For Quick Alerts
  ALLOW NOTIFICATIONS  
  For Daily Alerts

  ರಾಜಮೌಳಿ-ಮಹೇಶ್ ಬಾಬು ಸಿನಿಮಾದಲ್ಲಿ ಹಾಲಿವುಡ್‌ ಸ್ಟಾರ್ ನಟರು: ಲಿಸ್ಟ್‌ನಲ್ಲಿ ಇರೋರು ಯಾರು?

  |

  ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಸಿನಿಮಾ ಎಂದರೆ ನಿರೀಕ್ಷೆ ಏನು ಕಮ್ಮಿಯಿರಲ್ಲ. ಕಳೆದ ಹಲವು ವರ್ಷಗಳಿಂದ ಈ ಜೋಡಿಯ ಸಿನಿಮಾ ನೋಡಲು ಪ್ರೇಕ್ಷಕರು ಕಾದು ಕೂತಿದ್ದರು. ಅದಕ್ಕೆ ತಕ್ಕಂತೆ ಸಿನಿಮಾ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ.

  ಟಾಲಿವುಡ್ ಹ್ಯಾಂಡ್‌ಸಮ್ ಹೀರೊ ಮಹೇಶ್ ಬಾಬುಗೆ ರಾಜಮೌಳಿ ಆಯ್ಕೆ ಮಾಡಿಕೊಂಡಿರುವ ಕಥೆ ಬಗ್ಗೆ ಈಗಾಗಲೇ ಚರ್ಚೆಯಾಗುತ್ತಿದೆ. ಸದ್ಯ ಟಾಲಿವುಡ್‌ನಲ್ಲಿ ಇವರಿಬ್ಬರ ಕಾಂಬಿನೇಷನ್‌ ಸಿನಿಮಾ ಬಗ್ಗೆ ಸಂಚಲನ ಸೃಷ್ಟಿಸುವ ಸುದ್ದಿಯೊಂದು ಓಡಾಡುತ್ತಿದೆ.

  ಸೂಪರ್‌ಸ್ಟಾರ್ ಮಹೇಶ್ ಬಾಬು ಹಾಗೂ ಮೂವಿ ಮಾಂತ್ರಿಕ ರಾಜಮೌಳಿ ಸಿನಿಮಾ ಕನಸು ನನಸಾಗುತ್ತಿದೆ. ಮಹೇಶ್ ಬಾಬು 28ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದರೆ, ಅತ್ತ ಜಕ್ಕಣ್ಣ ಸಿನಿಮಾಗೆ ಪ್ಲ್ಯಾನಿಂಗ್ ಮಾಡುತ್ತಿದ್ದಾರೆ. ಹಾಲಿವುಡ್‌ನ ಇಬ್ಬರು ಸ್ಟಾರ್ ನಟರನ್ನು ಈ ಸಿನಿಮಾಗಾಗಿ ಕರೆದುಕೊಂಡು ಬರೋಕೆ ಸಜ್ಜಾಗಿದ್ದಾರೆ ಅನ್ನೋ ಸುದ್ದಿ ಹಲ್‌ಚಲ್‌ ಎಬ್ಬಿಸಿದೆ.

  ಹಾಲಿವುಡ್ ನಟರು ಬರುತ್ತಾರಾ?

  ಹಾಲಿವುಡ್ ನಟರು ಬರುತ್ತಾರಾ?

  ಹಾಲಿವುಡ್ ಸಿನಿಮಾ 'ಅವೆಂಜರ್ಸ್', 'ಸ್ಟಾರ್ ವಾರ್ಸ್', 'ಟ್ರಿಪಲ್ ಎಕ್ಸ್', 'ಜುರಾಸಿಕ್ ಪಾರ್ಕ್' ಹಾಗೂ ಮಾರ್ವೆಲ್ ಸಿನಿಮಾಗಳಲ್ಲಿ ನಟಿಸಿರುವ ಹಾಲಿವುಡ್ ರಾಜಮೌಳಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಆ ಸ್ಟಾರ್ ಮತ್ಯಾರೂ ಅಲ್ಲ ಸ್ಯಾಮ್ಯೂವಲ್ ಜಾಕ್ಸನ್. ಇನ್ನೊಂದು ಕಡೆ 'ಥಾರ್', 'ಅವೆಂಜರ್ಸ್‌' ಸಿನಿಮಾದ ಹೀರೊ ಕ್ರಿಸ್ ಹೆಮ್ಸ್‌ವರ್ತ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

  ಕ್ರಿಸ್‌ ಹೆಮ್ಸ್‌ವರ್ತ್‌ ಜೊತೆ ಮಾತುಕತೆ

  ಕ್ರಿಸ್‌ ಹೆಮ್ಸ್‌ವರ್ತ್‌ ಜೊತೆ ಮಾತುಕತೆ

  'ಥಾರ್' ಹಾಗೂ ಥಂಡರ್ ಅಂತಹ ಸಿನಿಮಾಗಳಲ್ಲಿ ನಟಿಸಿರುವ ಕ್ರಿಸ್ ಒಂದು ಸಿನಿಮಾಗೆ 172 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಇವರೊಂದಿಗೆ ರಾಜಮೌಳಿ ಮಾತಾಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ ರಾಜಮೌಳಿ ಕೆಲವೇ ದಿನಗಳ ಹಿಂದಷ್ಟೇ ಲಾಸ್ ಏಂಜಲೀಸ್ ಮೂಲದ ಕ್ರಿಯೇಟಿವ್ ಆರ್ಟಿಸ್ಟ್ ಏಜೆನ್ಸಿ (ಸಿಎಎ) ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಕಂಪನಿಯ ಸಹಾಯದಿಂದ 'ಅವೆಂಜರ್ಸ್'ನಲ್ಲಿ ನಟಿಸಿದ್ದ ಜೋಶ್ ಬ್ರೋಲಿನ್ (ಥಾನೋಸ್) ಜೊತೆ ರಾಜಮೌಳಿ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.

  ಇಂಡಿಯಾನಾ ಜೋನ್ಸ್ ಶೈಲಿ ಸಿನಿಮಾ

  ಇಂಡಿಯಾನಾ ಜೋನ್ಸ್ ಶೈಲಿ ಸಿನಿಮಾ

  ವಿಜಯೇಂದ್ರ ಪ್ರಸಾದ್ ಈ ಸಿನಿಮಾಗೆ ಕಥೆ ಹೆಣೆದಿದ್ದಾರೆ. ಹಾಲಿವುಡ್ ಸಿನಿಮಾವನ್ನೂ ಮೀರಿಸುವಂತೆ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ ಅನ್ನೋ ಮಾತಿದೆ. ಈಗಾಗಲೇ ರಾಜಮೌಳಿ ಹಾಲಿವುಡ್ ಸಿನಿಮಾ 'ಇಂಡಿಯಾನಾ ಜೋನ್ಸ್ ' ಶೈಲಿಯಲ್ಲಿ ಇರುತ್ತೆ ಎಂದು ಹೇಳಿದ್ದಾರೆ. ಹೀಗಾಗಿ ವಿಜಯೇಂದ್ರ ಪ್ರಸಾದ್ ಯಾವ ರೀತಿ ಕಥೆ ಹೆಣೆದಿದ್ದಾರೆ. ಈ ಸಿನಿಮಾ ಹೇಗೆ ಮೂಡಿ ಬರಲಿದೆ ಅನ್ನೋದು ಶೀಘ್ರದಲ್ಲಿಯೇ ಗೊತ್ತಾಗಲಿದೆ.

  ಇದೊಂದು ಸಾಹಸ ಕಥೆ

  ಇದೊಂದು ಸಾಹಸ ಕಥೆ

  ಇತ್ತೀಚೆಗೆ ನಡೆದ ಟ್ಯಾರೆಂಟೋ ಚಿತ್ರೋತ್ಸವದಲ್ಲಿ RRR ಸಿನಿಮಾ ಪ್ರದರ್ಶನ ಕಂಡಿತ್ತು. ಆ ಸಿನಿಮಾ ವೇಳೆ ರಾಜಮೌಳಿ ಮುಂದಿನ ಸಿನಿಮಾ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದೊಂದು ಪ್ರಪಂಚ ಸುತ್ತುವ ಕಥೆ. ಬಜೆಟ್ ಕೂಡ ಬೆಟ್ಟದಷ್ಟು ದೊಡ್ಡದು ಎಂದು ಹೇಳಲಾಗುತ್ತಿದೆ. ಅಲ್ಲದೆ ಶ್ರದ್ಧಾ ಕಪೂರ್ ಅಥವಾ ಆಲಿಯಾ ಭಟ್ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

  English summary
  Hollywood Actor Chris Hemsworth In Rajamouli Mahesh Babu Movie, Know More.
  Saturday, September 24, 2022, 22:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X