ಚಿನ್ನದಂಥ ಹುಡುಗನ ಜೊತೆ ದೇವಸೇನಾ ಅನುಷ್ಕಾ ಶೆಟ್ಟಿ ಕಲ್ಯಾಣ?

ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆದರೂ ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಸ್ವೀಟಿ ಹೊಸದೊಂದು ಚಿತ್ರಕ್ಕೆ ಸಹಿ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಆದರೆ ಆ ಸಿನಿಮಾ ಶೂಟಿಂಗ್ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇನ್ನು ಅಭಿಮಾನಿಗಳ ಪ್ರೀತಿಯ ದೇವಸೇನಾ ಮದುವೆ ಬಗ್ಗೆ ಸಾಕಷ್ಟು ವದಂತಿಗಳು ಕೇಳಿ ಬರ್ತಾನೆ ಇರುತ್ತೆ. ಸದ್ಯ ಸ್ವೀಟಿ ಮದುವೆ ಬಗ್ಗೆ ಹೊಸದೊಂದು ಸುದ್ದಿ ಹರಿದಾಡ್ತಿದೆ.

ವಯಸ್ಸು ನಲವತ್ತಾದರೂ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಯೋಚಿಸಿದಂತೆ ಕಾಣುತ್ತಿಲ್ಲ. ಈ ಹಿಂದೆ ಕೆಲವರ ಜೊತೆ ಸ್ವೀಟಿ ಹೆಸರು ತಳುಕು ಹಾಕಿಕೊಂಡಿತ್ತು. 'ಬಿಲ್ಲಾ', 'ಮಿರ್ಚಿ', 'ಬಾಹುಬಲಿ' ಸಿನಿಮಾಗಳ ನಂತರ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಇಬ್ಬರೂ ಪ್ರೀತಿಲಿ ಮುಳುಗಿದ್ದಾರೆ, ಶೀಘ್ರದಲ್ಲೇ ಮದುವೆ ಆಗುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಈ ಆನ್‌ಸ್ಕ್ರೀನ್‌ ಸೂಪರ್ ಹಿಟ್ ಜೋಡಿಯನ್ನು ನಿಜಜೀವನದಲ್ಲೂ ಒಟ್ಟಿಗೆ ನೋಡಲು ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. ಆದರೆ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಷ್ಟೇ, ನಮ್ಮಿಬ್ಬರ ನಡುವೆ ಪ್ರೀತಿ ಗೀತಿ ಏನು ಇಲ್ಲ ಎಂದು ಇಬ್ಬರು ಹೇಳಿದ್ದರು.

Is Anushka Shetty Ready to marry hyderabad based businessman

'ನಿಶಬ್ಧ' ನಂತರ ಸ್ವೀಟಿ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಮತ್ತೊಂದ್ಕಡೆ ವಯಸ್ಸು ನಲವತ್ತಾಯಿತು. ಇನ್ನು ತಡ ಮಾಡುವುದು ಬೇಡ ಎಂದು ಸ್ವೀಟಿ ನಿರ್ಧರಿಸಿದ್ದು, ಹೈದರಾಬಾದ್ ಮೂಲದ ಉದ್ಯಮಿಯೊಬ್ಬರನ್ನು ಮದುವೆ ಆಗಲು ಮುಂದಾಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಆತ ಚಿನ್ನದ ವ್ಯಾಪಾರಿಯಾಗಿದ್ದು, ಸಾಕಷ್ಟು ಚಿನ್ನದ ಅಂಗಡಿಗಳ ಒಡೆಯ ಎನ್ನಲಾಗ್ತಿದೆ. ಆತನ ಜೊತೆ ಸ್ವೀಟಿ ಮದುವೆ ಫಿಕ್ಸ್ ಆಗಿದ್ದು, ಶೀಘ್ರದಲ್ಲೇ ಹಸೆಮಣೆ ಏರ್ತಾರೆ ಎನ್ನು ಮಾತುಗಳು ಕೇಳಿಬರ್ತಿದೆ. ಆದರೆ ಅಭಿಮಾನಿಗಳು ಮಾತ್ರ ಇದನ್ನು ಒಪ್ಪಲು ಸಿದ್ದರಿಲ್ಲ. ಅಧಿಕೃತವಾಗಿ ಯಾರಾದರೂ ಹೇಳುವವರೆಗೂ ಇಂಥದ್ದನ್ನೆಲ್ಲಾ ನಾವು ನಂಬುವುದಿಲ್ಲ ಎಂದು ಹೇಳ್ತಿದ್ದಾರೆ.

Is Anushka Shetty Ready to marry hyderabad based businessman

ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ 'ಸೈಜ್ ಜೀರೊ' ಚಿತ್ರದ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದ ಸ್ವೀಟಿ ನಂತರ ತೂಕ ಇಳಿಸಲು ಭಾರೀ ಕಸರತ್ತು ನಡೆಸಿದರು. ಏನೇ ಪ್ರಯತ್ನಪಟ್ಟರು ಮೊದಲಿನ ಪಿಜಿಕ್ ಮರಳಿ ಪಡೆಯಲು ಸಾಧ್ಯವಾಗಲಿಲ್ಲ. ಹಾಗಾಗಿ ಸಿನಿಮಾ ಅವಕಾಶಗಳು ಕಮ್ಮಿ ಆಗಿತ್ತು. ನವೀನ್ ಪೋಲಿಶೆಟ್ಟಿ ಜೊತೆ ನಟಿಸೋಕೆ ಅನುಷ್ಕಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಈ ಚಿತ್ರದಲ್ಲಿ ಶೆಫ್ ಪಾತ್ರದಲ್ಲಿ ಸ್ವೀಟಿ ಬಣ್ಣ ಹಚ್ಚುವ ಬಗ್ಗೆ ಚರ್ಚೆ ನಡೀತಿದೆ. ಯುವಿ ಕ್ರಿಯೇಷನ್ಸ್‌ ಬ್ಯಾನರ್‌ನಲ್ಲಿ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಆದರೆ ಯಾವಾಗ ಸಿನಿಮಾ ಶುರುವಾಗುತ್ತದೆ ಎನ್ನುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ.

More from Filmibeat

English summary
Anushka Shetty is all set to tie the knot with a Hydrabad based businessman. The actress’ parents have been focusing on her marriage for a long time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X