For Quick Alerts
  ALLOW NOTIFICATIONS  
  For Daily Alerts

  'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿಗೆ ಸಮಂತಾ ಪಡೆದ ಸಂಭಾವನೆ ಎಷ್ಟು?

  |

  'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿ ಬಿಡುಗಡೆ ಆದಾಗಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಅಕ್ಕಿನೇನಿ ಮೇಲೆ ಪ್ರಶಂಸೆಯ ಸುರಿಮಳೆ ಸುರಿಸಲಾಗುತ್ತಿದೆ. ಅದ್ಭುತವಾಗಿ ನಟಿಸಿರುವ ಸಮಂತಾ ಪ್ರಶಂಸೆಗೆ ಅರ್ಹರೂ ಸಹ.

  'ರಾಜಿ' ಪಾತ್ರದಲ್ಲಿ ಮಿಂಚಿರುವ ಸಮಂತಾ ವೆಬ್ ಸರಣಿಯಲ್ಲಿ ಅದ್ಭುತ ನಟನೆ ನೀಡುವ ಜೊತೆಗೆ ಅದ್ಭುತ ಸ್ಟಂಟ್‌ಗಳನ್ನು ಸಹ ಮಾಡಿದ್ದಾರೆ. ರಾಜಿ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿದ್ದ ಸಮಂತಾ ವಿದೇಶಿ ತರಬೇತುರಾರಿಂದ ಸ್ಟಂಟ್‌ಗಳಿಗಾಗಿ ವಿಶೇಷ ತರಬೇತಿಯನ್ನು ಸಹ ಪಡೆದಿದ್ದರು.

  ವೆಬ್ ಸರಣಿಗೆ ಅತಿಯಾದ ಶ್ರಮ ಹಾಕಿದ್ದ ನಟಿ ಸಮಂತಾ ಇದಕ್ಕಾಗಿ ಪಡೆದ ಸಂಭಾವನೆ ಕಡಿಮೆಯೇನಲ್ಲ. ಹೆಚ್ಚು ಸಮಯದ ಕಾಲವೇ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ಸಮಂತಾ ಹೆಚ್ಚಾಗಿಯೇ ಸಂಭಾವನೆ ಪಡೆದುಕೊಂಡಿದ್ದಾರೆ. ಆದರೆ ಪಡೆದ ಸಂಭಾವನೆಗೆ ಮೋಸ ಮಾಡಿಲ್ಲ ಸಮಂತಾ. ಅದ್ಭುತವಾಗಿ ನಟಿಸಿ ವೆಬ್ ಸರಣಿಯನ್ನು ತಮ್ಮ ಹೆಗಲ ಮೇಲೆ ಹೊತ್ತು ದಡ ಮುಟ್ಟಿಸಿದ್ದಾರೆ.

  ದೊಡ್ಡ ಮೊತ್ತದ ಸಂಭಾವನೆ ಪಡೆದಿರುವ ಸಮಂತಾ

  ದೊಡ್ಡ ಮೊತ್ತದ ಸಂಭಾವನೆ ಪಡೆದಿರುವ ಸಮಂತಾ

  ನಟಿ ಸಮಂತಾಗೆ ಈ ವೆಬ್ ಸರಣಿಗೆ ದೊಡ್ಡ ಮೊತ್ತದ ಸಂಭಾವನೆಯೇ ದೊರೆತಿದೆ. ನಾಯಕ ಮನೋಜ್ ಭಾಜಪೇಯಿಗೆ ಸರಿಸಮನಾದ ಪಾತ್ರ ಹಾಗೂ ಸ್ಕ್ರೀನ್ ಟೈಮ್ ಅನ್ನು ಸಮಂತಾ ಹೊಂದಿದ್ದು ಮನೋಜ್ ಭಾಜಪೇಯಿಗಿಂತಲೂ ಹೆಚ್ಚೇನು ಕಡಿಮೆ ಇಲ್ಲದ ಸಂಭಾವನೆ ಪಡೆದಿದ್ದಾರೆ.

  ಸಮಂತಾ ಪಡೆದ ಸಂಭಾವನೆ ಎಷ್ಟು?

  ಸಮಂತಾ ಪಡೆದ ಸಂಭಾವನೆ ಎಷ್ಟು?

  ನಟಿ ಸಮಂತಾಗೆ ಸುಮಾರು 6 ಕೋಟಿ ಸಂಭಾವನೆ ದಿ ಫ್ಯಾಮಿಲಿ ಮ್ಯಾನ್ 2 ಗಾಗಿ ನೀಡಲಾಗಿದೆ ಎನ್ನಲಾಗುತ್ತಿದೆ. ಇನ್ನು ಮನೋಜ್ ಬಾಜಪೇಯಿಗೆ 8 ಕೋಟಿ ಸಂಭಾವನೆ ನೀಡಿರುವ ಬಗ್ಗೆ ಕೆಲವು ವೆಬ್‌ಸೈಟ್‌ಗಳು ವರದಿ ಮಾಡಿವೆ. 'ಫ್ಯಾಮಿಲಿ ಪ್ಯಾನ್' ಸರಣಿ ಹಿಟ್ ಜನಪ್ರಿಯವಾಗುವಲ್ಲಿ ಮನೋಜ್ ಬಾಜಪೇಯಿ ಪಾತ್ರ ದೊಡ್ಡದಿದೆ.

  ಅಳುಕಿನಿಂದಲೇ ಕತೆ ಹೇಳಿದ್ದ ನಿರ್ದೇಶಕರು

  ಅಳುಕಿನಿಂದಲೇ ಕತೆ ಹೇಳಿದ್ದ ನಿರ್ದೇಶಕರು

  'ದಿ ಫ್ಯಾಮಿಲಿ ಮ್ಯಾನ್ 2' ಸರಣಿ ನಿರ್ದೇಶಿಸಿರುವ ರಾಜ್ ಮತ್ತು ಡಿಕೆ ವಿಲನ್ ಪಾತ್ರಕ್ಕೆ ಸಮಂತಾ ಒಪ್ಪುತ್ತಾರೋ ಇಲ್ಲವೋ ಎಂಬ ಅಳುಕಿನಿಂದ ಸಮಂತಾ ಅವರಿಗೆ ಕತೆ ಹೇಳಿದರಂತೆ. ಆದರೆ ಸಮಂತಾ ಸಹ ಅಂಥಹುದೇ ಪಾತ್ರ ಮಾಡಲು ಹುಡುಕಾಡುತ್ತಿದ್ದರು ಹಾಗಾಗಿ ಹೆಚ್ಚಿನ ಆಲೋಚನೆಗಳಿಲ್ಲದೆ ಸಮಂತಾ ಒಪ್ಪಿಕೊಂಡರು.

  Darshan ಕೊಟ್ಟ ಕರೆಗೆ ಭಾರಿ ಜನಸ್ಪಂದನೆ,ಸಾಕ್ಷಿ ಸಮೇತ ತೋರಿಸಿದ‌ ಡಿ ಬಾಸ್ | Filmibeat Kannada
  ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ

  ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ

  ಇನ್ನು ನಟಿ ಸಮಂತಾ ತೆಲುಗಿನ ದುಬಾರಿ ಹಾಗೂ ಬ್ಯುಸಿಯೆಸ್ಟ್ ನಟಿಯರಲ್ಲಿ ಒಬ್ಬರು. ಬಬ್ಲಿ ಪಾತ್ರಗಳ ಜೊತೆಗೆ ಪ್ರಯೋಗಾತ್ಮಕ, ಸಾಮಾಜಿಕ ಸಂದೇಶವುಳ್ಳ, ಮಹಿಳಾ ಪ್ರಧಾನ ಸಿನಿಮಾಗಳಲ್ಲಿಯೂ ಸಮಂತಾ ಕಾಣಿಸಿಕೊಂಡಿದ್ದಾರೆ. ಗುಣಶೇಖರ್ ನಿರ್ದೇಶಿಸುತ್ತಿರುವ 'ಶಕುಂತಲಮ್', ತಮಿಳಿನ 'ಕಾತುವಾಕುಲ್ ರೆಂಡು ಕಾದಲ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  English summary
  How much remuneration did Samantha Akkineni gor fpr The Family Man 2. How much did Manoj Bajpai got.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X