ಬಿಕಿನಿ ತೊಟ್ಟು ಜಾರಿ ಬಿದ್ದ ನಿಶ್ವಿಕಾ : ಬಿಕಿನಿಯೇ ಬೇಡವೆಂದ ನಟಿಯರಿವರು..
ಸಿನಿಮಾ ನಟಿಯರು ಸಾಮಾನ್ಯವಾಗಿ ಹೆಚ್ಚಾಗಿ ಗ್ಲ್ಯಾಮರಸ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸದಾ ಟ್ರೆಡಿಷನಲ್ ಆಗಿ ಕಾಣಿಸಿಕೊಳ್ಳುವ ನಟಿಯರು ತೀರಾ ಕಡಿಮೆ. ಅದರಲ್ಲೂ ಒಂದು ಹೆಜ್ಜೆ ಮುಂದೆ ಇರುವ ನಟಿಯರು ಹೆಚ್ಚಾಗಿ ಬಿಕಿನಿ ತೊಟ್ಟು ಕಾಣಿಸಿಕೊಳ್ಳುತ್ತಾರೆ.
Recommended Video
ಇನ್ನು ಸೌತ್ ಚಿತ್ರ ರಂಗದ ಕಡೆಗೆ ಬಂದರೆ. ಅದರಲ್ಲೂ ಕನ್ನಡ ಚಿತ್ರ ರಂಗದಲ್ಲಿ ನಟಿ ಮಣಿಯರು ಅಷ್ಟು ಸುಲಭವಾಗಿ ಬಿಕಿನಿ ತಂಟೆಗೆ ಹೋಗುವುದಿಲ್ಲ. ಕನ್ನಡ ನೆಲದ ಕಥೆಗಳಿಗೆ ಬಿಕಿನಿ ಅವತಾರ ಸರಿ ಹೊಂದುವುದೂ ಇಲ್ಲ. ಈ ವಿಚಾರವನ್ನು ಪಕ್ಕಕ್ಕಿಟ್ಟು, ಸಿನಿಮಾಗಳನ್ನು ಹೊರತು ಪಡಿಸಿಯೂ ನಾಯಕಿಯರು ಈ ಅವತಾರದಲ್ಲಿ ಕಾಣಿಸಿಕೊಳ್ಳುವುದು ಕಡಿಮೆ.
ಈಗ ಈ ವಿಚಾರ ಚರ್ಚೆ ಗ್ರಾಸವಾಗಲು ಕಾರಣ ಕನ್ನಡ ಚಿತ್ರ ರಂಗದ ನಟಿ ನಿಶ್ವಿಕಾ ನಾಯ್ಡು. ನಿಶ್ವಿಕಾ ನಾಯ್ಡು ಕನ್ನಡದ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಬಿಕಿನಿ ರೂಪದಲ್ಲಿ ಪ್ರತ್ಯಕ್ಷ ಆಗಿ ಬಿಟ್ಟಿದ್ದಾರೆ.
ಬಿಕಿನಿ ತೊಟ್ಟು ಬೀಚ್‌ನಲ್ಲಿ ಜಾರಿ ಬಿದ್ದ ನಿಶ್ವಿಕಾ ನಾಯ್ಡು!
ನಟಿ ನಿಶ್ವಿಕಾ ನಾಯ್ಡು ಅಭಿನಯದ ಸಖತ್ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಸಿನಿಮಾಗಳು ಮಾತ್ರವಲ್ಲ ನಿಶ್ವಿಕಾ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿ ಇರುತ್ತಾರೆ. ಇತ್ತೀಚೆಗೆ ತಾನು ಬೀಚ್‌ನಲ್ಲಿ ಜಾರಿ ಬಿದ್ದ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನಿಶ್ವಿಕಾ ಅವರು ಬಿಕಿನಿ ತೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಬಿಕಿಯಲ್ಲಿ ನಿಶ್ವಿಕಾ ಕಾಣಿಸಿಕೊಂಡಿದ್ದರಿಂದ ಅಚ್ಚರಿಗೆ ಕಾರಣ ಆಗಿದ್ದಾರೆ.

ಬಿಕಿನಿ ಇಂದ ದೂರ ಉಳಿದ ರಶ್ಮಿಕಾ ಮಂದಣ್ಣ!
ಸದ್ಯ ಹೆಚ್ಚು ಬೇಡಿಕೆಯಲ್ಲಿ ಇರುವ ನಟಿ ರಶ್ಮಿಕಾ ಮಂದಣ್ಣ ಅವರು, ಕನ್ನಡದ ನಂತರ ತೆಲುಗು, ತಮಿಳು ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣ ಎರಡು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆದರೆ ಇಲ್ಲಿ ತನಕ ರಶ್ಮಿಕಾ ಅವರು ಬಿಕಿನಿ ಅವತಾರದಲ್ಲಿ ಕಾಣಿಸಿಕೊಂಡಿಲ್ಲ. ಸಿನಿಮಾಗಳಲ್ಲೂ ಮತ್ತು ಸಿನಿಮಾಗಳನ್ನು ಹೊರತು ಪಡಿಸಿಯೂ ರಶ್ಮಿಕಾ ಅವರು ಬಿಕಿನಿ ಅವತಾರದಲ್ಲಿ ಕಂಡಿಲ್ಲ.

ತಮನ್ನಾ, ಸಮಂತಾ, ಕಾಜಲ್ ಅಗರ್ವಾಲ್ ಬಿಕಿನಿ ತೊಡಲ್ಲ!
ಸೌತ್ ಚಿತ್ರ ರಂಗದಲ್ಲಿ ಇರುವ ಬಹುತೇಕ ಸ್ಟಾರ್ ನಟಿಯರು ಬಿಕಿನಿ ತಂಟೆಗೆ ಹೋಗುವುದಿಲ್ಲ. ತೆರೆಯ ಮೇಲೆ ಎಷ್ಟೇ ಗ್ಲ್ಯಾಮರ್ ಆಗಿ ಕಾಣಿಸಿಕೊಂಡರೂ ಸಹ ಬಿಕಿನಿ ಮಾತ್ರ ತೊಡುವುದಿಲ್ಲ. ಈ ಸಾಲಿನಲ್ಲಿ ನಟಿ ತಮನ್ನಾ ಕೂಡ ಇದ್ದಾರೆ. ತಾನು ಸಿನಿಮಾಗಳಲ್ಲಿ ಬಿಕಿನಿ ತೊಡುವುದಿಲ್ಲ ಎಂದು ನೇರಾಗಿಯೇ ತಮನ್ನಾ ಹೇಳಿಕೊಂಡಿದ್ದಾರೆ. ತಮನ್ನಾ ಮಾತ್ರ ಅಲ್ಲ. ನಟಿ ಕಾಜಲ್ ಅಗರ್ವಾಲ್ ಮತ್ತು ಸಮಂತಾ ಕೂಡ ಇದ್ದಾರೆ. ಸೌತ್ ಚಿತ್ರ ರಂಗದ ಈ ಮೂವರು ನಟಿಯರು ಬಿಕಿನಿ ಹಾಕುವುದಿಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ.

ಬಿಕಿನಿಗೆ ನೋ ಎಂದ ಬಾಲಿವುಡ್ ನಟಿಯರು!
ಇನ್ನು ಬಾಲಿವುಡ್ ಚಿತ್ರ್ ರಂಗದ ವಿಚಾರಕ್ಕೆ ಬಂದರೆ ಅಲ್ಲಿ ಬಿಕಿನಿ ಕಡ್ಡಾಯ ಎನ್ನುವ ಹಾಗೆ, ನಟಿಯರು ಸದಾ ಬಿಕಿನಿಯಲ್ಲಿ ಪ್ರತ್ಯಕ್ಷ ಆಗುತ್ತಾರೆ. ಸಿನಿಮಾದಲ್ಲಿ ಆಗಬಹುದು ಅಥವಾ ಬೀಚ್‌ನಲ್ಲಿ ಬೀಡು ಬಿಡುವುದಾಗಿರಬಹುದು. ಬಿಕಿನಿ ತೊಡುವುದಲ್ಲಿ ಬಾಲಿವುಡ್ ನಟಿಯರು ಸದಾ ಮುಂದು. ಆದರೆ ಇವರಲ್ಲಿ ಕೂಡ ಕೆಲವು ನಟಿಯರು ಬಿಕಿನಿಗೆ ನೋ ಎಂದಿದ್ದಾರೆ. ನಟಿ ವಿದ್ಯಾ ಬಾಲನ್, ಪರಿಣಿತಿ ಚೋಪ್ರ, ಸೋನಾಕ್ಷಿ ಸಿನ್ಹ, ರಾಣಿ ಮುಖರ್ಜಿ ಬಿಕಿನಿ ತೊಡುವುದಿಲ್ಲ. ಹಾಗೆ ಶ್ರದ್ಧಾ ಕಪೂರ್ ಕೂಡ ಬಿಕಿನಿ ತೊಡುವುದಿಲ್ಲ. ಬಿಕಿನಿ ತೊಡಬೇಕು ಎನ್ನುವ ಕಾರಣಕ್ಕೆ 'ಔರಂಗ್ ಜೇಬ್' ಚಿತ್ರವನ್ನು ನಿರಾಕರಿಸಿದ್ದರಂತೆ ಶ್ರದ್ಧಾ ಕಪೂರ್.


Click it and Unblock the Notifications











