ಕೊನೆಗೂ ಸಿಕ್ತು ಡೇಟಿಂಗ್ ವದಂತಿಗಳಿಗೆ ಉತ್ತರ: ವೈರಲ್ ಪೋಟೋಗಳಿಗೆ ನಟಿ ಕಂಗನಾ ರನೌತ್ ಹೇಳಿದ್ದೇನು?

ಬಾಲಿವುಡ್ ನಟಿ ಕಂಗನಾ ರನೌತ್ ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸಿದ್ದರು. ರಾಮನೂರಿನಲ್ಲಿ ಕಂಗನಾ ರನೌತ್ ಹಲವು ಗಣ್ಯ ವ್ಯಕ್ತಿಗಳ ಜೊತೆಗೆ ಫೋಟೋಗೆ ಫೋಸ್ ನೀಡಿದ್ದರು. ಆದರೆ, ಅದರಲ್ಲಿ ಒಬ್ಬರ ಜೊತೆಗಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿವೆ.

ಹೌದು.... ನಟಿ ಕಂಗನಾ ರನೌತ್ ಇತ್ತೀಚೆಗೆ ಮದುವೆ ಮತ್ತು ಕುಟುಂಬದ ಬಗ್ಗೆ ಮಾತನಾಡಿದ್ದಾಗಿನಿಂದ ಅವರು ಯಾರನ್ನೋ ಡೇಟ್ ಮಾಡುತ್ತಿದ್ದಾರೆ ಎಂಬ ರೂಮರ್ಸ್ ಹಬ್ಬಿದ್ದವು. ಇದಕ್ಕೆ ಸರಿಯಾಗಿ ವಿದೇಶಿ ಪ್ರಜೆಯೊಬ್ಬರ ಕೈ ಹಿಡಿದು ಮುಂಬೈನಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈಗ ಈಸ್‌ ಮೈ ಟ್ರಿಪ್ ಸಂಸ್ಥಾಪಕ ನಿಶಾಂತ್ ಪಿಟ್ಟಿ ಜೊತೆಗೆ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ ಎಂದು ವದಂತಿ ಹಬ್ಬಿದೆ.

I Am Dating Someone Else: Kangana Ranaut breaks silence on Nishant Pitti relationship rumours

ಈಸ್‌ ಮೈಟ್ರಿಪ್ ಸಂಸ್ಥಾಪಕ ನಿಶಾಂತ್ ಪಿಟ್ಟಿ ಮತ್ತು ಕಂಗನಾ

ರಾಮ ಮಂದಿರದ ಆವರಣದಲ್ಲಿ ತೆಗೆದಿಕೊಂಡಿದ್ದ ಉದ್ಯಮಿ ನಿಶಾಂತ್ ಪಿಟ್ಟಿ ಮತ್ತು ನಟಿ ಕಂಗನಾ ರನೌತ್ ಅವರ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹಲವರು ಫೋಟೋ ಶೇರ್ ಮಾಡಿದ್ದಾರೆ. ಇವರಿಬ್ಬರು ರಿಲೇಶನ್ ಶಿಪ್ ನಲ್ಲಿದ್ದಾರೆಯೇ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವದಂತಿ ಕಾಡ್ಗಿಚ್ಚಿನಂತೆ ಹಬ್ಬಿದ ತಕ್ಷಣ ಕಂಗನಾ ಎಚ್ಚೆತ್ತುಕೊಂಡಿದ್ದು, ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಬುಧವಾರ, ಕಂಗನಾ ರನೌತ್ ಇಂತಹದ್ದೇ ವದಂತಿಯ ಲೇಖನಕ್ಕೆ ಪ್ರತಿಕ್ರಿಯಿಸಿದ್ದಾರೆ. 'ಪ್ರತಿದಿನ ಹೊಸ ಮನುಷ್ಯನಿಗೆ' ಲಿಂಕ್ ಮಾಡುವ ಮೂಲಕ 'ಮುಜುಗರ' ಮಾಡಬೇಡಿ ಎಂದು ಮಾಧ್ಯಮಗಳಿಗೆ ವಿನಂತಿ ಮಾಡಿದ್ದಾರೆ. ನಿಶಾಂತ್ ಪಿಟ್ಟಿ ಅವರು ಮದುವೆಯಾಗಿ ಸಂತೋಷದಿಂದ ಇದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ಬೇರೊಬ್ಬರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ!

ತಮ್ಮ ಸಂಬಂಧದ ಬಗ್ಗೆ ಊಹಾಪೋಹದ ಲೇಖನವನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ಕಂಗನಾ ರನೌತ್, ನಿಶಾಂತ್ ಪಿಟ್ಟಿ ಮದುವೆ ಸಂತೋಷದಿಂದ ಇದ್ದಾರೆ ಎನ್ನುವ ಜೊತೆಗೆ ಮತ್ತೊಂದು ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ. ಅದೇ ತಾನು ಬೇರೊಬ್ಬರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎಂಬುದು.

I Am Dating Someone Else: Kangana Ranaut breaks silence on Nishant Pitti relationship rumours

ಹೌದು.. ನಟಿ ಕಂಗನಾ ತಾನು ಬೇರೊಬ್ಬರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಮತ್ತು ಸರಿಯಾದ ಸಮಯದಲ್ಲಿ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುತ್ತೇನೆ ಎಂದು ಬಹಿರಂಗಪಡಿಸಿದ್ದಾರೆ. "ಮಾಧ್ಯಮಗಳಿಗೆ ನನ್ನ ವಿನಮ್ರ ವಿನಂತಿ, ದಯವಿಟ್ಟು ತಪ್ಪು ಮಾಹಿತಿಯನ್ನು ಹರಡಬೇಡಿ, ನಿಶಾಂತ್ ಪಿಟ್ಟಿ ಮದುವೆಯಾಗಿ ಸಂತೋಷದಿಂದ ಇದ್ದಾರೆ ಮತ್ತು ನಾನು ಬೇರೆಯವರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ" ಎಂದು ಹೇಳಿದ್ದಾರೆ.

'ದಯವಿಟ್ಟು ತಪ್ಪು ಮಾಹಿತಿ ಹರಡಬೇಡಿ'

"ಸರಿಯಾದ ಸಮಯಕ್ಕಾಗಿ ಕಾಯಿರಿ. ದಯವಿಟ್ಟು ನಮ್ಮನ್ನು ಮುಜುಗರಕ್ಕೀಡು ಮಾಡಬೇಡಿ, ಒಟ್ಟಿಗೆ ಚಿತ್ರಗಳನ್ನು ಕ್ಲಿಕ್ಕಿಸಿದ ಮಾತ್ರಕ್ಕೆ ಯುವತಿಯನ್ನು ಪ್ರತಿದಿನ ಹೊಸ ಪುರುಷನೊಂದಿಗೆ ಲಿಂಕ್ ಮಾಡುವುದು ಒಳ್ಳೆಯದಲ್ಲ. ದಯವಿಟ್ಟು ಇದನ್ನು ಮಾಡಬೇಡಿ" ಎಂದು ಕಂಗನಾ ಮನವಿ ಮಾಡಿದ್ದಾರೆ.

ಇತ್ತೀಚೆಗೆ ವಿದೇಶಿ ವ್ಯಕ್ತಿಯ ಜೊತೆ ಕಾಣಿಸಿಕೊಂಡಿದ್ದ ಕಂಗನಾ

ಈ ತಿಂಗಳ ಆರಂಭದಲ್ಲಿ, ಕಂಗನಾ ರನೌತ್ ಮುಂಬೈನ ಸಲೂನ್‌ನ ಹೊರಗೆ ವಿದೇಶಿ ವ್ಯಕ್ತಿಯೊಂದಿಗೆ ಕಾಣಿಸಿಕೊಂಡಿದ್ದು, ಡೇಟಿಂಗ್ ವದಂತಿಗಳಿಗೆ ಕಾರಣವಾಗಿತ್ತು. ಪಾಪರಾಜಿ ಮತ್ತು ಫ್ಯಾನ್ ಪೇಜ್‌ಗಳಲ್ಲಿ ಫೋಟೋ ವೈರಲ್ ಆಗಿತ್ತು. ಇದಕ್ಕೂ ನಟಿ ಸ್ಪಷ್ಟನೆ ನೀಡಿದ್ದರು. "ನಾನು ಸಲೂನ್‌ನ ಹೊರಗೆ ಆಗಾಗ್ಗೆ ಹ್ಯಾಂಗ್‌ಔಟ್ ಮಾಡುವ ಮಿಸ್ಟರಿ ಮ್ಯಾನ್ ಬಗ್ಗೆ ನನಗೆ ಸಾಕಷ್ಟು ಕರೆಗಳು ಮತ್ತು ಸಂದೇಶಗಳು ಬರುತ್ತಿವೆ. ಸಹೋದ್ಯೋಗಿಗಳು, ಒಡಹುಟ್ಟಿದವರು, ಕೆಲಸದ ಸ್ನೇಹಿತರು ಕೂಡ ಬೀದಿಯಲ್ಲಿ ಒಟ್ಟಿಗೆ ನಡೆಯಬಹುದು" ಎಂದು ಕಿಡಿಕಾರಿ ಆತ ತನ್ನ ಹೇರ್ ಸ್ಟೈಲಿಶ್ ಎಂದು ತಿಳಿಸಿದ್ದರು.

More from Filmibeat

English summary
Kangana Ranaut breaks silence on Nishant Pitti relationship rumours.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X