twitter
    For Quick Alerts
    ALLOW NOTIFICATIONS  
    For Daily Alerts

    ಕ್ರಿಕೆಟ್ ಬಾದ್‌ಶಾ ವಿರಾಟ್ ಕೊಹ್ಲಿ, ಆಗಲಿದ್ದಾರೆ ಬಾಲಿವುಡ್ ಬಾದ್‌ಶಾ

    |

    ನವದೆಹಲಿ, ಸೆಪ್ಟೆಂಬರ್ 21: ಕ್ರಿಕೆಟ್ ಅಂಗಳದ ವಿಶ್ವ ನಾಯಕ ಕ್ರಿಕೆಟ್ ಕೊಹ್ಲಿ ಬಾಲಿವುಡ್‌ ಸಿನಿಮಾಗಳಲ್ಲಿಯೂ ನಾಯಕನಾಗಿ ಕಾಣಿಸಿಕೊಳ್ಳುವ ಸಮಯ ಹತ್ತಿರದಲ್ಲಿರುವಂತಿದೆ. ಕೊಹ್ಲಿ ಇಂದು ಮಾಡಿರುವ ಟ್ವೀಟ್ ಇದಕ್ಕೆ ಪುಷ್ಠಿ ನೀಡುತ್ತಿದೆ.

    ಇಂದು ಮುಂಜಾನೆ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಹಾಕಿರುವ ವಿರಾಟ್ ಕೊಹ್ಲಿ, 10 ವರ್ಷಗಳ ನಂತರ ಮತ್ತೊಂದು ಪಾದರ್ಪಣೆ (ಡೆಬ್ಯೂಟ್‌) ಎಂದು ಕ್ಯಾಪ್ಷನ್‌ ನೀಡಿ ಪೋಸ್ಟರ್‌ ಒಂದನ್ನು ಹಾಕಿದ್ದಾರೆ.

    ಭಾರತದ ಮೋಸ್ಟ್ ಡಿಸೈರಬಲ್ ಪುರುಷರ ಪಟ್ಟಿ: ಕನ್ನಡದವರು ಒಬ್ಬರೇಭಾರತದ ಮೋಸ್ಟ್ ಡಿಸೈರಬಲ್ ಪುರುಷರ ಪಟ್ಟಿ: ಕನ್ನಡದವರು ಒಬ್ಬರೇ

    'ಟ್ರೇಲರ್‌: ದಿ ಮೂವಿ' ಎಂದು ಪೋಸ್ಟರ್‌ ಮೇಲೆ ಬರೆದಿದ್ದು 'ಇನ್ಟ್ರಡ್ಯೂಸಿಂಗ್ ವಿರಾಟ್ ಕೊಹ್ಲಿ' (ಹೊಸ ಪರಿಚಯ ವಿರಾಟ್ ಕೊಹ್ಲಿ) ಎಂದು ಬರೆಯಲಾಗಿದೆ. ಇದರ ಪ್ರೊಡಕ್ಷನ್‌ ಅನ್ನು ಕೊಹ್ಲಿ ಅವರ ಸಂಸ್ಥೆ ವ್ರಾಂಗ್ (wrogn) ಪ್ರೊಡಕ್ಷನ್ ಮಾಡಲಿದೆ.

    Indian team captain Virat kohli making Bollywood debut

    ಪೋಸ್ಟರ್‌ನಲ್ಲಿ ವಿರಾಟ್ ಕೊಹ್ಲಿ ಹೀರೋ ಲುಕ್‌ನಲ್ಲಿ ಅಂತರದಲ್ಲಿ ತೇಲುತ್ತಿದ್ದಾರೆ. ಅವರ ಹಿಂದೆ ಕಾರುಗಳು ಗಾಳೆಯಲ್ಲಿ ತೇಲುತ್ತಿವೆ. ಭಾರಿ ಸ್ಫೋಟವೊಂದು ಆಗಿ ಬೆಂಕಿಯ ಹಿನ್ನೆಲೆಯಲ್ಲಿ ಸೂಪರ್‌ ಹಿರೋ ಲುಕ್‌ನಲ್ಲಿ ಕೋಹ್ಲಿ ಅದ್ಬುತವಾಗಿ ಕಾಣುತ್ತಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ 'ವಿರುಷ್ಕಾ' ರೋಮ್ಯಾಂಟಿಕ್ ಫೋಟೋಗಳುಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ 'ವಿರುಷ್ಕಾ' ರೋಮ್ಯಾಂಟಿಕ್ ಫೋಟೋಗಳು

    ಟ್ವಿಟ್ಟರ್‌ ಪೋಸ್ಟ್‌ನಲ್ಲಿ ಕೊಹ್ಲಿ ಲಿಂಕ್ ಒಂದನ್ನು ನೀಡಿದ್ದು ಲಿಂಕ್ ಮೇಲೆ ಕ್ಲಿಕ್ ಮಾಡಿದರೆ, ಗನ್ ಹಿಡಿದು ಯಾರಿಗೋ ಗುರಿ ಹಿಡಿದ ಕೊಹ್ಲಿಯ ಚಿತ್ರವೊಂದಿದೆ ಜೊತೆಗೆ 28/09/2018 ಎಂಬ ದಿನಾಂಕ ಸಹ ಇದೆ. ಇದು ಮತ್ತಷ್ಟು ಕುತೂಹಲ ಕೆರಳಿಸಿದೆ.

    Indian team captain Virat kohli making Bollywood debut

    ಪೋಸ್ಟರ್‌ ನೋಡಿದರೆ ಕೊಹ್ಲಿ ಬಾಲಿವುಡ್‌ಗೆ ಎಂಟ್ರಿ ಕೊಡುವುದು ಖಚಿತ ಎನಿಸುತ್ತದೆ ಆದರೆ ಇದರ ಬಗ್ಗೆ ಈವರೆಗೆ ಕೊಹ್ಲಿ ಯಾವುದೇ ಪತ್ರಿಕಾ ಹೇಳಿಕೆಗಳನ್ನು ನೀಡಿಲ್ಲ. ಪೋಸ್ಟರ್‌ ನೋಡಿದ ಕೆಲವರು ಕೊಹ್ಲಿಯ ಬ್ರಾಂಡ್ ವ್ರಾಂಗ್‌ನ ಪ್ರಚಾರಕ್ಕಾಗಿ ಸಹ ಹೀಗೆ ಮಾಡಿರಬಹುದು ಎಂದು ಅಂದಾಜಿಸಿದ್ದಾರೆ.

    English summary
    Cricketer Virat Kohli making Bollywood debut. He uploaded a poster on Social media in which he said another debut after 10 years. He looking stunning the 'Trailer: the movie' poster. He will reveal about this poster on September 28.
    Friday, September 21, 2018, 10:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X