For Quick Alerts
  ALLOW NOTIFICATIONS  
  For Daily Alerts

  ರಾಜಮೌಳಿ 'RRR' ಸಿನಿಮಾದಿಂದ ನಟಿ ಅಲಿಯಾ ಭಟ್ ಔಟ್?

  |

  ತೆಲುಗಿನ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಆರ್ ಆರ್ ಆರ್ ಸಿನಿಮಾದ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಿದೆ. ಈಗಾಗಲೆ ಸಾಕಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಮುಂದಿನ ವರ್ಷ ಸಿನಿಮಾವನ್ನು ತೆರೆಗೆ ಬರಲು ನಿರ್ಧರಿಸಿದೆ.

  ಆದರೆ ಇದರ ನಡುವೆ ಈಗ ಚಿತ್ರದಿಂದ ಆಘಾತಕಾರಿ ಸುದ್ದಿಯೊಂದು ಕೇಳಿ ಬರುತ್ತಿದೆ. ಆರ್ ಆರ್ ಆರ್ ಸಿನಿಮಾದ ನಾಯಕಿ ಬಾಲಿವುಡ್ ಸುಂದರಿ ಅಲಿಯಾ ಭಟ್ ಹೊರ ನಡೆದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅಂದ್ಹಾಗೆ ಇತ್ತೀಚಿಗಷ್ಟೆ ಚಿತ್ರತಂಡ ಸಧ್ಯದಲ್ಲೇ ನಟಿ ಅಲಿಯಾ ಸಿನಿಮಾತಂಡ ಸೇರಿಕೊಳ್ಳಲಿದ್ದಾರೆ ಎಂದು ಬಹಿರಂಗ ಪಡಿಸಿದ್ದರು. ಆದರೀಗ ಅಲಿಯಾ ಸಿನಿಮಾದಿಂದನೆ ಹೊರ ನಡೆದಿದ್ದಾರಂತೆ. ಮುಂದೆ ಓದಿ..

  ಕನ್ನಡಕ್ಕೆ ಬಂದ ಆಲಿಯಾ ಭಟ್: ಖಚಿತ ಪಡಿಸಿದ ಕರಣ್ ಜೋಹರ್ಕನ್ನಡಕ್ಕೆ ಬಂದ ಆಲಿಯಾ ಭಟ್: ಖಚಿತ ಪಡಿಸಿದ ಕರಣ್ ಜೋಹರ್

  ಸಿನಿಮಾದಿಂದ ಅಲಿಯಾ ಔಟ್?

  ಸಿನಿಮಾದಿಂದ ಅಲಿಯಾ ಔಟ್?

  ದಕ್ಷಿಣ ಭಾರತೀಯ ಚಿತ್ರರಂಗಮಾತ್ರವಲ್ಲದೆ, ಇಡೀ ಭಾರತೀಯ ಸಿನಿಮಾರಂಗದಲ್ಲಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಆರ್ ಆರ್ ಆರ್ ಸಿನಿಮಾ. ಚಿತ್ರದಲ್ಲಿ ನಟಿ ಅಲಿಯಾ ಭಟ್ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೀಗ ಬಿಗ್ ಬಜೆಟ್ ನ ಬಹುನಿರೀಕ್ಷೆಯ ಸಿನಿಮಾದಿಂದ ಹೊರಬಂದಿದ್ದಾರಂತೆ. ಅಲಿಯಾ ಇನ್ನು ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲವಂತೆ. ಅನೇಕ ಕಾರಣಗಳಿಂದ ಚಿತ್ರೀಕರಣ ಮುಂದೂಡುತ್ತಲೆ ಬಂದಿರುವ ಅಲಿಯಾ ಈಗ ಆರ್ ಆರ್ ಆರ್ ಸಿನಿಮಾ ಕೈಬಿಡುವ ನಿರ್ಧಾರಕ್ಕೆ ಬಂದಿದ್ದಾರಂತೆ.

  ತಿಂಗಳ ಹಿಂದೆಯೇ ಚಿತ್ರೀಕರಣದಲ್ಲಿ ಭಾಗಿಯಾಗಬೇಕಿತ್ತು

  ತಿಂಗಳ ಹಿಂದೆಯೇ ಚಿತ್ರೀಕರಣದಲ್ಲಿ ಭಾಗಿಯಾಗಬೇಕಿತ್ತು

  ತಿಂಗಳ ಹಿಂದೆಯ ಆರ್ ಆರ್ ಆರ್ ಸಿನಿಮಾದ ಗುಜರಾತ್ ಮತ್ತು ಉತ್ತರ ಭಾರತದ ಚಿತ್ರೀಕರಣ ಹಂತದಲ್ಲಿ ಅಲಿಯಾ ಭಾಗಿಯಾಗಬೇಕಿತ್ತು. ಆದರೆ ಸಮಯದಲ್ಲಿ ನಟ ರಾಮ್ ಚರಣ್ ಚಿತ್ರೀಕರಣ ವೇಳೆ ಗಾಯಗೊಂಡಿದ್ದರು. ಆ ಸಮಯದಲ್ಲಿ ಚಿತ್ರದ ಚಿತ್ರೀಕರಣ ರದ್ದು ಮಾಡಲಾಗಿತ್ತು. ಹಾಗಾಗಿ ನಟಿ ಅಲಿಯಾ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಲಿಲ್ಲ.

  ರಾಜಮೌಳಿ 'RRR' ಸಿನಿಮಾದ ಟೈಟಲ್ ಹಿಂದಿನ ರಹಸ್ಯ ಬಹಿರಂಗರಾಜಮೌಳಿ 'RRR' ಸಿನಿಮಾದ ಟೈಟಲ್ ಹಿಂದಿನ ರಹಸ್ಯ ಬಹಿರಂಗ

  ತಂಡಕ್ಕೆ ತಿಳಿಸದೆ ಯುಎಸ್ ಗೆ ಹಾರಿದ ಅಲಿಯಾ

  ತಂಡಕ್ಕೆ ತಿಳಿಸದೆ ಯುಎಸ್ ಗೆ ಹಾರಿದ ಅಲಿಯಾ

  ಆ ನಂತರ ಕೂಡ ಅಲಿಯಾ ಭಟ್ ಸಿನಿಮಾತಂಡ ಸೇರಿಕೊಳ್ಳಲಿಲ್ಲವಂತೆ. ಚಿತ್ರತಂಡಕ್ಕೆ ಹೇಳದೆ ಕೇಳದೆ ಅಲಿಯಾ ಯುಎಸ್ ಗೆ ಹಾರಿದ್ದರಂತೆ. ನಟ ರಣಬೀರ್ ಕಪೂರ್ ತಂದೆ ಆನಾರೋಗ್ಯದಿಂದ ಬಳಲುತ್ತಿದ್ದು, ಯುಎಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆ ಸಮಯದಲ್ಲಿ ಅಲಿಯಾ, ರಣಬೀರ್ ಜೊತೆ ಯುಎಸ್ ಗೆ ಹಾರಿದ್ದರು. ಆಗಲೂ ಆರ್ ಆರ್ ಆರ್ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿಲ್ಲ.

  ಕೊರೊನಾ ವೈರಸ್ ಪರಿಣಾಮ ಚಿತ್ರೀಕರಣ ರದ್ದು

  ಕೊರೊನಾ ವೈರಸ್ ಪರಿಣಾಮ ಚಿತ್ರೀಕರಣ ರದ್ದು

  ವಿವಿದ ಕಾರಣಗಳಿಂದ ಚಿತ್ರೀಕರಣ ಮುಂದೂಡುತ್ತನೆ ಬಂದಿದ್ದ ಅಲಿಯಾ ಈ ತಿಂಗಳು ಆರ್ ಆರ್ ಆರ್ ತಂಡ ಸೇರಿಕೊಳ್ಳಬೇಕಿತ್ತು. ಪುಣೆ ಮತ್ತು ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆಯುವ ಚಿತ್ರೀಕರದಲ್ಲಿ ಅಲಿಯಾರನ್ನು ಸ್ವಾಗತಿಸಲು ಚಿತ್ರತಂಡ ನಿರ್ಧರಿಸಿತ್ತು. ಆದರೀಗ ಕೊರೊನಾ ವೈರಸ್ ಪರಿಣಾಮ ಚಿತ್ರೀಕರಣ ರದ್ದು ಮಾಡಲಾಗಿದೆ. ಈ ಬಾರಿಯೂ ಅಲಿಯಾ ಭಾಗದ ಚಿತ್ರೀಕರಣ ಕ್ಯಾನ್ಸಲ್ ಆಗಿದೆ. ವಿವಿದ ಕಾರಣಗಳನ್ನು ನೀಡಿ ಪದೇ ಪದೇ ಚಿತ್ರೀಕರಣಕ್ಕೆ ಗೈರಾಗುತ್ತಿರುವುದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿದೆಯಂತೆ.

  ಡೇಟ್ ಹೊಂದಾಣಿಕೆಯಲ್ಲಿ ಅಲಿಯಾ

  ಡೇಟ್ ಹೊಂದಾಣಿಕೆಯಲ್ಲಿ ಅಲಿಯಾ

  ಅಲಿಯಾ ಭಟ್ ಅವರ ಡೇಟ್ ಹೊಂದಾಣಿಕೆ ಮಾಡಿಕೊಳ್ಳಲು ರಾಜಮೌಳಿ ಅಲಿಯಾ ಮ್ಯಾನೇಜರ್ ಬಳಿ ಸಂಪರ್ಕದಲ್ಲಿ ಇದ್ದಾರಂತೆ. ಆದರೆ ಅಲಿಯಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಹಾಗಾಗಿ ಡೇಟ್ ಹೊಂದಾಣಿಕೆ ಕಷ್ಟ ಎಂದು ಹೇಳಲಾಗುತ್ತಿದೆಯಂತೆ. ಇದರಿಂದ ಮತ್ತೆ ಅಲಿಯಾ ಆರ್ ಆರ್ ಆರ್ ಸಿನಿಮಾ ಸೇರಿಕೊಳ್ಳುವುದು ಅನುಮಾನ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹಾಗಾಗಿ ರಾಮೌಳಿಗೀಗ ದೊಡ್ಡ ತಲೆನೋವಾಗಿದೆಯಂತೆ. ಚಿತ್ರದಲ್ಲಿ ಅಲಿಯಾ ರಾಮ್ ಚರಣ್ ಗೆ ಜೋಡಿಯಾಗಿ ಕಾಣಿಸಿಕೊಳ್ಳಬೇಕಿತ್ತು.

  ಅಲಿಯಾ ಬಳಿ ಇರುವ ಸಿನಿಮಾಗಳು

  ಅಲಿಯಾ ಬಳಿ ಇರುವ ಸಿನಿಮಾಗಳು

  ಅಲಿಯಾ ಸದ್ಯ ಸಂಜಯ್ ದತ್ ಅಭಿನಯದ ಸಾದಕ್-2, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗುಬಾಯಿ ಕಥಿಯಾವಾಡಿ ಮತ್ತು ಬ್ರಾಹ್ಮಸ್ತ್ರ ಸಿನಿಮಾಗಳು ಒಟ್ಟಿಗೆ ಚಿತ್ರೀಕರಣ ನಡೆಯುತ್ತಿದೆ. ಹಾಗಾಗಿ ಆರ್ ಆರ್ ಆರ್ ಸಿನಿಮಾಗೆ ಸಮಯ ಹೊಂದಾಣಿಕೆ ಆಗುವುದು ಕಷ್ಟವಾಗುತ್ತಿದೆಯಂತೆ. ಹಾಗಾಗಿ ರಾಜಮೌಳಿ ಸಿನಿಮಾ ಕೈಬಿಡುವ ಸಾಧ್ಯತೆ ಹೆಚ್ಚಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದರಿಂದ ಅಲಿಯಾರನ್ನು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನೋಡ ಬಯಸಿದ್ದ ಅಭಿಮಾನಿಗಳಿಗೂ ನಿರಾಸೆ ಮೂಡಿದೆ.

  English summary
  Rumors is going around in Tollywood about Bollywood Actress Alia Bhatt walk out from Rajamouli's RRR movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X