ಚಿತ್ರರಂಗಕ್ಕೆ ಸಾಯಿ ಪಲ್ಲವಿ ಗುಡ್‌ಬೈ? ಅಭಿಮಾನಿಗಳಿಗೆ ಶಾಕ್!

ಅಭಿನಯ ಮತ್ತು ಡ್ಯಾನ್ಸ್‌ನಿಂದ ಮೋಡಿ ಮಾಡಿದ ಚೆಲುವೆ ಸಾಯಿ ಪಲ್ಲವಿ. ರೌಡಿ ಬೇಬಿ ಸಾಯಿ ಪಲ್ಲವಿ ಇತ್ತೀಚೆಗೆ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಇದನ್ನು ನೋಡಿ ಆಕೆ ಚಿತ್ರರಂಗಕ್ಕೆ ಗುಡ್‌ಬೈ ಹೇಳುತ್ತಾರಾ ಎನ್ನುವ ಅನುಮಾನವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ. 'ಫಿದಾ', 'ಕಲಿ', 'ಮಾರಿ -2', 'ಶ್ಯಾಮ್‌ಸಿಂಗ ರಾಯ್' ಸಾಯಿ ಪಲ್ಲವಿ ನಟಿಸಿದ ಕೆಲ ಹಿಟ್ ಚಿತ್ರಗಳು.

ತಮಿಳುನಾಡಿನಲ್ಲಿ ಬಡಗ ಕುಟುಂಬದಲ್ಲಿ ಹುಟ್ಟಿ ಬೆಳೆದ ಸಾಯಿ ಪಲ್ಲವಿ ಓದಿಕೊಂಡಿದ್ದು ಎಂಬಿಬಿಎಸ್. ಚಿಕ್ಕಂದಿನಿಂದಲೂ ಡ್ಯಾನ್ಸ್‌ ಎಂದರೆ ಅಚ್ಚುಮೆಚ್ಚು. ಕಿರುತೆರೆಯ ಡ್ಯಾನ್ಸ್ ಶೋಗಳಲ್ಲಿ ಕುಣಿಯೋಕೆ ಆರಂಭಿಸಿದರು. ಅಲ್ಲಿಂದ ಮುಂದೆ ತಮಿಳಿನ 'ಕಸ್ತೂರಿ ಮಾನ್' ಚಿತ್ರದಲ್ಲಿ ಕಾಲೇಜು ಹುಡುಗಿಯಾಗಿ ಮಿಂಚಿದರು. ಮಲಯಾಳಂನ 'ಪ್ರೇಮಂ' ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಿ ಕಮಾಲ್ ಮಾಡಿದರು. ನಂತರ ತಮಿಳು, ತೆಲುಗು ಸಿನಿಮಾಗಳಲ್ಲಿಯೂ ನಟಿಸಿದರು.

is-fidaa-actress-sai-pallavi-quitting-films

ಸಾಯಿ ಪಲ್ಲವಿ ಇತ್ತೀಚೆಗೆ ನಟಿಸಿದ 'ವಿರಾಟ ಪರ್ವಂ' ಹಾಗೂ 'ಗಾರ್ಗಿ' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋಲುಂಡಿದ್ದವು. ಹಾಗಾಗಿ ಆಕೆ ನಟನೆ ಬಿಟ್ಟು ಡಾಕ್ಟರ್ ಆಗಿ ಸೇವೆ ಮಾಡಲು ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ. ಒಂದು ಆಸ್ಪತ್ರೆಯನ್ನು ಕಟ್ಟಿಸುತ್ತಿದ್ದು, ಅಲ್ಲಿ ವೈದ್ಯೆಯಾಗಿ ತಮ್ಮ ಮುಂದಿನ ಜೀವನ ಕಳೆಯಲು ಮುಂದಾಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಅದೇ ಕಾರಣಕ್ಕೆ ಆಕೆ ಯಾವುದೇ ಹೊಸ ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಬರುತ್ತಿರುವ ಅವಕಾಶಗಳನ್ನು ರೌಡಿ ಬೇಬಿ ತಿರಸ್ಕರಿಸುತ್ತಿದ್ದಾರೆ ಎನ್ನುವ ಚರ್ಚೆ ನಡೀತಿದೆ.

is-fidaa-actress-sai-pallavi-quitting-films

ಇನ್ನು ಇತ್ತೀಚೆಗೆ ನಟಿ ಸಾಯಿ ಪಲ್ಲವಿ ನೀಡಿದ ಹೇಳಿಕೆಯೊಂದು ಭಾರೀ ವಿವಾದ ಸೃಷ್ಟಿಸಿತ್ತು. 'ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋವು ಸಾಗಿಸುತ್ತಿದ್ದ ಮುಸ್ಲಿಂ ಡ್ರೈವರ್​ ಮೇಲಿನ ಹಲ್ಲೆ ಎರಡೂ ಒಂದೇ' ಎಂದು ರೌಡಿ ಬೇಬಿ ಹೇಳಿದ್ದರು. ಈ ಬಗ್ಗೆ ಪರ ವಿರೋಧ ಚರ್ಚೆ ನಡೀತು. ನಂತರ ಆಕೆ ಸ್ಪಷ್ಟನೆ ಕೂಡ ಕೊಟ್ಟರು. ಆದರೂ ಆಕೆಯ ಹೇಳಿಕೆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆಕೆಯ ಈ ವಿವಾದಾತ್ಮಕ ಹೇಳಿಕೆಗಳಿಂದಲೇ 2 ಸಿನಿಮಾಗಳು ಸೋತವು ಎನ್ನುವವರು ಇದ್ದಾರೆ. ಇನ್ನು ಸಾಯಿ ಪಲ್ಲವಿ ಗ್ಲಾಮರಸ್ ರೋಲ್‌ಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಡ್ಯಾನ್ಸ್ ಇಲ್ಲದೇ ಬರೀ ಡೀ ಗ್ಲಾಮರಸ್ ರೋಲ್‌ಗಳಲ್ಲಿ ನಟಿಸಿದರೆ ಅಭಿಮಾನಿಗಳಿಗೆ ಇಷ್ಟವಾಗುವುದಿಲ್ಲ ಎನ್ನುವ ಚರ್ಚೆ ಕೂಡ ನಡೀತಿದೆ.

More from Filmibeat

English summary
Is Fidaa actress Sai Pallavi quitting films. It seems that Sai Pallavi is busy in the construction of the hospital. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X