ಮತ್ತೆ ಮದುವೆಗೆ ಸಿದ್ಧವಾದ ಹೃತಿಕ್ ರೋಷನ್.! ಯಾರು ಆ ಹುಡುಗಿ.?

By Bharath Kumar

ಬಾಲಿವುಡ್ ನಟ ಹೃತಿಕ್ ರೋಷನ್ ಅವರ ದಾಂಪತ್ಯ ಒಡೆದ ಮನೆ. ಯಾಕಂದ್ರೆ, ಸುಸೈನ್ ಖಾನ್ ಅವರ ಜೊತೆಗಿನ 14 ವರ್ಷದ ದಾಂಪತ್ಯ ಜೀವನವನ್ನ ಅಂತ್ಯಗೊಳಿಸಿಕೊಂಡಿದ್ದರು. ಸಂಸಾರದಲ್ಲಿ ಮೂಡಿದ್ದ ಭಿನ್ನಾಭಿಪ್ರಾಯಗಳಿಂದ ಇಬ್ಬರು ಕಾನೂನಾತ್ಮಕವಾಗಿ ಬೇರ್ಪಟ್ಟಿದ್ದರು. ಪರಸ್ಪರ ಒಪ್ಪಿಗೆ ಮೆರೆಗೆ ವಿಚ್ಛೇದನ ಪಡೆದುಕೊಂಡು ದೂರವಾಗಿದ್ದರು.

ಇದಾದ ಬಳಿಕ ನಟಿ ಕಂಗನಾ ರಣಾವತ್ ಜೊತೆಗಿನ ಸ್ನೇಹ, ಪ್ರೀತಿ ಮತ್ತೊಂದು ಹೃತಿಕ್ ರೋಷನ್ ಅವರನ್ನ ಮಾನಸಿಕವಾಗಿ ಕಾಡಿದೆ. ಬೆಂಬಿಡದೆ ಕಾಡುತ್ತಿರುವ ಕಂಗನಾ ಹೃತಿಕ್ ವಿರುದ್ಧ ಸಮರ ಮಾಡುತ್ತಿರುವುದು ಗೊತ್ತಿರುವ ವಿಚಾರ. ಹೀಗೆ ಕಷ್ಟಕರವಾಗಿ ಸಾಗುತ್ತಿರುವ ಹೃತಿಕ್ ಬದುಕಿನಲ್ಲಿ ಮತ್ತೆ ಬೆಳಕು ಮೂಡುವ ಸೂಚನೆ ಸಿಕ್ಕಿದೆ.

ಸುಮಾರು ನಾಲ್ಕು ವರ್ಷದ ನಂತರ ಹೃತಿಕ್ ರೋಷನ್ ಮತ್ತೆ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಒಂಟಿಯಾಗಿರುವ ಲೈಫ್ ಗೆ ಜಂಟಿ ಮಾಡಿಕೊಳ್ಳುವ ಮನಸ್ಸು ಮಾಡಿದ್ದಾರಂತೆ. ಹಾಗಿದ್ರೆ, ಯಾರು ಆ ಹುಡುಗಿ.? ಮುಂದೆ ಓದಿ.....

2000 ರಲ್ಲಿ ಮದುವೆ, 2014 ರಲ್ಲಿ ವಿಚ್ಛೇದನ

2000 ರಲ್ಲಿ ಮದುವೆ, 2014 ರಲ್ಲಿ ವಿಚ್ಛೇದನ

2000 ರಲ್ಲಿ ಸಂಪ್ರದಾಯವಾಗಿ ಮದುವೆಯಾಗಿದ್ದ ಹೃತಿಕ್ ಮತ್ತು ಸುಸೈನ್ ಖಾನ್ 2014 ರಲ್ಲಿ ವಿಚ್ಛೇದನ ಪಡೆದು ದೂರವಾದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 14 ವರ್ಷಗಳ ಸುಖಕರ ಜೀವನಕ್ಕೆ ಅಂತ್ಯವಾಡಿದ್ದ ಈ ಜೋಡಿ ಮತ್ತೆ ಒಂದಾಗುವ ಸೂಚನೆ ನೀಡಿದೆ.

ವಿಚ್ಛೇದನ ಬಳಿಕಯೂ ಉತ್ತಮ ಬಾಂಧವ್ಯ

ವಿಚ್ಛೇದನ ಬಳಿಕಯೂ ಉತ್ತಮ ಬಾಂಧವ್ಯ

ಹೃತಿಕ್ ಹಾಗೂ ಸುಸೈನ್ ಖಾನ್ ವಿಚ್ಛೇದನ ಬಳಿಕವೂ ಉತ್ತಮ ಬಾಂಧವ್ಯ ಹೊಂದಿದ್ದರು. ಮಕ್ಕಳ ಭವಿಷ್ಯದಿಂದ ಇಬ್ಬರು ಸ್ನೇಹಿತರಾಗಿ ಮುಂದುವರೆದಿದ್ದರು. ಮಕ್ಕಳ ಬೇಸುಗೆ ರಜೆಯನ್ನ ಇಬ್ಬರು ಮಕ್ಕಳ ಜೊತೆ ಕಳೆಯುತ್ತಿದ್ದರು. ಕುಟುಂಬ ಸಮೇತ ವಿದೇಶಕ್ಕೆ ಹೋಗುತ್ತಿದ್ದರು.

ಮತ್ತೆ ಚಿಗುರಿದೆ ಪ್ರೀತಿ

ಮತ್ತೆ ಚಿಗುರಿದೆ ಪ್ರೀತಿ

ಹೀಗೆ, ಮಕ್ಕಳ ಕಾರಣದಿಂದ ಮತ್ತೆ ಮತ್ತೆ ಭೇಟಿಯಾಗುತ್ತಿದ್ದ ಈ ಜೋಡಿ ಈಗ ಮತ್ತೊಮ್ಮೆ ಒಂದಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮತ್ತೆ ಮದುವೆಯಾಗಿ ಒಟ್ಟಿಗೆ ಜೀವನ ನಡೆಸಲು ಚಿಂತಿಸಿದ್ದಾರೆ ಎಂಬ ಸುದ್ದಿಗಳು ಬಾಲಿವುಡ್ ನಲ್ಲಿ ಹರಿದಾಡುತ್ತಿದೆ.

ಸುದ್ದಿ ತಳ್ಳಿ ಹಾಕಿದ್ದ ಸುಸೈನ್

ಸುದ್ದಿ ತಳ್ಳಿ ಹಾಕಿದ್ದ ಸುಸೈನ್

ಈ ರೀತಿ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕು ಮುಂಚೆ ಕೂಡ ಹೃತಿಕ್ ಜೊತೆ ಮತ್ತೆ ವಿವಾಹವಾಗುವ ಸಂಬಂಧ ಚರ್ಚೆಯಾಗಿತ್ತು. ಆಗ ಸುಸೈನ್ ಸ್ಪಷ್ಟನೆ ಕೂಡ ನೀಡಿದ್ದರು. ''ನಾವಿಬ್ಬರು ಮತ್ತೆ ಒಂದಾಗುವ ಮಾತಿಲ್ಲ, ಆದ್ರೆ, ನಾವಿಬ್ಬರು ಉತ್ತಮ ಸ್ನೇಹಿತರು. ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಹೊಂದಿದ್ದೇವೆ'' ಎಂದಿದ್ದರು.

ಹೃತಿಕ್ ಏನೂ ಹೇಳಿಲ್ಲ

ಹೃತಿಕ್ ಏನೂ ಹೇಳಿಲ್ಲ

ಅಂದ್ಹಾಗೆ, ಸುಸೈನ್ ಖಾನ್ ಹೇಳಿದ್ದ ವರ್ಷಗಳ ಹಿಂದೆ. ಆದ್ರೆ, ಸದ್ಯ ಪರಿಸ್ಥಿತಿ ಬದಲಾಗಿರಬಹುದು. ಇಬ್ಬರು ಮದುವೆಯಾಗುವ ಬಗ್ಗೆ ನಿರ್ಧರಿಸಿರಬಹುದು. ಈ ಬಗ್ಗೆ ಯಾವ ಅಧಿಕೃತ ಮಾಹಿತಿಯೂ ಸಿಕ್ಕಿಲ. ಬಟ್, ಆಪ್ತರ ಪ್ರಕಾರ ಹೃತಿಕ್ ಬಾಳಲ್ಲಿ ಮತ್ತೆ ಸುಸೈನ್ ಬರಲಿದ್ದಾರೆ ಎನ್ನುವುದಷ್ಟೇ ನಿಜ ಅನ್ನುತ್ತಿದ್ದಾರೆ.

More from Filmibeat

English summary
after 14 years of marriage, Hrithik Roshan and Sussanne Khan's divorce in 2014 came as a shocker to many. now Hrithik Roshan and Sussanne Khan planning to get back together.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X