For Quick Alerts
  ALLOW NOTIFICATIONS  
  For Daily Alerts

  ಜಾಹೀರಾತಿನಲ್ಲಿ ನಟಿಸಲು ಅಲ್ಲು ಅರ್ಜುನ್ ಪಡೆವ ಸಂಭಾವನೆ ಎಷ್ಟು ಗೊತ್ತೆ?

  |

  ನಟ ಅಲ್ಲು ಅರ್ಜುನ್ ದಕ್ಷಿಣ ಭಾರತದ ಸ್ಟಾರ್ ನಟ ಮಾತ್ರವಲ್ಲ ಅವರು ಪ್ಯಾನ್ ಇಂಡಿಯಾ ನಟ ಸಹ ಹೌದು. 'ಪುಷ್ಪ' ಸಿನಿಮಾದಿಂದ ಅವರ ರೇಂಜ್ ಪ್ಯಾನ್ ಇಂಡಿಯಾ ಲೆವೆಲ್‌ಗೆ ಏರಿದೆ.

  ತೆಲುಗಿನ ಪಕ್ಕಾ ಹಿಟ್ ನಟರಲ್ಲಿ ಅಲ್ಲು ಅರ್ಜುನ್ ಸಹ ಒಬ್ಬರು. ಅವರ ಸಿನಿಮಾಗಳು ನಿರ್ಮಾಪಕನಿಗೆ ಹಾಗೂ ಪ್ರೇಕ್ಷಕನಿಗೆ ಮೋಸ ಮಾಡಿದ್ದು ಬಹಳ ವಿರಳ. ಬಹಳ ಎಚ್ಚರಿಕೆಯಿಂದ ಸಿನಿಮಾ ಆಯ್ದುಕೊಳ್ಳುವ ಅಲ್ಲು ಅರ್ಜುನ್ ಸಿನಿಮಾಕ್ಕಾಗಿ ಶ್ರಮಪಟ್ಟು ಕೆಲಸ ಮಾಡುತ್ತಾರೆ ಮತ್ತು ತಮ್ಮ ಶ್ರಮಕ್ಕೆ ತಕ್ಕಂತೆ ಭಾರಿ ತೂಕದ ಸಂಭಾವನೆಯನ್ನೂ ಪಡೆಯುತ್ತಾರೆ.

  'ಪುಷ್ಪ' ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ರಹಸ್ಯ ಮದುವೆಯಾಗಿರೋದು ನಿಜವೇ? 'ಪುಷ್ಪ' ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ರಹಸ್ಯ ಮದುವೆಯಾಗಿರೋದು ನಿಜವೇ?

  ಅಲ್ಲು ಅರ್ಜುನ್ ಜನಪ್ರಿಯತೆಯನ್ನು ಹಲವು ಬ್ರ್ಯಾಂಡ್‌ಗಳು ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ಬಳಸಿಕೊಳ್ಳುತ್ತಿವೆ. ಹಲವು ಜನಪ್ರಿಯ ಬ್ರ್ಯಾಂಡ್‌ಗಳ ಜಾಹೀರಾತಿನಲ್ಲಿ ಅಲ್ಲು ಅರ್ಜುನ್ ನಟಿಸುತ್ತಾರೆ. ಸಿನಿಮಾಕ್ಕೆ ಭಾರಿ ಸಂಭಾವನೆ ಪಡೆವ ಅಲ್ಲು ಅರ್ಜುನ್, ಜಾಹೀರಾತಿಗೂ ಸಹ ದೊಡ್ಡ ಮೊತ್ತದ ಸಂಭಾವನೆಯನ್ನೇ ಪಡೆಯುತ್ತಾರೆ.

  ಜಾಹೀರಾತಿಗೆ ಪಡೆವ ಸಂಭಾವನೆ ಎಷ್ಟು?

  ಜಾಹೀರಾತಿಗೆ ಪಡೆವ ಸಂಭಾವನೆ ಎಷ್ಟು?

  ಅಲ್ಲು ಅರ್ಜುನ್ ಹಲವು ಜಾಹೀರಾತುಗಳಲ್ಲಿ ನಟಿಸುತ್ತಿದ್ದಾರೆ. ಜಾಹೀರಾತಿನ ಅವಧಿ ಹಾಗೂ ಅದಕ್ಕೆ ಅಲ್ಲು ಅರ್ಜುನ್ ಪಡುವ ಶ್ರಮವನ್ನು ಆಧರಿಸಿ ಸಂಭಾವನೆ ನಿಗದಿ ಮಾಡಲಾಗುತ್ತದೆ. ಅಲ್ಲು ಅರ್ಜುನ್ ಒಂದು ಜಾಹೀರಾತಿನಲ್ಲಿ ನಟಿಸಲು 5 ರಿಂದ ಏಳು ಕೋಟಿ ಸಂಭಾವನೆ ಪಡೆಯುತ್ತಾರಂತೆ. ಇದು ಕಡಿಮೆ ಮೊತ್ತವಲ್ಲ. ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಜಾಹೀರಾತಿನಲ್ಲಿ ನಟಿಸುವ ನಟರಲ್ಲಿ ಅಲ್ಲು ಅರ್ಜುನ್ ಮೊದಲಿಗರು.

  ಅಲ್ಲು ಅರ್ಜುನ್ ಕಾಣಿಸಿಕೊಳ್ಳುವ ಜಾಹೀರಾತುಗಳು

  ಅಲ್ಲು ಅರ್ಜುನ್ ಕಾಣಿಸಿಕೊಳ್ಳುವ ಜಾಹೀರಾತುಗಳು

  'ಪುಷ್ಪ' ಸಿನಿಮಾದ ಬಳಿಕವಂತೂ ಅಲ್ಲು ಅರ್ಜುನ್ ತಾರಾ ಮೌಲ್ಯ ಇನ್ನಷ್ಟು ಹೆಚ್ಚಾಗಿದೆ. ಹಲವು ಅಂತರಾಷ್ಟ್ರೀಯ ಬ್ರ್ಯಾಂಡ್‌ಗಳ ಜಾಹೀರಾತಿನಲ್ಲಿ ಸಹ ಅಲ್ಲು ಅರ್ಜುನ್ ಕಾಣಿಸಿಕೊಳ್ಳುತ್ತಿದ್ದಾರೆ. 'ಜೊಮ್ಯಾಟೊ', 'ರ್ಯಾಪಿಡೊ', 'ರೆಡ್ ಬಸ್', ಕೋಲ್ಗೆಟ್ ಮ್ಯಾಕ್ಸ್ ಫ್ರೆಶ್, ಕೋಕ್‌, ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆ, ಸೆವೆನ್ ಅಪ್, ಫ್ರೂಟಿ, ಒಎಲ್‌ಎಕ್ಸ್, ಹೀರೋ ಹೋಂಡ, ಇನ್ನೂ ಹಲವು ಜಾಹೀರಾತುಗಳಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಳ್ಳುತ್ತಾರೆ. ಸ್ವಂತದ 'ಆಹಾ' ಒಟಿಟಿ ಜಾಹೀರಾತಿನಲ್ಲೂ ಅಲ್ಲು ಅರ್ಜುನ್ ಕಾಣಿಸಿಕೊಳ್ಳುತ್ತಾರೆ.

  ಸಿನಿಮಾಗಳಿಗೆ ಭಾರಿ ಸಂಭಾವನೆ

  ಸಿನಿಮಾಗಳಿಗೆ ಭಾರಿ ಸಂಭಾವನೆ

  vಸಿನಿಮಾಗಳ ವಿಷಯಕ್ಕೆ ಬಂದರೆ ಸಿನಿಮಾ ಒಂದಕ್ಕೆ ಸುಮಾರು 80 ರಿಂದ 100 ಕೋಟಿ ಸಂಭಾವನೆಯನ್ನು ಅಲ್ಲು ಅರ್ಜುನ್ ಪಡೆಯುತ್ತಾರೆ. ಕೆಲವೊಮ್ಮೆ ಸಿನಿಮಾಗಳಲ್ಲಿ ಶೇರ್‌ಗಳ ಲೆಕ್ಕದಲ್ಲೂ ಸಂಭಾವನೆ ಪಡೆಯುತ್ತಾರೆ. 'ಪುಷ್ಪ' ಸಿನಿಮಾದ ಬಳಿಕ ಅಲ್ಲು ಅರ್ಜುನ್ ಸಂಭಾವನೆ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ. 'ಪುಷ್ಪ 2' ಸಿನಿಮಾದ ಚಿತ್ರೀಕರಣದಲ್ಲಿ ಅಲ್ಲು ಅರ್ಜುನ್ ಪ್ರಸ್ತುತ ಭಾಗಿಯಾಗಿದ್ದಾರೆ. ಅದಾದ ಬಳಿಕ ಹಿಂದಿಯಲ್ಲಿ ಸಂಜಯ್ ಲೀಲಾ ಬನ್ಸಾಲಿಯ ಸಿನಿಮಾದಲ್ಲಿ ಅಲ್ಲು ನಟಿಸಲಿದ್ದಾರೆ ಎನ್ನಲಾಗುತ್ತಿದೆ.

  ಮಹೇಶ್ ಬಾಬು ಸಹ ಜಾಹೀರಾತು ಕಿಂಗ್

  ಮಹೇಶ್ ಬಾಬು ಸಹ ಜಾಹೀರಾತು ಕಿಂಗ್

  ತೆಲುಗಿನಲ್ಲಿ ಮಹೇಶ್ ಬಾಬು ಸಹ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅಲ್ಲು ಅರ್ಜುನ್ ಅವರಷ್ಟೆ ಮಹೇಶ್ ಬಾಬು ಸಹ ದುಬಾರಿ ಸಂಭಾವನೆಯನ್ನು ಜಾಹೀರಾತಿಗೆ ಪಡೆಯುತ್ತಾರೆ. ತಂಬಾಕು ಜಾಹೀರಾತು ಸೇರಿದಂತೆ, ಮೌಂಟೆನ್ ಡೀವ್, ಸಂತೂರ್ ಸೋಪು, ಟಾಟಾ ಸ್ಕೈ, ಗೋಲ್ಡ್ ವಿನ್ನರ್ ಅಡುಗೆ ಎಣ್ಣೆ, ಜಾಯಲುಕಾಸ್ ಆಭರಣ, ಥಮ್ಸ್‌ ಅಪ್ ಇನ್ನೂ ಹಲವು ಬ್ರ್ಯಾಂಡ್‌ಗಳ ಜಾಹೀರಾತಿನಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳುತ್ತಾರೆ.

  English summary
  How Much remuneration will Allu Arjun take for acting in advertisement. He charges nearly 5 crore to 7.50 crore rs.
  Tuesday, September 6, 2022, 8:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X