For Quick Alerts
  ALLOW NOTIFICATIONS  
  For Daily Alerts

  ದರ್ಶನ್ 56ನೇ ಸಿನಿಮಾ ಟೈಟಲ್ 'ಕಾಟೇರ': ಸ್ಯಾಂಡಲ್‌ವುಡ್‌ನಲ್ಲಿ ಹೀಗೊಂದು ಸುದ್ದಿ!

  |

  ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ 'ಕ್ರಾಂತಿ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರಮಂದಿರಕ್ಕೆ ಬರುವ ದರ್ಶನ್ ಮುಂದಿನ ಸಿನಿಮಾ 'ಕ್ರಾಂತಿ'. ಈ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. 'ಕ್ರಾಂತಿ' ಚಿತ್ರದ ಬಳಿಕ ದರ್ಶನ್ ತರುಣ್ ಸುಧೀರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  ಇದು ನಟ ದರ್ಶನ್ 56ನೇ ಸಿನಿಮಾ ಆಗಿದ್ದು, ಸಕಲ ತಯಾರಿ ಕೂಡ ಮಾಡಿಕೊಳ್ಳಲಾಗುತ್ತಿದೆ. 'ಕ್ರಾಂತಿ' ರಿಲೀಸ್ ಬಳಿಕವೇ ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಿನಿಮಾ ತಂಡ ಹೊರ ಹಾಕಲಿದೆ. ಸದ್ಯಕ್ಕೀಗ ದರ್ಶನ್ 56ನೇ ಚಿತ್ರದ ಟೈಟಲ್ ಬಗ್ಗೆ ಸುದ್ದಿ ಹಬ್ಬಿದೆ.

  ದರ್ಶನ್ D56 ಚಿತ್ರದ ರಹಸ್ಯ: ತಮಿಳು ಚಿತ್ರದ ರಿಮೇಕ್ ಅಂತೆ!ದರ್ಶನ್ D56 ಚಿತ್ರದ ರಹಸ್ಯ: ತಮಿಳು ಚಿತ್ರದ ರಿಮೇಕ್ ಅಂತೆ!

  'ಕ್ರಾಂತಿ' ದರ್ಶನ್ ಅಭಿನಯಿಸುತ್ತಿರುವ 55ನೇ ಚಿತ್ರ. ಸದ್ಯ ಈ ಚಿತ್ರ ಶೂಟಿಂಗ್ ಹಂತದಲ್ಲಿ ಇದೆ. ಆದ್ರೀಗ 'D56' ಚಿತ್ರದ ಟೈಟಲ್ ಇದೇ ಎನ್ನುವ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿದೆ. ಹಾಗಿದ್ದರೆ, ದರ್ಶನ್ ಮುಂದಿನ ಚಿತ್ರದ ಟೈಟಲ್ ಏನು ಎನ್ನುವುದನ್ನು ಮುಂದೆ ಓದಿ...

  ದರ್ಶನ್ ಚಿತ್ರದ ಟೈಟಲ್ 'ಕಾಟೇರ'?

  ದರ್ಶನ್ ಚಿತ್ರದ ಟೈಟಲ್ 'ಕಾಟೇರ'?

  ನಟ ದರ್ಶನ್ ಅವರ 'D56' ಚಿತ್ರದ ಟೈಟಲ್ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಈ ಚಿತ್ರದ ಟೈಟಲ್ ಇದೇ ಎಂದು ಗಾಂಧಿನಗರದಲ್ಲಿ ಗುಮಾನಿ ಎತ್ತಿದ್ದೆ. ದರ್ಶನ್ ಅವರ ಮುಂದಿನ ಚಿತ್ರದ ಟೈಟಲ್ 'ಕಾಟೇರ' ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಸಿನಿಮಾ ತಂಡ ಮಾತ್ರ ಯಾವುದೇ ರೀತಿಯಲ್ಲಿ ಅಧಿಕೃತ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ.

  ದರ್ಶನ್ 56ನೇ ಸಿನಿಮಾದ ಟೈಟಲ್ ಏನು? ಮೂರರಲ್ಲಿ ಯಾವುದು ಫೈನಲ್ ?ದರ್ಶನ್ 56ನೇ ಸಿನಿಮಾದ ಟೈಟಲ್ ಏನು? ಮೂರರಲ್ಲಿ ಯಾವುದು ಫೈನಲ್ ?

  'ಕಾಟೇರ' ಫೈನಲ್ ಆಗುತ್ತಾ?

  'ಕಾಟೇರ' ಫೈನಲ್ ಆಗುತ್ತಾ?

  'D56' ಚಿತ್ರಕ್ಕಾಗಿ ನಿರ್ದೇಶಕ ತರುಣ್ ಸುಧೀರ್ ಮುಂದೆ ಮೂರು ಟೈಟಲ್‌ಗಳಿದ್ದವು. 'ಗಧೆ', 'ಕಾಟೇರ' ಮತ್ತು 'ಚೌಡಯ್ಯ'. ಈ ಮೂರು ಟೈಟಲ್‌ಗಳು ರೇಸ್‌ನಲ್ಲಿ ಇರುವ ಬಗ್ಗೆ ಈ ಹಿಂದೆಯೇ ಸುದ್ದಿ ಹಬ್ಬಿತ್ತು. ಇವುಗಳಲ್ಲಿ ಯಾವುದು ಫೈನಲ್ ಆಗುತ್ತೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಇದಕ್ಕೆ ಉತ್ತರ ಸಿಕ್ಕಿದೆ 'ಕಾಟೇರ' ಟೈಟಲ್ ಬಹುತೇಕ ಅಂತಿಮವಾಗಿದೆಯಂತೆ.

  'D56' ತರುಣ್ ಸುಧೀರ್ ನಿರ್ದೇಶನ!

  'D56' ತರುಣ್ ಸುಧೀರ್ ನಿರ್ದೇಶನ!

  'ರಾಬರ್ಟ್' ಬಳಿಕ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಇದು. ನಟ ದರ್ಶನ್ ಬರ್ತ್‌ಡೇ 56ನೇ ಸಿನಿಮಾ ಘೋಷಣೆಯಾಗಿದೆ. ಈ ಟೈಟಲ್ ಬಗ್ಗೆ ರಾಕ್‌ಲೈನ್ ವೆಂಕಟೇಶ್, ತರುಣ್ ಸುಧೀರ್ ಹಾಗೂ ದರ್ಶನ್ ಈ ಮೂವರು ಅಧಿಕೃತವಾಗಿ ಟೈಟಲ್ ಬಗ್ಗೆ ಹೇಳಿಕೊಂಡಿಲ್ಲ. ಆದರೆ ಬಹುತೇಕ ಇದೇ ಕನ್ಫರ್ಮ್ ಎನ್ನಲಾಗುತ್ತಿದೆ.

  'D56' ಮೇಲೆ ಹೆಚ್ಚಿನ ನಿರೀಕ್ಷೆ!

  'D56' ಮೇಲೆ ಹೆಚ್ಚಿನ ನಿರೀಕ್ಷೆ!

  ರಾಕ್‌ಲೈನ್ ವೆಂಕಟೇಶ್, ತರುಣ್ ಸುಧೀರ್ ಹಾಗೂ ದರ್ಶನ್ ಕಾಂಬಿನೇಷನ್ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ದರ್ಶನ್ ಹಾಗೂ ತರುಣ್ ಜೋಡಿಯ ಮೊದಲ ಸಿನಿಮಾವೇ 100 ಕೋಟಿ ರೂ. ಕಲೆ ಹಾಕಿತ್ತು. ಹೀಗಾಗಿ ಎರಡನೇ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಈಗ 'ಕ್ರಾಂತಿ' ಸಿನಿಮಾದಲ್ಲಿ ದರ್ಶನ್ ಬ್ಯುಸಿಯಾಗಿದ್ದಾರೆ. ಹಾಗಾಗಿ ಈ ಚಿತ್ರದ ಬಳಿಕ, ದರ್ಶನ್ 56ನೇ ಸಿನಿಮಾದ ಶೂಟಿಂಗ್ ಶುರುವಾಗಲಿದೆ.

  English summary
  Is Darshan's D56 Movie Title Kaatera, Know More,
  Monday, July 11, 2022, 18:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X