ಪ್ರಭಾಸ್ ಡ್ಯೂಪ್ ಕಿರಣ್‌ರಾಜ್‌ಗೆ ಪ್ರತಿ ಚಿತ್ರಕ್ಕೆ ಸಿಗುವ ಸಂಭಾವನೆ ಎಷ್ಟು? ಯಾರು ಕೊಡ್ತಾರೆ?
ಯಂಗ್ ರೆಬಲ್ ಸ್ಟಾರ್ ಪ್ರಭಾಸ್ 'ಸಲಾರ್' ಸಕ್ಸಸ್ ಸಂಭ್ರಮದಲ್ಲಿ ತೇಳುತ್ತಿದ್ದಾರೆ. 3 ಸಿನಿಮಾಗಳ ಸೋಲಿನ ಬಳಿಕ 'ದೇವ' ಆಗಿ ಕಂಬ್ಯಾಕ್ ಮಾಡಿದ್ದಾರೆ. ಸದ್ಯ ಎರಡು ಸಿನಿಮಾಗಳಲ್ಲಿ ಟಾಲಿವುಡ್ ಡಾರ್ಲಿಂಗ್ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾಮಟ್ಟದಲ್ಲಿ ಪ್ರಭಾಸ್ ಕ್ರೇಜ್ ಜೋರಾಗಿದೆ. ಉತ್ತರ ಭಾರತದಲ್ಲೂ ಬಾಹುಬಲಿ ನಟನ ಸಿನಿಮಾಗಳು ಭರ್ಜರಿ ಸದ್ದು ಮಾಡುತ್ತವೆ.
ಪ್ರಭಾಸ್ ಹೈಟ್, ಪರ್ಸನಾಲಿಟಿ, ಲುಕ್ಸ್ ತೆರೆಮೇಲೆ ಆರ್ಭಟ ನೋಡಿ ಅಭಿಮಾನಿಗಳು ಥ್ರಿಲ್ಲಾಗುತ್ತಾರೆ. ಇತ್ತೀಚೆಗೆ ಚಿತ್ರವೊಂದಕ್ಕೆ ಯಂಗ್ ರೆಬಲ್ ಸ್ಟಾರ್ 100 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನುವ ಅಂದಾಜಿದೆ. ಸದ್ಯ 'ರಾಜಾ ಸಾಬ್' ಹಾಗೂ 'ಕಲ್ಕಿ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮುಂದೆ 'ಸಲಾರ್' ಸೀಕ್ವೆಲ್‌ನಲ್ಲಿ ನಟಿಸಬೇಕಿದೆ. ಸಂದೀಪ್ ರೆಡ್ಡಿ ವಂಗಾ ಜೊತೆಗೂ ಒಂದು ಸಿನಿಮಾದಲ್ಲಿ ನಟಿಸುವ ಸಾಧ್ಯತೆಯಿದೆ.

ಕಿರಣ್ ರಾಜ್ ಎಂಬ ವ್ಯಕ್ತಿ ಸಿನಿಮಾಗಳಲ್ಲಿ ಪ್ರಭಾಸ್ ಡ್ಯೂಪ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಸ್ಟಾರ್ ನಟರಿಗೆ ಡ್ಯೂಪ್‌ಗಳು ಸರ್ವೇ ಸಾಮಾನ್ಯ. ರಿಸ್ಕಿ ಸ್ಟಂಟ್ ಮಾಡುವಾಗ ಅಥವಾ ಪ್ರಭಾಸ್ ಅನುಪಸ್ಥಿತಿಯಲ್ಲಿ ಕಿರಣ್ ರಾಜ್ ಅವರನ್ನು ಬಳಸಿಕೊಂಡು ಸಿನಿಮಾ ಚಿತ್ರೀಕರಣ ನಡೆಸಲಾಗುತ್ತದೆ. ಹಿಂದಿನಿಂದ ಸೈಡ್‌ನಿಂದ ಸೆರೆಹಿಡಿಯುವ ಸನ್ನಿವೇಶಗಳಲ್ಲಿ ಈ ರೀತಿ ಡ್ಯೂಪ್‌ಗಳನ್ನು ಬಳಸಿಕೊಳ್ಳುತ್ತಾರೆ. ನಟರ ಎತ್ತರಕ್ಕೆ ತಕ್ಕಂತೆ ನೋಡಲು ಸಾಕಷ್ಟು ಹೋಲಿಕೆ ಇರುವಂತಹ ವ್ಯಕ್ತಿಗಳನ್ನು ಡ್ಯೂಪ್ ಆಗಿ ಬಳಸಿಕೊಳ್ಳಲಾಗುತ್ತದೆ.
ಸಾಮಾನ್ಯವಾಗಿ ನಿರ್ಮಾಪಕರೇ ಹೀರೊಗಳ ಡ್ಯೂಪ್‌ಗಳಿಗೆ ಸಂಭಾವನೆ ಕೊಡುತ್ತಾರೆ. ಆದರೆ ಪ್ರಭಾಸ್ ತಮ್ಮ ಡ್ಯೂಪ್ ಕಿರಣ್ ರಾಜ್‌ಗೆ ತಾವೇ ಸಂಭಾವನೆ ಕೊಡುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇದೇ ವಿಚಾರ ಈಗ ಟಾಲಿವುಡ್‌ನಲ್ಲಿ ಭಾರೀ ಚರ್ಚೆ ಆಗುತ್ತಿದೆ. ಪ್ರತಿ ಚಿತ್ರಕ್ಕೆ ಪ್ರಭಾಸ್ 30 ಲಕ್ಷ ರೂಪಾಯಿಯನ್ನು ಕಿರಣ್ ರಾಜ್‌ಗೆ ಕೊಡುತ್ತಾರೆ ಎನ್ನಲಾಗುತ್ತಿದೆ.
ಪ್ರಭಾಸ್ ಜೊತೆ ಸಾಕಷ್ಟು ಜನ ಸಿಬ್ಬಂದಿ ಕೆಲಸ ಮಾಡುತ್ತಾರೆ. ಅವರಿಗೆಲ್ಲಾ ತಮ್ಮ ಕೈಯಿಂದಲೇ ಸಂಬಳ ಕೊಡುತ್ತಾರಂತೆ. ಅದರಲ್ಲಿ ಕಿರಣ್ ರಾಜ್ ಕೂಡ ಸೇರಿದ್ದಾರೆ. ಕಿರಣ್ ರಾಜ್ 'ಸಲಾರ್' ಚಿತ್ರದಲ್ಲಿ ಕೂಡ ಕೆಲಸ ಮಾಡಿದ್ದಾರೆ.

ಸಿನಿಮಾ ನಟ ಡ್ಯೂಪ್‌ಗಳು ಅಷ್ಟಾಗಿ ಕ್ಯಾಮರಾಗಳ ಮುಂದೆ ಬರುವುದಿಲ್ಲ. ಆದರೆ 'ಬಾಹುಬಲಿ' ಸರಣಿ ಸಿನಿಮಾಗಳಲ್ಲಿ ಕಿರಣ್ ರಾಜ್, ಪ್ರಭಾಸ್ ಡ್ಯೂಪ್ ಆಗಿ ಕ್ಯಾಮರಾ ಮುಂದೆ ನಿಂತಿದ್ದ. ಆ ಬಳಿಕ ಭಾರೀ ಜನಪ್ರಿಯತೆ ಸಿಕ್ಕಿ ಒಂದಷ್ಟು ಸಂದರ್ಶನಗಳಲ್ಲಿ ಕೂಡ ಮಾತನಾಡಿದ್ದರು. ಚಿತ್ರವೊಂದಕ್ಕೆ ಪ್ರಭಾಸ್ 30 ಲಕ್ಷ ರೂ. ಕಿರಣ್ ರಾಜ್‌ಗೆ ಕೊಡ್ತಾರಾ? ಎಂದು ಕೆಲವರು ಹುಬ್ಬೇರಿಸಿದ್ದಾರೆ.
ಪ್ರಭಾಸ್ 30 ಲಕ್ಷ ಕೊಡುವುದೇ ನಿಜವಾಗಿದ್ದರೆ ಶಾಕಿಂಗ್ ಎಂದೇ ಹೇಳಬೇಕು. ಕೆಲ ಯುವ ನಟರಿಗೆ ಕೂಡ ಚಿತ್ರವೊಂದಕ್ಕೆ ಅಷ್ಟು ಸಂಭಾವನೆ ಸಿಗುವುದಿಲ್ಲ. ಸದ್ಯ ವೈರಲ್ ಆಗುತ್ತಿರುವ ಸುದ್ದಿ ಬಗ್ಗೆ ಭಾರೀ ಚರ್ಚೆ ನಡೀತಿದೆ.
ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್‌ರಂತಹ ಖ್ಯಾತನಾಮರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. 500 ಕೋಟಿ ರೂ.ಗೂ ಅಧಕ ಬಜೆಟ್‌ನಲ್ಲಿ ಈ ಸೈನ್ಸ್ ಫಿಕ್ಷನ್ ಸಿನಿಮಾ ನಿರ್ಮಾಣವಾಗುತ್ತಿದೆ. ಈ ಚಿತ್ರದಲ್ಲೂ ಕಿರಣ್ ರಾಜ್ ಕೆಲಸ ಮಾಡುತ್ತಿದ್ದಾರೆ.


Click it and Unblock the Notifications











