Alia Bhatt - Ranbir Kapoor Wedding Cost : ಆಲಿಯಾ ಭಟ್ ಹಾಗೂ ರಣ್ಬೀರ್ ವಿವಾಹಕ್ಕೆ ಖರ್ಚಾಗುತ್ತಿರುವ ಹಣವೆಷ್ಟು?

ಸಿನಿಮಾ ರಂಗವೆಂದರೇನೆ ಥಳುಕು, ಬಳುಕು, ಅದ್ಧೂರಿತನ, ಐಶಾರಾಮಿತನ. ಸಿನಿಮಾ ಮಾತ್ರವಲ್ಲ ಖಾಸಗಿ ಜೀವನದಲ್ಲೂ ಅವರು ಅದ್ಧೂರಿಯೇ. ಸರಳವಾಗಿರುವ ಸ್ಟಾರ್ ಸಿನಿಮಾ ನಟರು ಬೆರಳೆಣಿಯಷ್ಟು ಸಹ ಇಲ್ಲ.

Recommended Video

ಬಾಲಿವುಡ್ ರೂಲ್ ಮಾಡೋ ಮುನ್ಸೂಚನೆಕೊಟ್ಟ Rashmika Mandanna | Animal | Ranbir Kapoor

ಅದರಲ್ಲೂ ಸಿನಿಮಾ ರಂಗದವರ ವಿವಾಹಗಳು ಯಾವ ಅದ್ಧೂರಿ ಸಿನಿಮಾಕ್ಕೂ ಕಡಿಮೆ ಇಲ್ಲದಂತೆ ನಡೆಯುತ್ತವೆ. ಈಗಂತೂ ವಿದೇಶಕ್ಕೆ ತೆರಳಿ ವಿವಾಹವಾಗುವುದು, ಅರಮನೆಗಳನ್ನು ವಾರಾನುಗಟ್ಟಲೆ ಬಾಡಿಗೆ ಪಡೆದು ಅಲ್ಲಿ ವಿವಾಹವಾಗುವುದು ಚಿತ್ರರಂಗದವರ ಹೊಸ ಫ್ಯಾಷನ್ ಆಗಿಬಿಟ್ಟಿದೆ.

ಇದೀಗ ಬಾಲಿವುಡ್‌ನ ಇಬ್ಬರು ಸ್ಟಾರ್‌ಗಳಾದ ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ವಿವಾಹವಾಗುತ್ತಿದ್ದು, ಮಾಧ್ಯಮದ ದೃಷ್ಟಿಯೆಲ್ಲ ಇವರ ವಿವಾಹದ ಮೇಲೆ ನೆಟ್ಟಿದೆ. ಈಗಾಗಲೇ ಬಾಲಿವುಡ್‌ನಲ್ಲಿ ಅದ್ಧೂರಿ ವಿವಾಹಗಳು ನಡೆದಿದ್ದು, ಈ ಜೋಡಿ ಆ ಅದ್ಧೂರಿ ವಿವಾಹಗಳಿಗಿಂತಲೂ ಭಿನ್ನವಾಗಿ ವಿವಾಹವಾಗಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಕೋಟ್ಯಂತರ ರುಪಾಯಿ ಹಣವನ್ನು ಖರ್ಚು ಮಾಡುತ್ತಿದೆ.

ಆರ್‌ಕೆ ಸ್ಟುಡಿಯೋದಲ್ಲಿ ವಿವಾಹ

ಆರ್‌ಕೆ ಸ್ಟುಡಿಯೋದಲ್ಲಿ ವಿವಾಹ

ಆಲಿಯಾ ಭಟ್ ಹಾಗೂ ರಣ್ಬೀರ್ ಕಪೂರ್ ಅವರುಗಳು ವಿವಾಹ ಆರ್‌ಕೆ ಸ್ಟುಡಿಯೋದಲ್ಲಿಯೇ ನಡೆಯುತ್ತದೆ ಎನ್ನಲಾಗುತ್ತಿದೆ. ಕಪೂರ್ ಕುಟುಂಬದ ಹಳೆಯ ಆಸ್ತಿ ಈ ಸ್ಟುಡಿಯೋ ಆಗಿದ್ದು, ಅದರೊಂದಿಗೆ ಭಾವನಾತ್ಮಕ ಸಂಬಂಧ ರಣ್ಬೀರ್ ಕಪೂರ್‌ಗೆ ಇರುವ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ತಮ್ಮದೇ ಆಸ್ತಿಯಲ್ಲಿ ವಿವಾಹವಾಗುತ್ತಿದ್ದಾರೆ ಎಂದ ಮಾತ್ರಕ್ಕೆ ಖರ್ಚುಗಳು ಕಡಿಮೆ ಆದವು ಎಂದೇನೂ ಇಲ್ಲ. ಮದುವೆಗೆ ದೊಡ್ಡ ಮೊತ್ತವನ್ನೇ ಈ ಜೋಡಿ ಖರ್ಚು ಮಾಡುತ್ತಿದೆ.

ದೊಡ್ಡ ಮೊತ್ತವನ್ನೇ ಖರ್ಚು ಮಾಡುತ್ತಿದೆ ಈ ಜೋಡಿ

ದೊಡ್ಡ ಮೊತ್ತವನ್ನೇ ಖರ್ಚು ಮಾಡುತ್ತಿದೆ ಈ ಜೋಡಿ

ಆಲಿಯಾ-ರಣ್ಬೀರ್ ಮದುವೆಗೆ ಸುಮಾರು 80 ರಿಂದ 100 ಕೋಟಿ ರುಪಾಯಿ ಖರ್ಚಾಗಲಿದೆ ಎನ್ನಲಾಗುತ್ತಿದೆ. ಈ ಹಿಂದಿನ ಸ್ಟಾರ್ ನಟ-ನಟಿಯರ ವಿವಾಹಗಳಿಗೆ ಹೋಲಿಸಿದರೆ ಈ ಇಬ್ಬರು ಹೆಚ್ಚು ಸಂಖ್ಯೆಯ ಅತಿಥಿಗಳು, ಸಂಬಂಧಿಕರನ್ನು ವಿವಾಹಕ್ಕೆ ಆಹ್ವಾನಿಸುತ್ತಿರುವ ಕಾರಣದಿಂದ ಖರ್ಚು ಹೆಚ್ಚಾಗುತ್ತಿದೆ. ಅತಿಥಿಗಳಿಗಾಗಿ ಈಗಾಗಲೇ ಐಶಾರಾಮಿ ಹೋಟೆಲ್ ಬುಕಿಂಗ್ ಆಗಿದೆ. ಬ್ಯಾಚುಲರ್ ಪಾರ್ಟಿಗೆ ಸ್ಥಳ, ಮೆನ್ಯು ಬುಕ್ ಆಗಿದೆ. ಅತಿಥಿ ಸೌಕರ್ಯಕ್ಕಾಗಿಯೇ ಸುಮಾರು 30 ಕೋಟಿಗೂ ಹೆಚ್ಚು ಹಣ ಖರ್ಚಾಗುತ್ತಿದೆ.

ಆಭರಣ, ಉಡುಪಿಗೆ ಕೋಟ್ಯಂತರ ವೆಚ್ಚ

ಆಭರಣ, ಉಡುಪಿಗೆ ಕೋಟ್ಯಂತರ ವೆಚ್ಚ

ಇನ್ನು ಆಲಿಯಾ ಹಾಗೂ ರಣ್ಬೀರ್‌ರ ಮದುವೆ ಉಡುಗೆ ಹಾಗೂ ಆಭರಣಗಳಿಗೆ ಸುಮಾರು 10 ಕೋಟಿ ರುಪಾಯಿ ಖರ್ಚಾಗುತ್ತಿದೆ ಎನ್ನಲಾಗುತ್ತಿದೆ. ಆಲಿಯಾ ಮತ್ತು ರಣ್ಬೀರ್ ಇಬ್ಬರ ಉಡುಗೆಗಳನ್ನು ದೇಶದ ಅತ್ಯುತ್ತಮ ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಲಿದ್ದಾರೆ. ಜೊತೆಗೆ ಇಬ್ಬರು ತೊಡಗಿರುವ ಆಭರಣಗಳನ್ನು ವಿದೇಶದ ಜನಪ್ರಿಯ ಸಂಸ್ಥೆ ವಿಶೇಷವಾಗಿ ಡಿಸೈನ್ ಮಾಡಲಿದೆ. ಹಾಗಾಗಿ ಖರ್ಚು ಸಹಜವಾಗಿಯೇ ಹೆಚ್ಚಾಗಿದೆ.

ಬಾಲಿವುಡ್‌ನ ದುಬಾರಿ ಮದುವೆಗಳು

ಬಾಲಿವುಡ್‌ನ ದುಬಾರಿ ಮದುವೆಗಳು

ಈ ಹಿಂದೆ ದೀಪಿಕಾ ಹಾಗೂ ರಣ್ಬೀರ್ ಕಪೂರ್ ಅವರುಗಳು ವಿದೇಶದಲ್ಲಿ ಮದುವೆಯಾಗಿದ್ದರು ಅವರ ವಿವಾಹಕ್ಕೆ ಸುಮಾರು 77 ಕೋಟಿ ರುಪಾಯಿ ಖರ್ಚಾಗಿತ್ತು. ಇತ್ತೀಚೆಗೆ ವಿವಾಹವಾದ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್‌ ಅವರುಗಳು 50 ಕೋಟಿ ರುಪಾಯಿಗಳನ್ನು ಮದುವೆಗೆ ಖರ್ಚು ಮಾಡಿದ್ದರಂತೆ. ಇನ್ನು ಬಾಲಿವುಡ್‌ನ ಅತಿ ದುಬಾರಿ ಮದುವೆ ಆಗಿದ್ದು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾರದ್ದು. ಇವರ ಮದುವೆಗೆ ಖರ್ಚಾಗಿದ್ದು 100 ಕೋಟಿಗೂ ಹೆಚ್ಚು ಎನ್ನಲಾಗುತ್ತದೆ. ಇವರು ಸಹ ವಿದೇಶದಲ್ಲಿ ವಿವಾಹವಾದರು.

More from Filmibeat

English summary
How much money did Alia Bhatt and Ranbir Kapoor spending for their marriage. Both getting married on April 14.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X