ಅನಿಲ್ ಕಪೂರ್ ನಂತರ 'ಡ್ಯ್ರಾಗನ್' ಅಡ್ಡೆಗೆ ಬಂದ ಮತ್ತೊಬ್ಬ ಸ್ಟಾರ್ ? ನೀಲ್-ತಾರಕ್ ಜೊತೆ ಕೈ ಜೋಡಿಸಿದ ನಟ ಯಾರು?

ಸಾಮಾನ್ಯವಾಗಿ ಒಬ್ಬ ಸೂಪರ್ ಸ್ಟಾರ್ ನಾಯಕನ ಚಿತ್ರ ಆರಂಭವಾದರೆ, ಆ ಚಿತ್ರದ ಸುತ್ತಮುತ್ತ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ತಾವೆ. ಚಿತ್ರದ ಕಥೆ ಆದಿ ಸೇರಿ ಹಲವು ವಿಚಾರಗಳಿಂದ ಕುತೂಹಲ ತಂತಾನೇ ಗರಿಗೇದರುತ್ತೆ. ಅಂತಹದ್ದರಲ್ಲಿ ಸೂಪರ್ ಸ್ಟಾರ್ ಜೊತೆ ಬ್ಲಾಕ್ ಬಸ್ಟರ್ ಡೈರೆಕ್ಟರ್ ಕೈ ಜೋಡಿಸಿದರೆ ಕೇಳಬೇಕಾ..? ಆ ಚಿತ್ರದ ಕುತೂಹಲದ ಕಡಲು ಆಗಿರುತ್ತೆ. ಉದಾಹರಣೆಗೆ ಜ್ಯೂ.ಎನ್.ಟಿ.ಆರ್ ಮತ್ತು ಪ್ರಶಾಂತ್ ನೀಲ್ ಜೋಡಿಯ ಡ್ಯ್ರಾಗನ್.

ಹೌದು. ಮಾರುಕಟ್ಟೆಯ ವ್ಯಾಪ್ತಿಯನ್ನು ಮೀರಿ ಹಣ ಮತ್ತು ವರ್ಷಗಳಿಕೆ ಲೆಕ್ಕ ಇಡದೇ ಚಿತ್ರ ಮಾಡಿ ಗೆದ್ದವರು ಪ್ರಶಾಂತ್ ನೀಲ್. ''ಉಗ್ರಂ'' ಎಂಬ ಒಂದೇ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸೌಂಡ್ ಮಾಡಿದ ಪ್ರಶಾಂತ್ ನೀಲ್ ''ಕೆ.ಜಿ.ಎಫ್'' ಚಿತ್ರದ ಮೂಲಕ ಭಾರತದ ಸ್ಟಾರ್ ಡೈರೆಕ್ಟರ್ ಲಿಸ್ಟ್‌ಗೆ ಸೇರಿದರು. ಇವರ ಪ್ರಭೆ ಹೇಗಿದೆ ಅಂದರೆ ಸೌತ್ ಇಂಡಿಯಾದಲ್ಲಿ ರಾಜಮೌಳಿ ಅವರನ್ನು ಹೊರತು ಪಡಿಸಿದರೆ ಯಾರಾದರೂ ಶ್ರೇಷ್ಠ ನಿರ್ದೇಶಕ ಇದ್ದರೆ ಅದು ಪ್ರಶಾಂತ್ ನೀಲ್ ಮಾತ್ರ ಅನ್ನುವ ಮಾತುಗಳು ಕೇಳಿ ಬರ್ತಿವೆ.

Internet-Breaking Rumor Is Akhil Akkineni Set for a Game-Changing Cameo in NTR s Dragon

ಇದಕ್ಕೆ ಪೂರಕವಾಗಿ ಕನ್ನಡ ಚಿತ್ರರಂಗದಿಂದ ಕಣ್ಮರೆಯಾಗಿರುವ ಪ್ರಶಾಂತ್ ನೀಲ್ ತೆಲುಗು ಚಿತ್ರರಂಗದಲ್ಲಿಯೇ ಬಿಡಾರ ಹೂಡಿದ್ದಾರೆ. ಅಲ್ಲಿನ ಸ್ಟಾರ್‌ಗಳಿಗೆ ಚಿತ್ರವನ್ನು ಮಾಡುತ್ತಿದ್ದಾರೆ. ಆ ಪೈಕಿ ಜ್ಯೂನಿಯರ್ ಎನ್.ಟಿ.ಆರ್ ಚಿತ್ರ ಕೂಡ ಒಂದು. ಆ ಚಿತ್ರದ ಹೆಸರು ''ಡ್ರ್ಯಾಗನ್'' ( ವರ್ಕಿಂಗ್ ಟೈಟಲ್,ಇನ್ನೂ ಅಂತಿಮವಾಗಿಲ್ಲ)

ಆರಂಭದಿಂದಲೂ ಸದ್ದು ಗದ್ದಲ ಮಾಡುತ್ತಾ ಬಂದ ಈ ಚಿತ್ರದಲ್ಲಿ ಅನಿಲ್ ಕಪೂರ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಖುದ್ದು ಅನಿಲ್ ಕಪೂರ್ ಈ ವಿಚಾರವನ್ನು ತಮ್ಮಇನ್‌ಸ್ಟಾಗ್ರಾಮ್‌ನಲ್ಲಿ ''ಡ್ರ್ಯಾಗನ್'' ಚಿತ್ರದ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಖಚಿತ ಪಡಿಸಿದ್ದಾರೆ. ಇನ್ನೂ ನಾಯಕಿಯಾಗಿ ಬೇರೆ ಯಾರು ಅಲ್ಲ. ಬದಲಿಗೆ ಸದ್ಯದ ಸೆನ್ಸೇಷನ್ ರುಕ್ಮಿಣಿ ವಸಂತ್ ಇದ್ದಾರೆ.

ಹೀಗಿರುವಾಗ ಇದೀಗ ಈ ಚಿತ್ರದಲ್ಲಿ ನಾಗಾರ್ಜುನ ಮಗ ಅಖಿಲ್ ಅಕ್ಕಿನೇನಿ ಕೂಡ ಇದ್ದಾರೆ ಎನ್ನುವ ಸುದ್ದಿ ಸದ್ಯ ಗಾಸಿಪ್ ಅಂಗಳದಲ್ಲಿ ಗುಲ್ಲಾಗಿದೆ. ಹೌದು, ಪ್ರಶಾಂತ್ ನೀಲ್ ಮತ್ತು ಅಖಿಲ್ ಅಕ್ಕಿನೇನಿ ನಡುವೆ ಸ್ನೇಹದ ಕೊಂಡಿ ಬೆಸೆದಿದೆ. ''ಕೆಜಿಎಫ್ 2'' ಬಿಡುಗಡೆಯಾದ ಸಮಯದಲ್ಲಿ ಈ ಚಿತ್ರವನ್ನು ಅತೀವವಾಗಿ ಮೆಚ್ಚಿಕೊಂಡವರಲ್ಲಿ ಅಖಿಲ್ ಕೂಡ ಒಬ್ಬರಾಗಿದ್ದರು. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿ ಪ್ರಶಾಂತ್ ನೀಲ್ ಅವರಿಗೆ ಬಹುಪರಾಕ್ ಹಾಕಿದ್ದರು.

ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಪ್ರಶಾಂತ್ ನೀಲ್ ಅವರ ಚಿತ್ರದಲ್ಲಿ ಪಾತ್ರ ಚಿಕ್ಕದಾದರೂ ಆ ಪಾತ್ರ ಬೀರುವ ಪ್ರಭಾವ ದೊಡ್ಡದಿರುತ್ತೆ. ಹೀಗಾಗಿ ಚಿತ್ರದಲ್ಲಿನ ಬಹುಮುಖ್ಯವಾದ ಕಥೆಗೆ ತಿರುವು ನೀಡುವಂತಹ ಪಾತ್ರವನ್ನು ಅಖಿಲ್ ಅವರಿಂದ ಮಾಡಿಸುವ ಆಲೋಚನೆ ಪ್ರಶಾಂತ್ ನೀಲ್ ಮಾಡಿದ್ದಾರೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ. ಅಖಿಲ್ ಅಕ್ಕಿನೇನಿ, ಜ್ಯೂ.ಎನ್‌ಟಿಆರ್ ಅವರ ಅಭಿಮಾನಿ ಕೂಡ ಹೌದು. ಈ ಹಿನ್ನೆಲೆ ಪ್ರಶಾಂತ್ ನೀಲ್ ಕೇಳಿದ ತಕ್ಷಣ ಅಖಿಲ್ ಕೂಡ ಒಪ್ಪಿಕೊಂಡಿದ್ಧಾರೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿದೆ.

Internet-Breaking Rumor Is Akhil Akkineni Set for a Game-Changing Cameo in NTR s Dragon

ಮೇ 20 ರಂದು ಜೂನಿಯರ್ ಎನ್‌ಟಿಆರ್ ಅವರ ಹುಟ್ಟುಹಬ್ಬದ ಪ್ರಯುಕ್ತ ''ಡ್ಯ್ರಾಗನ್'' ಚಿತ್ರದ ಕುರಿತು ಬಹುಮುಖ್ಯವಾದ ಮತ್ತು ಮಹತ್ವದ ಅಪ್‌ಡೇಟ್ ಸಿಗುವ ನಿರೀಕ್ಷೆ ಇದೆ. ಟೀಸರ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಅಂದೇ ಮಹತ್ವದ ಪಾತ್ರಗಳನ್ನು ಪ್ರಶಾಂತ್ ನೀಲ್ ರಿವೀಲ್ ಮಾಡುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗುತ್ತಿದೆ.

ಅಂದ್ಹಾಗೇ ಇತ್ತೀಚೆಗಷ್ಟೇ ಜೋಡರ್ನ್‌ ಮರುಭೂಮಿಯಲ್ಲಿ ಚಿತ್ರದ ಪ್ರಮುಖ ಭಾಗದ ಚಿತ್ರೀಕರಣವನ್ನು ಮುಗಿಸಿಕೊಂಡು ಜ್ಯೂ.ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಹೈದರಾಬಾದ್‌ಗೆ ಮರಳಿದ್ದಾರೆ. ಹಾಲಿವುಡ್ ಶೈಲಿಯ ಫೈಟ್ ಸೀಕ್ವೆನ್ಸ್‌ಗಳನ್ನು ಜೋಡರ್ನ್‌ನಲ್ಲಿ ಸೆರೆಹಿಡಿಯಲಾಗಿದೆ ಎನ್ನುವ ಸುದ್ದಿ ಇದ್ದು ಈ ಚಿತ್ರಕ್ಕೆ ತಾರಕ್ 15 ಕೆಜಿ ತೂಕ ಕೂಡ ಇಳಿಸಿಕೊಂಡಿದ್ದಾರೆ ಎಂದು ತೆಲುಗು ಮಾಧ್ಯಮಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿವೆ.

More from Filmibeat

English summary
NTR x Akhil Akkineni? Fans are in a frenzy over rumors of a secret cameo in Prashanth Neel’s next action epic, Dragon. Dive into the industry talk about this potential game-changing casting move!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X