For Quick Alerts
  ALLOW NOTIFICATIONS  
  For Daily Alerts

  ಏನು.. ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಈ ನಟಿಯನ್ನ ಡೇಟ್ ಮಾಡ್ತಿದ್ದಾರಾ.?

  By Harshitha
  |

  ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಬಗ್ಗೆ ಇದೀಗ ಹೊಸ ಗುಸು ಗುಸು ಕೇಳಿಬರುತ್ತಿದೆ. ಬಾಲಿವುಡ್ ನಟಿ ಎಲ್ಲಿ ಅವ್ರಾಮ್ ಜೊತೆ ಇಷ್ಟು ದಿನ ಹಾರ್ದಿಕ್ ಪಾಂಡ್ಯ ಹೆಸರು ತಳುಕು ಹಾಕಿಕೊಂಡಿತ್ತು. ಆದ್ರೀಗ, ನಟಿ ಎಲ್ಲಿ ಅವ್ರಾಮ್-ಹಾರ್ದಿಕ್ ಪಾಂಡ್ಯ ನಡುವೆ ಬ್ರೇಕಪ್ ಆಗಿದ್ಯಂತೆ.

  ನಟಿ ಎಲ್ಲಿ ಅವ್ರಾಮ್ ಗೆ ಗುಡ್ ಬೈ ಹೇಳಿರುವ ಹಾರ್ದಿಕ್ ಪಾಂಡ್ಯ ಬೇರೆ ನಟಿ ಹಿಂದೆ ಬಿದ್ದಿದ್ದಾರಂತೆ. ಬಾಲಿವುಡ್ ನಟಿ ಇಶಾ ಗುಪ್ತ ಜೊತೆಗೆ ಹಾರ್ದಿಕ್ ಪಾಂಡ್ಯ ಡೇಟಿಂಗ್ ಮಾಡ್ತಿದ್ದಾರಂತೆ. ಹಾಗಂತ ಬಿಟೌನ್ ತುಂಬೆಲ್ಲ ಗುಲ್ಲೋ ಗುಲ್ಲು.

  ಎಲ್ಲಿ ಅವ್ರಾಮ್-ಹಾರ್ದಿಕ್ ಪಾಂಡ್ಯ ಬ್ರೇಕಪ್ ಆಗಲು ಕಾರಣ: ನಟಿ ಎಲ್ಲಿ ಅವ್ರಾಮ್ ಗೆ ಕಮ್ಮಿಟ್ ಮೆಂಟ್ ಬೇಕಾಗಿತ್ತು. ಆದ್ರೆ, ಕಮಿಟ್ ಆಗಲು ಹಾರ್ದಿಕ್ ಪಾಂಡ್ಯ ರೆಡಿ ಇರಲಿಲ್ವಂತೆ. ಇದರಿಂದ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿದೆ ಎಂಬುದು ಗಾಸಿಪ್ ಪಂಡಿತರ ಮಾತು.

  ಕ್ರಿಕೆಟರ್ ಯಜುವೇಂದ್ರ ಚಾಹಲ್ ಮುಂದೆ ಕ್ಲೀನ್ ಬೌಲ್ಡ್ ಆದ ಕನ್ನಡ ನಟಿ!ಕ್ರಿಕೆಟರ್ ಯಜುವೇಂದ್ರ ಚಾಹಲ್ ಮುಂದೆ ಕ್ಲೀನ್ ಬೌಲ್ಡ್ ಆದ ಕನ್ನಡ ನಟಿ!

  ಇಶಾ ಗುಪ್ತ ಜೊತೆ ಡೇಟಿಂಗ್: ನಟಿ ಎಲ್ಲಿ ಅವ್ರಾಮ್ ರಿಂದ ದೂರಾದ ಬಳಿಕ ನಟಿ ಇಶಾ ಗುಪ್ತ ರನ್ನ ಹಾರ್ದಿಕ್ ಪಾಂಡ್ಯ ಡೇಟ್ ಮಾಡ್ತಿದ್ದಾರಂತೆ. ಪಾರ್ಟಿಯೊಂದರಲ್ಲಿ ಭೇಟಿ ಆದ ಬಳಿಕ ಇಬ್ಬರ ನಡುವಿನ ಆತ್ಮೀಯತೆ ಹೆಚ್ಚಾಗಿ, ಕೈಕೈ ಹಿಡಿದುಕೊಂಡು ಎಲ್ಲೆಡೆ ಓಡಾಡುತ್ತಿದ್ದಾರಂತೆ.

  ಹಾಗ್ನೋಡಿದ್ರೆ, ಕ್ರಿಕೆಟರ್ ಹಾಗೂ ನಟಿಯರ ನಡುವಿನ ಪ್ರೇಮ್ ಕಹಾನಿ ಹೊಸದಲ್ಲ. ಮನ್ಸೂರ್ ಅಲಿ ಖಾನ್ ಪಟೌಡಿ-ಶರ್ಮಿಳಾ ಟ್ಯಾಗೋರ್, ಯುವರಾಜ್ ಸಿಂಗ್-ಹಜೇಲ್ ಕೀಚ್, ಜಹೀರ್ ಖಾನ್-ಸಾಗರೀಕ ಘಟ್ಗೆ, ಹರ್ಭಜನ್ ಸಿಂಗ್-ಗೀತಾ ಬಸ್ರಾ, ವಿರಾಟ್ ಕೋಹ್ಲಿ-ಅನುಷ್ಕಾ ಶರ್ಮ ಜೋಡಿಯಂತೆ ಹಾರ್ದಿಕಾ ಪಾಂಡ್ಯ ಹಾಗೂ ಇಶಾ ಗುಪ್ತ ಕೂಡ ಆಗಬಹುದು.

  English summary
  According to the latest Grapevine, Cricketer, Team India Alrounder Haardik Pandya is dating Bollywood Actress Esha Gupta.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X