'ಭರ್ಜರಿ' ಗೆದ್ದರೂ ಧ್ರುವ ಸರ್ಜಾ ಮುಂದಿನ ಚಿತ್ರಕ್ಕೆ ಎದುರಾದ ಕಂಟಕ !

By Naveen

ಧ್ರುವ ಸರ್ಜಾ ಅವರ 'ಭರ್ಜರಿ' ಸಿನಿಮಾ ಸೂಪರ್ ಹಿಟ್ ಆಗಿದೆ. ಜೊತೆಗೆ ಧ್ರುವ ಸರ್ಜಾ ಹ್ಯಾಟ್ರಿಕ್ ಆಕ್ಷನ್ ಪ್ರಿನ್ಸ್ ಆಗಿದ್ದಾರೆ. ಇನ್ನೂ ಅವರ ಸಿನಿಮಾಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಆದರೆ ಇದರೊಂದಿಗೆ ಈಗ ಧ್ರುವ ಮುಂದಿನ ಚಿತ್ರಕ್ಕೆ ಕಂಟಕವೊಂದು ಎದುರಾಗಿದೆ.

ಧ್ರುವ ಸರ್ಜಾಗೆ ನಿರ್ದೇಶಕ ನಂದ ಕಿಶೋರ್ ಒಂದು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದರು. ಮೊದಲು 'ಹರಿಗ್ರೀವ' ಎಂಬ ಟೈಟಲ್ ನಲ್ಲಿ ಶುರುವಾಗಿದ್ದ ಈ ಚಿತ್ರದ ಹೆಸರು 'ಪೋಗರು' ಎಂದು ಬದಲಾಗಿತ್ತು. ಆದರೆ ಈಗ 'ಪೋಗರು' ಸಿನಿಮಾ ಶುರುವಾಗುವುದು ಅನುಮಾನ ಎನ್ನುವ ಸುದ್ದಿ ಹೊರಬಿದ್ದಿದೆ. ಮುಂದೆ ಓದಿ....

ಧ್ರುವ 'ಪೋಗರು' ತೋರಿಸಲ್ವಾ

ಧ್ರುವ 'ಪೋಗರು' ತೋರಿಸಲ್ವಾ

ನಂದ ಕಿಶೋರ್ ಮತ್ತು ಧ್ರುವ ಸರ್ಜಾ ಕಾಂಬಿನೇಶ್ ನ 'ಪೋಗರು' ಸಿನಿಮಾಗೆ ಈಗ ಮತ್ತೊಂದು ಕಂಟಕ ಎದುರಾಗಿದೆ. ಇದರಿಂದ ಧ್ರುವ 'ಪೋಗರು' ತೋರಿಸಲ್ವಾ ಎನ್ನುವ ಅನುಮಾನ ಮೂಡಿದೆ.

ರೀಮೇಕ್ ಸಿನಿಮಾ

ರೀಮೇಕ್ ಸಿನಿಮಾ

'ಪೋಗರು' ಸಿನಿಮಾ ತೆಲುಗಿನ 'ಕಂದಿರಿಗ' ಚಿತ್ರದ ರಿಮೇಕ್ ಆಗಿದೆ. ಆದರೆ ಸದ್ಯ ರೀಮೇಕ್ ಎನ್ನುವ ಕಾರಣಕ್ಕಾಗಿಯೇ ಈ ಚಿತ್ರ ನಿಂತಿದೆಯಂತೆ.

2011ರ ಸಿನಿಮಾ

2011ರ ಸಿನಿಮಾ

'ಕಂದಿರಿಗ' 2011ರಲ್ಲಿ ಬಂದ ಸಿನಿಮಾ. ಅದನ್ನು ಈಗ ಬದಲಿಸಿಕೊಂಡು ಮಾಡಿದರು ಹಳೆ ಸಿನಿಮಾ ಎನಿಸುತ್ತದೆ ಎನ್ನುವ ಕಾರಣಕ್ಕೆ ಧ್ರುವ 'ಪೋಗರು' ಚಿತ್ರವನ್ನು ಕೈ ಬಿಡಲಿದ್ದಾರೆ ಎನ್ನುವ ಸುದ್ದಿ ಇದೆ.

ಸ್ವಮೇಕ್ ಸಿನಿಮಾ

ಸ್ವಮೇಕ್ ಸಿನಿಮಾ

ಮೂರು ಸ್ವಮೇಕ್ ಸಿನಿಮಾ ಮಾಡಿರುವ ಧ್ರುವ ಸರ್ಜಾ ನಾಲ್ಕನೇ ಚಿತ್ರದಲ್ಲಿಯೂ ಹೊಸ ಕಥೆಯನ್ನು ಆರಿಸಿಕೊಳ್ಳಲಿದ್ದಾರಂತೆ.

ಡೇಟ್ಸ್ ಸಮಸ್ಯೆ ಆಗುತ್ತದೆ

ಡೇಟ್ಸ್ ಸಮಸ್ಯೆ ಆಗುತ್ತದೆ

ನಂದ ಕಿಶೋರ್ ಹೊಸ ಕಥೆ ಮಾಡುತ್ತ ಕುಳಿತರೆ ಧ್ರುವ ಕಾಲ್ ಶೀಟ್ ತೆಗೆದುಕೊಂಡಿರುವ ಇತರ ಮೂರು ನಿರ್ಮಾಪಕರು ಚಿತ್ರಗಳಿಗೆ ಡೇಟ್ಸ್ ಸಮಸ್ಯೆ ಆಗುತ್ತದೆ.

ಹೊಸ ಸಿನಿಮಾ

ಹೊಸ ಸಿನಿಮಾ

'ಜಗ್ಗುದಾದಾ' ಖ್ಯಾತಿಯ ನಿರ್ದೇಶಕ ರಾಘವೇಂದ್ರ ಹೆಗ್ಡೆ ಈಗ ಧ್ರುವ ಸರ್ಜಾಗೆ ಒಂದು ಚಿತ್ರವನ್ನು ಮಾಡುವುದು ಪಕ್ಕಾ ಆಗಿದೆ. ಈ ಚಿತ್ರದಲ್ಲಿ ಬಾಲಿವುಡ್ ರೈಟರ್ ಶಗುಫ್ತಾ ರಫೀಕ್ ಅವರ ಕಥೆ ಇರಲಿದೆ.

ಇನ್ನು ಎರಡು ಸಿನಿಮಾಗಳು

ಇನ್ನು ಎರಡು ಸಿನಿಮಾಗಳು

ಇವುಗಳ ಜೊತೆಗೆ ಸದ್ಯ ಧ್ರುವ ಸರ್ಜಾ ಉದಯ್ ಮೆಗ್ತಾ ಸಿನಿಮಾ, ಜೊತೆಗೆ ಅರ್ಜುನ್ ಸರ್ಜಾ ಅವರ ಚಿತ್ರದಲ್ಲಿ ಕೂಡ ನಟಿಸಲಿದ್ದಾರೆ ಎನ್ನುವ ಮಾತಿದೆ.

More from Filmibeat

English summary
According to the source Dhruva Sarja is not interested to do 'Pogaru' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X