For Quick Alerts
  ALLOW NOTIFICATIONS  
  For Daily Alerts

  'ಆಚಾರ್ಯ' ಸೋಲು ಮಾಸಿಲ್ಲ: ಮತ್ತೊಂದು ರೀಮೆಕ್ ಮೇಲೆ ಅಪ್ಪ - ಮಗ ಕಣ್ಣು?

  |

  10 ವರ್ಷಗಳ ಗ್ಯಾಪ್ ನಂತರ ಮೆಗಾಸ್ಟಾರ್ ಚಿರಂಜೀವಿ ಚಿತ್ರರಂಗಕ್ಕೆ ಬಂದರೂ ಕ್ರೇಜ್ ಮಾತ್ರ ಕಿಂಚಿತ್ತು ಕಮ್ಮಿಆಗಿಲ್ಲ. ಆದರೆ ಒಳ್ಳೆ ಹಿಟ್ ಮಾತ್ರ ಸಿಕ್ತಿಲ್ಲ. 'ಖೈದಿ ನಂ 150' ಸಿನಿಮಾದಿಂದ ಬಾಸ್ ಈಸ್ ಎಂದು ಅಭಿಮಾನಿಗಳು ಸಂಭ್ರಮಿಸಿದರು. ನಂತರ ಬಂದ ಸೈರಾ, ಆಚಾರ್ಯ ಸಿನಿಮಾಗಳು ಕೈ ಕೊಟ್ಟವು. ಈಗ 'ಗಾಡ್‌ಫಾದರ್' ಆಗಿ ಪ್ರೇಕ್ಷಕರ ಮನಗೆಲ್ಲೋಕೆ ಚಿರು ರೆಡಿಯಾಗಿದ್ದಾರೆ.

  ಅಕ್ಟೋಬರ್ 5ಕ್ಕೆ ದಸರಾ ಸಂಭ್ರಮದಲ್ಲೇ 'ಗಾಡ್‌ಫಾದರ್' ಸಿನಿಮಾ ರಿಲೀಸ್ ಆಗ್ತಿದೆ. ಇದು ಮಲಯಾಳಂನ 'ಲೂಸಿಫರ್' ಸಿನಿಮಾ ರೀಮೆಕ್. ಮೋಹನ್ ರಾಜ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್‌ಗೂ ಮೊದಲೇ ಚಿರಂಜೀವಿ ಮಲಯಾಳಂನ ಮತ್ತೊಂದು ಸಿನಿಮಾ ರೀಮೆಕ್ ಮಾಡುವ ಬಗ್ಗೆ ಯೋಚಿಸುತ್ತಿದ್ದಾರಂತೆ. ಇದರಲ್ಲಿ ವಿಶೇಷ ಏನು ಅಂತ ಕೇಳಿದ್ರಾ? ಈ ಚಿತ್ರದಲ್ಲಿ ಚಿರು ಪುತ್ರ ರಾಮ್‌ ಚರಣ್ ತೇಜಾ ಕೂಡ ನಟಿಸ್ತಾರೆ ಅನ್ನಲಾಗ್ತಿದೆ.

  ಮೆಗಾ ಫ್ಯಾನ್ಸ್‌ಗಾಗಿ ಮೆಗಾ ಈವೆಂಟ್: ಒಂದೇ ವೇದಿಕೆಯಲ್ಲಿ ಚಿರಂಜೀವಿ, ಪವನ್ ಕಲ್ಯಾಣ್ಮೆಗಾ ಫ್ಯಾನ್ಸ್‌ಗಾಗಿ ಮೆಗಾ ಈವೆಂಟ್: ಒಂದೇ ವೇದಿಕೆಯಲ್ಲಿ ಚಿರಂಜೀವಿ, ಪವನ್ ಕಲ್ಯಾಣ್

  ಇತ್ತೀಚೆಗಷ್ಟೆ ತಂದೆ- ಮಗ ಒಟ್ಟಿಗೆ ನಟಿಸಿದ್ದ 'ಆಚಾರ್ಯ' ಸಿನಿಮಾ ಹೀನಾಯವಾಗಿ ಸೋತಿತ್ತು. ರಾಮ್‌ಚರಣ್ ಬರೀ ನಟನಾಗಿ ಮಾತ್ರವಲ್ಲದೇ ನಿರ್ಮಾಪಕರಾಗಿಯೂ ನಷ್ಟ ಅನುಭವಿಸಿದ್ದರು. ಹಾಗಾಗಿ ಈಗ ಮತ್ತೆ ತಂದೆ- ಮಗ ಒಟ್ಟಿಗೆ ನಟಿಸುವ ಸುದ್ದಿ ಬಹಳ ಸದ್ದು ಮಾಡ್ತಿದೆ. ಅಂದಹಾಗೆ ಮಲಯಾಳಂನಲ್ಲಿ ಮೋಹನ್ ಲಾಲ್ ಹಾಗೂ ಪೃಥ್ವಿರಾಜ್ ನಟಿಸಿದ್ದ 'ಬ್ರೋಡ್ಯಾಡಿ' ಚಿತ್ರವನ್ನು ಚಿರು ತೆಲುಗು ಪ್ರೇಕ್ಷಕರ ಮುಂದಿಡುವ ಮನಸ್ಸು ಮಾಡಿದ್ದಾರಂತೆ. 'ಗಾಡ್‌ಫಾದರ್' ಸಿನಿಮಾ ರಿಸಲ್ಟ್ ನೋಡಿಕೊಂಡು ಮುಂದುವರೆಯುವ ಲೆಕ್ಕಾಚಾರದಲ್ಲಿ ನಡೀತಿದೆಯಂತೆ.

  ಈಗಾಗಲೇ ತಮಿಳಿನ 'ವೇದಾಳಂ' ಸಿನಿಮಾ ರಿಮೇಕ್ 'ಭೋಳಾ ಶಂಕರ್' ಚಿತ್ರದಲ್ಲಿ ಚಿರಂಜೀವಿ ನಟಿಸ್ತಿದ್ದಾರೆ. ಈಗಾಗಲೇ 2 ರೀಮೆಕ್ ಸಿನಿಮಾ ಮಾಡ್ತಿರೋ ಚಿರು ಮತ್ತೊಂದು ರಿಮೇಕ್ ಮಾಡೋದು ಸರೀನಾ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳ್ತಿದ್ದಾರೆ. ಇದೇ ವರ್ಷ ಜನವರಿಯಲ್ಲಿ ರಿಲೀಸ್ ಆಗಿದ್ದ ಕಾಮಿಡಿ ಎಂಟರ್‌ಟೈನರ್ 'ಬ್ರೋ ಡ್ಯಾಡಿ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ಮೊದಲು ವಿಕ್ಟರಿ ವೆಂಕಟೇಶ್ ಹಾಗೂ ರಾಣಾ ರೀಮೆಕ್ ಮಾಡ್ತಾರೆ ಅನ್ನಲಾಗಿತ್ತು. ಆದರೆ ಈಗ ಚಿರು ಸಿನಿಮಾ ಮಾಡ್ತಾರೆ ಅನ್ನುವ ಗುಸುಗುಸು ಶುರುವಾಗಿದೆ. ಮೆಗಾಸ್ಟಾರ್ ಜೊತೆ ಸಾಯಿ ಧರಮ್ ತೇಜ್ ನಟಿಸ್ತಾರೆ ಅನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಈಗ ಚರಣ್ ನಟಿಸ್ತಾರೆ ಅನ್ನಲಾಗ್ತಿದೆ.

  Is Chiranjeevi And Ram charan Going to remake Malayalam Hit Bro Daddy

  ಶ್ರೀಕಾಂತ್ ಅಡ್ಡಾಲ ಅಥವಾ ಹರೀಶ್ ಶಂಕರ್ 'ಬ್ರೋ ಡ್ಯಾಡಿ' ತೆಲುಗು ವರ್ಷನ್‌ಗೆ ಆಕ್ಷನ್ ಕಟ್ ಹೇಳುವ ಸಾಧ್ಯತೆಯಿದೆ ಅಂತೆ. ಮಾಲಿವುಡ್‌ನಲ್ಲಿ ಸ್ವತಃ ಪೃಥ್ವಿರಾಜ್ ನಿರ್ದೇಶನದ ಈ ಸಿನಿಮಾ ಫ್ಯಾಮಿಲಿ ಆಡಿಯನ್ಸ್ ಮನಗೆದ್ದಿತ್ತು. ತೆಲುಗು ನೇಟಿವಿಟಿಗೆ ಕೊಂಚ ಬದಲಿಸಿಕೊಂಡು ಸಿನಿಮಾ ಮಾಡುವ ಸಾಧ್ಯತೆ ಇದೆ. ಸದ್ಯ ಚಿರು ಬ್ಯಾಕ್ ಟು ಬ್ಯಾಕ್ ರೀಮೆಕ್ ಸಿನಿಮಾಗಳಲ್ಲಿ ನಟಿಸ್ತಿರೋದು ಅಭಿಮಾನಿಗಳಿಗೆ ಬೇಸರ ತಂದಿದೆ. ಅದರಲ್ಲೂ 'ಆಚಾರ್ಯ' ಸೋಲು ಮತ್ತಷ್ಟು ಭಯ ತಂದಿದೆ. ಸದ್ಯ ರಾಮ್‌ಚರಣ್ ತಮಿಳಿನ ಶಂಕರ್ ನಿರ್ದೇಶನದ ಇನ್ನು ಹೆಸರಿಡದ ಚಿತ್ರದಲ್ಲಿ ನಟಿಸ್ತಿದ್ದಾರೆ.

  English summary
  Is Chiranjeevi And Ram charan Going to remake Malayalam Hit Bro Daddy. Know More.
  Friday, September 16, 2022, 23:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X