ಮತ್ತೊಂದು ಮದುವೆ ಆಗದೇ ತಾಯಿಯಾಗಲು ನಿರ್ಧರಿಸಿದ್ರಾ ಸಮಂತಾ?

ಟಾಲಿವುಡ್ ನಟಿ ಸಮಂತಾ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಬೋಲ್ಡ್ ಫೋಟೊಶೂಟ್‌ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಮಯೋಸೈಟಿಸ್‌ನಿಂದ ಬಳಲುತ್ತಿರುವ ಸ್ಯಾಮ್ ಅದಕ್ಕಾಗಿ ಚಿಕಿತ್ಸೆ ಮುಂದುವರೆಸಿದ್ದಾರೆ. ಮೆಡಿಸಿನ್, ಐಸ್‌ಬಾತ್ ಥೆರಪಿ ಜೊತೆಗೆ ವರ್ಕ್‌ಔಟ್ ಮಾಡಿ ಹೋರಾಟ ಮಾಡುತ್ತಲೇ ಇದ್ದಾರೆ.

ಇತ್ತೀಚೆಗೆ ಸಮಂತಾ ನಟಿಸಿದ ಯಾವುದೇ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಕೊನೆಯದಾಗಿ ಆಕೆ ನಟಿಸಿದ 'ಖುಷಿ' ಸಿನಿಮಾ ರಿಲೀಸ್ ಆಗಿತ್ತು. ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕರೂ ಬಳಿಕ ಸಿನಿಮಾ ಮುಗ್ಗರಿಸಿತ್ತು. ಸದ್ಯ 'ಚೆನ್ನೈ ಸ್ಟೋರೀಸ್' ಎನ್ನುವ ಹಾಲಿವುಡ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ. 'ಸಿಟಾಡೆಲ್' ಹಿಂದೆ ವೆಬ್‌ ಸೀರಿಸ್ ಪೋಸ್ಟ್ ಪ್ರೊಡಕ್ಷನ್ ನಡೀತಿದೆ. ಇನ್ನುಳಿದಂತೆ ಆಕೆ ಯಾವುದೇ ಹೊಸ ಸಿನಿಮಾವನ್ನು ಒಪ್ಪಿಕೊಂಡಿಲ್ಲ.

Is actress Samantha Ruth Prabhu decided to adopt children?

2017ರಲ್ಲಿ ನಾಗಚೈತನ್ಯಾ ಜೊತೆ ಹಸೆಮಣೆ ಏರಿದ್ದ ಸಮಂತಾ 2021ರಲ್ಲಿ ಡಿವೋರ್ಸ್ ಪಡೆದು ದೂರಾಗಿದ್ದರು. ಐದಾರು ವರ್ಷ ಪರಸ್ಪರ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಮದುವೆಯಾಗಿದ್ದ ಜೋಡಿ ದೂರಾಗಿದ್ದು ಅಭಿಮಾನಿಗಳಿಗೆ ಬೇಸರ ತಂದಿತ್ತು. ಇಬ್ಬರೂ ದೂರಾಗಲು ಕಾರಣ ಏನು ಅನ್ನುವುದು ಮಾತ್ರ ಗೊತ್ತಾಗಲೇಯಿಲ್ಲ. ಡಿವೋರ್ಸ್ ಬಳಿಕ ಸಮಂತಾ ಸಾಕಷ್ಟು ನಿಂದನೆ, ಆರೋಪ, ಟ್ರೋಲ್ಸ್ ಎದುರಿಸಬೇಕಾಯಿತು. ಇದರಿಂದ ಸಾಕಷ್ಟು ನೊಂದ ಸಮಂತಾ ಕಾಯಿಲೆಯಿಂದಲೂ ಬಳಲುವಂತಾಯಿತು.

ಸಮಂತಾ ಎರಡನೇ ಮದುವೆ ಆಗಿವಂತೆ ಪೋಷಕರು ಒತ್ತಡ ಹಾಕುತ್ತಿದ್ದಾರೆ. ವಯಸ್ಸು 36 ಆಯ್ತು. ಇನ್ನು ತಡವಾದರೆ ಕಷ್ಟ, ಮದುವೆಯಾಗಿ ಖುಷಿಯಾಗಿರು ಎಂದು ಮಗಳಿಗೆ ಹೇಳುತ್ತಿದ್ದಾರಂತೆ. ಆದರೆ ಮತ್ತೊಂದು ಮದುವೆ ವಿಚಾರದಲ್ಲಿ ಸ್ಯಾಮ್ ಕಠಿಣ ನಿರ್ಣಯ ಕೈಗೊಂಡಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಸಮಂತಾಗೆ ಮಾತ್ರ ಮದುವೆ ಆಲೋಚನೆ ಇಲ್ಲವಂತೆ. ಒಂಟಿಯಾಗಿಯೇ ಇರಲು ತೀರ್ಮಾನಿಸಿದ್ದಾರೆ ಎನ್ನುವ ಮಾತುಗಳು ಟಾಲಿವುಡ್‌ನಲ್ಲಿ ಕೇಳಿಬರ್ತಿದೆ.

Is actress Samantha Ruth Prabhu decided to adopt children?

ಸ್ಯಾಮ್ ಇನ್ನುಳಿದ ಜೀವನವನ್ನು ನಟನೆ, ಸಾಮಾಜಿಕ ಕಾರ್ಯಕ್ರಮಗಳಿಗೆ ವ್ಯಯಿಸಬೇಕು ಎಂದುಕೊಂಡಿದ್ದಾರಂತೆ. ಇನ್ನು ಇಬ್ಬರು ಮಕ್ಕಳನ್ನು ದತ್ತು ಪಡೆಯುವ ಮೂಲಕ ತಾಯಿಯಾಗಬೇಕು ಎನ್ನುವ ಆಸೆಯನ್ನು ಪೂರೈಸಿಕೊಳ್ಳಲು ಮನಸ್ಸು ಮಾಡಿದ್ದಾರೆ ಎನ್ನಲಾಗ್ತಿದೆ. ಇದರಲ್ಲಿ ಯಾವುದು ನಿಜ? ಯಾವುದು ಸುಳ್ಳು? ಎನ್ನುವುದು ಗೊತ್ತಿಲ್ಲ. ಒಟ್ನಲ್ಲಿ ಇದೇ ವಿಚಾರ ಈಗ ಭಾರೀ ಸದ್ದು ಮಾಡ್ತಿದೆ.

9 ವರ್ಷಗಳಿಂದ ಸಮಂತಾ ಪ್ರತ್ಯೂಷಾ ಸಪೋರ್ಟ್ ಎಂಬ ಚಾರಿಟಿ ನಡೆಸುತ್ತಿದ್ದಾರೆ. ಈ ಸಂಸ್ಥೆಯು ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ. ಇದೇ ಕಾರಣಕ್ಕೆ ಸ್ಯಾಮ್ ಮಕ್ಕಳನ್ನು ದತ್ತು ಪಡೆದು ತಾಯಿಯಾಗಲು ಮುಂದಾಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ ಎನ್ನುವ ವಾದವೂ ಇದೆ.

ಚೆನ್ನೈನಲ್ಲಿ ಹುಟ್ಟಿ ಬೆಳೆದ ಸಮಂತಾ 'ಯೇ ಮಾಯಾ ಚೆಸಾವೆ' ತೆಲುಗು ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. ಬಳಿಕ ಒಂದಷ್ಟು ತಮಿಳು ಸಿನಿಮಾಗಳಲ್ಲಿ ನಟಿಸಿದ್ರು, ಬಳಿಕ ನಾಗಚೈತನ್ಯಾ ಕೈ ಹಿಡಿದು ಹೈದರಾಬಾದ್‌ನಲ್ಲೇ ಸೆಟ್ಲ್ ಆಗಿದ್ದರು. 'ದೂಕುಡು', 'ಈಗ', 'ಅತ್ತಾರಿಂಟಿಕಿ ದಾರೇದಿ', 'ಜನತಾ ಗ್ಯಾರೇಜ್', 'ಮಜಿಲಿ' ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಸಮಂತಾ ನಟಿಸಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸ್ಯಾಮ್, ತಮ್ಮ ಡಿವೋರ್ಸ್ ಹಾಗೂ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಿದ್ದರು. ನಿಮ್ಮ ಯಶಸ್ಸು ಮತ್ತು ವೈಫಲ್ಯಗಳನ್ನು ಪ್ರಜ್ಞಾಪೂರ್ವಕವಾಗಿ ಸ್ವೀಕರಿಸುತ್ತೀರಾ? ಎನ್ನುವ ಪ್ರಶ್ನೆಗೆ "ನನ್ನದು ವಿಫಲವಾದ ಮದುವೆ. ನನ್ನ ಆರೋಗ್ಯ ಮತ್ತು ಕೆಲಸದ ಮೇಲೆ ಪರಿಣಾಮ ಬೀರಿದಾಗ, ಅದು ತ್ರಿವಳಿ ಹೊಡೆತದಂತಿತ್ತು. ಬೂಮ್.. ಬೂಮ್.. ಬೂಮ್.. ಕಳೆದ 2 ವರ್ಷಗಳಿಂದ ನಾನು ಸಾಕಷ್ಟು ಅನುಭವಿಸಿದ್ದೇನೆ" ಎಂದಿದ್ದರು.

More from Filmibeat

English summary
Actress Samantha Ruth Prabhu has decided not to get married for the second time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X