ಮೆಗಾ ಸ್ಟಾರ್ ಚಿರಂಜೀವಿ ಜೊತೆ ನಟಿ ಅನುಷ್ಕಾ ರೋಮ್ಯಾನ್ಸ್?

ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ 152ನೇ ಆಚಾರ್ಯ ಸಿನಿಮಾ ಸಾಕಷ್ಟು ಚರ್ಚೆಯಾಗುತ್ತಿದೆ. ಅದರಲ್ಲೂ ನಾಯಕಿಯ ವಿಚಾರವಾಗಿ ಆಚಾರ್ಯ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಮೆಗಾ ಸ್ಟಾರ್ ಜತೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿಯೂ ಕಾಡುತ್ತಿದೆ.

ಇತ್ತೀಚಿಗಷ್ಟೆ ನಟಿ ತ್ರಿಷಾ ಸಿನಿಮಾದಿಂದ ಹೊರಬಂದ ಮೇಲೆ ಸಾಕಷ್ಟು ನಾಯಕಿಯರ ಹೆಸರು ಕೇಳಿ ಬರುತ್ತಿದೆ. ಕಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎನ್ನುವ ಕಾರಣಕ್ಕೆ ತ್ರಿಷಾ ಸಿನಿಮಾದಿಂದ ಹೊರ ನಡೆದ ಮೇಲೆ ನಾಯಕಿ ಆಯ್ಕೆ ವಿಚಾರ ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿದೆ. ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಸ್ವೀಟಿ ಅನುಷ್ಕಾ ಚಿರಂಜೀವಿ ಜೊತೆ ರೋಮ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಚಿರಂಜೀವಿಗೆ ಅನುಷ್ಕಾ ನಾಯಕಿ?

ಚಿರಂಜೀವಿಗೆ ಅನುಷ್ಕಾ ನಾಯಕಿ?

ನಟಿ ಅನುಷ್ಕಾ ಸೆಟ್ಟಿ ಮೆಗಾ ಸ್ಟಾರ್ ಚಿರಂಜೀವಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆಚಾರ್ಯ ಸಿನಿಮಾಗೆ ಅನುಷ್ಕಾ ನಾಯಕಿಯಾಗುವುದು ಬಹುತೇಕ ಖಚಿತ ಎಂದು ಎನ್ನು ಮಾತು ಟಾಲಿವುಡ್ ಅಂಗಳದಿಂದ ಕೇಳಿ ಬರುತ್ತಿದೆ. ತ್ರೀಷಾ ಹೊರಹೋದ ಜಾಗಕ್ಕೆ ನಟಿ ಕಾಜಲ್ ಎಂಟ್ರಿ ಕೊಡುತ್ತಾರೆ ಎಂದು ಹೇಳಲಾಗಿತ್ತು. ಆದರೀಗ ಅನುಷ್ಕಾ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಕಾಜಲ್ ಅಗರ್ವಾಲ್ ಜೊತೆ ಚಿತ್ರತಂಡ ಮಾತುಕತೆ

ಕಾಜಲ್ ಅಗರ್ವಾಲ್ ಜೊತೆ ಚಿತ್ರತಂಡ ಮಾತುಕತೆ

ಚಿತ್ರದಿಂದ ತ್ರಿಷಾ ಹೊರಹೋಗುತ್ತಿದ್ದಂತೆ ನಟಿ ಕಾಜಲ್ ಅಗರ್ವಾಲ್ ಜೊತೆ ಚಿತ್ರತಂಡ ಮಾತುಕತೆ ನಡೆಸಿದೆ. ಆದರೆ ಕಾಜಲ್ ಭಾರಿ ಮೊತ್ತದ ಸಂಭಾವನೆಯನ್ನು ಬೇಡಿಕೆ ಇಟ್ಟಿದ್ದಾರಂತೆ. ಹಾಗಾಗಿ ಕಾಜಲ್ ಅನ್ನು ಆಚಾರ್ಯ ಸಿನಿಮಾದಿಂದ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಕಾಜಲ್ ಬದಲು ಈಗ ಅನುಷ್ಕಾ ಶೆಟ್ಟಿ ಅಭಿನಯಿಸುವುದು ಬಹುತೇಕ ಖಚಿತ.

ಮೊದಲ ಬಾರಿಗೆ ಚಿರಂಜೀವಿಗೆ ಅನುಷ್ಕಾ ನಾಯಕಿ

ಮೊದಲ ಬಾರಿಗೆ ಚಿರಂಜೀವಿಗೆ ಅನುಷ್ಕಾ ನಾಯಕಿ

ಆಚಾರ್ಯ ಸಿನಿಮಾಗೆ ಅನುಷ್ಕಾ ಆಯ್ಕೆಯಾದರೆ ಮೊದಲ ಬಾರಿಗೆ ಚಿರು ಜೊತೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೊದಲು ಚಿರಂಜೀವಿ ಎರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಎರಡೂ ಸಿನಿಮಾದಲ್ಲೂ ಅನುಷ್ಕಾ ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ. ಚಿರಂಜೀವಿ ಅಭಿನಯದ 2006ರಲ್ಲಿ ರಿಲೀಸ್ ಆದ 'ಸ್ಟಾಲಿನ್' ಸಿನಿಮಾದಲ್ಲಿ ಅನುಷ್ಕಾ ಹಾಡೊಂದರಲ್ಲಿ ಚಿರು ಜೊತೆ ಹೆಜ್ಜೆಹಾಕಿದ್ದರು. ಇನ್ನು ಇತ್ತೀಚಿಗೆ ತೆರೆಕಂಡ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲೂ ಅನುಷ್ಕಾ ವಿಶೇಷ ಪಾತ್ರದಲ್ಲಿ ಬಣ್ಣಹಚ್ಚಿದ್ದರು.

ತ್ರಿಷಾ ಸಿನಿಮಾದಿಂದ ಹೊರಬಿದ್ದೇಕೆ?

ತ್ರಿಷಾ ಸಿನಿಮಾದಿಂದ ಹೊರಬಿದ್ದೇಕೆ?

ಚಿತ್ರತಂಡದ ಜೊತೆ ಭಿನ್ನಾಭಿಪ್ರಾಯದ ಕಾರಣ ತ್ರಿಷಾ ಸಿನಿಮಾದಿಂದ ಹೊರ ಬಂದಿದ್ದಾರೆ. ಈ ಬಗ್ಗೆ ತ್ರಿಷಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. "ಕೆಲವು ವಿಚಾರಗಳು ಪ್ರಾರಂಭದಲ್ಲಿ ಹೇಳಿದ್ದಕ್ಕಿಂತ ಮತ್ತು ಚರ್ಚೆ ಮಾಡಿದ್ದಕ್ಕಿಂತ ಭಿನ್ನವಾಗಿರುತ್ತವೆ. ಕೆಲವು ಭಿನ್ನಾಭಿಪ್ರಾಯದ ಕಾರಣ ಚಿರಂಜೀವಿ ಸರ್ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ. ತಂಡಕ್ಕೆ ಒಳ್ಳೆಯದಾಗಲಿ. ಮತ್ತೊಂದು ಅದ್ಭುತ ಪ್ರಾಜೆಕ್ಟ್ ಮೂಲಕ ತೆಲುಗು ಅಭಿಮಾನಿಗಳ ಮುಂದೆ ಬರುತ್ತೇನೆ" ಎಂದು ಬರೆದುಕೊಂಡಿದ್ದಾರೆ.

More from Filmibeat

English summary
Actress Anushka Shetty will be playing lead role opposite to Chiranjeevi in Acharya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X