'ಕೆಜಿಎಫ್ 2' ಸಿನಿಮಾ ನಟರ ಸಂಭಾವನೆ ಎಷ್ಟು? ಯಾರಿಗೆ ಹೆಚ್ಚು? ಯಾರಿಗೆ ಕಡಿಮೆ?
'ಕೆಜಿಎಫ್ 2' ಸಿನಿಮಾ ಬಹುದೊಡ್ಡ ಹಿಟ್ ಆಗಿದೆ. ಕೆಲವೇ ದಿನಗಳಲ್ಲಿ 1000 ಕೋಟಿ ಕ್ಲಬ್ ಅನ್ನು ಸಿನಿಮಾ ಸೇರಲಿದೆ.
ಸುಮಾರು 300 ಕೋಟಿ ಬಜೆಟ್‌ನ ಈ ಸಿನಿಮಾ ಬಜೆಟ್‌ನ ಮೂರರಷ್ಟು ಹಣವನ್ನು ಕೇವಲ ಚಿತ್ರಮಂದಿರಗಳಿಂದಲೇ ದುಡಿದಾಗಿದೆ. ಟಿವಿ ರೈಟ್ಸ್, ಒಟಿಟಿ ರೈಟ್ಸ್, ಆಡಿಯೋ ರೈಟ್ಸ್ ಇತರೆಗಳನ್ನು ಸೇರಿಸಿದರೆ ಲಾಭದ ಮೊತ್ತ ಏರುತ್ತಲೇ ಸಾಗುತ್ತದೆ.
ಸುಮಾರು ನಾಲ್ಕು ವರ್ಷಗಳ ಕಾಲ 'ಕೆಜಿಎಫ್ 2' ಸಿನಿಮಾಕ್ಕಾಗಿ ಸಿನಿಮಾದ ನಟರು, ತಂತ್ರಜ್ಞರು ಕೆಲಸ ಮಾಡಿದ್ದಾರೆ. ಸಿನಿಮಾ ಅದ್ಧೂರಿಯಾಗಿ ಮೂಡಿ ಬರಲು ರಕ್ತ, ಬೆವರು ಬಸಿದಿದ್ದಾರೆ. ಹಾಗಿದ್ದರೆ ಈ ಸಿನಿಮಾದಲ್ಲಿ ನಟಿಸಿದ ನಟರಿಗೆ, ತಂತ್ರಜ್ಞರಿಗೆ ಎಷ್ಟು ಸಂಭಾವನೆ ದೊರೆಯಿತು? ಇಲ್ಲಿದೆ ಅಂದಾಜು ಮಾಹಿತಿ...
Recommended Video


ರಾಕಿಭಾಯ್ ಪಡೆದ ಸಂಭಾವನೆ ಎಷ್ಟು?
'ಕೆಜಿಎಫ್ 2' ಸಿನಿಮಾದ ಸ್ಟಾರ್ ಯಶ್. 'ಕೆಜಿಎಫ್' ಸಿನಿಮಾ ಸರಣಿಗಾಗಿ ಯಶ್ ತಮ್ಮ ಜೀವನದ ಎಂಟು ವರ್ಷಗಳನ್ನು ನೀಡಿದ್ದಾರೆ. ಸಂಭಾವನೆ ವಿಷಯದಲ್ಲಿ 'ಕೆಜಿಎಫ್ 2' ತಂಡದಲ್ಲಿ ಅತಿ ಹೆಚ್ಚು ನೀಡಲಾಗಿರುವುದು ಯಶ್‌ಗೆ ಎನ್ನಲಾಗುತ್ತದೆ. 'ಕೆಜಿಎಫ್ 2' ಸಿನಿಮಾಕ್ಕಾಗಿ ಯಶ್‌ಗೆ ಬರೋಬ್ಬರಿ 35 ಕೋಟಿ ರುಪಾಯಿ ಸಂಭಾವನೆ ಸಿಕ್ಕಿದೆ ಎನ್ನುತ್ತವೆ ಮೂಲಗಳು.

ಸಂಜಯ್ ದತ್‌ಗೂ ದೊಡ್ಡ ಮೊತ್ತ
ನಟ ಸಂಜಯ್ ದತ್‌ರ ಅಧೀರ ಪಾತ್ರ 'ಕೆಜಿಎಫ್ 2' ಸಿನಿಮಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಸಂಜಯ್ ದತ್, ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡ ದಿನಗಳು ಕಡಿಮೆ ಆದರೆ ಸಂಭಾವನೆ ಮಾತ್ರ ದೊಡ್ಡ ಮೊತ್ತವನ್ನೇ ತೆಗೆದುಕೊಂಡು ಹೋಗಿದ್ದಾರೆ. ಸಂಜಯ್ ದತ್‌ಗೆ ಬರೋಬ್ಬರಿ 9 ಕೋಟಿ ರುಪಾಯಿಗಳನ್ನು ನಿರ್ಮಾಣ ಸಂಸ್ಥೆ ನೀಡಿದೆ ಎನ್ನಲಾಗುತ್ತಿದೆ.

ರವೀನಾ ಟಂಡನ್‌ಗೆ ಪಡೆದ ಸಂಭಾವನೆ ಎಷ್ಟು?
ರವೀನಾ ಟಂಡನ್ ನಿರ್ವಹಿಸಿರುವ ರಮಿಕಾ ಸೇನ್ ಪಾತ್ರ ಸಿನಿಮಾದಲ್ಲಿ ಹೆಚ್ಚು ಹೊತ್ತೇನು ಕಾಣಿಸಿಕೊಳ್ಳುವುದಿಲ್ಲ, ಆದರೆ ಪಾತ್ರ ಮಾತ್ರ ಬಹಳ ಫವರ್‌ಫುಲ್. ರವೀನಾ ಸಹ ದೊಡ್ಡ ಮೊತ್ತದ ಸಂಭಾವನೆಯನ್ನೇ ಪಡೆದಿದ್ದಾರೆ. ರವೀನಾ ಟಂಡನ್‌ಗೆ 1.5 ರಿಂದ 2 ಕೋಟಿ ಸಂಭಾವನೆ ನೀಡಲಾಗಿದೆಯಂತೆ.

ನಾಯಕಿ ಶ್ರೀನಿಧಿ ಸಂಭಾವನೆ ಎಷ್ಟು?
ನಾಯಕ ನಟಿ ಶ್ರೀನಿಧಿ ಶೆಟ್ಟಿ ಅವರಿಗೆ 'ಕೆಜಿಎಫ್ 2' ನಲ್ಲಿ ತುಸು ಹೆಚ್ಚು ಸ್ಕ್ರೀನ್ ಟೈಮ್ ಇದೆ. ಅಲ್ಲದೆ, 'ಕೆಜಿಎಫ್' ಸಿನಿಮಾ ಸರಣಿಯ ಹೊರತಾಗಿ ಕೇವಲ ಒಂದು ಸಿನಿಮಾದಲ್ಲಷ್ಟೆ ಈ ನಟಿ ನಟಿಸಿದ್ದಾರೆ. ಹಾಗಾಗಿ ಇವರಿಗೂ ಸುಮಾರು 2 ಕೋಟಿ ಸಂಭಾವನೆಯನ್ನು ಚಿತ್ರತಂಡ ನೀಡಿದೆ ಎಂಬ ಮಾತಿದೆ.

ನಿರ್ದೇಶಕ ಪ್ರಶಾಂತ್ ನೀಲ್ ಪಡೆದದ್ದೆಷ್ಟು?
'ಕೆಜಿಎಫ್' ಸಿನಿಮಾ ಸರಣಿಯ ದೊಡ್ಡ ಶಿಫ್‌ನ ಕ್ಯಾಪ್ಟನ್, ನಿರ್ದೇಶಕ ಪ್ರಶಾಂತ್ ನೀಲ್ ಸಹ ದೊಡ್ಡ ಮೊತ್ತದ ಸಂಭಾವನೆಯನ್ನು ಈ ಸಿನಿಮಾಕ್ಕಾಗಿ ಪಡೆದಿದ್ದಾರೆ. 'ಕೆಜಿಎಫ್ 2' ಸಿನಿಮಾಕ್ಕೆ ಪ್ರಶಾಂತ್ ನೀಲ್ ಬರೋಬ್ಬರಿ 15 ಕೋಟಿ ರುಪಾಯಿಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ನಿರ್ದೇಶಕರೊಬ್ಬರು ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿರುವುದು ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲು ಎನಿಸುತ್ತದೆ.

ಪ್ರಕಾಶ್ ರೈ, ಮಾಳವಿಕಾ ಅವಿನಾಶ್?
ನಟ ಪ್ರಕಾಶ್ ರೈ ಹಾಗೂ ಮಾಳವಿಕಾ ಅವಿನಾಶ್ ಪಾತ್ರಗಳು ಸಹ ಸಿನಿಮಾದಲ್ಲಿ ಬಹಳ ಪ್ರಾಮುಖ್ಯತೆ ಉಳ್ಳ ಪಾತ್ರಗಳು. ಪ್ರಕಾಶ್ ರೈ ಕೆಲವೇ ದಿನಗಳಷ್ಟೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು, ಅವರಿಗೆ 80 ಲಕ್ಷದಿಂದ ಒಂದು ಕೋಟಿ, ಮಾಳವಿಕಾ ಅವಿನಾಶ್‌ಗೆ 50 ಲಕ್ಷ ರುಪಾಯಿ ಸಂಭಾವನೆ ನೀಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಮೊದಲ ಭಾಗದಲ್ಲಿ ಅನಂತ್‌ನಾಗ್‌ಗೆ 50 ಲಕ್ಷ ಸಂಭಾವನೆ ನೀಡಲಾಗಿತ್ತಂತೆ!


Click it and Unblock the Notifications











