ಸಮಂತಾ, ನಿಹಾರಿಕಾ ನಂತರ ಡಿವೋರ್ಸ್‌ಗೆ ಮುಂದಾದ್ರಾ ಕಲರ್ಸ್ ಸ್ವಾತಿ? ಸಾಕ್ಷಿ ಹುಡುಕಿದ ನೆಟ್ಟಿಗರು
ರಂಗೀನ್ ಲೋಕದಲ್ಲಿ ಈಗ ಡಿವೋರ್ಸ್ ಪರ್ವ ಶುರುವಾದಂತೆ ಕಾಣ್ತಿದೆ. ಪ್ರೀತಿಸಿ ಮದುವೆಯಾದ ತಾರಾ ಜೋಡಿಗಳು ಈಗ ಡಿವೋರ್ಸ್‌ಗಾಗಿ ಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ನಾಗಚೈತನ್ಯಾ- ಸಮಂತಾ, ಧನುಷ್- ಐಶ್ವರ್ಯ ಇನ್ನು ಇತ್ತೀಚೆಗೆ ನಿಹಾರಿಕಾ ಹಾಗೂ ಚೈತನ್ಯಾ ದೂರಾಗಿ ಶಾಕ್ ಕೊಟ್ಟಿದ್ದರು. ಇದೀಗ ಮತ್ತೊಬ್ಬ ತೆಲುಗು ನಟಿ ಸ್ವಾತಿ ರೆಡ್ಡಿ ಕೂಡ ಇದೇ ಹಾದಿಯಲ್ಲಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.
'ಡೇಂಜರ್' ಸಿನಿಮಾ ಮೂಲಕ ಸ್ವಾತಿ ರೆಡ್ಡಿ ತೆಲುಗು ಚಿತ್ರರಂಗ ಪ್ರವೇಶಿಸಿದ್ದರು. ಇದಕ್ಕೂ ಮುನ್ನ ಕಿರುತೆರೆಯ 'ಕಲರ್ಸ್' ಶೋ ನಿರೂಪಕಿಯಾಗಿ ಕೆಲಸ ಮಾಡಿದ್ದರು. ಹಾಗಾಗಿ ಆಕೆಯನ್ನು ಕಲರ್ಸ್ ಸ್ವಾತಿ ಅಂತ್ಲೇ ಅಭಿಮಾನಿಗಳು ಕರೆಯುತ್ತಿದ್ದರು. ಚಿತ್ರರಂಗದಲ್ಲಿ ತಮ್ಮ ಚೆಲ್ಲು ಚೆಲ್ಲು ನಗು, ಪಕ್ಕದ್ಮನೆ ಹುಡುಗಿಯಂತಹ ನೋಟದಿಂದ ಬಹಳ ಬೇಗ ಸಿನಿರಸಿಕರ ಗಮನ ಸೆಳೆದರು. 'ಸುಬ್ರಮಣ್ಯಂಪುರಂ' ಹಾಗೂ 'ಅಸ್ತಾ ಚಮ್ಮ' ಸಿನಿಮಾಗಳು ಒಳ್ಳೆ ಬ್ರೇಕ್ ಕೊಡ್ತು. ಡಬ್ಬಿಂಗ್ ಆರ್ಟಿಸ್ಟ್ ಹಾಗೂ ಗಾಯಕಿಯಾಗಿಯೂ ಸ್ವಾತಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ಧಾರೆ. 'ಜಲ್ಸಾ' ಚಿತ್ರದಲ್ಲಿ ನಟಿ ಇಲಿಯಾನಾಗೆ ವಾಯ್ಸ್ ಡಬ್ ಮಾಡಿದ್ದರು.

5 ವರ್ಷಗಳ ಹಿಂದೆ ಮಲಯಾಳಿ ಪೈಲೆಟ್ ವಿಕಾಸ್ ವಾಸು ಎಂಬುವವರನ್ನು ನಟಿ ಸ್ವಾತಿ ರೆಡ್ಡಿ ಪ್ರೀತಿಸಿ ಮದುವೆ ಆಗಿದ್ದರು. ಮದುವೆ ಬಳಿಕ ಕೂಡ ಆಕೆ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ್ದಾರೆ. ಆದರೆ ಕೆಲ ದಿನಗಳ ಹಿಂದೆ ಆಕೆಗೆ ಡಿವೋರ್ಸ್‌ಗೆ ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಅದಕ್ಕೆ ಆಕೆ ತೆರೆ ಎಳೆದಿದ್ದರು.

ಮದುವೆ ಫೋಟೊಗಳು ಡಿಲೀಟ್
ಸೋಷಿಯಲ್ ಮೀಡಿಯಾ ಒಬ್ಬರ ವೈಯಕ್ತಿಕ ಜೀವನ, ಅವರ ಮನಸ್ಥಿತಿ ಮತ್ತು ಅವರ ಪ್ರತಿ ಕದಲಿಕೆಯನ್ನು ಹೇಳುತ್ತದೆ. ಇತ್ತೀಚೆಗೆ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗೂ ಸೋಷಿಯಲ್ ಮೀಡಿಯಾದಲ್ಲಿ ಮೂಲಕ ಪ್ರತಿಕ್ರಿಯಿಸುವುದು ಜನರ ಅಭ್ಯಾಸವಾಗಿಬಿಟ್ಟಿದೆ. ಬಹುತೇಕ ಸೆಲೆಬ್ರೆಟಿಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ವೀವ್ ಆಗಿರುತ್ತಾರೆ. ಅವರ ಒಂದೊಂದು ಪೋಸ್ಟ್ ಮೇಲೆ ಅಭಿಮಾನಿಗಳು ಹದ್ದಿನ ಕಣ್ಣಿಟ್ಟಿರುತ್ತಾರೆ. ಒಂದು ಫೋಟೊ ಪೋಸ್ಟ್ ಮಾಡಿದ್ರು, ಡಿಲೀಟ್ ಮಾಡಿದ್ರು ಅದಕ್ಕೆ ಕಾರಣ ಏನು ಎನ್ನುವ ಚರ್ಚೆ ಶುರುವಾಗುತ್ತದೆ. ಇದೀಗ ಕಲರ್ಸ್ ಸ್ವಾತಿ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಮದುವೆ ಫೋಟೊಗಳನ್ನು ಡಿಲೀಟ್ ಮಾಡಿದ್ದಾರೆ.
ಮತ್ತೆ ಸ್ವಾತಿ ಡಿವೋರ್ಸ್ ವದಂತಿ
ಸೆಲೆಬ್ರೆಟಿಗಳು ಇತ್ತೀಚೆಗೆ ಡಿವೋರ್ಸ್ ಘೋಷಿಸುವ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಪರೋಕ್ಷವಾಗಿ ಸುಳಿವು ನೀಡುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಮೊದಲಿಗೆ ಸಮಂತಾ ಅಕ್ಕಿನೇನಿ ಎನ್ನುವ ಮನೆ ಹೆಸರನ್ನು ತೆಗೆದರು. ನಂತರ ಚೈತನ್ಯಾ ಜೊತೆಗಿನ ಫೋಟೊಗಳನ್ನೆಲ್ಲಾ ಡಿಲೀಟ್ ಮಾಡಿದರು. ನಿಹಾರಿಕಾ, ಚೈತನ್ಯಾ ದಂಪತಿ ಕೂಡ ಇದನ್ನೇ ಮಾಡಿದ್ದರು. ಸದ್ಯ ಚಿರಂಜೀವಿ ಮಗಳು ಶ್ರೀಜಾ ಹಾಗೂ ಕಲ್ಯಾಣ್ ದೇವ್ ಕೂಡ ಇದೇ ರೀತಿ ಸುಳಿವು ಕೊಟ್ಟಿದ್ದಾರೆ. ಇದೀಗ ಕಲರ್ಸ್ ಸ್ವಾತಿ ಸರದಿ. ಕಾರಣ ಏನೇ ಇದ್ದರೂ ಈ ರೀತಿ ಪತಿ ಜೊತೆಗಿನ ಫೋಟೊಗಳನ್ನು ತೆಗದು ಹಾಕುತ್ತಿದ್ದಂತೆ ಡಿವೋರ್ಸ್ ವದಂತಿ ಶುರುವಾಗಿದೆ.
ಈ ಹಿಂದೆ ಕೂಡ ಇದೇ ರೀತಿ ಡಿವೋರ್ಸ್ ವದಂತಿ ಹಬ್ಬಿದಾಗ ಸ್ವತಃ ಸ್ವಾತಿ ಅದಕ್ಕೆ ಸ್ಪಷ್ಟನೆ ನೀಡಿದ್ದರು. ಪತಿಯ ಜೊತೆಗಿನ ಫೋಟೊಗಳು ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಇದೆ ನೋಡಿ ಎಂದು ವಿಡಿಯೋ ಮಾಡಿ ತೋರಿಸಿದ್ದರು. ಇದೀಗ ಮದುವೆ ಫೋಟೊಗಳು ಡಿಲೀಟ್ ಆಗುತ್ತಿದ್ದಂತೆ ಸ್ವಾತಿ ಹಾಗೂ ವಿಕಾಸ್ ನಟುವೆ ಭಿನ್ನಾಭಿಪ್ರಾಯಗಳಿವೆ. ಶೀಘ್ರದಲ್ಲೇ ಇಬ್ಬರು ಡಿವೋರ್ಸ್ ಪಡೀತಾರೆ ಎನ್ನುವ ಚರ್ಚೆ ನಡೀತಿದೆ.
2 ಸಿನಿಮಾಗಳಲ್ಲಿ ನಟನೆ
'ಗೋಲ್ಕೊಂಡ ಹೈಸ್ಕೂಲ್', 'ಮಿರಪಕಾಯ್', 'ಸ್ವಾಮಿ ರಾರಾ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಕಲರ್ಸ್ ಸ್ವಾತಿ ನಟಿಸಿದ್ದಾರೆ. ತೆಲುಗು ಮಾತ್ರವಲ್ಲ ತಮಿಳು ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ. ಮದುವೆ ನಂತರ ಆಕೆ ನಟಿಸಿದ 'ಪಂಚತಂತ್ರಂ' ಸಿನಿಮಾ ರಿಲೀಸ್ ಆಗಿದೆ. 'ಮಂಥ್ ಆಫ್ ಮಧು' ಹಾಗೂ 'ಈಡಿಯಟ್ಸ್' ಎನ್ನುವ ಮತ್ತೆರಡು ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ಈ ಸಿನಿಮಾಗಳು ರಿಲೀಸ್ ಆಗಬೇಕಿದೆ.


Click it and Unblock the Notifications











