»   » ರಸಗುಲ್ಲ ಬೆಡಗಿಯರ ಬಿಕಿನಿ ಫೋಟೋಗಳು

ರಸಗುಲ್ಲ ಬೆಡಗಿಯರ ಬಿಕಿನಿ ಫೋಟೋಗಳು

Posted By: ರವಿಕಿಶೋರ್
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ ಗಂಡನ ಚಿಂತೆ ಹಾಗಾದ್ರೆ ಹೀರೋಯಿನ್ ಗೆ? ಬಿಕಿನಿ ಚಿಂತೆ. ಯಾರಾದರೂ ತಮಗೆ ಬಿಕಿನಿ ಛಾನ್ಸ್ ಕೊಟ್ಟೇ ಕೊಡುತ್ತಾರೆ ಎಂದು ಈಗಿನ ಕಾಲದ ಹೀರೋಯಿನ್ ಗಳು ಜಾತಕಪಕ್ಷಿಯಂತೆ ಕಾಯುತ್ತಿರುತ್ತಾರೆ.

  ಬಿಕಿನಿ ತೊಡುವುದೂ ಒಂದು ಕಲೆ. ಪಿಸಿಗೂ ಒಂದು ಕಾಲ ಲ್ಯಾಪ್ ಟಾಪ್ ಗು ಒಂದು ಕಾಲ ಎಂಬಂತೆ. ಈಗ ಬಿಕಿನಿಗೂ ಒಂದು ಕಾಲ ಐಟಂ ಡಾನ್ಸ್ ಗೂ ಒಂದು ಕಾಲ ಎಂಬಂತಾಗಿದೆ. ಆದರೂ ಟಿ.ವಿಗೆ ಹೋದ ಮಾನ ಕಂಪ್ಯೂಟರ್ ಕೊಟ್ರೆ ಬರುತ್ತಾ ಹೇಳಿ.

  ಒಂದು ಕಾಲದಲ್ಲಿ ಬಿಕಿನಿಗಳು ಕೇವಲ ಹಾಲಿವುಡ್ ತಾರೆಗಳಿಗೆ ಮಾತ್ರ ಸೀಮಿತವಾಗಿದ್ದವು. ಈ ಸಂಸ್ಕೃತಿ ಬಾಲಿವುಡ್ ಗೆ ಅಡಿಯಿಡಬೇಕಾದರೆ ಬಹಳ ಸಮಯ ತೆಗೆದುಕೊಂಡಿತು. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಎಂಬಂತೆ ಹಾಲಿವುಡ್ ತಾರೆಗಳು ಹಾಕಿಕೊಟ್ಟ ದಾರಿಯಲ್ಲಿ ಬಾಲಿವುಡ್ ತಾರೆಗಳು ಹೆಜ್ಜೆ ಹಾಕಲಾರಂಭಿಸಿದರು.

  ಬಿಕಿನಿ ತೊಡಬೇಕಾದರೆ ದೇಹವೂ ಅದಕ್ಕೆ ಸಹಕರಿಸುವಂತಿರಬೇಕು. ತೀರಾ ಸಣ್ಣಗಾದರೆ ಪೇಲವವಾಗಿ ಕಾಣುತ್ತಾರೆ. ದಪ್ಪ ಇದ್ದರೆ ಬೂಸಾ ಮೂಟೆ ತರಹ ಇರುತ್ತದೆ. ಅಂದಚೆಂದ ವೈಯಾರಕ್ಕೆ ಬಿಕಿನಿ ಹೇಳಿಮಾಡಿಸಿದ ಉಡುಗೆ.

  ದಕ್ಷಿಣದಲ್ಲಿ ನಯನತಾರಾ, ಅನುಷ್ಕಾ ಶೆಟ್ಟಿ, ಇಲಿಯಾನಾ, ಪ್ರಿಯಾಮಣಿ, ಲಕ್ಷ್ಮಿ ರೈ, ನಮಿತಾ, ಶ್ರುತಿ ಹಾಸನ್ ಹೀಗೆ ಎಲ್ಲರೂ ಬಿಕಿನಿ ತೊಟ್ಟು ಕಲಾರಸಿಕರ ನಿದ್ದೆಗೆಡಿಸಿದವರೇ. ಬಿಕಿನಿಯಲ್ಲಿ ಯಾವ ತಾರೆ ಚೆನ್ನಾಗಿ ಕಾಣಿಸಬಹುದು ಒಮ್ಮೆ ಕಣ್ಣಾಯಿಸಿ...

  ಬಿಕಿನಿಯಲ್ಲಿ ಹಾಟ್ ಪೀಸ್ ನಯನತಾರಾ

  ಈಕೆ ಅಭಿನಯದ 'ಬಿಲ್ಲಾ' ಚಿತ್ರ ಗೆಲ್ಲಲು ಕಾರಣ ಬಿಕಿನಿಯೇ ಕಾರಣ ಎನ್ನಲಾಗಿದೆ. ಅದೆಷ್ಟು ನಿಜವೋ ಏನೋ ಬಿಕಿನಿಯಲ್ಲಿ ಮಾತ್ರ ನಯನತಾರ ಅದ್ಭುತ.

  ಬಿಕಿನಿಯಲ್ಲಿ ದೀಪಿಕಾ ಪಡುಕೋಣೆ ಮೈಮಾಟ

  ಈಗಾಗಲೆ ಬಿಕಿನಿಯಲ್ಲಿ ಅಭಿನಯಿಸಿರುವ ದೀಪಿಕಾ, ಬಿಕಿನಿ ಪಾತ್ರಗಳಿಗೆ ಹೇಳಿ ಮಾಡಿಸಿದ ದೇಹಸಿರಿಯನ್ನು ಪಡೆದಿದ್ದಾರೆ. ಈಗ ದಕ್ಷಿಣ ಚಿತ್ರರಂಗಕ್ಕೂ ಅಡಿಯಿಟ್ಟಿರುವ ಅವರು ಇಲ್ಲೂ ಬಿಕಿನಿ ತೊಡಲು ಅಭ್ಯಂತರವಿಲ್ಲ ಎಂದಿದ್ದಾರೆ.

  ಬಿಕಿನಿ ಗೊಂಬೆಯಾದ ಅನುಷ್ಕಾ ಶೆಟ್ಟಿ

  ಗ್ಲಾಮರ್ ಪಾತ್ರಗಳಿಗಷ್ಟೇ ಸೀಮಿತವಾಗಿದ್ದ ಅನುಷ್ಕಾ ಶೆಟ್ಟಿ ಬರುಬರುತ್ತಾ ಬಿಕಿನಿಗೂ ಗ್ರೀನ್ ಸಿಗ್ನಲ್ ಕೊಟ್ಟರು. ತಮ್ಮಲ್ಲಿನ ಸೆಕ್ಸಿ ಭಾಗಗಳನ್ನು ಬಿಕಿನಿಯಲ್ಲಿ ತೋರಿಸುವುದರಲ್ಲಿ ಅನುಷ್ಕಾ ಅವರದು ಪಳಗಿದ ಕೈ.

  ನವಿಲಾದ ನಿಕೋಲ್ ಎಂಬ ಬೆಡಗಿ

  ಸದ್ಯಕ್ಕೆ ತೆಲುಗು, ತಮಿಳು ಚಿತ್ರಗಳಲ್ಲಿ ಅಭಿನಯಿಸಿರುವ ಈಕೆ ಮುಂದೊಂದು ದಿನ ಕನ್ನಡಕ್ಕೂ ಲಗ್ಗೆ ಹಾಕಬಹುದು. ಆರಂಭದಿಂದಲೂ ಬಿಕಿಯನ್ನೇ ನಂಬಿಕೊಂಡ ತಾರೆ ಈಕೆ. ಹೆಸರು ನಿಕೋಲ್.

  ಇಲಿಯಾನಾ ಬಿಕಿನಿ ಎಂದ್ರೆ ಭಯಾನಾ?

  ಹಾಗೇನು ಇಲ್ಲ ಎನ್ನುತ್ತಾರೆ ಇಲಿಯಾನಾ. ಈಗಾಗಲೆ ಕನ್ನಡದಲ್ಲೂ ಹಾಗೆ ಬಂದು ಹೀಗೆ ಹೋಗಿರುವ ಈಕೆ ಈಜುಡುಗೆ, ಬಿಕಿನಿಗೆ ಯಾವತ್ತೂ ಇಲ್ಲ ಎಂದವರಲ್ಲ.

  ಐಟಂಗೂ ಓಕೆ ಬಿಕಿನಿಗೂ ಓಕೆ

  ಎಲ್ಲಾ ಓಕೆ ಬಿಕಿನಿ ಯಾಕೆ ಎನ್ನುವ ಐಟಂ ತಾರೆ ಈಕೆ. ಬಿಕಿನಿಯಾದರೂ ಸರಿ, ಐಟಂ ಡಾನ್ಸ್ ಆದರೂ ಸರಿ ಎನ್ನುತ್ತಾರೆ.

  ನೀರಿಗೆ ಧುಮುಕಿದ ನಮಿತಾ

  ನಮಿತಾ ದೇಹ ಬಿಕಿನಿ ಹೇಳಿಮಾಡಿಸಿದ್ದಲ್ಲ. ಆದರೂ ಬಿಕಿನಿ ಮೇಲೆ ಅವರಿಗೆ ಸಿಕ್ಕಾಪಟ್ಟೆ ಆಸೆ ಇಟ್ಟುಕೊಂಡಿದ್ದಾರೆ. ಈ ಮೂಲಕವಾದರೂ ತಮ್ಮ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಬೇಕು ಎಂಬ ಉದ್ದೇಶ ಅವರದು.

  ಪ್ರಿಯಾಮಣಿ ಏನೂ ಕಮ್ಮಿ ಇಲ್ಲ

  ಪ್ರಿಯಾಮಣಿ ಅಭಿನಯದ ಚಿತ್ರಗಳು ಬಾಕ್ಸ್ ಆಫೀಸಲ್ಲಿ ಬ್ಲ್ಯಾಸ್ಟ್ ಆನೆಪಟಾಕಿಯಂತೆ ಸದ್ದು ಮಾಡದಿದ್ದರೂ ಲಕ್ಷ್ಮಿ ಪಟಾಕಿಯಂತೆ ಸದ್ದು ಮಾಡಿವೆ. ಕೆಲವು ಚಿತ್ರಗಳು ಫ್ಲಾಪ್ ಆದರೂ ಬಿಕಿನಿ ಸನ್ನಿವೇಶಗಳು ಮಾತ್ರ ಪ್ರೇಕ್ಷಕರ ನೆನಪಿನಿಂದ ಮಾಸಿಲ್ಲ.

  ಬಿಕಿನಿಗೂ ಸೈ ಎಂದ ಲಕ್ಷ್ಮಿ ರೈ

  ಇತ್ತೀಚೆಗೆ ತೆಲುಗು ಚಿತ್ರವೊಂದರಲ್ಲಿ ಲಕ್ಷ್ಮಿ ರೈ ಈ ರೀತಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಕಣ್ಣು ಕುಕ್ಕಿದರು. ಮುಂದೆಯೂ ಇದೇ ರೀತಿ ಕೆಣಕಲಿದ್ದಾರೆ.

  ಚಂದ್ರ ಚಕೋರಿ ಶ್ರಿಯಾ ಸರನ್

  ಮಾಕ್ಸಿಮ್ ನಿಯತಕಾಲಿಕೆಗಾಗಿ ಕೊಟ್ಟ ಭಂಗಿ ಇದು. ಇನ್ನೂ ಆಕೆಯ ಅಭಿಮಾನಿಗಳು ಇದನ್ನು ಜೋಪಾನವಾಗಿ ಕಾಪಾಡಿಕೊಂಡಿದ್ದಾರೆ.

  ಶಾಕ್ ಕೊಟ್ಟ ಶ್ರದ್ಧಾ ದಾಸ್

  ಇದ್ದಕ್ಕಿದ್ದಂತೆ ಈ ರೀತಿ ಬಂದರೆ ಅಭಿಮಾನಿಗಳು ಏನಾಗಬೇಡ. ಶ್ರದ್ಧಾ ದಾಸ್ ಬಿಕಿನಿಯಲ್ಲಿ ಶಾಕ್ ಕೊಟ್ಟ ಸನ್ನಿವೇಶ.

  ಸದಾ ಕೂಡ ಅದೇ ದಾರಿ

  ಈಕೆ ಮುಸ್ಲಿಂ ಕಟ್ಟಾ ಸಂಪ್ರದಾಯಸ್ತ ಮನೆತನದಿಂದ ಬಂದವರು. ಎಷ್ಟು ದಿನ ಎಂದು ಬಿಕಿನಿ ತೊಡದೆ ಸುಮ್ಮನಿರಲು ಸಾಧ್ಯ. ಕಡೆಗೂ ಈಕೆ ಅದೇ ದಾರಿ ಹಿಡಿದರು.

  ವಿವಾದಾತ್ಮಕ ತಾರೆಯ ವಿಭಿನ್ನ ಭಂಗಿ

  ಸದಾ ಒಂದಿಲ್ಲೊಂದು ವಿವಾದಗಳಲ್ಲಿ ಸಿಲುಕಿರುವ ಈ ತಾರೆ ಅಪರೂಪಕ್ಕೊಮ್ಮೆ ಬಿಕಿನಿಯಲ್ಲಿ ಹೀಗೆ ಕಾಣಿಸಿಕೊಂಡು ಅಭಿಮಾನಿಗಳ ಕಣ್ಣಿಗೆ ತಂಪೆರೆದಿದ್ದಾರೆ.

  ಬಿಕಿನಿ ಗೊಂಬೆ ಶ್ರುತಿ ಹಾಸನ್

  ಈಗಾಗಲೆ ದಕ್ಷಿಣ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿರುವ ಶ್ರುತಿ ಹಾಸನ್ ಬಾಲಿವುಡ್ ಅಂಗಳದಲ್ಲೂ ಚೆಂಡಾಟ ಆಡಿದ್ದಾರೆ. ಬಿಕಿನಿ ಮೂಲಕ ಅಲ್ಲಿನ ಪ್ರೇಕ್ಷಕರಿಗೆ ಹತ್ತಿರವಾಗುವ ಪ್ರಯತ್ನ ಮಾಡಿದ್ದಾರೆ.

  ಮೈಮರೆಸುವ ದೀಕ್ಷಾ ಸೇಠ್

  ತಮಿಳಿನ ಚಿತ್ರವೊಂದರಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡ ತಾರೆ ದೀಕ್ಷಾ ಸೇಠ್. ಆಕೆಯ ಮೈಮಾಟಕ್ಕೆ ಚಿತ್ರರಸಿಕರು ಬೆಚ್ಚಗಾಗಿದ್ದಾರೆ.

  ನೀತೂ ಚಂದ್ರ ನಿತ್ಯ ನೂತನ

  ನಿತ್ಯ ನೂತನವಾಗಿರುವ ನೀತೂ ಚಂದ್ರ ಬಿಕಿನಿ ಚಿತ್ರ ಇಂದಿಗೂ ಚಿತ್ರರಸಿಕರ ನಿದ್ದೆಕೆಡಿಸುತ್ತಿದೆ.

  ಕಲಾ ರಸಿಕರ ಆರಾಧ್ಯ ದೈವ

  ಈಕೆ ಬಿಚ್ಚಮ್ಮ ಅಲ್ಲದಿದ್ದರೂ ಇತ್ತೀಚೆಗೆ ತೆಲುಗು ಚಿತ್ರವೊಂದರಲ್ಲಿ ಬಿಕಿನಿ ತೊಟ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

  ಇಲ್ಲಿ ಸೈಲೆಂಟು ಪಕ್ಕದೂರಲ್ಲಿ ವಯೋಲೆಂಟ್

  ಗಂಡ ಹೆಂಡತಿ ಖ್ಯಾತಿಯ ಸಂಜನಾ ಈಗ ಮಹಾನದಿ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅಭಿನಯಕ್ಕೆ ಸವಾಲೊಡ್ಡುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆದರೆ ತೆಲುಗಿನಲ್ಲಿ ಮಾತ್ರ ಈ ರೀತಿ ಕಾಣಿಸಿಕೊಂಡಿದ್ದಾರೆ.

  English summary
  Here we are bringing you the pictures of the actresses who have sported two piece and our readers can choose who among them is the 'Hottest'. Deepika Padukone, Nayantara, Anushka Shetty, Ileana D'Cruz, Lakshmi Rai, Priyamani, Shriya, Namitha, Shruti Hassan, Neetu Chandra, Sada, Ankitha, Sona, Deeksha Seth, Mumaith Khan, Shraddha Das, and Sona have donned bikini/swimsuits.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more