twitter
    For Quick Alerts
    ALLOW NOTIFICATIONS  
    For Daily Alerts

    ಭಾರಿ ಮೊತ್ತಕ್ಕೆ RRR ಚಿತ್ರದ ಕರ್ನಾಟಕ ವಿತರಣೆ ಹಕ್ಕು ಪಡೆದ ಖ್ಯಾತ ಸಂಸ್ಥೆ?

    |

    ರಾಮ್ ಚರಣ್ ತೇಜ ಹುಟ್ಟುಹಬ್ಬದ ಪ್ರಯುಕ್ತ RRR ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಅಲ್ಲುರಿ ಸೀತಾರಾಮರಾಜು ಪಾತ್ರದಲ್ಲಿ ಅಭಿನಯಿಸಿರುವ ಮೆಗಾಸ್ಟಾರ್ ಪುತ್ರನ ಲುಕ್‌ ಈಗ ಸಿನಿ ದುನಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಅಕ್ಟೋಬರ್ 13 ರಂದು ಆರ್‌ಆರ್‌ಆರ್ ಸಿನಿಮಾ ವರ್ಲ್ಡ್‌ವೈಡ್ ತೆರೆಗೆ ಬರ್ತಿದೆ. ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಯಲ್ಲಿ ರಾಜಮೌಳಿ ಚಿತ್ರ ಬಿಡುಗಡೆಯಾಗುತ್ತಿದೆ.

    ಬಾಹುಬಲಿ ಸಿನಿಮಾದ ಬಳಿಕ ತಯಾರಾಗುತ್ತಿರುವ ಐತಿಹಾಸಿಕ ಚಿತ್ರ ಇದಾಗಿದ್ದು, ಬಾಕ್ಸ್ ಆಫೀಸ್‌ನಲ್ಲೂ ಭರ್ಜರಿ ಲೆಕ್ಕಾಚಾರ ನಡೆಯುತ್ತಿದೆ. ರಿಲೀಸ್‌ಗೂ ಮುಂಚೆಯೇ ಆರ್‌ಆರ್‌ಆರ್‌ ಸಿನಿಮಾ 500 ಕೋಟಿ ಬಿಸಿನೆಸ್ ಮಾಡಲಿದೆ ಎಂಬ ಮಾತಿದೆ. ಇದೀಗ, ಕರ್ನಾಟಕದ ವಿತರಣೆ ಹಕ್ಕು ಖ್ಯಾತ ನಿರ್ಮಾಣ ಸಂಸ್ಥೆಯ ಪಾಲಾಗಿದ್ದು, ಭಾರಿ ಮೊತ್ತ ನೀಡಿ ಖರೀದಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ....

    ಆರ್‌ಆರ್‌ಆರ್‌ ಚಿತ್ರದ ವಿತರಣೆ ಹಕ್ಕು ಖರೀದಿಸಿದ ಲೈಕಾ ಪ್ರೊಡಕ್ಷನ್ಆರ್‌ಆರ್‌ಆರ್‌ ಚಿತ್ರದ ವಿತರಣೆ ಹಕ್ಕು ಖರೀದಿಸಿದ ಲೈಕಾ ಪ್ರೊಡಕ್ಷನ್

    ಹೊಂಬಾಳೆ ಫಿಲಂಸ್ ತೆಕ್ಕೆಗೆ ಆರ್‌ಆರ್‌ಆರ್?

    ಹೊಂಬಾಳೆ ಫಿಲಂಸ್ ತೆಕ್ಕೆಗೆ ಆರ್‌ಆರ್‌ಆರ್?

    ಗಾಂಧಿನಗರದಲ್ಲಿ ಹೊಸದಾಗಿ ಸದ್ದು ಮಾಡುತ್ತಿರುವ ಸುದ್ದಿ ಏನಪ್ಪಾ ಅಂದ್ರೆ ಆರ್ ಆರ್ ಆರ್ ಚಿತ್ರದ ಕರ್ನಾಟಕ ವಿತರಣೆ ಹಕ್ಕು ಹೊಂಬಾಳೆ ಫಿಲಂಸ್ ಪಾಲಾಗಿದೆ ಎಂದು ಹೇಳಲಾಗುತ್ತಿದೆ. ಕೆಜಿಎಫ್, ಸಲಾರ್ ಅಂತಹ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲಂಸ್ ಕರ್ನಾಟಕದಲ್ಲಿ ರಾಜಮೌಳಿ ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿದೆ.

    RRR ಚಿತ್ರಕ್ಕೆ ಕರ್ನಾಟಕದಿಂದ ಮೆಗಾ ಆಫರ್: ರಿಲೀಸ್ ಮುನ್ನವೇ ಭಾರಿ ಬಿಸಿನೆಸ್?RRR ಚಿತ್ರಕ್ಕೆ ಕರ್ನಾಟಕದಿಂದ ಮೆಗಾ ಆಫರ್: ರಿಲೀಸ್ ಮುನ್ನವೇ ಭಾರಿ ಬಿಸಿನೆಸ್?

    ಭಾರಿ ಮೊತ್ತಕ್ಕೆ ಆರ್ ಆರ್ ಆರ್ ಹಕ್ಕು ಖರೀದಿ?

    ಭಾರಿ ಮೊತ್ತಕ್ಕೆ ಆರ್ ಆರ್ ಆರ್ ಹಕ್ಕು ಖರೀದಿ?

    ಆರ್‌ ಆರ್‌ ಆರ್ ಚಿತ್ರದ ಕರ್ನಾಟಕ ವಿತರಣೆ ಹಕ್ಕು 45 ಕೋಟಿಯಿಂದ 60 ಕೋಟಿವರೆಗೂ ಡೀಲ್ ಆಗಿದೆ ಎನ್ನಲಾಗಿದೆ. ಕರ್ನಾಟಕದಲ್ಲಿ ರಾಜಮೌಳಿಯ ಚಿತ್ರಕ್ಕೆ ಭಾರಿ ಬೇಡಿಕೆಯಿದ್ದು, ಹಾಕಿದ ಬಂಡವಾಳ ವಾಪಸ್ ಬರುವುದರ ಜೊತೆಗೆ ಲಾಭವೂ ಮಾಡಬಹುದು ಎಂಬ ಲೆಕ್ಕಾಚಾರ ಈ ಒಪ್ಪಂದದ ಹಿಂದಿದೆ.

    ಹಿಂದಿಯಲ್ಲಿ 100 ಕೋಟಿ?

    ಹಿಂದಿಯಲ್ಲಿ 100 ಕೋಟಿ?

    ತೆಲುಗಿನಲ್ಲಿ ಬಿಟ್ಟರೆ ರಾಜಮೌಳಿ ಚಿತ್ರಕ್ಕೆ ಹೆಚ್ಚು ಬೇಡಿಕೆ ಇರುವುದು ಹಿಂದಿಯಲ್ಲಿ. ಈ ಹಿಂದೆ ಬಾಹುಬಲಿ ವಿಷಯದಲ್ಲಿ ಅದು ಜಗತ್ತಿನ ಮುಂದೆ ಬಹಿರಂಗವಾಗಿದೆ. ಸದ್ಯದ ಮಾಹಿತಿ ಪ್ರಕಾರ, ಆರ್‌ ಆರ್‌ ಆರ್‌ ಚಿತ್ರದ ಹಿಂದಿ ವಿತರಣೆ ಹಕ್ಕು 100 ಕೋಟಿಗೆ ಸೇಲ್ ಆಗಿದೆಯಂತೆ. ಅನಿಲ್ ತಡಾನಿ ಮಾಲೀಕತ್ವದ ಎಎ ಫಿಲಂಸ್ ಆರ್‌ಆರ್‌ಆರ್ ಚಿತ್ರದ ಹಕ್ಕು ಖರೀದಿ ಮಾಡಿದೆ ಎಂದು ವರದಿಯಾಗಿದೆ.

    ಬಾಹುಬಲಿ ದಾಖಲೆ ಮುರಿಯುತ್ತಾ?

    ಬಾಹುಬಲಿ ದಾಖಲೆ ಮುರಿಯುತ್ತಾ?

    ಬಾಹುಬಲಿ 2 ಚಿತ್ರದ ಒಟ್ಟು ಗಳಿಕೆ 1800 ಕೋಟಿಗೂ ಅಧಿಕ. ಆರ್ ಆರ್ ಆರ್ ಚಿತ್ರದ ನಿರೀಕ್ಷೆ ನೋಡಿದ್ರೆ ಈ ದಾಖಲೆ ಮುರಿಯಬಹುದು ಎಂದು ಅಂದಾಜಿಸಲಾಗುತ್ತಿದೆ. ಜೂನಿಯರ್ ಎನ್ ಟಿ ಆರ್ ಮತ್ತು ರಾಮ್ ಚರಣ್ ತೇಜ ಕಾಂಬಿನೇಷನ್ ಹಾಗೂ ರಾಜಮೌಳಿ ನಿರ್ದೇಶನಕ್ಕೆ ಆ ತಾಕತ್ ಇದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ದಾನಯ್ಯ ಈ ಚಿತ್ರ ನಿರ್ಮಿಸಿದ್ದು, 300 ರಿಂದ 400 ಕೋಟಿ ಬಜೆಟ್ ಹಾಕಿದ್ದಾರೆ.

    English summary
    Hombale Films Bags SS Rajamouli's RRR Movie Karnataka distribution rights.
    Saturday, March 27, 2021, 9:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X