Don't Miss!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕ್ರಿಕೆಟ್ ಬಾದ್ಶಾ ವಿರಾಟ್ ಕೊಹ್ಲಿ, ಆಗಲಿದ್ದಾರೆ ಬಾಲಿವುಡ್ ಬಾದ್ಶಾ
ನವದೆಹಲಿ, ಸೆಪ್ಟೆಂಬರ್ 21: ಕ್ರಿಕೆಟ್ ಅಂಗಳದ ವಿಶ್ವ ನಾಯಕ ಕ್ರಿಕೆಟ್ ಕೊಹ್ಲಿ ಬಾಲಿವುಡ್ ಸಿನಿಮಾಗಳಲ್ಲಿಯೂ ನಾಯಕನಾಗಿ ಕಾಣಿಸಿಕೊಳ್ಳುವ ಸಮಯ ಹತ್ತಿರದಲ್ಲಿರುವಂತಿದೆ. ಕೊಹ್ಲಿ ಇಂದು ಮಾಡಿರುವ ಟ್ವೀಟ್ ಇದಕ್ಕೆ ಪುಷ್ಠಿ ನೀಡುತ್ತಿದೆ.
ಇಂದು ಮುಂಜಾನೆ ಟ್ವಿಟ್ಟರ್ನಲ್ಲಿ ಪೋಸ್ಟ್ ಹಾಕಿರುವ ವಿರಾಟ್ ಕೊಹ್ಲಿ, 10 ವರ್ಷಗಳ ನಂತರ ಮತ್ತೊಂದು ಪಾದರ್ಪಣೆ (ಡೆಬ್ಯೂಟ್) ಎಂದು ಕ್ಯಾಪ್ಷನ್ ನೀಡಿ ಪೋಸ್ಟರ್ ಒಂದನ್ನು ಹಾಕಿದ್ದಾರೆ.
ಭಾರತದ ಮೋಸ್ಟ್ ಡಿಸೈರಬಲ್ ಪುರುಷರ ಪಟ್ಟಿ: ಕನ್ನಡದವರು ಒಬ್ಬರೇ
'ಟ್ರೇಲರ್: ದಿ ಮೂವಿ' ಎಂದು ಪೋಸ್ಟರ್ ಮೇಲೆ ಬರೆದಿದ್ದು 'ಇನ್ಟ್ರಡ್ಯೂಸಿಂಗ್ ವಿರಾಟ್ ಕೊಹ್ಲಿ' (ಹೊಸ ಪರಿಚಯ ವಿರಾಟ್ ಕೊಹ್ಲಿ) ಎಂದು ಬರೆಯಲಾಗಿದೆ. ಇದರ ಪ್ರೊಡಕ್ಷನ್ ಅನ್ನು ಕೊಹ್ಲಿ ಅವರ ಸಂಸ್ಥೆ ವ್ರಾಂಗ್ (wrogn) ಪ್ರೊಡಕ್ಷನ್ ಮಾಡಲಿದೆ.
ಪೋಸ್ಟರ್ನಲ್ಲಿ ವಿರಾಟ್ ಕೊಹ್ಲಿ ಹೀರೋ ಲುಕ್ನಲ್ಲಿ ಅಂತರದಲ್ಲಿ ತೇಲುತ್ತಿದ್ದಾರೆ. ಅವರ ಹಿಂದೆ ಕಾರುಗಳು ಗಾಳೆಯಲ್ಲಿ ತೇಲುತ್ತಿವೆ. ಭಾರಿ ಸ್ಫೋಟವೊಂದು ಆಗಿ ಬೆಂಕಿಯ ಹಿನ್ನೆಲೆಯಲ್ಲಿ ಸೂಪರ್ ಹಿರೋ ಲುಕ್ನಲ್ಲಿ ಕೋಹ್ಲಿ ಅದ್ಬುತವಾಗಿ ಕಾಣುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ 'ವಿರುಷ್ಕಾ' ರೋಮ್ಯಾಂಟಿಕ್ ಫೋಟೋಗಳು
ಟ್ವಿಟ್ಟರ್ ಪೋಸ್ಟ್ನಲ್ಲಿ ಕೊಹ್ಲಿ ಲಿಂಕ್ ಒಂದನ್ನು ನೀಡಿದ್ದು ಲಿಂಕ್ ಮೇಲೆ ಕ್ಲಿಕ್ ಮಾಡಿದರೆ, ಗನ್ ಹಿಡಿದು ಯಾರಿಗೋ ಗುರಿ ಹಿಡಿದ ಕೊಹ್ಲಿಯ ಚಿತ್ರವೊಂದಿದೆ ಜೊತೆಗೆ 28/09/2018 ಎಂಬ ದಿನಾಂಕ ಸಹ ಇದೆ. ಇದು ಮತ್ತಷ್ಟು ಕುತೂಹಲ ಕೆರಳಿಸಿದೆ.
ಪೋಸ್ಟರ್ ನೋಡಿದರೆ ಕೊಹ್ಲಿ ಬಾಲಿವುಡ್ಗೆ ಎಂಟ್ರಿ ಕೊಡುವುದು ಖಚಿತ ಎನಿಸುತ್ತದೆ ಆದರೆ ಇದರ ಬಗ್ಗೆ ಈವರೆಗೆ ಕೊಹ್ಲಿ ಯಾವುದೇ ಪತ್ರಿಕಾ ಹೇಳಿಕೆಗಳನ್ನು ನೀಡಿಲ್ಲ. ಪೋಸ್ಟರ್ ನೋಡಿದ ಕೆಲವರು ಕೊಹ್ಲಿಯ ಬ್ರಾಂಡ್ ವ್ರಾಂಗ್ನ ಪ್ರಚಾರಕ್ಕಾಗಿ ಸಹ ಹೀಗೆ ಮಾಡಿರಬಹುದು ಎಂದು ಅಂದಾಜಿಸಿದ್ದಾರೆ.