For Quick Alerts
  ALLOW NOTIFICATIONS  
  For Daily Alerts

  'ಸ್ಪೈ ಯೂನಿವರ್ಸ್' ಚಿತ್ರದಲ್ಲಿ ಒಂದಾಗುತ್ತಿದ್ದಾರೆ ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಹೃತಿಕ್ ರೋಷನ್

  |

  ಒಂದು ಸಿನಿಮಾ ಅಂದರೆ ಅಲ್ಲಿ ಸಾಕಷ್ಟು ನಿರೀಕ್ಷೆಗಳು ಇರುತ್ತದೆ. ಆ ಸಿನಿಮಾದಲ್ಲಿ ತಾರಾಗಣ ಹೇಗಿರಬೇಕು, ಯಾರನ್ನೆಲ್ಲ ಸಿನಿಮಾಗೆ ಕರೆತರಬೇಕು ಎಂಬ ಲೆಕ್ಕಾಚಾರಗಳು ಜೋರಾಗಿರುತ್ತೆ. ಅದರಲ್ಲೂ ಒಂದೇ ಸಿನಿಮಾದಲ್ಲಿ ಸ್ಟಾರ್ ನಟರನ್ನು ಒಟ್ಟಿಗೆ ಕರೆ ತರುವುದು ಅಂದರೆ ಅದು ಸಾಮಾನ್ಯದ ಮಾತಲ್ಲ. ಆ ಸ್ಟಾರ್ ಕಲಾವಿದರ ಅಭಿಮಾನಿಗಳಿಗೆ ಎಲ್ಲಿಯೋ ಬೇಜಾರಾಗದಂತೆ ನೋಡಿಕೊಳ್ಳಬೇಕು. ನಟರಿಗೆ ಪ್ರಾಮುಖ್ಯತೆ ಕಮ್ಮಿ ಆಗುವಂತೆ ಇರಬಾರದು ಎಂಬೆಲ್ಲ ಸವಾಲುಗಳು ಇರುತ್ತದೆ.

  ಇದೀಗ ಬಾಲಿವುಡ್‌ನಲ್ಲಿ ಬಿ ಟೌನ್‌ನ ದಿಗ್ಗಜರನ್ನು ಹಾಕಿಕೊಂಡು ಸಿನಿಮಾ ಒಂದು ತಯಾರಾಗಲು ಸಜ್ಜಾಗಿದೆ. ಒಂದೇ ಸಿನಿಮಾದಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಷನ್ ತೆರೆ ಹಂಚಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಇದೀಗ ಕೇಳಿ ಬರುತ್ತಿದೆ. ಇದಕ್ಕಾಗಿ ಸಿದ್ಧತೆಗಳು ಕೂಡ ಜೋರಾಗಿ ನಡೆಯುತ್ತಿದ್ದು ಪ್ರೀ ಪ್ರೋಡಕ್ಷನ್ ಕೆಲಸದಲ್ಲಿ ತಂಡ ನಿರತವಾಗಿದೆಯಂತೆ. ಅಷ್ಟಕ್ಕು ಈ ಮೂವರು ಸ್ಟಾರ್ ನಟರು ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನುವ ಕಂಪ್ಲೀಟ್ ಮಾಹಿತಿಗಾಗಿ ಮುಂದೆ ಓದಿ..

  ಈ ಹಿಂದಿನಿಂದಲೂ ಈ ಒಂದು ಸುದ್ದಿ ಕೇಳಿ ಬರುತ್ತಿತ್ತು. ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಷನ್ ತೆರೆಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ, ಆದಷ್ಟು ಬೇಗ ಸಿನಿಮಾ ಸೆಟ್ಟೇರಲಿದೆ ಎಂದು. ಆದರೆ ಈಗ ಈ ಸುದ್ದಿಗೆ ರೆಕ್ಕೆ ಪುಕ್ಕ ಬಂದಂತಿದೆ. ಬಲ್ಲ ಮೂಲಗಳು ಬಾಲಿವುಡ್ ಮ್ಯಾಗಝೀನ್ ಒಂದಕ್ಕೆ ಸಂದರ್ಶನ ನೀಡುವ ಸಂದರ್ಭ ಈ ವಿಚಾರನ್ನು ಮಾತನಾಡಿದ್ದಾರೆ.

  ಮೂಲಗಳು ತಿಳಿಸಿರುವಂತೆ "ಪಠಾಣ್ ಮತ್ತು ಟೈಗರ್ 3 ಚಿತ್ರದಲ್ಲಿ ಹೃತಿಕ್ ರೋಷನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಉಹಾಪೋಹಗಳ ಹರಿದಾಡುವಿಕೆ ಬೆನ್ನಲ್ಲೆ ಆದಿತ್ಯ ಚೋಪ್ರಾ ಅವರು ತಮ್ಮ ಸ್ಪೈ ಯೂನಿವರ್ಸ್ ಚಿತ್ರದ ಶೂಟಿಂಗ್‌ಗೆ ಎಲ್ಲಾ ತಯಾರಿಯನ್ನು ಮಾಡಿಕೊಂಡಿದ್ದಾರೆ, ಮತ್ತು ಈ ಸಿನಿಮಾಗಾಗಿ ಸಲ್ಮಾನ್ ಖಾನ್, ಹೃತಿಕ್ ರೋಷನ್ ಮತ್ತು ಶಾರುಖ್ ಖಾನ್ ಅವರನ್ನು ಒಟ್ಟಿಗೆ ಸಿನಿಮಾ ಪರದೆ ಮೇಲೆ ಕರೆತರಲು ಪ್ರಯತ್ನ ಕೂಡ ಮಾಡುತ್ತಿದ್ದಾರಂತೆ. ಅಷ್ಟೇ ಅಲ್ಲದೇ ಸ್ಪೈ ಯೂನಿವರ್ಸ್ ಚಿತ್ರವು ಶಾರುಖ್ ಅಭಿನಯದ 'ಪಠಾಣ್' ಮತ್ತು ಹೃತಿಕ್ ರೋಷನ್ ಅಭಿನಯದ 'ವಾರ್ 2' ಹಾಗೂ ಸಲ್ಮಾನ್ ಖಾನ್ ಅಭಿನಯದ 'ಟೈಗರ್ 3' ಚಿತ್ರದ ನಂತರ ಸ್ಪೈ ಯೂನಿವರ್ಸ್ ಸೆಟ್ಟೇರಲಿದೆಯಂತೆ.

  ಆದಿತ್ಯ ಚೋಪ್ರಾ ನಿರ್ದೇಶನದ ಸ್ಪೈ ಯೂನಿವರ್ಸ್ ಚಿತ್ರವು ನಂಬಲಾಗದಷ್ಟು ರೋಮಾಂಚನಕಾರಿಯಾಗಿ ಇರಲಿದೆಯಂತೆ. ಈ ಸಿನಿಮಾದಲ್ಲಿ ಸ್ಟಾರ್ ನಟರು ಮಾತ್ರವಲ್ಲದೆ ಸ್ಟಾರ್ ನಟಿಯರು ಕೂಡ ಬಣ್ಣ ಹಚ್ಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಕತ್ರಿನಾ ಕೈಫ್ ಮತ್ತು ದೀಪಿಕಾ ಪಡುಕೋಣೆ ಅವರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಹೀಗಾಗಿ ಸಿನಿಮಾದಲ್ಲಿ ಸಾಕಷ್ಟು ಇಂಟರೆಸ್ಟಿಂಗ್ ಎಲಿಮೆಂಟ್‌ಗಳು ಕೂಡ ಇರಲಿವೆಯಂತೆ. ಅಲ್ಲದೇ ಚಿತ್ರದಲ್ಲಿ ಇನ್ನುಳಿದ ಪಾತ್ರಗಳಿಗೂ ದೊಡ್ಡ ದೊಡ್ಡ ಕಲಾವಿದರನ್ನು ಕರೆತರುವ ತಯಾರಿಯಲ್ಲಿದೆ ಚಿತ್ರತಂಡ ಅಂತಲೂ ಹೇಳಲಾಗುತ್ತಿದೆ.

  Hrithik Roshan to join Salman Khan and Shah Rukh Khan in Spy Universe?

  ಸದ್ಯ ಸ್ಪೈ ಯೂನಿವರ್ಸ್ ಸಿನಿಮಾವು ನಿರ್ಮಾಣ ಪ್ರಕ್ರಿಯೆಯಲ್ಲಿದೆ. ಸ್ಕ್ರಿಪ್ಟ್ ವರ್ಕ್ ಸೇರಿದಂತೆ ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಈ ಸಿನಿಮಾದಲ್ಲಿ ನಟಿಸಲು ಶಾರುಖ್, ಸಲ್ಮಾನ್, ಮತ್ತು ಹೃತಿಕ್ ಬಳಿ ಈಗಾಗಲೇ ಮಾತುಕತೆ ನಡೆಸಿದ್ದು, ಒಂದು ಸುತ್ತಿನ ಚರ್ಚೆಗಳು ಮುಗಿದಿದೆ ಎಂದು ಹೇಳಲಾಗುತ್ತಿದೆ. ಈ ಮೂವರು ಸ್ಟಾರ್ ನಟರು ಈಗಾಗಲೇ ಒಪ್ಪಿಕೊಂಡು ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಚಿತ್ರಗಳು ಪೂರ್ಣಗೊಳ್ಳಬೇಕಿದೆ. ಅವುಗಳು ಮುಗಿದ ತಕ್ಷಣ ಈ ಮೂವರು ಸ್ಪೈ ಯೂನಿವರ್ಸ್ ಚಿತ್ರದಲ್ಲಿ ನಟಿಸಲಿದ್ದಾರೆ.

  ಈ ಸುದ್ದಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿದ್ದು, ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಷನ್‌ರನ್ನು ಒಂದೇ ಸಿನಿಮಾದಲ್ಲಿ ನೋಡಲು ಕಾಯುತ್ತಿದ್ದಾರೆ. ಜೊತೆಗೆ ಈ ಮೂವರ ಪಾತ್ರ ಹೇಗೆ ಇರಲಿದೆ, ಯಾವ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಯಾವಾಗ ಸಿನಿಮಾ ಸೆಟ್ಟೇರುತ್ತೆ ಎಂಬ ಹಲವು ಕುತೂಹಲಕಾರಿ ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಿದೆ. ಇದೆಲ್ಲದಕ್ಕೂ ಉತ್ತರ ಸಿನಿಮಾ ಸೆಟ್ಟೇರಿದ ನಂತರವಷ್ಟೇ ತಿಳಿದು ಬರಬೇಕಿದೆ.

  English summary
  Aditya Chopra’s spy universe is looking incredibly exciting as it also has screen box office queens like Katrina Kaif and Deepika Padukone opposite Salman Khan and Shah Rukh Khan respectively.
  Sunday, January 30, 2022, 10:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X