For Quick Alerts
  ALLOW NOTIFICATIONS  
  For Daily Alerts

  'ಜೇಮ್ಸ್' ಚಿತ್ರದಲ್ಲಿ ರಚಿತಾ, ಆಶಿಕಾ, ಶ್ರೀಲೀಲಾ ಅಭಿನಯ?

  |

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್. ಸಾಕಷ್ಟು ನಿರೀಕ್ಷೆ ಇರುವ ಈ ಚಿತ್ರ ಇದೆ ಮಾರ್ಚ್ 17ಕ್ಕೆ ರಿಲೀಸ್ ಆಗುತ್ತಿದೆ. ಅದಕ್ಕೂ ಮುನ್ನ ಟೀಸರ್, ಪೋಸ್ಟರ್, ಸಾಂಗ್ ಮೂಲಕ ನಿರೀಕ್ಷೆ ಹುಟ್ಟು ಹಾಕಿದೆ. ಇತ್ತೀಚೆಗೆ ಜೇಮ್ಸ್ ಚಿತ್ರದ ಪ್ರಮೋಷನಲ್ ಹಾಡು ರಿಲೀಸ್ ಆಗಿದೆ.

  ಟ್ರೇಡ್‌ಮಾರ್ಕ್ ಎನ್ನುವ ಟೈಟಲ್ ಇರುವ ಹಾಡು ರಿಲೀಸ್ ಬಳಿಕ ವೈರಲ್ ಆಗಿದೆ. ಚಿತ್ರದಲ್ಲಿನ ನಟ ಪುನೀತ್ ರಾಜ್‌ಕುಮಾರ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಈ ಹಾಡಿನಲ್ಲಿ ರಿವೀಲ್ ಆಗಿದೆ. ಈ ಹಾಡಿನಲ್ಲಿ ಪುನೀತ್‌ ರಾಜ್‌ಕುಮಾರ್ ಮಾತ್ರ ಅಲ್ಲ, ಕನ್ನಡದ ಹಲವು ತಾರೆಯರು ಕಾಣಿಸಿಕೊಂಡಿದ್ದಾರೆ.

  ಅದರಲ್ಲೂ ಅಪ್ಪು ಬಿಟ್ಟರೆ ಹೆಚ್ಚಾಗಿ ಗಮನ ಸೆಳೆದಿದ್ದು ನಟಿ ರಚಿತಾ ರಾಮ್, ಆಶಿಕಾ ರಂಗನಾಥ್ ಮತ್ತು ಶ್ರೀಲೀಲಾ. ಈ ಮೂವರು ಕನ್ನಡದ ಸ್ಟಾರ್ ನಟಿಯರು ಒಂದೇ ಹಾಡಿನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಈ ಹಾಡಿನಲ್ಲಿ ಒಂದು ಕಡೆ ಪುನೀತ್‌ ರಾಜ್‌ಕುಮಾರ್ ಅವರ ಡ್ಯಾನ್ಸ್ ಇದ್ದರೆ, ಮತ್ತೊಂದು ಕಡೆ ಈ ಮೂರು ಚೆಲುವೆಯರ ಸ್ಟೈಲಿಶ್ ಡಾನ್ಸ್ ಇದೆ.

  ಸಾಂಗ್ ರಿಲೀಸ್ ಆದ ಬಳಿಕ ಪ್ರೇಕ್ಷಕರಲ್ಲಿ ಹೊಸ ಕುತೂಹಲ ಮೂಡಿದೆ. ಜೇಮ್ಸ್ ಚಿತ್ರದ ನಾಯಕಿ ಪ್ರಿಯಾ ಆನಂದ್. ಆದರೆ ಕನ್ನಡದ ಈ ಮೂವರು ನಾಯಕಿಯರು ಕೂಡ ಚಿತ್ರದಲ್ಲಿ ಇರಲಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ. ಆದರೆ ಈ ಪ್ರಶ್ನೆಗೆ ಚಿತ್ರತಂಡ ಸ್ಪಷ್ಟ ಉತ್ತರ ನೀಡಿಲ್ಲ. ಸಿನಿಮಾದಲ್ಲೇ ನೋಡಬೇಕು ಎಂದಿದೆ.

  ಈ ಹಾಡಿನ ಬಗ್ಗೆ ಮಾತನಾಡಿದ ನಿರ್ದೇಶಕ ಚೇತನ್ ಕುಮಾರ್ ಅವರು ಪುನೀತ್‌ ರಾಜ್‌ಕುಮಾರ್ ಅವರಿಗಾಗಿ ವಿಶೇಷ ಕೊಡುಗೆ ನೀಡಬೇಕೆನ್ನುವ ಪ್ರಯತ್ನ ಮಾಡಬೇಕೆಂದುಕೊಂಡು, ಈ ಹಾಡನ್ನು ತಯಾರಿಸಿರುವುದಾಗಿ ಹೇಳಿಕೊಂಡಿದ್ದಾರೆ. ಇದು ಚಿತ್ರದಲ್ಲಿ ಇಂಟ್ರೊಡಕ್ಷನ್ ಹಾಡು ಆಗಿರಲಿದೆ. ಈ ಹಾಡಿಗೆ ನಿರ್ದೇಶಕ ಚೇತನ್ ಅವರೆ ಸಾಹಿತ್ಯ ಬರೆದಿದ್ದಾರೆ. ರಚಿತಾ ರಾಮ್, ಶ್ರೀಲೀಲಾ, ಆಶಿಕಾ ರಂಗನಾಥ್ ಜೊತೆಗೆ ಸಂಗೀತ ನಿರ್ದೇಶಕ ಚರಣರಾಜ್ ಮತ್ತು ಚಂದನ್ ಶೆಟ್ಟಿ ಕೂಡ ಹೆಜ್ಜೆ ಹಾಕಿದ್ದಾರೆ.

  ಈ ಹಾಡಿನಲ್ಲಿ ಇರುವ ರಚಿತಾ ರಾಮ್, ಶ್ರಿಲೀಲಾ ಮತ್ತು ಅಶಿಕಾ ರಂಗನಾಥ್ ಮೂವರು ಚಿತ್ರದಲ್ಲಿ ಅಭಿನಯಿಸಿದ್ದಾರಾ ಎನ್ನುವ ಪ್ರಶ್ನೆಗೆ ಉತ್ತರ ನೀಡಲು ನಿರ್ದೇಶಕ ಚೇತನ್ ನಿರಾಕರಿಸಿದ್ದಾರೆ. ಹಾಗಾಗಿ ಬಹುಶಃ ಈ ನಟಿಯರು ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರಬಹುದು ಎನ್ನುವ ಸೂಚನೆ ಸಿಕ್ಕಿದೆ. ಆದರೆ ಅದು ಯಾವ ಪಾತ್ರ ಎನ್ನುವುದು ಮಾತ್ರ ಮಾರ್ಚ್ 17ರಂದು ಗೊತ್ತಾಗಲಿದೆ.

  English summary
  What Is Actress Sreeleela, Rachita Ram, Ashika Raganath Part Of James Movie
  Wednesday, March 2, 2022, 22:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X