For Quick Alerts
  ALLOW NOTIFICATIONS  
  For Daily Alerts

  ಹೃತಿಕ್ ರೋಷನ್ ತನ್ನ ಪ್ರೇಯಸಿಗೆ ಕೊಟ್ಟಿದ್ದ ದುಬಾರಿ ಉಡುಗೊರೆಯ ಬೆಲೆ ಎಷ್ಟು? ಆ ಗಿಫ್ಟ್ ಏನು ಗೊತ್ತೆ?

  |

  ಬಾಲಿವುಡ್‌ನಲ್ಲಿ ಹೃತಿಕ್ ರೋಷನ್ ಹಾಗೂ ಗರ್ಲ್‌ಫ್ರೆಂಡ್ ಬಗ್ಗೆ ಚರ್ಚೆ. ಹಲವು ವರ್ಷಗಳಿಂದ ಇಬ್ಬರೂ ಲಿವ್ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರು ಎಂದು ಬಾಲಿವುಡ್ ಹೇಳುತ್ತಿದೆ. ರಂಗಭೂಮಿ ಹಾಗೂ ಸಿನಿಮಾ ನಟಿ ಸಬಾ ಆಜಾದ್ ಪ್ರೀತಿಗೆ ಹೃತಿಕ್ ರೋಷನ್ ಮರುಳಾಗಿದ್ದು ಹೇಗೆ? ಎಂಬ ಪ್ರಶ್ನೆಗೆ ಬಾಲಿವುಡ್‌ನಲ್ಲಿ ರಂಗು ರಂಗಿನ ಉತ್ತರಗಳು ಹೊರಹೊಮ್ಮುತ್ತಿವೆ. ಹೃತಿಕ್ ರೋಷನ್ ಲವ್ ಸ್ಟೋರಿ ಸದ್ಯ ಬಾಲಿವುಡ್‌ನ ಹಾಟ್ ಟಾಪಿಕ್ ಆಗಿದೆ. ಇದರ ಜೊತೆನೇ ತನ್ನ ಗರ್ಲ್‌ಫ್ರೆಂಡ್‌ಗೆ ಕೊಟ್ಟಿದ್ದ ದುಬಾರಿ ಉಡುಗೊರೆ ಬಗ್ಗೆನೇ ಚರ್ಚೆಯಾಗುತ್ತಿದೆ. ಆದರೆ, ಇಲ್ಲೊಂದು ಚಿಕ್ಕ ಟ್ವಿಸ್ಟ್ ಇದೆ.

  ಜನವರಿ 28ರ ರಾತ್ರಿ ಹೃತಿಕ್ ರೋಷನ್ ನಟಿ ಸಬಾ ಆಜಾದ್ ಜೊತೆ ಡಿನ್ನರ್‌ಗೆ ಹೋಗಿದ್ದರು. ಇನ್ನೇನು ಊಟ ಮುಗಿಸಿ ಹೊರಬರಬೇಕು ಅನ್ನುವಷ್ಟರಲ್ಲಿಯೇ ಕ್ಯಾಮರಾ ಕಣ್ಣಿಗೆ ಬಿದ್ದಿದ್ದರು. ಹೃತಿಕ್ ರೋಷನ್ ಹಾಗೂ ಸಬಾ ಆಜಾದ್ ಕೈ ಕೈ ಹಿಡಿದು ಮುಂಬೈ ರೆಸ್ಟೋರೆಂಟ್‌ನಿಂದ ಹೊರಬಂದ್ಮೇಲೆ ಈ ಜೋಡಿ ಪ್ರೀತಿಯಲ್ಲಿ ಬಿದ್ದಿರುವುದು ಖಾತ್ರಿಯಾಗಿತ್ತು. ಈ ಸುದ್ದಿ ಬಿಸಿಬಿಸಿ ಚರ್ಚೆಯಲ್ಲಿರುವಾಗಲೇ ಹೃತಿಕ್ ಮತ್ತೊಬ್ಬ ಗರ್ಲ್‌ಫ್ರೆಂಡ್‌ಗೆ ಕೊಟ್ಟಿದ್ದ ಐಶಾರಾಮಿ ಉಡುಗೊರೆ ಬಗ್ಗೆನೂ ಚರ್ಚೆಯಾಗುತ್ತಿದೆ.

  ಬಾರ್ಬರಾಗೆ ಹೃತಿಕ್ ವ್ಯಾನಿಟಿ ವ್ಯಾನ್ ಗಿಫ್ಟ್

  ಬಾರ್ಬರಾಗೆ ಹೃತಿಕ್ ವ್ಯಾನಿಟಿ ವ್ಯಾನ್ ಗಿಫ್ಟ್

  ಹೌದು.. ಇದು ಹೃತಿಕ್ ರೋಷನ್ ಹಾಲಿ ಪ್ರೇಯಸಿಯ ಸ್ಟೋರಿ ಅಲ್ಲ. ಮಾಜಿ ಪ್ರೇಯಸಿ ಬಾರ್ಬರಾ ಮೋರಿಯ ಕಥೆ. 2010ರಲ್ಲಿ ಹೃತಿಕ್ ರೋಷನ್ 'ಕೈಟ್ಸ್' ಸಿನಿಮಾದಲ್ಲಿ ನಟಿಸುತ್ತಿದ್ದರು. ಈ ವೇಳೆ ಹೃತಿಕ್ ರೋಷನ್ ಸಿನಿಮಾಗಾಗಿ ಮೆಕ್ಸಿಕೊ ನಟಿ ಬಾರ್ಬರಾ ಮೋರಿಯನ್ನು ಕರೆದುಕೊಂಡು ಬಂದಿದ್ದರು. ಸಿನಿಮಾ ಶೂಟಿಂಗ್ ವೇಳೆ ಇಬ್ಬರಿಗೂ ಲವ್ ಆಗಿತ್ತು ಅಂತ ಅಂದಿನಿಂದ ಬಾಲಿವುಡ್ ಮಾತಾಡಿಕೊಳ್ಳುತ್ತಿದೆ. ಈಗ ಹೊಸ ಸುದ್ದಿಯೊಂದು ಹರಿದಾಡುತ್ತಿದ್ದು, ಹೃತಿಕ್ ನಟಿ ಬಾರ್ಬರಾ ಮೋರಿಗೆ ವ್ಯಾನಿಟಿ ವ್ಯಾನ್ ಅನ್ನು ಉಡುಗೊರೆಯಾಗಿ ನೀಡಿದ್ದರಂತೆ.

  ಬಾರ್ಬರಾಗೆ ನೀಡಿದ ವ್ಯಾನಿಟಿ ವ್ಯಾನ್ ಬೆಲೆ ಎಷ್ಟು?

  ಬಾರ್ಬರಾಗೆ ನೀಡಿದ ವ್ಯಾನಿಟಿ ವ್ಯಾನ್ ಬೆಲೆ ಎಷ್ಟು?

  ಮೆಕ್ಸಿಕೋ ನಟಿ ಬಾರ್ಬರಾ ಮೋರಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಮೊದಲ ಸಿನಿಮಾ ಆಗಿತ್ತು. ಹೀಗಾಗಿ ಮೆಕ್ಸಿಕೋ ನಟಿಯಲ್ಲಿ ಅದ್ಧೂರಿಯಾಗಿ ಸ್ವಾಗತ ಮಾಡಲು ಹೃತಿಕ್ ರೊಷನ್ ದುಬಾರಿ ಉಡುಗೊರೆಯನ್ನು ನೀಡಲು ನಿರ್ಧರಿಸಿದ್ದರು. 2010ರಲ್ಲಿಯೇ 1.5 ರಿಂದ 2 ಕೋಟಿ ಬೆಲೆಯ ವ್ಯಾನಿಟಿ ವ್ಯಾನ್ ಅನ್ನು ನಟಿ ಬಾರ್ಬರಾ ಮೋರಿಗೆ ಹೃತಿಕ್ ರೋಷನ್ ನೀಡಿದ್ದರು. ಈ ವಿಷಯ ಈಗ ಬಾಲಿವುಡ್‌ನಲ್ಲಿ ಬಾರಿ ಚರ್ಚೆಯಾಗುತ್ತಿದೆ. ಹೃತಿಕ್ ಹಾಗೂ ಬಾರ್ಬರಾ ಮೋರಿ ನಡುವೆ ಸಲುಗೆ ಮಾಜಿ ಪತ್ನಿ ಸುಸೇನ್ ರೋಷನ್ ನಿದ್ದೆ ಕೆಡಿಸಿತ್ತು. ಇದೇ ಘಟನೆ ವಿಚ್ಛೇದನಕ್ಕೆ ನಾಂದಿ ಹಾಡಿತ್ತು ಎನ್ನುತ್ತಿದೆ ಬಾಲಿವುಡ್.

  ಹೃತಿಕ್ 'ಕೈಟ್ಸ್'ಗೆ ಸೋಲು

  ಹೃತಿಕ್ 'ಕೈಟ್ಸ್'ಗೆ ಸೋಲು

  ಹೃತಿಕ್ ರೋಷನ್ ಹಾಗೂ ಬರ್ಬಾರಾ ಮೋರಿ ಜೋಡಿಯನ್ನುಮೋಡಿ ಮಾಡಿದ್ದಂತೂ ನಿಜ. ಮೆಕ್ಸಿಕೋ ನಟಿ ಜೊತೆ ಹೃತಿಕ್ ಸಿನಿಮಾ ಮಾಡಿದ್ದು ಹಾಲಿವುಡ್‌ ಟಚ್ ಕೊಟ್ಟಂತಿತ್ತು. ಈ ಮೂಲಕ ಹೃತಿಕ್ ರೋಷನ್ ಹಾಲಿವುಡ್‌ಗೆ ಹಾರಲೆಂದೇ ಮೆಕ್ಸಿಕೋ ನಟಿ ಕರೆದುಕೊಂಡು ಬಂದಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಇಷ್ಟೆಲ್ಲಾ ಸದ್ದು ಮಾಡಿದ್ದರೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ.

  ಸಬಾ ಜೊತೆ ಹೃತಿಕ್ ಡೇಟಿಂಗ್

  ಸಬಾ ಜೊತೆ ಹೃತಿಕ್ ಡೇಟಿಂಗ್

  ಬಾಲಿವುಡ್ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಅಂತಿದೆ ಬಾಲಿವುಡ್‌. ಪತ್ನಿ ಸುಸೇನ್ ವಿಚ್ಛೇದನದ ಬಳಿಕ ಹೃತಿಕ್ ರೋಷನ್ ಹೆಸರು ಯಾರೊಂದಿಗೂ ಕೇಳಿ ಬಂದಿರಲಿಲ್ಲ. ಆದ್ರೀಗ ಬಾಲಿವುಡ್ ನಟಿ ಹಾಗೂ ಮ್ಯೂಸಿಷಿಯಲ್ ಸಬಾ ಅಜಾದ್ ಜೊತೆ ಹೃತಿಕ್ ಹೆಸರು ತಳುಕು ಹಾಕಿಕೊಂಡಿದೆ. ಇಬ್ಬರೂ ಎರಡು ವರ್ಷಗಳಿಂದ ಲಿವ್ ಇನ್ ರಿಲೇಷನ್‌ನಲ್ಲಿದ್ದಾರೆ ಎನ್ನಲಾಗಿದೆ. ಆದರೆ, ಈ ಜೋಡಿ ಇದೂವರೆಗೂ ತಮ್ಮ ಪ್ರೀತಿ ಬಗ್ಗೆ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ.

  English summary
  Hrithik Roshan Gave An Expensive Gift To Her Rumoured Girlfriend. When Hrithik Roshan was shooting Kites, he fell in love with Barbara Mori. Rumour is that he gave lavish vanity van to the Mexican actress got worth around 1.5-2 crores.
  Tuesday, February 1, 2022, 22:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X