರೀನಾ ಪಾತ್ರ ಚಿತ್ರಕ್ಕೆ ದೊಡ್ಡ ಟ್ವಿಸ್ಟ್ ಕೊಡಲಿದೆ!

ರೀನಾ ಪಾತ್ರ ಚಿತ್ರಕ್ಕೆ ದೊಡ್ಡ ಟ್ವಿಸ್ಟ್ ಕೊಡಲಿದೆ!

'ಕೆಜಿಎಫ್ 2'ನಲ್ಲಿ ರೀನಾ ಪತ್ರ ದೊಡ್ಡ ಮಟ್ಟದ ಟ್ವಿಸ್ಟ್ ಕೊಡಲಿದೆಯಂತೆ. ನಟಿ ಶ್ರೀನಿಧಿ ಕೂಡ ಪರೋಕ್ಷವಾಗಿ, ಸೂಕ್ಷ್ಮವಾಗಿ ತಮ್ಮ ಪಾತ್ರದ ಬಗ್ಗೆ ಹೇಳಿದ್ದಾರೆ. ಆದರೆ ಹೆಚ್ಚಾಗಿ ಏನನ್ನು ಬಾಯಿ ಬಿಟ್ಟಿಲ್ಲ. ಹಾಗಾಗಿ 'ಕೆಜಿಎಫ್ 2'ನಲ್ಲಿ ರೀನಾ ಮಹತ್ತರವಾದ ಬದಲಾವಣೆಗೆ ಕಾರಣ ಆಗುತ್ತಾಳೆ ಎನ್ನಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತು ಗಾಂಧಿ ನಗರದಲ್ಲಿ ಗುಸುಗುಸು ಹಬ್ಬಿದೆ. ರಾಕಿ ಭಾಯ್ ಜೀವನದಲ್ಲಿ ರಾಣಿಯಾಗಿ ಬರುವ ರೀನಾ ಶತ್ರು ಆಗುತ್ತಾಳೆ ಎನ್ನುವ ಗಾಳಿ ಸುದ್ದಿ ಹಬ್ಬಿದೆ.

ರಾಕಿ ಅಂತ್ಯಕ್ಕೆ ರೀನಾನೆ ಕಾರಣ ಆಗ್ತಾಳ?

ರಾಕಿ ಅಂತ್ಯಕ್ಕೆ ರೀನಾನೆ ಕಾರಣ ಆಗ್ತಾಳ?

ಸದ್ಯ ರೀನಾ ಪತ್ರದ ಬಗ್ಗೆ ಹೀಗೊಂದು ಸುದ್ದಿ ಹರಿದಾಡುತ್ತಾ ಇದೆ. ಕೆಜಿಎಫ್ ಭಾಗ ಒಂದರಲ್ಲಿ ಏನು ಸದ್ದಿಲ್ಲದೆ ಇರುವ ರೀನಾ ಪಾತ್ರ ಕೆಜಿಎಫ್ 2ನಲ್ಲಿ ಭಾರಿ ಸದ್ದು ಮಾಡಲಿದೆಯಂತೆ. ಈ ಚಿತ್ರದಲ್ಲಿ ನಾಯಕಿ ಪಾತ್ರ ಅತಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಹಾಗಾಗಿ ಚಿತ್ರ ರಿಲೀಸ್‌ಗೂ ಮುನ್ನ ನಾಯಕಿ ಪಾತ್ರದ ಬಗ್ಗೆ ಹೆಚ್ಚಿನ ವಿಚಾರ ಬಿಟ್ಟು ಕೊಡುತ್ತಾ ಇಲ್ಲ. ಕೆಜಿಎಫ್ 2ನಲ್ಲಿ ರಾಕಿ ಭಾಯ್ ಅಂತ್ಯಕ್ಕೆ ರೀನಾ ಕಾರಣ ಆಗುತ್ತಾಳೆ, ರಾಕಿ ಬೆನ್ನಿಗೆ ಚಾಚು ಹಾಕೋದು ರೀನಾ ಎನ್ನಲಾಗುತ್ತಿದೆ.

ಕೆಜಿಎಫ್ 2ನಲ್ಲಿ ರಾಕಿ ಭಾಯ್ ಅಂತ್ಯ!

ಕೆಜಿಎಫ್ 2ನಲ್ಲಿ ರಾಕಿ ಭಾಯ್ ಅಂತ್ಯ!

ಈಗಾಗಲೆ ಟೀಸರ್‌ನಲ್ಲಿ ರಿವೀಲ್ ಆಗಿರುವ ಪ್ರಕಾರ ರಾಕಿ ಭಾಯ್ ವಿರುದ್ಧ ಡೆತ್ ವಾರೆಂಟ್ ಜಾರಿ ಆಗಿದೆ. ಹಾಗಾಗಿ ರಾಕಿ ಅಂತ್ಯ ಗ್ಯಾರೆಂಟಿ ಎನ್ನುವುದು ತಿಳಿದಿದೆ. ಅದನ್ನು ಮಾಡುವುದು ನಾಯಕಿ ರೀನಾ ಎನ್ನಲಾಗುತ್ತಿದೆ. ಅಂದರೆ ರೀನಾ ರಾಕಿಯನ್ನು ಕೊಲ್ಲುತ್ತಾಳೆ ಇದುವೇ ಚಿತ್ರದ ಕ್ಲೈಮ್ಯಾಕ್ಸ್ ಆಗಿರಲಿದೆಯಂತೆ. ಆದರೆ ಚಿತ್ರದ ರಿಲೀಸ್ ಆದ ಬಳಿಕ ಉತ್ತರ ಸಿಗಲಿದೆ.

More from Filmibeat

English summary
Reena Will Kill Rocky Bhai In KGF 2 Climax, Know More About Srinidhi Shetty Statement
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X