Trisha Krishnan: ಕೊನೆಗೂ ಮದುವೆಗೆ ನಟಿ ತ್ರಿಷಾ ಗ್ರೀನ್‌ ಸಿಗ್ನಲ್? ಹುಡುಗ ಯಾರಂದ್ರೆ?

ಬಹುಭಾಷಾ ನಟಿ ತ್ರಿಷಾ ಕನ್ನಡ ಸಿನಿಮಾದಲ್ಲೂ ಬಣ್ಣ ಹಚ್ಚಿ ಮೋಡಿ ಮಾಡಿದ್ದಾರೆ. ಪದೇ ಪದೆ ಈ ಚೆನ್ನೈ ಚೆಲುವೆಯ ಮ್ಯಾರೇಜ್ ವಿಚಾರ ಚರ್ಚೆ ಆಗುತ್ತಿರುತ್ತದೆ. ಈ ಹಿಂದೆ ಒಮ್ಮೆ ಎಂಗೇಜ್‌ಮೆಂಟ್ ಆಗಿ ಆಕೆಯ ಮದುವೆ ನಿಂತು ಹೋಗಿತ್ತು. ವಯಸ್ಸು 40 ಗಡಿಯಲ್ಲಿದ್ದು ಇನ್ನು ತಡ ಮಾಡೋದು ಬೇಡ ಎಂದು ಆಕೆ ನಿರ್ಧರಿಸಿದಂತಿದೆ.

ಆರಂಭದಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರೂ ತ್ರಿಷಾಗೆ ಬ್ರೇಕ್ ಸಿಕ್ಕಿರಲಿಲ್ಲ. ತೆಲುಗಿನ 'ವರ್ಷಂ' ಸಿನಿಮಾ ಮೂಲಕ ಆಕೆಯ ಹವಾ ಶುರುವಾಯಿತು. ಅಲ್ಲಿಂದ ಮುಂದೆ ತೆಲುಗು, ತಮಿಳು ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡು ಮೋಡಿ ಮಾಡಿದ್ದರು. ಇತ್ತೀಚೆಗೆ ಬಂದ 'ಪೊನ್ನಿಯಿನ್ ಸೆಲ್ವನ್' ಸರಣಿಯಲ್ಲಿ ಕುಂದವೈ ಆಗಿ ತ್ರಿಷಾ ಗಮನ ಸೆಳೆದರು.

Trisha-krishnan-malayalam-producer-marriage

ಹೊಸ ನಟಿಯರ ಹಾವಳಿ ನಡುವೆ ತ್ರಿಷಾ ಕೊಂಚ ಮಂಕಾಗಿದ್ದರು. ಆದರೆ ಈಗ ಮತ್ತೆ ಆಕೆಯ ಕಾರುಬಾರು ಶುರುವಾಗಿದೆ. ಸದ್ಯ ದಳಪತಿ ವಿಜಯ್ ನಟನೆಯ 'ಲಿಯೋ' ಚಿತ್ರದಲ್ಲಿ ನಾಯಕಿಯಾಗಿ ನಟಿಸ್ತಿದ್ದಾರೆ. ಮಲಯಾಳಂನ 2 ಹಾಗೂ ತಮಿಳಿನ ಮತ್ತೆರಡು ಸಿನಿಮಾಗಳು ಆಕೆಯ ಕೈಯಲ್ಲಿವೆ. ಇದೆಲ್ಲದರ ನಡುವೆ ಆಕೆಯ ಮದುವೆ ಸುದ್ದಿ ಮತ್ತೊಮ್ಮೆ ವೈರಲ್ ಆಗುತ್ತಿದೆ.

ವಯಸ್ಸು ನಲವತ್ತಾದರೂ ತ್ರಿಷಾ ಯಾಕೆ ಇನ್ನು ಮದುವೆ ಆಗಿಲ್ಲ ಎಂದು ಅಭಿಮಾನಿಗಳು ಕೇಳುತ್ತಿರುತ್ತಾರೆ. ಆದರೆ ಈ ಆಕೆ ಹಸೆಮಣೆ ಏರುವ ಬಗ್ಗೆ ಚರ್ಚೆ ಶುರುವಾಗಿದೆ. ಶೀಘ್ರದಲ್ಲೇ ಆಕೆ ಮದುವೆ ವಿಚಾರ ಘೋಷಿಸುವ ಸುಳಿವು ಸಿಗುತ್ತಿದೆ. ಮಲಯಾಳಂನ ಪ್ರಮುಖ ನಿರ್ಮಾಪಕರೊಬ್ಬರ ಜೊತೆ ತ್ರಿಷಾ ಹೊಸ ಬಾಳಿಗೆ ಕಾಲಿಡುತ್ತಾರೆ ಎನ್ನಲಾಗ್ತಿದೆ. ಆದರೆ ಆತನ ಬಗ್ಗೆ ಇನ್ನು ಯಾವುದೇ ಮಾಹಿತಿಯನ್ನು ಆಕೆ ಬಿಟ್ಟುಕೊಟ್ಟಿಲ್ಲ. ಆತ ಮಲಯಾಳಂ ಸಿನಿಮಾ ನಿರ್ಮಾಪಕ, ಫೈನಾನ್ಶಿಯರ್ ಅನ್ನೋದು ಮಾತ್ರ ಗೊತ್ತಾಗುತ್ತಿದೆ.

Trisha-krishnan-malayalam-producer-marriage

ತನ್ನನ್ನು ಇಷ್ಟಪಡುವ ವ್ಯಕ್ತಿಯ ಜೊತೆ ತ್ರಿಷಾ ಮದುವೆಗೆ ಮುಂದಾಗಿದ್ದಾರಂತೆ. ಈ ಹಿಂದೆ ಮದುವೆ ವಿಚಾರದಲ್ಲಿ ಆಕೆಗೆ ಕಹಿ ಅನುಭವವಾಗಿತ್ತು. ಇನ್ನು ಸಾಕಷ್ಟು ಸೆಲೆಬ್ರಿಟಿಗಳ ಜೊತೆಗೂ ಆಕೆಯ ಹೆಸರು ತಳುಕು ಹಾಕಿಕೊಂಡಿತ್ತು. 2015ರಲ್ಲಿ ವರುಣ್ ಮಣಿಯನ್ ಎನ್ನುವ ಚೆನ್ನೈ ಉದ್ಯಮಿ ಜೊತೆ ಮದುವೆ ನಿಶ್ಚಿತಾರ್ಥ ಕೂಡ ನಡೆದಿತ್ತು. ಆದರೆ ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ ಆ ಮದುವೆ ನಿಂತು ಹೋಗಿತ್ತು.

ತ್ರಿಷಾ ಮದುವೆಗೆ ಮುರಿದು ಬೀಳಲು ನಟ ಧನುಷ್ ಕಾರಣ ಎನ್ನುವ ವದಂತಿ ಹರಡಿತ್ತು. ಇನ್ನು ರಾಣಾ ದಗ್ಗುಬಾಟಿ ಜೊತೆಗೆ ತ್ರಿಷಾ ಬಹಳ ಆಪ್ತವಾಗಿರುವ ಫೋಟೊಗಳು ವೈರಲ್ ಆಗಿ ಸುದ್ದಿ ಆಗಿತ್ತು. 2014ರಲ್ಲಿ ಬಂದ ಕನ್ನಡದ 'ಪವರ್' ಚಿತ್ರದಲ್ಲಿ ತ್ರಿಷಾ ನಾಯಕಿಯಾಗಿ ನಟಿಸಿದ್ದರು. ಪುನೀತ್ ರಾಜ್‌ಕುಮಾರ್ ಜೊತೆ ತೆರೆ ಹಂಚಿಕೊಂಡಿದ್ದರು.

'ಜೋಡಿ' ಎನ್ನುವ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸೋ ಮೂಲಕ ತ್ರಿಷಾ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ 'ಮೌನಂ ಪೇಸಿಯದೇ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. ಬಳಿಕ ಸಾಮಿ, ಗಿಲ್ಲಿ, ತಿರುಪಾಚ್ಚಿ, ಅತಡು, ಆಡವಾರಿ ಮಾಟಲಕು ಅರ್ಥಾಲೆ ವೇರುಲೇ, ವಿನೈತಾಂಡಿ ವರುವಾಯ ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಮಿಂಚಿದ್ದರು.

ಇದ್ದಕ್ಕಿದಂತೆ ಸೈಲೆಂಟ್ ಆಗಿದ್ದ ತ್ರಿಷಾಗೆ ವಿಜಯ್ ಸೇತುಪತಿ ಜೊತೆ ನಟಿಸಿದ '96' ಸಿನಿಮಾ ಮತ್ತೆ ಬ್ರೇಕ್ ಕೊಟ್ಟಿತ್ತು. ಅಲ್ಲಿಂದ ಮುಂದೆ ರಜನಿಕಾಂತ್ ನಟನೆಯ 'ಪೇಟ', 'ಪೊನ್ನಿಯಿನ್ ಸೆಲ್ವನ್' ಸರಣಿಯಲ್ಲಿ ಮಿಂಚಿದರು. ಕುಂದವೈ ಆಗಿ ಆಕೆಯ ನಟನೆಯ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಮಣಿರತ್ನಂ ನಿರ್ದೇಶನದಲ್ಲಿ ಬೆರಗು ಮೂಡಿಸಿದರು.

More from Filmibeat

English summary
actress Trisha krishnan to tie the knot with malayalam Producer?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X