ನಟಿ ರಮ್ಯಾ ಮದುವೆ ಸಮಾಚಾರ: ಸಂಗಾತಿ ಬಗ್ಗೆ ರಮ್ಯಾ ಅಭಿಪ್ರಾಯ!

ನಟಿ ಮೋಹಕ ತಾರೆ ರಮ್ಯಾ ಇತ್ತೀಚೆಗೆ ಸಿನಿಮಾ ರಂಗದಲ್ಲಿ ಹೆಚ್ಚು ಸಕ್ರಿಯ ಆಗಿದ್ದಾರೆ. ಇಷ್ಟು ದಿನ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದ ರಮ್ಯಾ ಅವರು ಇದೀಗ ಸಿನಿಮಾ ವಿಚಾರಕ್ಕೆ ಸಂಬಂಧಪಟ್ಟ ವಿಷಯಗಳ ಮೂಲಕ ಸುದ್ದಿ ಆಗುತ್ತಾ ಇದ್ದಾರೆ. ಒಂದಷ್ಟು ಸಿನಿಮಾ ವಿಚಾರಗಳಿಗೆ ರಮ್ಯಾ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡುತ್ತಾ ಇರುತ್ತಾರೆ. ಜೊತೆಗೆ ಒಂದಷ್ಟು ಕನ್ನಡ ಸಿನಿಮಾಗಳ ಪೋಸ್ಟರ್, ಹಾಡುಗಳು ಹಂಚಿಕೊಳ್ಳುವ ಮೂಲಕ ರಮ್ಯಾ ಆ ಚಿತ್ರಗಳಿಗೆ ಸಾಥ್ ನೀಡುತ್ತಲಿರುತ್ತಾರೆ.

ಇತ್ತೀಚೆಗೆ ರಮ್ಯಾ ಕಾಣಿಸಿಕೊಂಡಿದ್ದು ನಟಿ ಅಮೂಲ್ಯ ಸೀಮಂತ ಪಾರ್ಟಿ ಕಾರ್ಯಕ್ರಮದಲ್ಲಿ. ಅಮೂಲ್ಯ ಸೀಮಂತ ಪಾರ್ಟಿಯಲ್ಲಿ ಸ್ಯಾಂಡಲ್‌ವುಡ್‌ನ ಅನೇಕ ಸೆಲೆಬ್ರೆಟಿಗಳು ಭಾಗಿ ಆಗಿದ್ದರು. ಅದರಲ್ಲಿ ರಮ್ಯಾ ಕೂಡ ಒಬ್ಬರು. ರಮ್ಯಾ ಪಾರ್ಟಿಗೆ ಬಂದಿದ್ದು ಕೊಂಚ ಅಚ್ಚರಿಯ ವಿಚಾರವೇ. ಅಮೂಲ್ಯವಾದ ಉಡುಗೊರೆಯನ್ನು ಅಮೂಲ್ಯಗೆ ನೀಡಿ ನಟಿ ರಮ್ಯಾ ಸುದ್ದಿಯಾಗಿದ್ದರು. ಹೀಗೆ ಸಿನಿಮಾರಂಗದಕ್ಕೆ, ಸಿನಿಮಾ ಮಂದಿಗೆ ಸಂಬಂಧಪಟ್ಟ ಕಾರ್ಯಕ್ರಮಗಳಲ್ಲಿ ರಮ್ಯಾ ಭಾಗಿ ಆಗುತ್ತಿದ್ದಾರೆ.

ಇದರ ನಡುವೆ ಹೆಚ್ಚು ಸದ್ದು ಮಾಡಿದ ಸುದ್ದಿ ಅಂದರೆ ರಮ್ಯಾ ಕಮ್ ಬ್ಯಾಕ್ ಯಾವಾಗ ಎನ್ನುವುದು. ಆದರೆ ಇದೀಗ ರಮ್ಯಾ ತಮ್ಮ ಹೊಸ ಪೋಸ್ಟ್ ಮೂಲಕ ಅಚ್ಚರಿಯನ್ನು ಮೂಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೊಸದೊಂದು ಪೋಸ್ಟನ್ನು ಹಂಚಿಕೊಳ್ಳುವ ಮೂಲಕ ತಮ್ಮ ಸಂಗಾತಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಬಾಳಸಂಗಾತಿ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಮೋಹಕ ತಾರೆ!

ಬಾಳಸಂಗಾತಿ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಮೋಹಕ ತಾರೆ!

ನಟಿ ರಮ್ಯಾ ಮುಂದಿನ ಸಿನಿಮಾ ಯಾವಾಗ ಎನ್ನುವುದಕ್ಕೆ ಉತ್ತರ ಸಿಕ್ಕಿದೆ. ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಕಥೆಗಳನ್ನು ಕೇಳುತ್ತಿದ್ದೇನೆ ಎಂದು ರಮ್ಯಾ ಹೇಳಿಕೊಂಡಿದ್ದರು. ಇದೀಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಪೋಸ್ಟನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಬಾಳಸಂಗಾತಿ ಎಂದರೇನು ಹೇಗೆ ಇರಬೇಕು ಎನ್ನುವ ಬಗ್ಗೆ ಬರೆಯಲಾಗಿದೆ. ಹಾಗಾಗಿ ಈ ಪೋಸ್ಟ್ ನೋಡಿದ್ರೆ ರಮ್ಯಾ ತಮ್ಮ ಬಾಳ ಸಂಗಾತಿ ಹೇಗಿರಬೇಕು ಎಂದು ಹೇಳುತ್ತಿದ್ದಾರೆ ಎಂದು ಅನಿಸದೇ ಇರದು.

ಬಂಧ ಎನ್ನುವುದು ಕೇವಲ ಜೊತೆಗಾರರನ್ನು ಹುಡುಕುವುದಿಲ್ಲ- ನಟಿ ರಮ್ಯ

ಬಂಧ ಎನ್ನುವುದು ಕೇವಲ ಜೊತೆಗಾರರನ್ನು ಹುಡುಕುವುದಿಲ್ಲ- ನಟಿ ರಮ್ಯ

ಹೌದು ನಟಿ ರಮ್ಯಾ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಬಾಳಸಂಗಾತಿ ಅಥವಾ ಜೀವನದ ಜೊತೆಗಾರರು ಹೇಗೆ ಇರಬೇಕು ಎನ್ನುವುದನ್ನು ಹೇಳಿಕೊಂಡಿದ್ದಾರೆ. "ಕೇವಲ ದೋಷರಹಿತ ಭಾವನಾತ್ಮಕ ಪ್ರಬುದ್ಧತೆಯನ್ನು ಹೊಂದಿರುವ ಸಂಗಾತಿಯನ್ನು ಹುಡುಕುವುದಲ್ಲ. ಬದ್ಧತೆಯನ್ನು ಹೊಂದಿರುವ ಸಂಗಾತಿಯನ್ನು ಹುಡುಕಬೇಕು. ಕೇವಲ ಸಂಬಂಧಕ್ಕೆ ಮಾತ್ರವಲ್ಲ, ತಮ್ಮನ್ನು ತಾವು ಸರಿಪಡಿಸಿಕೊಳ್ಳುವ ಬದ್ಧತೆಯಿಂದಾಗಿ ಅವರು ಉತ್ತಮವಾಗಿ ಪ್ರೀತಿಸಬಹುದು, ಸ್ಪಷ್ಟತೆಯನ್ನು ನೋಡಬಹುದು ಮತ್ತು ಹೆಚ್ಚಿನ ಉಪಸ್ಥಿತಿಯನ್ನು ಹೊಂದಬಹುದು." ಎಂದು ರಮ್ಯಾ ಅವರ ಪೋಸ್ಟ್‌ನಲ್ಲಿ ಬರೆಯಲಾಗಿದೆ.

ರಮ್ಯಾ ಮದುವೆ ಯಾವಾಗ?

ರಮ್ಯಾ ಮದುವೆ ಯಾವಾಗ?

ನಟಿ ರಮ್ಯಾ ಸ್ಯಾಂಡಲ್‌ವುಡ್‌ನಲ್ಲಿ ಸಕ್ರಿಯವಾಗಿದ್ದಾಗ ಈ ಹಿಂದೆ ಅವರ ಮದುವೆ ಸುದ್ದಿ ಅಷ್ಟಾಗಿ ಸದ್ದು ಮಾಡಿರಲಿಲ್ಲ. ನಂತರ ಅವರು ರಾಜಕೀಯಕ್ಕೆ ಕಾಲಿಟ್ಟ ಬಳಿಕ ರಮ್ಯಾ ಮದುವೆ ಆಗುತ್ತಾರೆ ಎನ್ನುವ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು. ಆದರೆ ಅದ್ಯಾವುದೂ ನಿಜವಾಗಿಲ್ಲ. ಇದೀಗ ರಮ್ಯಾ ಸಂಗಾತಿ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಹಾಗಾಗಿ ರಮ್ಯಾ ತೆರೆಮರೆಯಲ್ಲಿ ಮದುವೆಗೆ ಸಜ್ಜಾಗುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ. ಅವರ ಪೋಸ್ಟ್‌ಗೆ ಮದುವೆ ಯಾವಾಗ ಎನ್ನುವ ಕಮೆಂಟ್‌ಗಳು ಕೂಡ ಬಂದಿವೆ.

ಕಥೆ ಕೇಳ್ತಿದ್ದೀನಿ ಸಿನಿಮಾ ಮಾಡ್ತೀನಿ ಎಂದ ರಮ್ಯಾ!

ಕಥೆ ಕೇಳ್ತಿದ್ದೀನಿ ಸಿನಿಮಾ ಮಾಡ್ತೀನಿ ಎಂದ ರಮ್ಯಾ!

ನಟಿ ರಮ್ಯಾ ಸಿನಿಮಾರಂಗಕ್ಕೆ ವಾಪಸ್ ಬರುವ ಬಗ್ಗೆ ಸಾಕಷ್ಟು ಕುತೂಹಲಗಳು, ನಿರೀಕ್ಷೆಗಳು ಮನೆ ಮಾಡಿದ್ದವು. ರಮ್ಯಾ ಕಮ್‌ ಬ್ಯಾಕ್‌ ಬಗ್ಗೆ ಇದ್ದ ಎಲ್ಲಾ ಪ್ರಶ್ನೆಗಳಿಗೆ ಅವರೆ ಉತ್ತರ ನೀಡಿದ್ದಾರೆ. ಸದ್ಯ ಹಲವು ಉತ್ತಮ ಸಿನಿಮಾ ಕಥೆಗಳನ್ನ ಕೇಳುತ್ತಿದ್ದೇನೆ. ಆದರೆ ಸದ್ಯದಲ್ಲಿಯೇ ಯಾವ ಸಿನಿಮಾದ ಮೂಲಕ ಬೆಳ್ಳಿಪರದೆ ಮೇಲೆ ಬರ್ತೀನಿ ಹೇಳುತ್ತೇನೆ, ಎಂದು ರಮ್ಯಾ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟ ಪಡಿಸಿದ್ದರು. ಹಾಗಾಗಿ ನಟಿ ರಮ್ಯಾ ಮತ್ತೆ ಸಿನಿಮಾರಂಗಕ್ಕೆ ವಾಪಸ್ ಬರುವುದು ಮಾತ್ರ ಖಚಿತವಾಗಿದೆ. ಆದರೆ ಯಾವ ಸಿನಿಮಾ ಎನ್ನುವುದು ಮಾತ್ರ ಇನ್ನು ರಿವೀಲ್ ಆಗಿಲ್ಲ.

More from Filmibeat

English summary
Is Actress Ramya Getting Marry, She Shared A Post About Life Partner
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X