'ಪುಷ್ಪ'-2 ಕ್ಲೈಮ್ಯಾಕ್ಸ್‌ ಸೀಕ್ರೇಟ್ ಲೀಕ್!; 'KGF-2' ಐಡಿಯಾ ಕಾಪಿ ಮಾಡ್ತಿದ್ದಾರಾ ಸುಕುಮಾರ್?

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸೀಕ್ವೆಲ್ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸ್ವಾತಂತ್ರ ದಿನಾಚರಣೆ ಸಂಭ್ರಮದಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಇದೀಗ 'ಪುಷ್ಪ'-2 ಕ್ಲೈಮ್ಯಾಕ್ಸ್ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿಯೊಂದು ವೈರಲ್ ಆಗುತ್ತಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಕೂಡ ಥ್ರಿಲ್ಲಾಗಿದ್ದಾರೆ.

'ಬಾಹುಬಲಿ' ಹಾಗೂ 'KGF' ಸರಣಿಗಳು ಭಾರತೀಯ ಚಿತ್ರರಂಗದ ದಿಕ್ಕು ಬದಲಿಸಿದ್ದು ಸುಳ್ಳಲ್ಲ. ಫಿಲ್ಮ್ ಮೇಕರ್ಸ್ ಸಿನಿಮಾ ಮಾಡುವ ಶೈಲಿಯನ್ನು ಕಥೆ ಹೇಳುವ ವಿಧಾನದಲ್ಲಿ ಭಾರೀ ಬದಲಾವಣೆಗೆ ಈ ಎರಡು ಸಿನಿಮಾಗಳು ನಾಂದಿ ಹಾಡಿದವು. ಈಗ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಟ್ರೆಂಡಿಂಗ್‌ನಲ್ಲಿದೆ. ಇನ್ನು ಒಂದೇ ಕಥೆಯನ್ನು ಎರಡು ಭಾಗಗಳಾಗಿ ಹೇಳುವ ಪ್ರಯತ್ನ ಕೂಡ ಹೆಚ್ಚಾಗುತ್ತಿದೆ.

 Is allu Arjuns Pushpa team follow Yashs KGF-2 climax route

ಸುಕುಮಾರ್ ನಿರ್ದೇಶನದಲ್ಲಿ ಬಂದ 'ಪುಷ್ಪ' ಸಿನಿಮಾ 350 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಪುಷ್ಪರಾಜ್ ಆಗಿ ನಟಿಸಿ ಅಲ್ಲು ಅರ್ಜುನ್ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡರು. ಆದರೆ ಸಾಕಷ್ಟು ಜನ 'ಪುಷ್ಪ' ಸರಣಿಯನ್ನು ಕನ್ನಡದ 'KGF' ಸರಣಿ ಜೊತೆ ಹೋಲಿಕೆ ಮಾಡಿದ್ದರು. ಪುಷ್ಪರಾಜ್ ಕಥೆಗೆ ರಾಜ ಕೃಷ್ಣಪ್ಪ ಬೈರ್ಯಾ ಅಲಿಯಾಸ್ ರಾಕಿ ಕಥೆಯೇ ಪ್ರೇರಣೆ ಎನ್ನುವವರು ಇದ್ದಾರೆ.

ಮೊದಲ ಭಾಗದಲ್ಲಿ ಗರುಡನ ರುಂಡ ಚೆಂಡಾಡಿ ನರಾಚಿ ಸಾಮ್ರಾಜ್ಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡ ರಾಕಿ, ಎರಡನೇ ಭಾಗದಲ್ಲಿ ಆ ಸಾಮ್ರಾಜ್ಯ ದೊರೆಯಾಗಿ ಹೇಗೆ ಮೆರೆದ ಎನ್ನುವುದನ್ನು ಹೇಳಲಾಗಿತ್ತು. ಅದೇ ರೀತಿ 'ಪುಷ್ಪ' ಚಿತ್ರದ ಮೊದಲ ಭಾಗದಲ್ಲಿ ರಕ್ತಚಂದನ ಸ್ಮಗ್ಲಿಂಗ್ ಮಾಫಿಯಾವನ್ನು ಪುಷ್ಪ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದನ್ನು ತೋರಿಸಲಾಗಿತ್ತು. ಸೀಕ್ವೆಲ್‌ನಲ್ಲಿ ಆತ ಹೇಗೆ ಆ ಭೂಗತ ಲೋಕವನ್ನು ಆಳುತ್ತಾನೆ ಎನ್ನುವುದನ್ನು ತೋರಿಸಲು ಚಿತ್ರತಂಡ ಮುಂದಾಗಿದೆ.

ಈಗಾಗಲೇ 'ಪುಷ್ಪ'-2 ಪೋಸ್ಟರ್, ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾ ಕಟ್ಟಿಕೊಡಲಾಗುತ್ತಿದೆ. ಇದೆಲ್ಲದರ ನಡುವೆ ಸಿನಿಮಾ ಕ್ಲೈಮ್ಯಾಕ್ಸ್ ಬಗ್ಗೆ ಕ್ರೇಜಿ ನ್ಯೂಸ್ ವೈರಲ್ ಆಗುತ್ತಿದೆ. ಪುಷ್ಪರಾಜ್ ಕಥೆ ಎರಡು ಭಾಗಗಳಲ್ಲಿ ಮುಗಿಯುವುದಿಲ್ಲ. 'ಪುಷ್ಪ'-3 ಕೂಡ ಬರುತ್ತದೆ ಎನ್ನಲಾಗ್ತಿದೆ. ಈಗಾಗಲೇ 'KGF'-3 ಸಿನಿಮಾ ಕೂಡ ಘೋಷಣೆ ಆಗಿದೆ.

 Is allu Arjuns Pushpa team follow Yashs KGF-2 climax route

'KGF'-2 ಕ್ಲೈಮ್ಯಾಕ್ಸ್‌ನಲ್ಲೇ ಮತ್ತೊಂದು ಸೀಕ್ವೆಲ್ ಬಗ್ಗೆ ಸುಳಿವು ಸಿಕ್ಕಿತ್ತು. ಇದೇ ರೀತಿ ಈಗ 'ಪುಷ್ಪ'-2 ಕ್ಲೈಮ್ಯಾಕ್ಸ್‌ನಲ್ಲಿ ಟ್ವಿಸ್ಟ್ ಕೊಡಲು ಸುಕುಮಾರ್ ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಹಾಗಂತ ಇದು ಹೊಸ ಕಾನೆಪ್ಟೆ ಏನಲ್ಲ. ಹಾಲಿವುಡ್ ಸಿನಿಮಾಗಳಲ್ಲಿ ಇಂತಹ ಸಾಕಷ್ಟು ಉದಾಹರಣೆಗಳಿವೆ. ನಮ್ಮಲ್ಲೂ ಕೆಲ ಸಿನಿಮಾಗಳ ಕೆಲ ಸಿನಿಮಾಗಳ ಕ್ಲೈಮ್ಯಾಕ್ಸ್ ನೋಡಿದಾಗ ಸೀಕ್ವೆಲ್ ಮಾಡಬಹುದು ಎನಿಸುತ್ತದೆ. ಆದರೆ 3ನೇ ಭಾಗ ಮಾಡುವುದು , ಆ ಬಗ್ಗೆ ಎರಡನೇ ಭಾಗದ ಕೊನೆಯಲ್ಲಿ ಕುತೂಹಲ ಹುಟ್ಟಿಸುವುದು ಲೇಟೆಸ್ಟ್ ಟ್ರೆಂಡ್.

ಪ್ರಶಾಂತ್ ನೀಲ್ ನಿರ್ದೇಶನದ 'KGF'-2 ಕ್ಲೈಮ್ಯಾಕ್ಸ್‌ನಲ್ಲಿ ರಾಕಿ ಸಾಯುತ್ತಾನೆ ಎಂದು ತೋರಿಸಲಾಗಿದೆ. ಅಲ್ಲಿಗೆ ಕಥೆ ಮುಗಿಯಿತು ಎಂದರ್ಥ. ಆದರೆ ಸಿನಿಮಾಗಳಲ್ಲಿ ಏನು ಬೇಕಾದರೂ ಸಾಧ್ಯ. ಸದ್ಯ ರಾಕಿಯನ್ನು 3ನೇ ಭಾಗದಲ್ಲಿ ಹೇಗೆ ಮುಂದುವರೆಸುತ್ತಾರೆ? ಅವನು ಸತ್ತಿದ್ದಾನಾ? ಇಲ್ವಾ? ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಇದೇ ರೀತಿ 'ಪುಷ್ಪ'-2 ಕ್ಲೈಮ್ಯಾಕ್ಸ್‌ನಲ್ಲಿ ಭಾರೀ ಟ್ವಿಸ್ಟ್ ಕೊಟ್ಟು ಕಥೆಯನ್ನು ಮತ್ತೊಂದು ಭಾಗದಲ್ಲಿ ಮುಂದುವರೆಸಲು ಚಿತ್ರತಂಡ ಮುಂದಾಗಿದೆಯಂತೆ. ಚಿತ್ರಕ್ಕೆ 'ಪುಷ್ಪ'-3 ದಿ ರೋರ್ ಎಂದು ಹೆಸರಿಡುವ ಬಗ್ಗೆ ಚರ್ಚೆ ನಡೀತಿದೆಯಂತೆ.

'ಪುಷ್ಪ'-2 ಬಳಿಕ ಕೂಡಲೇ ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಪಾರ್ಟ್-3 ಮಾಡಲ್ಲ. ಬೇರೆ ಬೇರೆ ಸಿನಿಮಾಗಳಲ್ಲಿ ಕೆಲಸ ಮಾಡಲು ತೀರ್ಮಾನಿಸಿದ್ದಾರೆ. ಆದರೆ 'ಪುಷ್ಪ'-2 ಕ್ಲೈಮ್ಯಾಕ್ಸ್‌ನಲ್ಲಿ ಮಾತ್ರ 'ಪುಷ್ಪ'-3 ಸ್ವೀಟ್ ಶಾಕ್ ಇರಲಿದೆಯಂತೆ. ಅಂದರೆ ಸೇಮ್ 'KGF' ಫಾರ್ಮುಲಾವನ್ನು 'ಪುಷ್ಪ' ತಂಡ ಸಹ ಫಾಲೋ ಮಾಡುತ್ತಿದೆ ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ಶುರುವಾಗಿದೆ. ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಭಾರೀ ಪ್ರಾಜೆಕ್ಟ್ ಸಿದ್ಧಬಾಗುತ್ತಿರುವುದು ಗೊತ್ತೇಯಿದೆ. ಮತ್ತೊಂದು ಭಾಗಕ್ಕೆ ಕಥೆ ವಿಸ್ತರಿಸುವಂತೆ ಆ ಸಿನಿಮಾ ಕ್ಲೈಮ್ಯಾಕ್ಸ್‌ ಡಿಸೈನ್ ಮಾಡಿರುವುದಾಗಿ ಕತೆಗಾರ ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ.

More from Filmibeat

English summary
Buzz: Pushpa to follow this KGF formula;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X