For Quick Alerts
  ALLOW NOTIFICATIONS  
  For Daily Alerts

  ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಬಗ್ಗೆ ಹಬ್ಬಿರುವ ಸುದ್ದಿ ನಿಜವೇ?

  By Harshitha
  |

  ಟೈಟಲ್ ನೋಡಿ ಏನೇನೋ ಕಲ್ಪನೆ ಮಾಡಿಕೊಳ್ಳುವ ಮುನ್ನ ನಾವು ಹೇಳುತ್ತಿರುವುದು ರೀಲ್ ಸುದ್ದಿ ಅಂತ ನಿಮಗೆ ಮತ್ತೊಮ್ಮೆ ನೆನಪಿಸುತ್ತಿದ್ದೇವೆ.

  ಡೈನಾಮಿಕ್ ಸ್ಟಾರ್ ದೇವರಾಜ್ ಪುತ್ರ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದು ತೀರಾ ಇತ್ತೀಚೆಗೆ. ಪ್ರಜ್ವಲ್ ಪತ್ನಿ ರಾಗಿಣಿ ಚಂದ್ರನ್ ಮಾಡೆಲಿಂಗ್ ಲೋಕದ ಕೋಲ್ಮಿಂಚು ಅಂತ ನಾವೇ ವರದಿ ಮಾಡಿದ್ವಿ. [ಪ್ರಜ್ವಲ್ ದೇವರಾಜ್ ಮನದನ್ನೆ ರಾಗಿಣಿ ಚಂದ್ರನ್ ಕುರಿತು...]

  ಜಾಹೀರಾತು ಲೋಕದಲ್ಲಿ ಖ್ಯಾತಿ ಪಡೆದಿರುವ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಈಗ ಸುದ್ದಿಯಲ್ಲಿದ್ದಾರೆ. ಆ ಸುದ್ದಿ ಏನು ಅಂತ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

  ಬಣ್ಣ ಹಚ್ಚಲಿದ್ದಾರೆ ಪ್ರಜ್ವಲ್ ದೇವರಾಜ್ ಪತ್ನಿ?

  ಬಣ್ಣ ಹಚ್ಚಲಿದ್ದಾರೆ ಪ್ರಜ್ವಲ್ ದೇವರಾಜ್ ಪತ್ನಿ?

  ಮದುವೆ ಆದ ಬಳಿಕ ಬಣ್ಣ ಹಚ್ಚಲು ರಾಗಿಣಿ ಚಂದ್ರನ್ ನಿರ್ಧರಿಸಿದ್ದಾರಂತೆ. ಹಾಗಾದ್ರೆ, ರಾಗಿಣಿ ಚಂದ್ರನ್, ಪತಿ ಪ್ರಜ್ವಲ್ ದೇವರಾಜ್ ಜೊತೆ ನಟಿಸಲಿದ್ದಾರಾ? ಇದಕ್ಕೆ ಉತ್ತರ ಇದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ.... [ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ಮದುವೆ ಫೋಟೋ ಆಲ್ಬಂ]

  ಕಿರುತೆರೆಗೆ ಕಾಲಿಡಲಿದ್ದಾರಂತೆ ರಾಗಿಣಿ ಚಂದ್ರನ್!

  ಕಿರುತೆರೆಗೆ ಕಾಲಿಡಲಿದ್ದಾರಂತೆ ರಾಗಿಣಿ ಚಂದ್ರನ್!

  ಗಾಂಧಿನಗರದಲ್ಲಿ ಸುದ್ದಿ ಆಗಿರುವ ಪ್ರಕಾರ, ರಾಗಿಣಿ ಚಂದ್ರನ್ ಕನ್ನಡ ಕಿರುತೆರೆಗೆ ಕಾಲಿಡಲು ಮನಸ್ಸು ಮಾಡಿದ್ದಾರಂತೆ. [ಚಿತ್ರಗಳು; ಪ್ರಜ್ವಲ್ ದೇವರಾಜ್-ರಾಗಿಣಿ ಆರತಕ್ಷತೆಯಲ್ಲಿ ಗಣ್ಯರ ದಂಡು]

  ಧಾರಾವಾಹಿಯಲ್ಲಿ ನಟನೆ?

  ಧಾರಾವಾಹಿಯಲ್ಲಿ ನಟನೆ?

  ವರದಿಗಳ ಪ್ರಕಾರ, ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ 'ಮಧ್ಯಂತರ' ಧಾರಾವಾಹಿಯಲ್ಲಿ ರಾಗಿಣಿ ಚಂದ್ರನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರಂತೆ. [ಪ್ರಜ್ವಲ್ ದೇವರಾಜ್-ರಾಗಿಣಿ ಚಂದ್ರನ್ ಮದುವೆ ಚಿತ್ರಗಳು]

  ನಟನೆಗೆ ಒಪ್ಪಲು ಕಾರಣ?

  ನಟನೆಗೆ ಒಪ್ಪಲು ಕಾರಣ?

  ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ರಾಗಿಣಿ ಚಂದ್ರನ್ ಗೆ ಧಾರಾವಾಹಿಯಲ್ಲಿ ನಟಿಸಲು ಹಲವು ಬಾರಿ ಅವಕಾಶ ಲಭಿಸಿತ್ತು. ಯಾವುದಕ್ಕೂ ಓಕೆ ಎನ್ನದ ರಾಗಿಣಿ, ಈ ಬಾರಿ ಕೆ.ಎಂ.ಚೈತನ್ಯ ಮೇಲೆ ಭರವಸೆ ಇಟ್ಟು ಕಿರುತೆರೆಗೆ ಕಾಲಿಡುತ್ತಿದ್ದಾರಂತೆ.

  ಕೆ.ಎಂ.ಚೈತನ್ಯ ನಿರ್ದೇಶನದ ಧಾರಾವಾಹಿ

  ಕೆ.ಎಂ.ಚೈತನ್ಯ ನಿರ್ದೇಶನದ ಧಾರಾವಾಹಿ

  ನಿರ್ದೇಶಕ ಕೆ.ಎಂ.ಚೈತನ್ಯ ಸಾರಥ್ಯದಲ್ಲಿ 'ಮಧ್ಯಂತರ' ಧಾರಾವಾಹಿ ಪ್ರಸಾರವಾಗಲಿದೆ.

  ಮಧ್ಯಂತರ ಕುರಿತು...

  ಮಧ್ಯಂತರ ಕುರಿತು...

  ಅಪ್ಪ-ಮಗಳ ಅನುಬಂಧ ಕುರಿತು ಹೆಣೆದಿರುವ ಕಥೆ 'ಮಧ್ಯಂತರ'.

  ಸುಧಾರಾಣಿ ಕೂಡ ಇದ್ದಾರೆ!

  ಸುಧಾರಾಣಿ ಕೂಡ ಇದ್ದಾರೆ!

  ಮೂಲಗಳ ಪ್ರಕಾರ, 'ಮಧ್ಯಂತರ' ಧಾರಾವಾಹಿಯಲ್ಲಿ ನಟ ಜೈಜಗದೀಶ್ ಮತ್ತು ಸುಧಾರಾಣಿ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ.

  ಪ್ರಸಾರ ಯಾವಾಗ?

  ಪ್ರಸಾರ ಯಾವಾಗ?

  ಯುಗಾದಿ ಹಬ್ಬ ಕಳೆದ ನಂತರ 'ಮಧ್ಯಂತರ' ಧಾರಾವಾಹಿ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

  ಬಣ್ಣದ ಬದುಕು ಹೊಸದೇನಲ್ಲ!

  ಬಣ್ಣದ ಬದುಕು ಹೊಸದೇನಲ್ಲ!

  ಪ್ರಜ್ವಲ್ ಪತ್ನಿ ರಾಗಿಣಿ ಚಂದ್ರನ್ ಗೆ ಬಣ್ಣದ ಬದುಕು ಹೊಸದೇನಲ್ಲ. ಕೆಲ ವರ್ಷಗಳ ಹಿಂದೆಯಷ್ಟೆ ಮಾಡೆಲಿಂಗ್ ಲೋಕಕ್ಕೆ ಅಡಿಯಿಟ್ಟಿದ್ದ ರಾಗಿಣಿ ಚಂದ್ರನ್ Khazana Jewellers, GRT Jewellers, 3M Nexcare, Colortree, Lulu International Mall ಗಾಗಿ ಟಿವಿ ಜಾಹೀರಾತು ಮತ್ತು ಪ್ರಿಂಟ್ ಆಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಸುದ್ದಿ ನಿಜವೇ?

  ಸುದ್ದಿ ನಿಜವೇ?

  ಗಾಂಧಿನಗರದಲ್ಲಿ ಹಬ್ಬಿರುವ ಈ ಸುದ್ದಿ ನಿಜವೇ? ಕನ್ಫರ್ಮ್ ಮಾಡಿಕೊಳ್ಳೋಣ ಅಂತ ನಿರ್ದೇಶಕ ಕೆ.ಎಂ.ಚೈತನ್ಯಗೆ ಫೋನ್ ಮಾಡಿದರೆ 'ಆ ದಿನಗಳು' ಹಾಡು ಮಾತ್ರ ಕೇಳಿಸ್ತೇ ಹೊರತು, ಚೈತನ್ಯ ಧ್ವನಿ ಅಲ್ಲ.

  English summary
  According to the Grapevine, Kannada Actor Prajwal Devaraj's wife Model cum Dancer Ragini Chandran is all set to make Small Screen Debut with Kannada Serial 'Madhyantara' directed by K.M.Chaitanya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X