ತ್ರಿವಿಕ್ರಮ್ 'ಅ' ಸೆಂಟಿಮೆಂಟ್: ಮಹೇಶ್ ಬಾಬು ಚಿತ್ರಕ್ಕೆ ಟೈಟಲ್ ಸಿಕ್ಕೇಬಿಡ್ತಾ ?

ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಹ್ಯಾಟ್ರಿಕ್ ಕಾಂಬಿನೇಷನ್‌ ಸಿನಿಮಾ ಇತ್ತೀಚೆಗೆ ಶುರುವಾಗಿದೆ. ಸ್ಟೈಲಿಶ್ ಲುಕ್‌ನಲ್ಲಿ ಮಹೇಶ್ ಬಾಬು ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ. ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಸದ್ಯ ಚಿತ್ರತಂಡ ಅದೊಂದು ಟೈಟಲ್ ಬಗ್ಗೆ ಚರ್ಚೆ ನಡೆಸ್ತಿದೆ ಎನ್ನುವ ಸುದ್ದಿ ಹರಿದಾಡ್ತಿದೆ. ಆ ಟೈಟಲ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

ತ್ರಿವಿಕ್ರಮ್ ಶ್ರೀನಿವಾಸ್ ತಮ್ಮ ಸಿನಿಮಾಗಳಿಗೆ ವಿಭಿನ್ನ ಟೈಟಲ್‌ಗಳನ್ನು ಹುಡುಕುತ್ತಾರೆ. ಈ ಬಾರಿ ಕೂಡ ಅಂತದ್ದೇ ಒಂದು ಇಂಟ್ರೆಸ್ಟಿಂಗ್ ಟೈಟಲ್ ಬಗ್ಗೆ ಚರ್ಚೆ ನಡೆಸ್ತಿರುವುದಾಗಿ ಹೇಳಲಾಗ್ತಿದೆ. ಇನ್ನು ಈ ಟೈಟಲ್‌ಗೂ ಮಹೇಶ್ ಬಾಬು ಹಿಂದೆ ನಟಿಸಿದ್ದ ಟೈಟಲ್‌ಗೂ ಲಿಂಗ್ ಇದೆ. SSMB28 ಎನ್ನುವ ಟೆಂಟೆಟಿವ್ ಟೈಟಲ್‌ನಲ್ಲಿ ಸಿನಿಮಾ ಶೂಟಿಂಗ್ ನಡೀತಿದೆ. ಹಾರಿಕಾ & ಹಾಸಿನಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಎಸ್. ರಾಧಾಕೃಷ್ಣ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.

ಮಹೇಶ್ ಬಾಬು ಮುಂದಿನ ಚಿತ್ರಕ್ಕೆ 'ಅಯೋಧ್ಯಲೋ ಅರ್ಜುನುಡು' ಎನ್ನುವ ಟೈಟಲ್ ಫಿಕ್ಸ್ ಮಾಡುವ ಬಗ್ಗೆ ಚರ್ಚೆ ನಡೀತಿದೆ ಎನ್ನಲಾಗ್ತಿದೆ. ಸದ್ಯ ಅಭಿಮಾನಿಗಳು ಈ ಟೈಟಲ್‌ನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ.

 ವಿಭಿನ್ನ ಟೈಟಲ್‌ ಮೇಲೆ ತ್ರಿವಿಕ್ರಮ್ ಕಣ್ಣು

ವಿಭಿನ್ನ ಟೈಟಲ್‌ ಮೇಲೆ ತ್ರಿವಿಕ್ರಮ್ ಕಣ್ಣು

ಈ ಹಿಂದೆ ಮಹೇಶ್ ಬಾಬು 'ಅರ್ಜುನ್' ಎನ್ನುವ ಸಿನಿಮಾದಲ್ಲೂ ನಟಿಸಿದ್ದರು. ಇನ್ನು 'ಅತ್ತಾರಿಂಟಿಕಿ ದಾರೇದಿ', 'ಅರವಿಂದ ಸಮೇತ ವೀರ ರಾಘವ' ಹಾಗೂ 'ಅಲಾ ವೈಕುಂಠಪುರಂಲೊ' ಹೀಗೆ ವಿಭಿನ್ನ ಟೈಟಲ್‌ಗಳಲ್ಲಿ ಸಿನಿಮಾಗಳನ್ನು ತ್ರಿವಿಕ್ರಮ್ ಕಟ್ಟಿಕೊಟ್ಟಿದ್ದರು. ಇದೀಗ ಮಹೇಶ್ ಬಾಬು ಚಿತ್ರಕ್ಕೆ 'ಅಯೋಧ್ಯಲೋ ಅರ್ಜುನುಡು' ಎನ್ನುವ ಟೈಟಲ್ ಪರಿಶೀಲಿಸುತ್ತಿದ್ದಾರೆ ಎನ್ನಲಾಗ್ತಿದೆ.

 ತ್ರಿವಿಕ್ರಮ್ ಶ್ರೀನಿವಾಸ್ 'ಅ' ಸೆಂಟಿಮೆಂಟ್

ತ್ರಿವಿಕ್ರಮ್ ಶ್ರೀನಿವಾಸ್ 'ಅ' ಸೆಂಟಿಮೆಂಟ್

ಇನ್ನು ತ್ರಿವಿಕ್ರಮ್ ತಮ್ಮ ಸಿನಿಮಾಗಳಿಗೆ 'ಅ' ಸೆಂಟಿಮೆಂಟ್ ಫಾಲೋ ಮಾಡ್ತಿದ್ದಾರೆ. 'ಅತ್ತಾರಿಂಟಿಕಿ ದಾರೇದಿ', 'ಅ ಆ', 'ಅರವಿಂದ ಸಮೇತ', 'ಅಲಾ ವೈಕುಂಠಪುರಂಲೊ' ಎಲ್ಲವೂ 'ಅ' ಅಕ್ಷರದಿಂದಲೇ ಶುರುವಾಗಿತ್ತು. ಹಾಗಾಗಿ 'ಅಯೋಧ್ಯಲೋ ಅರ್ಜುನುಡು' ಎನ್ನುವ ಟೈಟಲ್‌ ಬಗ್ಗೆ ನಿರ್ದೇಶಕರು ಹೆಚ್ಚು ಒಲವು ತೋರಿಸಿದ್ದಾರೆ ಅನ್ನುವ ಮಾತುಗಳು ಕೇಳಿಬರ್ತಿದೆ. ಇನ್ನು ಅಭಿಮಾನಿಗಳು ಈ ಟೈಟಲ್ ಕೇಳಿ ಥ್ರಿಲ್ಲಾಗಿದ್ದು, ಇದೇ ಟೈಟಲ್ ಇದ್ದರೆ ಸಿನಿಮಾ ಸೂಪರ್ ಹಿಟ್ ಗ್ಯಾರೆಂಟಿ ಎನ್ನುತ್ತಿದ್ದಾರೆ.

 ಪ್ರಿನ್ಸ್- ತ್ರಿವಿಕ್ರಮ್ ಹ್ಯಾಟ್ರಿಕ್ ಸಿನಿಮಾ

ಪ್ರಿನ್ಸ್- ತ್ರಿವಿಕ್ರಮ್ ಹ್ಯಾಟ್ರಿಕ್ ಸಿನಿಮಾ

ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಅತಡು' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ನಂತರ 'ಖಲೇಜಾ' ಚಿತ್ರದಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತರು ಭಾರೀ ಮೆಚ್ಚುಗೆ ಗಳಿಸಿತ್ತು. 'ಸರ್ಕಾರುವಾರಿ ಪಾಟ' ಟಾಲಿವುಡ್ ಪ್ರಿನ್ಸ್ ಈ ಚಿತ್ರದಲ್ಲಿ ನಟಿಸ್ತಿದ್ದಾರೆ. ಇನ್ನು 'ಅಲಾ ವೈಕುಂಠಪುರಂಲೊ' ಸೂಪರ್ ಹಿಟ್ ನಂತರ ತ್ರಿವಿಕ್ರಮ್ ಈ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ.

 ಏಪ್ರಿಲ್ 28ಕ್ಕೆ ಸಿನಿಮಾ ರಿಲೀಸ್

ಏಪ್ರಿಲ್ 28ಕ್ಕೆ ಸಿನಿಮಾ ರಿಲೀಸ್

ಇನ್ನು ಹೆಸರಿಡದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸ್ತಿದ್ದಾರೆ. ಚಿತ್ರಕ್ಕಾಗಿ ಮಹೇಶ್ ಹಾಗೂ ತ್ರಿವಿಕ್ರಮ್ ಭಾರೀ ಮೊತ್ತದ ಸಂಭಾವನೆ ಪಡೆದುಕೊಂಡಿದ್ದಾರೆ. ಮುಂದಿನ ವರ್ಷ ಸಮ್ಮರ್ ಸ್ಪೆಷಲ್ಲಾಗಿ ಏಪ್ರಿಲ್ 28ಕ್ಕೆ SSMB28 ಸಿನಿಮಾ ರಿಲೀಸ್ ಮಾಡುವುದಾಗಿ ಈಗಾಗಲೇ ಟೀಂ ಘೋಷಿಸಿದೆ.

More from Filmibeat

English summary
Is 'Ayodhyalo Arjunudu' the title of Mahesh Babu and Trivikram's Hatrick project. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X