ಮದುವೆಯಾಗಿ ವರ್ಷ ಕಳೆಯೋ ಮುನ್ನ 2ನೇ ಪತ್ನಿಗೂ ಬಬ್ಲೂ ಪೃಥ್ವಿರಾಜ್ ಡಿವೋರ್ಸ್?
ಬೆಂಗಳೂರು ಮೂಲದ ನಟ ಬಬ್ಲೂ ಪೃಥ್ವಿರಾಜ್ ತಮಿಳು, ತೆಲುಗು ಚಿತ್ರರಂಗದಲ್ಲಿ ಹೆಚ್ಚು ಗುರ್ತಿಸಿಕೊಂಡರು. ಆಗೊಂದು ಈಗೊಂದು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಬಿಡಗಡೆಯಾಗಿ ಸಖತ್ ಸದ್ದು ಮಾಡುತ್ತಿರುವ 'ಅನಿಮಲ್' ಚಿತ್ರದಲ್ಲೂ ಪೃಥ್ವಿರಾಜ್ ನಟಿಸಿದ್ದಾರೆ.
ನಟ ಬಬ್ಲೂ ಪೃಥ್ವಿರಾಜ್ ವೈಯಕ್ತಿಕ ಜೀವನದ ಕುರಿತು ಹೇಳುವುದಾದರೆ 1994 ರಲ್ಲಿ ಬೀನಾ ಎಂಬುವವರ ಕೈ ಹಿಡಿದಿದ್ದರು. ಅಹೆದ್ ಮೊಹನ್ ಜಬ್ಬಾರ್ ಹೆಸರಿನ ಮಗನು ಇದ್ದಾನೆ. ಕೆಲ ಭಿನ್ನಾಭಿಪ್ರಾಯಗಳಿಂದ ಪೃಥ್ವಿರಾಜ್ ಹಾಗೂ ಬೀನಾ ಕಳೆದ ವರ್ಷ ನವೆಂಬರ್‌ನಲ್ಲಿ ಡಿವೋರ್ಸ್ ಪಡೆದು ದೂರಾಗಿದ್ದರು. 6 ವರ್ಷಗಳ ಕಾಲ ಪ್ರತ್ಯೇಕವಾಗಿದ್ದ ಜೋಡಿ ಕೊನೆಗೆ ಕಾನೂನಾತ್ಮಕವಾಗಿ ದೂರಾಗಲು ನಿರ್ಧರಿಸಿದ್ದರು.

ಬೆಂಗಳೂರಿನಲ್ಲಿ ಒಮ್ಮೆ ಸ್ನೇಹಿತೆಯ ಜೊತೆ ರುಕ್ಮಿಣಿ ಶೀತಲ್, ನಟ ಪೃಥ್ವಿರಾಜ್ ಅವರನ್ನು ನೋಡಿದ್ದರಂತೆ. ಜೊತೆಗಿದ್ದ ಸ್ನೇಹಿತೆ ಹೇ ಅವ್ರು ಆಕ್ಟರ್.. ಆಕ್ಟರ್ ಎಂದು ಗುರ್ತಿಸಿದ್ದರು. ಬಳಿಕ ಇಬ್ಬರು ಹೋಗಿ ಮಾತನಾಡಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರಂತೆ. ಅಲ್ಲಿಂದ ಶುರುವಾದ ಪರಿಚಯ, ಬಳಿಕ ಫೋನ್ ನಂಬರ್ ಬದಲಿಸಿಕೊಂಡು ಸ್ನೇಹಿತರಾಗಿದ್ದರು. ಆ ಸ್ನೇಹ ಕೊನೆ ಪ್ರೀತಿಗೆ ತಿರುಗಿ ಕೊನೆಗೆ ಮದುವೆವರೆಗೂ ಹೋಯಿತು ಎಂದು ಸಂದರ್ಶನವೊಂದರಲ್ಲಿ ಇಬ್ಬರೂ ಹೇಳಿಕೊಂಡಿದ್ದರು.
ಮೊದಲ ಪತ್ನಿಯಿಂದ ದೂರಾಗಿದ್ದ ಬೆನ್ನಲ್ಲೇ ಪೃಥ್ವಿರಾಜ್ 2ನೇ ಮದುವೆ ಆಗಿದ್ದರು. ತಮಗಿಂತ ವಯಸ್ಸಿನಲ್ಲಿ ಬಹಳ ಚಿಕ್ಕವರಾದ ರುಕ್ಮಿಣಿ ಶೀತಲ್ ಎಂಬುವವರನ್ನು ಪತ್ನಿ ಎಂದು ಪರಿಚಯಿಸಿದ್ದರು. ತನ್ನ 56ನೇ ವಯಸ್ಸಿನಲ್ಲಿ ತನ್ನ ಮಗಳ ವಯಸ್ಸಿನ ಹುಡುಗಿಯನ್ನು ಪೃಥ್ವಿ ಮದುವೆ ಆಗಿದ್ದಾರೆ ಎಂದು ಕೆಲವರು ಮಾತನಾಡಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಪೃಥ್ವಿರಾಜ್ ಎರಡನೇ ಮದುವೆ ನಡೆದಿತ್ತು.
ದಿಢೀರನೇ ಬಬ್ಲೂ ಪೃಥ್ವಿರಾಜ್ ತಮ್ಮ 2ನೇ ಪತ್ನಿಯಿಂದಲೂ ದೂರಾಗಿದ್ದಾರೆ, ಮತ್ತೆ ಡಿವೋರ್ಸ್‌ಗೆ ಎನ್ನುವ ಗುಸುಗುಸು ಶುರುವಾಗಿದೆ. ಬಬ್ಲೂ ತಮಗೆ ಪ್ರಪೋಸ್ ಮಾಡಿದ್ದ ವಿಡಿಯೋವನ್ನು ರುಕ್ಮಿಣಿ ಶೀತಲ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಇದ್ದಕ್ಕಿದಂತೆ ಆ ವಿಡಿಯೋ ಡಿಲೀಟ್ ಆಗಿರುವುದು ಇಂತಾದೊಂದು ಊಹಾಪೋಹಕ್ಕೆ ಕಾರಣವಾಗಿದೆ.
ಶೀಘ್ರದಲ್ಲೇ ಬಬ್ಲೂ ಹಾಗೂ ರುಕ್ಮಿಣಿ ಶೀತಲ್ ತಮ್ಮ ಡಿವೋರ್ಸ್ ಘೋಷಿಸುತ್ತಾರೆ ಎನ್ನುವ ಗುಸುಗುಸು ಟಾಲಿವುಡ್‌ನಲ್ಲಿ ಶುರುವಾಗಿದೆ. ಬಬ್ಲೂ ಹಾಗೂ ರುಕ್ಮಿಣಿ ಶೀತಲ್ ಇಬ್ಬರೂ ಕೂಡ ಫಿಟ್‌ನೆಸ್ ಫ್ರೀಕ್ ಆಗಿದ್ದಾರೆ. ಸದಾ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವ ವಿಡಿಯೋ, ಫೋಟೊಗಳನ್ನು ಶೇರ್ ಮಾಡುತ್ತಿದ್ದಾರೆ. 56ನೇ ವಯಸ್ಸಿನಲ್ಲೂ ಪೃಥ್ವಿ ಫಿಟ್‌ನೆಸ್ ಕಾಯ್ದುಕೊಂಡು ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ.
ಒಂದ್ಕಾಲದಲ್ಲಿ ಪೃಥ್ವಿರಾಜ್ ಬಹುಬೇಡಿಕೆಯ ಖಳನಟನಾಗಿ ಸೌತ್ ಸಿನಿದುನಿಯಾದಲ್ಲಿ ಗುರ್ತಿಸಿಕೊಂಡಿದ್ದರು. ತೆಲುಗಿನ 'ಪೆಳ್ಳಿ' ಚಿತ್ರದ ನಟನೆಗಾಗಿ ಆಂಧ್ರ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು. ತಮ್ಮ ನೆಗೆಟಿವ್ ರೋಲ್‌ಗಳಿಂದಲೇ ಹೆಚ್ಚು ಪೃಥ್ವಿರಾಜ್ ಗುರ್ತಿಸಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಮಾತ್ರವಲ್ಲದೇ ಕಿರುತೆರೆ ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದಾರೆ. ನಿರೂಪಕರಾಗಿಯೂ ಕಾಣಿಸಿಕೊಂಡಿದ್ದಾರೆ.
1971ರಲ್ಲಿ ಬಾಲನಟನಾಗಿ ಬಬ್ಲೂ ಪೃಥ್ವಿರಾಜ್ ಚಿತ್ರರಂಗ ಪ್ರವೇಶಿಸಿದ್ದರು. ಒಂದಷ್ಟು ಸಿನಿಮಾಗಳಲ್ಲಿ ಬಾಲನಟನಾಗಿ ನಟಿಸಿದ ಬಳಿಕ 1985ರಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದರು. ಆರಂಭದಲ್ಲಿ ಹೆಚ್ಚು ತಮಿಳು ಸಿನಿಮಾಗಳಲ್ಲಿ ನಟಿಸಿದ ಬಬ್ಲೂ ಬಳಿಕ ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಕನ್ನಡದಲ್ಲಿ ಪೃಥ್ವಿರಾಜ್ ನಟಿಸಿದ ಮೊದಲ ಸಿನಿಮಾ 'ಸರ್ಕಲ್ ಇನ್ಸ್‌ಪೆಕ್ಟರ್'.
'ಶ್ವೇತ ನಾಗು', 'ಭಗವಾನ್', 'ಕೊಲೆಗಾರ' ಸೇರಿದಂತೆ ಮೂರ್ನಾಲ್ಕು ಕನ್ನಡ ಸಿನಿಮಾಗಳಲ್ಲಿ ಪೃಥ್ವಿರಾಜ್ ನಟಿಸಿದ್ದಾರೆ. 'ಸಮರಸಿಂಹ ರೆಡ್ಡಿ', 'ದೇವುಳ್ಳು', 'ನಾಗೇಶ್ವರಿ', 'ಗೌತಮ್ ಎಸ್‌ಎಸ್‌ಸಿ', 'ಅವಳ್ ವರುವಾಳ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಪೃಥ್ವಿರಾಜ್ ನಟಿಸಿದ್ದಾರೆ. ಪೃಥ್ವಿರಾಜ್ ತಮ್ಮದೇ ಯೂಟ್ಯೂಬ್ ಚಾನಲ್ ಹೊಂದಿದ್ದು ಪತ್ನಿ ಜೊತೆಗಿನ ಶಾಪಿಂಗ್, ಕುಕ್ಕಿಂಗ್, ಟ್ರಿಪ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.


Click it and Unblock the Notifications











