Max Movie: 'ಮ್ಯಾಕ್ಸ್' ಸಿನಿಮಾ ನಿರ್ಮಿಸಿ ಕಿಚ್ಚ ಸುದೀಪ್ ಗಳಿಸಿದ ಲಾಭ ಎಷ್ಟು?

By ಫಿಲ್ಮಿಬೀಟ್ ಡೆಸ್ಕ್

ವಿಜಯ್ ಕಾರ್ತಿಕೇಯನ್ ನಿರ್ದೇಶನ 'ಮ್ಯಾಕ್ಸ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಸೇರಿದೆ. ಚಿತ್ರದ ಸೀಕ್ವೆಲ್ ಮಾಡುವ ಬಗ್ಗೆ ಮಾತುಕತೆ ನಡೀತಿದೆ. ತೆರೆಮೇಲೆ ಮಾತ್ರವಲ್ಲ ಓಟಿಟಿಯಲ್ಲಿ ಕೂಡ ಮ್ಯಾಕ್ಸಿಮಮ್ ಮನರಂಜನೆ ಉಣಬಡಿಸಿ ಸಿನಿಮಾ ಸದ್ದು ಮಾಡ್ತಿದೆ. ಪರಭಾಷಿಕರು ಕೂಡ ಕಿಚ್ಚನ ಆರ್ಭಟಕ್ಕೆ ಫಿದಾ ಆಗಿದ್ದಾರೆ.

ಕ್ರಿಸ್‌ಮಸ್ ಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ 'ಮ್ಯಾಕ್ಸ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ವರ್ಷದ ಕೊನೆಗೆ ಬಂದು ಗಮನ ಸೆಳೆದಿತ್ತು. ಒಂದು ರಾತ್ರಿಯಲ್ಲಿ ನಡೆಯುವ ಪೊಲೀಸ್ ಡ್ರಾಮಾ ಸಿನಿಮಾ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸಿತ್ತು. ಸುದೀಪಿಯನ್ಸ್ ಅಂತೂ ಮುಗಿಬಿದ್ದು ಸಿನಿಮಾ ನೋಡಿ ಎಂಜಾಯ್ ಮಾಡಿದರು. ತಮಿಳಿನ ಕಲೈಪುಲಿ ಎಸ್. ತನು ಚಿತ್ರಕ್ಕೆ ಹಣ ಹೂಡಿದ್ದರು.

How much did Sudeep earn as the producer of Max and what deal did he make

ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಬಾದ್‌ಶಾ ಸುದೀಪ್ ಕೂಡ 'ಮ್ಯಾಕ್ಸ್' ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದ್ದರು. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಆಗಿತ್ತು. ಮಹಾಬಲಿಪುರಂನಲ್ಲಿ ಪೊಲೀಸ್ ಸ್ಟೇಷನ್ ಸೆಟ್ ಹಾಕಿ ಬಹುತೇಕ ಚಿತ್ರೀಕರಣ ಅಲ್ಲೇ ನಡೆಸಲಾಗಿತ್ತು. ಚಿತ್ರದ ಡಿಜಿಟಲ್ ರೈಟ್ಸ್, ಸ್ಯಾಟಲೈಟ್ ರೈಟ್ಸ್ ಕೂಡ ಭರ್ಜರಿ ಬೆಲೆಗೆ ಮಾರಾಟವಾಗಿತ್ತು. ಸಿನಿಮಾ ಅಂದಾಜು 50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಊಹಾಪೋಹ ಕೇಳಿಬಂದಿತ್ತು.

'ಮ್ಯಾಕ್ಸ್' ಚಿತ್ರದ ಕಲೆಕ್ಷನ್ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಮಾಹಿತಿ ನೀಡಲಿಲ್ಲ. ಕೆಆರ್‌ಜಿ ಸ್ಟುಡಿಯೋಸ್ ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿತ್ತು. ಕನ್ನಡ ಹಾಗೂ ತಮಿಳು ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡಿದ್ದರು. ಶೇಖರ್ ಚಂದ್ರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿತ್ತು. ಸಿನಿಮಾ ಹಿಟ್ ಆಗುತ್ತಿದ್ದಂತೆ ಸೀಕ್ವೆಲ್ ಮಾಡುವಂತೆ ಒತ್ತಡ ಶುರುವಾಗಿದೆ.

ಚಿತ್ರದಲ್ಲಿ ಇನ್ಸ್‌ಪೆಕ್ಟರ್ ಅರ್ಜುನ್ ಮಹಾಕ್ಷಯ್ ಆಗಿ ಕಿಚ್ಚ ಸುದೀಪ್ ಅಬ್ಬರಿಸಿದ್ದರು. ಇನ್ನುಳಿದಂತೆ ಉಗ್ರಂ ಮಂಜು, ವರಲಕ್ಷ್ಮಿ ಶರತ್‌ಕುಮಾರ್, ಸುನಿಲ್, ಸಂಯುಕ್ತಾ ಹೊರನಾಡ್ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಸ್ವತಃ ಸುದೀಪ್ ಸಹ ನಿರ್ಮಾಪಕರು ಆಗಿದ್ದರು. ಹಾಗಿದ್ದರೆ ಚಿತ್ರಕ್ಕೆ ಅವರು ಪಡೆದು ಸಂಭಾವನೆ ಎಷ್ಟು? ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ ಸುದೀಪ್ ತಮ್ಮ ಸಂಭಾವನೆಯನ್ನೇ ಬಂಡವಾಳವಾಗಿ ಹಾಕಿ ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದ್ದರು ಎನ್ನಲಾಗ್ತಿದೆ.

ಚಿತ್ರರಂಗದಲ್ಲಿ ಭಿನ್ನ ವಿಭಿನ್ನ ರೀತಿಯಲ್ಲಿ ಹಣದ ವ್ಯವಹಾರ ನಡೆಯುತ್ತದೆ. ಸ್ಟಾರ್ ನಟರು ಸಂಭಾವನೆ ಜೊತೆಗೆ ಲಾಭದಲ್ಲಿ ಪಾಲು ಪಡೆಯುವುದು ಇದೆ. ಕೆಲವರು ಯಾವುದೇ ಸಂಭಾವನೆ ಪಡೆಯದೇ ನಿರ್ಮಾಪಕರು ಆಗಿ ಬೆಂಬಲಕ್ಕೆ ನಿಂತು ಬಳಿಕ ಅರ್ಧಕರ್ಧ ಪಾಲು ಪಡೆಯುವುದು ಇದೆ. 'ಮ್ಯಾಕ್ಸ್' ಸಿನಿಮಾ ವಿಚಾರದಲ್ಲಿ ಸುದೀಪ್ ಇದೇ ರೀತಿಯ ಒಪ್ಪಂದ ಮಾಡಿಕೊಂಡಿದ್ದರು ಎನ್ನುವ ಮಾತುಗಳು ಕೇಳಿಬರ್ತಿದೆ.

How much did Sudeep earn as the producer of Max and what deal did he make

ಗಾಂಧಿನಗರದಲ್ಲಿ ಕೇಳಿಬರುತ್ತಿರುವ ವದಂತಿ ಪ್ರಕಾರ 'ಮ್ಯಾಕ್ಸ್' ಚಿತ್ರದ ಬಾಕ್ಸಾಫೀಸ್ ಶೇರ್ ಅನ್ನು ಸುದೀಪ್ ಅವರು ಪಡೆದುಕೊಂಡಿದ್ದಾರೆ. ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಮಾರಾಟದಿಂದ ಬಂದ ಹಣ ತಮಿಳು ನಿರ್ಮಾಪಕ ಕಲೈಪುಲಿ ಎಸ್ ತನು ಪಾಲಾಗಿದೆಯಂತೆ. ಇದೇ ನಿಜವಾಗಿದ್ದರೆ ಸುದೀಪ್ ಅವರಿಗೆ 15 ಕೋಟಿ ರೂ.ಗೂ ಅಧಿಕ ಹಣ ಸಿಕ್ಕಿರಬಹುದು ಎಂದು ಕೆಲವರು ಅಂದಾಜಿಸುತ್ತಿದ್ದಾರೆ.

'ಮ್ಯಾಕ್ಸ್' ಬಳಿಕ ಅನೂಪ್ ಭಂಡಾರಿ ನಿರ್ದೇಶನದ 'ಬಿಲ್ಲ ರಂಗ ಬಾಷ' ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ. ಆ ಬಳಿಕ 'ಮ್ಯಾಕ್ಸ್' ಸೀಕ್ವೆಲ್ ಬರುವ ಸಾಧ್ಯತೆಯಿದೆ. ಈಗಾಗಲೇ ಕಥೆ, ಚಿತ್ರಕಥೆ ಬರೆಯುವ ಕೆಲಸದಲ್ಲಿ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಬ್ಯುಸಿಯಾಗಿದ್ದಾರೆ. ಆದರೆ ಮತ್ತೆ ತೆರೆಮೇಲೆ 'ಮ್ಯಾಕ್ಸ್' ಆರ್ಭಟ ನೋಡಲು 2 ವರ್ಷ ಕಾಯಲೇಬೇಕು.

More from Filmibeat

English summary
How much profit did Sudeep make from producing Max, and what was his agreement?
Read more about: sudeep max box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X