ಹೊಂಬಾಳೆ ಫಿಲ್ಮ್ಸ್ ಮುಂದಿನ ಚಿತ್ರಕ್ಕೆ 'ಕಿಷ್ಕಿಂದಕಾಂಡಂ' ಖ್ಯಾತಿಯ ದಿನ್ಜಿತ್ ಅಯ್ಯಥನ್ ಆಕ್ಷನ್ ಕಟ್?

'KGF' ಹಾಗೂ 'ಕಾಂತಾರ' ಸರಣಿ ಸಿನಿಮಾಗಳ ಬಳಿಕ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸೈಲೆಂಟ್ ಆಗಿದೆ. ಒಂದಷ್ಟು ಸಿನಿಮಾಗಳನ್ನು ಘೋಷಣೆ ಮಾಡಿದ್ದರೂ ಯಾವುದು ಕೂಡ ಈಗ ಸೆಟ್ಸ್ ಮೇಲೆ ಇಲ್ಲ. ಸದ್ಯಕ್ಕೆ ಯಾವುದೇ ಸಿನಿಮಾ ಶುರುವಾಗುವ ಲಕ್ಷಣಗಳು ಕಾಣ್ತಿಲ್ಲ. ಒಂದಷ್ಟು ಪ್ರಾಜೆಕ್ಟ್ ಚರ್ಚೆ ನಡೀತಿದೆ. ಅಂದಹಾಗೆ ಹೊಂಬಾಳೆ ಸಂಸ್ಥೆಯ ಮುಂದಿನ ಚಿತ್ರಕ್ಕೆ ದಿನ್ಜಿತ್ ಅಯ್ಯಥನ್ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ.

ಪ್ರಭಾಸ್ ಜೊತೆ 'ಸಲಾರ್- 2' ಹಾಗೂ ಮತ್ತೆರಡು ಸಿನಿಮಾಗಳನ್ನು ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ. ಹೃತಿಕ್ ರೋಷನ್ ಕಾಂಬಿನೇಷನ್‌ನಲ್ಲಿ ಬಾಲಿವುಡ್ ಸಿನಿಮಾ ಮಾಡಬೇಕಿದೆ. ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸುವ 'ರಿಚರ್ಡ್ ಆಂಟನಿ' ಚಿತ್ರಕ್ಕೂ ಹಣ ಹೂಡಲಿದೆ. ಸಂತೋಷ್ ಆನಂದ್ ರಾಮ್ ಹಾಗೂ ಶಿವಕಾರ್ತಿಕೇಯನ್ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಪ್ಲ್ಯಾನಿಂಗ್ ನಡೀತಿದೆ. ಇದೆಲ್ಲದರ ನಡುವೆ ಹೊಸ ಚರ್ಚೆ ಶುರುವಾಗಿದೆ. 'KGF' ಚಾಪ್ಟರ್-3 ಕೂಡ ನಿರ್ಮಿಸಬೇಕಿದೆ.

Hombale Films Next Big Move Prabhas May Team Up with Dinjith Ayyathan Amid Salaar 2 buzz

ಈಗಾಗಲೇ 'ಸಲಾರ್' ಸಿನಿಮಾ ಹಿಟ್ ಆಗಿದೆ. ಸೀಕ್ವೆಲ್ ಮಾಡಬೇಕಿದೆ. ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಫೌಜಿ ಮುಗಿಸಿ 'ಸ್ಪಿರಿಟ್' ಚಿತ್ರದಲ್ಲಿ ಯಂಗ್ ರೆಬಲ್ ಸ್ಟಾರ್ ನಟಿಸಬೇಕು. ಇತ್ತ ಜ್ಯೂ. ಎನ್‌ಟಿಆರ್ ನಟನೆಯ 'ಡ್ರ್ಯಾಗನ್' ಚಿತ್ರವನ್ನು ನೀಲ್ ಮುಗಿಸಬೇಕಿದೆ. ಬಳಿಕ 'ಸಲಾರ್'-2 ಶೌರ್ಯಾಂಗ ಪರ್ವಂ ಶುರುವಾಗಲಿದೆ.

ವಿಜಯ್ ಕಿರಗಂದೂರ್ ಜೊತೆಗಿನ ಆತ್ಮೀಯ ಒಡನಾಟದಿಂದ 3 ಸಿನಿಮಾಗಳನ್ನು ಮಾಡಲು ಪ್ರಭಾಸ್ ಒಪ್ಪಂದ ಮಾಡಿಕೊಂಡಿದ್ದಾರೆ. ಅದರಲ್ಲಿ 'ಸಲಾರ್'-2 ಕೂಡ ಒಂದು. ಇನ್ನುಳಿದ ಎರಡು ಸಿನಿಮಾಗಳನ್ನು ಯಾರು ನಿರ್ದೇಶನ ಮಾಡುತ್ತಾರೆ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಪ್ರಶಾಂತ್ ವರ್ಮಾ ಒಂದು ಚಿತ್ರ ನಿರ್ದೇಶನ ಮಾಡಬಹುದು ಎನ್ನುವ ಮಾತುಗಳು ಕೇಳಿಬಂದಿತ್ತು. ಮತ್ತೊಂದು ಚಿತ್ರಕ್ಕೆ ಈಗ ದಿನ್ಜಿತ್ ಅಯ್ಯಥನ್ ಹೆಸರು ಕೇಳಿಬರ್ತಿದೆ.

Hombale Films Next Big Move Prabhas May Team Up with Dinjith Ayyathan Amid Salaar 2 buzz

ಮಲಯಾಳಂಲ್ಲಿ 'ಕಕ್ಷಿ: ಅಮ್ಮಿನಿಪ್ಪಿಲ್ಲ', 'ಕಿಷ್ಕಿಂಧಾಕಾಂಡಂ' ಹಾಗೂ 'ಏಕೊ' ರೀತಿಯ ವಿಭಿನ್ನ ಸಿನಿಮಾಗಳನ್ನು ನಿರ್ದೇಶಿಸಿ ದಿನ್ಜಿತ್ ಸಕ್ಸಸ್ ಕಂಡಿದ್ದಾರೆ. ಅವರ ಸಿನಿಮಾಗಳನ್ನು ನೋಡಿ ಪ್ರಭಾಸ್ ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಇಬ್ಬರೂ ಭೇಟಿ ಆಗಿದ್ದರು. ಆ ಫೋಟೊ ವೈರಲ್ ಆಗಿತ್ತು. ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗ್ತಿದೆ. ತಮಿಳಿನಲ್ಲಿ 'ಅಮರನ್' ಸಿನಿಮಾ ಕಟ್ಟಿಕೊಟ್ಟಿದ್ದ ರಾಜ್‌ಕುಮಾರ್ ಪೆರಿಯಸ್ವಾಮಿ ಜೊತೆಗೂ ಚರ್ಚೆ ನಡೀತಿದೆ. ಹೊಂಬಾಳೆ ಹಾಗೂ ಪ್ರಭಾಸ್ ಕಾಂಬಿನೇಷನ್ ಚಿತ್ರಗಳಿಗೆ ಇವರಿಬ್ಬರು ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಚರ್ಚೆ ಜೋರಾಗಿದೆ.

ಇತ್ತೀಚೆಗೆ 'ಕಿಷ್ಕಿಂಧಾಕಾಂಡಂ' ಸಿನಿಮಾ ನೋಡಿ ಪ್ರಭಾಸ್ ಮೆಚ್ಚುಗೆ ಸೂಚಿಸಿದ್ದಾರೆ. ವಾಟ್ಸಪ್‌ನಲ್ಲಿ ಮೆಸೇಜ್ ಮಾಡಿ ಸಿನಿಮಾ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಸ್ಕ್ರೀನ್ ಶಾಟ್ ಅನ್ನು ನಿರ್ದೇಶಕ ದಿನ್ಜಿತ್ ಹಂಚಿಕೊಂಡಿದ್ದಾರೆ. "ಪ್ರಭಾಸ್ ಸರ್ ಅವರ ಒಳ್ಳೆ ಮೆಸೇಜ್ ಮೂಲಕ ಈ ದಿನ ಶುರುವಾಯಿತು" ಎಂದು ಬರೆದುಕೊಂಡಿದ್ದಾರೆ.

ದಿನ್ಜಿತ್ ಅವರಿಗೆ ಮೆಸೇಜ್ ಮಾಡಿರುವ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ "ಹಾಯ್ ಸರ್.. 'ಕಿಷ್ಕಿಂಧಾಕಾಂಡಂ' ಸಿನಿಮಾ ನೋಡ್ದೆ. ಅದ್ಭುತ ಕ್ಲೈಮ್ಯಾಕ್ಸ್‌.. ನಿಮ್ಮ ಸಿನಿಮಾಕ್ಕೆ ಇಂಟರ್‌ನ್ಯಾಷನಲ್ ಟಚ್ ಇದೆ" ಎಂದು ಕಾಮೆಂಟ್ ಮಾಡಿದ್ದಾರೆ. ಈ ಸ್ಕ್ರೀನ್‌ ಶಾಟ್ ವೈರಲ್ ಆಗ್ತಿದೆ. ಆದಷ್ಟು ಬೇಗ ಇಬ್ಬರೂ ಒಟ್ಟಿಗೆ ಕೆಲಸ ಮಾಡುವಂತಾಗಲಿ ಎಂದು ಶುಭ ಹಾರೈಸುತ್ತಿದ್ದಾರೆ.

22 ವರ್ಷಗಳ ಹಿಂದೆ 7 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ 'ಕಿಷ್ಕಿಂಧಾಕಾಂಡಂ' ಚಿತ್ರ 70 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡಿತ್ತು. ಈ ಮಿಸ್ಟರಿ ಥ್ರಿಲ್ಲರ್ ಸಿನಿಮಾ ಹಾಟ್‌ಸ್ಟರ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ.

More from Filmibeat

Read more about: prabhas hombale films tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X