21 ವರ್ಷಗಳ ಬಳಿಕ 'ಅಮೃತ ವರ್ಷಿಣಿ' ಭಾಗ-2 ಬಂದರೆ ಅಚ್ಚರಿ ಪಡಬೇಡಿ.!

By Harshitha

1997 ರಲ್ಲಿ ಬಿಡುಗಡೆ ಆದ ಸೂಪರ್ ಹಿಟ್ ಸಿನಿಮಾ 'ಅಮೃತ ವರ್ಷಿಣಿ'. ದಿನೇಶ್ ಬಾಬು ನಿರ್ದೇಶನದ 'ಅಮೃತ ವರ್ಷಿಣಿ' ಹೆಸರು ಕೇಳಿದ ಕೂಡಲೆ ಥಟ್ ಅಂತ ನೆನಪಾಗುವುದು 'ತುಂತುರು...', 'ಭಲೇ ಭಲೇ ಚಂದದ ಚೆಂದುಳ್ಳಿ ಹೆಣ್ಣು ನೀನು...' ಹಾಡುಗಳು.

ದೇವ ಸಂಗೀತ ಸಂಯೋಜಿಸಿದ 'ಅಮೃತ ವರ್ಷಿಣಿ' ಹಾಡುಗಳು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಹಾಗೇ, ರಮೇಶ್ ಅರವಿಂದ್ ವೃತ್ತಿ ಬದುಕಿಗೂ ದೊಡ್ಡ ತಿರುವು ಕೊಟ್ಟ 'ಅಮೃತ ವರ್ಷಿಣಿ' ರಾಜ್ಯ ಪ್ರಶಸ್ತಿ ಹಾಗೂ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ತ್ಯಾಗರಾಜ ಅಂತಲೇ ಕರೆಯಿಸಿಕೊಳ್ಳುತ್ತಿದ್ದ ರಮೇಶ್ ಅರವಿಂದ್ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದು ಇದೇ ಸಿನಿಮಾದಲ್ಲಿ. ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗೆ ಡಬ್ ಆಗಿ ಬ್ಲಾಕ್ ಬಸ್ಟರ್ ಆಗಿದ್ದ 'ಅಮೃತ ವರ್ಷಿಣಿ' ಸಿನಿಮಾ ಇದೀಗ ಸ್ಯಾಂಡಲ್ ವುಡ್ ನಲ್ಲಿ 21 ವರ್ಷಗಳ ಬಳಿಕ ಸದ್ದು ಮಾಡುತ್ತಿದೆ.

Is Amrutha Vaarshini sequel on Cards.?

'ಅಮೃತ ವರ್ಷಿಣಿ' ಸಿನಿಮಾದ 'ಭಾಗ-2' ತೆರೆಗೆ ತರಲು ತೆರೆಮರೆಯಲ್ಲಿ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ. ಹಾಗ್ನೋಡಿದ್ರೆ, ಸ್ಯಾಂಡಲ್ ವುಡ್ ಗೆ ಸೀಕ್ವೆಲ್ ಗಳು ಹೊಸದೇನಲ್ಲ. 'ಆಪ್ತಮಿತ್ರ' - 'ಆಪ್ತ ರಕ್ಷಕ', 'ಉಪೇಂದ್ರ' - 'ಉಪ್ಪಿ 2', 'ದಂಡುಪಾಳ್ಯ' ಸರಣಿಗಳೆಲ್ಲಾ ಸೀಕ್ವೆಲ್ ಗಳೇ. ಇದೀಗ 'ಅಮೃತ ವರ್ಷಿಣಿ' ಚಿತ್ರಕ್ಕೂ ಸೀಕ್ವೆಲ್ ಮಾಡುವ ತಯಾರಿ ಆಗುತ್ತಿದೆಯಂತೆ.

ಅಂದ್ಹಾಗೆ, 'ಅಮೃತ ವರ್ಷಿಣಿ' ಭಾಗ-2 ಮಾಡ್ತಿರೋರು ಯಾರು.? ದಿನೇಶ್ ಬಾಬು ಕಡೆಯಿಂದಲೇ ಪ್ರಯತ್ನ ನಡೆಯುತ್ತಿದ್ಯಾ.? ಇಲ್ಲೂ ರಮೇಶ್ ಅರವಿಂದ್ ಇರ್ತಾರಾ.? ಅಂತ ನೀವು ಪ್ರಶ್ನೆ ಕೇಳಿದರೆ, ಅದಕ್ಕೆ ನಮ್ಮ ಬಳಿ ಉತ್ತರ ಇಲ್ಲ. ಯಾಕಂದ್ರೆ, 'ಅಮೃತ ವರ್ಷಿಣಿ' ಸೀಕ್ವೆಲ್ ಮಾಡುತ್ತಿರುವವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯ ಆಗಿಲ್ಲ. ಲಭ್ಯವಾದ ಕೂಡಲೆ ನಿಮಗೆ ತಿಳಿಸ್ತೀವಿ.

ಅಂದ್ಹಾಗೆ, 'ಅಮೃತ ವರ್ಷಿಣಿ' ಸೀಕ್ವೆಲ್ ಬಂದರೆ ನೀವು ನೋಡ್ತೀರಾ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

More from Filmibeat

English summary
Is Ramesh Aravind starrer 1997 Block Buster Amrutha Vaarshini sequel on Cards.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X