74 ವರ್ಷ ವಯಸ್ಸಿನ ಹೀರೊ ಚಿತ್ರದಲ್ಲಿ 34ರ ಪೂಜಾ ಹೆಗ್ಡೆ ಐಟಂ ಸಾಂಗ್?
ಕಮರ್ಷಿಯಲ್ ಚಿತ್ರಗಳಲ್ಲಿ ಸ್ಪೆಷಲ್ ಸಾಂಗ್ ಇರಲೇಬೇಕು ಎನ್ನುವುದು ಕೆಲವರ ವಾದ. ಸಿನಿಮಾ ಚೆನ್ನಾಗಿದ್ದರೆ ಐಟಂ ಸಾಂಗ್ ಮಾಡಿ ಪ್ರೇಕ್ಷಕರನ್ನು ಸೆಳೆಯುವ ಅವಶ್ಯಕತೆ ಇಲ್ಲ ಎನ್ನುವವರು ಇದ್ದಾರೆ. 'ಜೈಲರ್', 'ಸ್ತ್ರೀ- 2', 'ಪುಷ್ಪ-1' ಹಾಗೂ 'ಪಾರ್ಟ್- 2' ಚಿತ್ರಗಳ ಸಕ್ಸಸ್‌ನಲ್ಲಿ ಈ ಸ್ಪೆಷಲ್ ಸಾಂಗ್ಸ್ ಪಾಲೂ ಇದೆ.
ಮತ್ತೆ ಚಿತ್ರರಂಗದಲ್ಲಿ ಐಟಂ ಸಾಂಗ್ಸ್ ಟ್ರೆಂಡ್ ಜೋರಾಗಿದೆ. 'ಜೈಲರ್' ಚಿತ್ರದ ಕಾವಾಲಯ್ಯ, ಸ್ತ್ರೀ-2 ಚಿತ್ರದ 'ಆಜ್‌ಕಿ ರಾತ್', 'ಪುಷ್ಪ' ಚಿತ್ರದ ಊ ಅಂಟಾವಾ' ಹಾಗೂ 'ಪುಷ್ಪ'-2 ಚಿತ್ರದ 'ಕಿಸ್ಸಿಕ್' ಸಾಂಗ್ಸ್ ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಹಾಗಾಗಿ ದೊಡ್ಡ ಕಮರ್ಷಿಯಲ್ ಚಿತ್ರಗಳಿಗೆ ಇಂತಹ ಸ್ಪೆಷಲ್ ಡ್ಯಾನ್ಸಿಂಗ್ ನಂಬರ್ಸ್ ಬೇಕು ಎಂದು ನಿರ್ಮಾಪರು, ನಿರ್ದೇಶಕರು ಪಟ್ಟು ಹಿಡಿಯುತ್ತಿದ್ದಾರೆ.

ಐಟಂ ಸಾಂಗ್‌ಗಳಿಗೆ ಈಗ ಕೋಟಿ ಕೋಟಿ ಖರ್ಚು ಮಾಡುವಂತಾಗಿದೆ. ಒಳ್ಳೆ ಟ್ಯೂನ್ ಇರುವ ಸಾಂಗ್ಸ್ ಸಿದ್ಧವಾಗಬೇಕು. ಅದಕ್ಕೆ ಖ್ಯಾತ ನಟಿಯರನ್ನು ಕುಣಿಯಲು ಕರೆಸಬೇಕು. ಆಕೆ ಕೇಳಿದ್ದಷ್ಟು ಸಂಭಾವನೆ ಕೊಡಬೇಕು. ಅದ್ಧೂರಿ ಸೆಟ್ ಹಾಕಬೇಕು, ಚಿತ್ರೀಕರಣ ನಡೆಸಬೇಕು. ಇದಕ್ಕೆಲ್ಲಾ ನಿರ್ಮಾಪಕರ ಜೇಬು ಗಟ್ಟಿ ಇರಬೇಕು.
ಇನ್ನು ಸ್ಟಾರ್ ನಟಿಯರೇ ಐಟಂ ಸಾಂಗ್‌ಗಳಲ್ಲಿ ಕುಣಿಯಲು ಆರಂಭಿಸಿ ಬಹಳ ವರ್ಷಗಳಾಯಿತು. ಹಾಗಾಗಿ ಹೈಪ್ ಕ್ರಿಯೇಟ್ ಮಾಡಲು ಸ್ಟಾರ್ ನಟಿಯರು ಕೇಳಿದಷ್ಟು ಸಂಭಾವನೆ ಕೊಟ್ಟು ಕುಣಿಸಲಾಗುತ್ತಿದೆ. ರಜನಿಕಾಂತ್ ನಟನೆಯ 'ಕೂಲಿ' ಚಿತ್ರದಲ್ಲಿ ಪೂಜಾ ಹೆಗ್ಡೆ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕ್ತಾರೆ ಎಂದು ಗುಲ್ಲಾಗಿದೆ. ಪೂಜಾ ಈಗಾಗಲೇ 'ರಂಗಸ್ಥಳಂ' ಚಿತ್ರದ 'ಜಿಗೇಲು ರಾಣಿ' ಹಾಗೂ 'F3' ಚಿತ್ರದ 'ಲೈಫ್ ಅಂಟೆ' ಹಾಡುಗಳಿಗೆ ಕುಣಿದು ಸೈ ಎನಿಸಿಕೊಂಡಿದ್ದಾರೆ.

ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಉಪೇಂದ್ರ, ರಚಿತಾರಾಮ್, ಆಮೀರ್ ಖಾನ್ ಸೇರಿದಂತೆ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಚಿತ್ರಕ್ಕೆ ಪೂಜಾ ಹೆಗ್ಡೆ ಸ್ಪೆಷಲ್ ಸಾಂಗ್ ಬೇಕು ಎನ್ನುವ ಚರ್ಚೆ ನಡೀತಿದೆಯಂತೆ. ಸನ್ ಪಿಕ್ಚರ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ಹೈದರಾಬಾದ್, ವಿಶಾಖಪಟ್ಟಂ, ಬ್ಯಾಂಕಾಕ್, ಜೈಪುರದಲ್ಲಿ ಚಿತ್ರೀಕರಣ ನಡೆದಿದೆ.
ಅದ್ಯಾಕೋ ಬಾಲಿವುಡ್ ಬೆಡಗಿ ಪೂಜಾ ಹೆಗ್ಡೆ ಆರಕ್ಕೇರದ ಮೂರಕ್ಕಿಳಿಯದ ನಟಿಯಾಗಿ ಉಳಿದುಬಿಟ್ಟಿದ್ದಾರೆ. ಸ್ಟಾರ್ ನಟರ ಜೊತೆ ನಟಿಸಿದರೂ ದೊಡ್ಡ ಬ್ರೇಕ್ ಮಾತ್ರ ಸಿಗುತ್ತಿಲ್ಲ. ಸದ್ಯ ತಮಿಳಿನ 'ರೆಟ್ರೋ', 'ಜನನಾಯಗನ್' ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. 'ಕಾಂಚನಾ'-4 ಚಿತ್ರದಲ್ಲಿ ಕೂಡ ನಟಿಸುತ್ತಾರೆ ಎನ್ನಲಾಗ್ತಿದೆ.
'ಜೈಲರ್' ಚಿತ್ರದಲ್ಲಿ ತಮನ್ನಾ ಹೆಜ್ಜೆ ಹಾಕಿದ್ದ 'ಕಾವಾಲಯ್ಯ' ಸಾಂಗ್ ಹಿಟ್ ಆಗಿದೆ. ಚಿತ್ರದ ಸಕ್ಸಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಹಾಗಾಗಿ ರಜನಿಕಾಂತ್ ಕೂಡ 'ಕೂಲಿ' ಚಿತ್ರದ ಸ್ಪೆಷಲ್ ಸಾಂಗ್‌ಗೆ ಒಪ್ಪಿದ್ದಾರೆ ಎನ್ನಲಾಗ್ತಿದೆ.
ದೀಪಾವಳಿ ವೇಳೆಗೆ 'ಕೂಲಿ' ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. 'ಕೈದಿ', 'ಮಾಸ್ಟರ್', 'ವಿಕ್ರಂ' ಹಾಗೂ 'ಲಿಯೋ' ರೀತಿಯ ಸೆನ್ಸೇಷನ್ ಸಿನಿಮಾಗಳನ್ನು ಲೋಕೇಶ್ ಕಟ್ಟಿಕೊಟ್ಟಿದ್ದಾರೆ. ಹಾಗಾಗಿ ರಜನಿಕಾಂತ್- ಲೋಕೇಶ್ ಕಾಂಬಿನೇಷನ್ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ.


Click it and Unblock the Notifications











