ಆಮಿರ್ ಖಾನ್ ಜೊತೆ ನಟಿಸಲು ನಾಗಚೈತನ್ಯ ಪಡೆದ ಸಂಭಾವನೆ ಎಷ್ಟು?

ಸಮಂತಾ ಜೊತೆಗಿನ ವಿಚ್ಛೇಧನದ ಬಳಿಕ ನಾಗ ಚೈತನ್ಯ ವೃತ್ತಿ ಜೀವನದ ಗ್ರಾಫಿ ಪ್ರಪಾತದತ್ತ ಜಾರುತ್ತಿದೆ ಎನ್ನಲಾಗುತ್ತಿದೆ. ಸಮಂತಾ ಜೊತೆಗಿನ ವಿಚ್ಚೇಧನದ ಬಳಿಕ ಬಿಡುಗಡೆ ಆದ ಅವರ ಎರಡು ಸಿನಿಮಾಗಳು ಧಾರುಣ ಸೋಲು ಕಂಡಿವೆ.

ನಾಗ ಚೈತನ್ಯ ವೃತ್ತಿ ಜೀವನ ಕುಸಿದತ್ತ ಸಾಗುತ್ತಿದೆ ಎನ್ನಲಾಗಿತ್ತು ಆದರೆ ಈಗ ಬಂದಿರುವ ಸುದ್ದಿಯೊಂದು ಬೇರೆಯದ್ದೇ ಕತೆ ಹೇಳುತ್ತಿದೆ. ನಾಗ ಚೈತನ್ಯ ಸಿನಿಮಾಗಳು ಸತತ ಸೋಲು ಕಂಡಿದ್ದರೂ ಸಹ ನಾಗ ಚೈತನ್ಯರ ಸಂಭಾವನೆ ಮಾತ್ರ ಏರುಗತಿಯಲ್ಲೇ ಇದೆ ಎನ್ನಲಾಗುತ್ತಿದೆ.

ನಾಗ ಚೈತನ್ಯ, ನಟ ಆಮಿರ್ ಖಾನ್ ಜೊತೆಗೆ 'ಲಾಲ್ ಸಿಂಗ್ ಚಡ್ಡ' ಹಿಂದಿ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾದಲ್ಲಿ ಅವರದ್ದು ಎಕ್ಸ್‌ಟೆಂಡೆಡ್ ಅತಿಥಿ ಪಾತ್ರ ಎನ್ನಲಾಗಿದೆ. ಎಂದರೆ ಬಹಳ ಚಿಕ್ಕದ್ದು ಅಲ್ಲ ಬಹಳ ದೊಡ್ಡದೂ ಅಲ್ಲದ ಪಾತ್ರ ಅವರದ್ದು. ನಾಗ ಚೈತನ್ಯ ಅವರ ಮೊದಲ ಹಿಂದಿ ಸಿನಿಮಾಕ್ಕಾಗಿ ಪಡೆದಿರುವ ಸಂಭಾವನೆ ಹುಬ್ಬೇರಿಸುವಂತಿದೆ.

ನಾಗಚೈತನ್ಯ ಪಡೆದ ಸಂಭಾವನೆ ಎಷ್ಟು?

ನಾಗಚೈತನ್ಯ ಪಡೆದ ಸಂಭಾವನೆ ಎಷ್ಟು?

'ಲಾಲ್ ಸಿಂಗ್ ಚಡ್ಡ' ಸಿನಿಮಾದ ಎಕ್ಸ್‌ಟೆಂಡೆಡ್ ಅತಿಥಿ ಪಾತ್ರಕ್ಕೆ ನಾಗ ಚೈತನ್ಯ ಪಡೆದಿರುವ ಸಂಭಾವನೆ ಬರೋಬ್ಬರಿ ಐದು ಕೋಟಿ ಎನ್ನಲಾಗುತ್ತಿದೆ. ಇದು ಕಡಿಮೆ ಸಂಭಾವನೆಯಲ್ಲ. ತೆಲುಗು ಸಿನಿಮಾಗಳಲ್ಲಿ ಹೀರೋ ಆಗಿ ಚೈತನ್ಯ ಪಡೆವ ಸಂಭಾವನೆಗೆ ಸಮವಾದ ಹಣವನ್ನು ಅವರು ಅತಿಥಿ ಪಾತ್ರಕ್ಕಾಗಿ ಪಡೆದಿದ್ದಾರೆ ನಾಗ ಚೈತನ್ಯ. ತೆಲುಗಿನ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಲು ಐದರಿಂದ ಹತ್ತು ಕೋಟಿಯ ನಡುವೆ ಸಂಭಾವನೆ ಪಡೆಯುತ್ತಾರಂತೆ ನಾಗ ಚೈತನ್ಯ.

ತೆಲುಗಿನ ಆರಕ್ಕೇರದ-ಮೂರಕ್ಕಿಳಿಯದ ನಟ

ತೆಲುಗಿನ ಆರಕ್ಕೇರದ-ಮೂರಕ್ಕಿಳಿಯದ ನಟ

ನಾಗ ಚೈತನ್ಯ ತೆಲುಗು ಚಿತ್ರರಂಗದ ಆವರೇಜ್ ನಾಯಕ ನಟ. ಆರಕ್ಕೇರದ ಆದರೆ ಮೂರಕ್ಕೆ ಇಳಿಯದ ನಟರಲ್ಲಿ ನಾಗ ಚೈತನ್ಯ ಸಹ ಒಬ್ಬರು. ನಟಿ ನಿತಿನ್, ಗೋಪಿಚಂದ್ ಇನ್ನಿತರ ತೆಲುಗು ಕೆಲವು ನಟರು ಇದೇ ಗುಂಪಿಗೆ ಸೇರುತ್ತಾರೆ. ಆದರೆ ಆರಕ್ಕೇರದ-ಮೂರಕ್ಕಿಳಿಯದ ನಾಯಕರ ಗುಂಪಿನಲ್ಲಿ ನಾಗ ಚತನ್ಯ ತುಸು ಟಾಪ್‌ನಲ್ಲಿಯೇ ಇದ್ದಾರೆ. ಈ ಪಟ್ಟಿಯಲ್ಲಿರುವ ಇತರರಿಗಿಂತಲೂ ನಾಗ ಚೈತನ್ಯ ತುಸು ವಾಸಿ.

ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ನಟನೆ!

ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ನಟನೆ!

ಇದೀಗ 'ಲಾಲ್ ಸಿಂಗ್ ಚಡ್ಡ' ಸಿನಿಮಾದಲ್ಲಿ ನಟಿಸಿರುವ ನಾಗ ಚೈತನ್ಯ ಬಾಲಿವುಡ್‌ನ ಜನಪ್ರಿಯ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೆ ಸಂಜಯ್ ಲೀಲಾ ಬನ್ಸಾಲಿ ಕಚೇರಿಗೆ ನಾಗ ಚೈತನ್ಯ ಹೋಗಿದ್ದರು. ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ''ನೋಡೋಣ ಏನಾಗುತ್ತದೆಯೋ? ಒಳ್ಳೆಯದ್ದೇ ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇನೆ'' ಎಂದಿದ್ದರು. ಜೊತೆಗೆ ತೆಲುಗಿನಲ್ಲಿಯೂ ಕೆಲವು ಸಿನಿಮಾ ಹಾಗೂ ಒಂದು ವೆಬ್ ಸರಣಿಗೆ ಸಹಿ ಹಾಕಿದ್ದಾರೆ.

ಶೋಯು ಸಂಸ್ಥೆ ಪ್ರಾರಂಭಿಸಿರುವ ನಾಗ ಚೈತನ್ಯ

ಶೋಯು ಸಂಸ್ಥೆ ಪ್ರಾರಂಭಿಸಿರುವ ನಾಗ ಚೈತನ್ಯ

ಇವುಗಳ ಜೊತೆಗೆ ತಮ್ಮಿಷ್ಟದ ಉದ್ಯಮವೊಂದಕ್ಕೆ ಸಹ ನಾಗ ಚೈತನ್ಯ ಕೈಯಿಟ್ಟಿದ್ದಾರೆ. ಮೊದಲ ಬಾರಿಗೆ ಕ್ಲೌಡ್ ಕಿಚನ್ ಅನ್ನು ನಾಗ ಚೈತನ್ಯ ಪ್ರಾರಂಭಿಸಿದ್ದಾರೆ. ಏಷ್ಯನ್ ಫ್ಯೂಷನ್ ಆಹಾರವನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ 'ಶೋಯು' ಹೆಸರಿನ ಕ್ಲೌಡ್ ಕಿಚನ್ ಆರಂಭಿಸಿದ್ದಾರೆ. ಏಷಿಯಾದ ವಿವಿಧ ಜನಪ್ರಿಯ ಆಹಾರಗಳನ್ನು ನಾಗ ಚೈತನ್ಯ ಸಂಸ್ಥೆ ಡೆಲಿವರಿ ನೀಡುತ್ತಿದೆ.

More from Filmibeat

English summary
How much remuneration did Naga Chaithanya took for Laal Singh Chaddha movie. Naga Chaitany acted along with Aamir Khan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X